ವೋಲ್ವೋ ಕ್ರಾಸ್ ಕಂಟ್ರಿ ಸ್ವಲ್ಪ ಕ್ರಾಸ್ ಆಗಿ ಬರುತ್ತಾ?
ಸ್ವೀಡನ್‌ನ ಪ್ರಮುಖ ವಾಹನ ತಯಾರಕ ಸಂಸ್ಥೆಯಾದ ವೋಲ್ವೋ, ಭಾರತಕ್ಕೆ ಹೊಸ ಕಾರೊಂದನ್ನು ಪರಿಚಯಿಸಲು ಸನ್ನದ್ಧವಾಗಿದೆ. ಪ್ರಸ್ತುತ ಬಂದಿರುವ ಮಾಹಿತಿ ಪ್ರಕಾರ ನೂತನ ವೋಲ್ವೋ ವಿ40 ಕ್ರಾಸ್ ಕಂಟ್ರಿ ಜೂನ್ 14ರಂದು ದೇಶದಲ್ಲಿ ಲಾಂಚ್ ಆಗಲಿದೆ.
ಪೆಟ್ರೋಲ್ ಸೇರಿದಂತೆ ಡೀಸೆಲ್ ವೆರಿಯಂಟ್‌ಗಳಲ್ಲಿ ವೋಲ್ವೋ ಆಗಮನವಾಗಲಿದೆ. ಪ್ರಮುಖವಾಗಿಯೂ ದೇಶದ ಯುವ ಗ್ರಾಹಕರನ್ನು ಗುರಿಯಾಗಿರಿಸಿಕೊಂಡು ವಿ40 ವಿನ್ಯಾಸಗೊಳಿಸಲಾಗಿದೆ.
ಡೈನಾಮಿಕ್ ವಿನ್ಯಾಸ ಹೊಂದಿರುವ ಈ ಸೆಮಿ ಆಫ್ ರೋಡ್ ಐಷಾರಾಮಿ ಹ್ಯಾಚ್‌ಬ್ಯಾಕ್ ಕಾರು ತಮ್ಮ ನಿಕಟ ಪ್ರತಿಸ್ಪರ್ಧಿಗಿಂತಲೂ ವಿಭಿನ್ನ ಎನಿಸಿಕೊಳ್ಳಲಿದೆ. ಟಿ4 ಪೆಟ್ರೋಲ್ ಮಾಡೆಲ್ 1.6 ಲೀಟರ್ ಜಿಟಿಡಿಐ ಎಂಜಿನ್ ಪಡೆಯಲಿದ್ದು, 182.5 ಪಿಎಸ್ ಪವರ್ (270 ಎನ್‌ಎಂ ಟರ್ಕ್ಯೂ) ಉತ್ಪಾದಿಸಲಿದೆ. ಹಾಗೆಯೇ ಡಿ3, 2.0 ಲೀಟರ್ ಡೀಸೆಲ್ ಎಂಜಿನ್ 150 ಅಶ್ವಶಕ್ತಿ (350 ಎನ್‌ಎಂ ಟರ್ಕ್ಯೂ) ಉತ್ಪಾದಿಸಲಿದೆ.

ವೋಲ್ವೋ ವಿ40 ಕ್ರಾಸ್ ಕಂಟ್ರಿ
ಪೆಟ್ರೋಲ್ ಹಾಗೂ ಡೀಸೆಲ್ ವೆರಿಯಂಟ್‌ಗಳು ಸ್ಟಾರ್ಟ್ ಸ್ಟಾಪ್, ಬ್ರೇಕಿಂಗ್ ಎನರ್ಜಿ ಉತ್ಪಾದನೆ ಹಾಗೆಯೇ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.

ವೋಲ್ವೋ ವಿ40 ಕ್ರಾಸ್ ಕಂಟ್ರಿ
ಅಲ್ಲದೆ ಸಿಟಿ ಸೇಫ್ಟಿ ಆಟೋ ಬ್ರೇಕಿಂಗ್ ತಂತ್ರಜ್ಞಾನಕ್ಕೆ ಹೆಚ್ಚಿನ ಮಹತ್ವ ಕೊಡಲಾಗಿದೆ. ವಿಶ್ವದರ್ಜೆಯ ಏರ್‌ಬ್ಯಾಗ್ ತಂತ್ರಗಾರಿಕೆ ಹಾಗೂ ಪಾದಚಾರಿ ಗ್ರಹಿಕಾ ತಂತ್ರಜ್ಞಾನ ಹೊಂದಿರಲಿದೆ.

ವೋಲ್ವೋ ವಿ40 ಕ್ರಾಸ್ ಕಂಟ್ರಿ
ಜರ್ಮನಿಯ ಐಷಾರಾಮಿ ಕಾರು ತಯಾರಕ ಸಂಸ್ಥೆಗಳಾದ ಮರ್ಸಿಡಿಸ್ ಬೆಂಝ್ ಬಿ ಕ್ಲಾಸ್ ಹಾಗೂ ಬಿಎಂಡಬ್ಲ್ಯು ಎಕ್ಸ್1 ಆವೃತ್ತಿಗಳಿಗೆ ಪ್ರಮುಖ ಎದುರಾಳಿ ಎನಿಸಿಕೊಂಡಿರುವ ವೋಲ್ವೋ ವಿ40 ದರ 23ರಿಂದ 25 ಲಕ್ಷ ರು.ಗಳ ಅಸುಪಾಸಿನಲ್ಲಿರಲಿದೆ.

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ

ವೋಲ್ವೋ ವಿ40 ಕ್ರಾಸ್ ಕಂಟ್ರಿ



Click it and Unblock the Notifications