ದೆಹಲಿ ಎಕ್ಸ್ ಪೋದಲ್ಲಿ ಫೋಕ್ಸ್‌ವ್ಯಾಗನ್ ಟೈಗನ್ ಬಲ ಪ್ರದರ್ಶನ

By Nagaraja

ಈ ಸುದ್ದಿ ಹೊಸತೇನಲ್ಲ. ಈ ಮೊದಲೇ ಫೋಕ್ಸ್‌ವ್ಯಾಗನ್ ಮಿನಿ ಎಸ್‌ಯುವಿ ಭಾರತ ಎಂಟ್ರಿ ಕುರಿತು ವರದಿ ಮಾಡಿದ್ದೆವು. ಆದರೆ ಮಗದೊಮ್ಮ ಫೋಕ್ಸ್‌ವ್ಯಾಗನ್ ಟೈಗನ್ ಸುದ್ದಿಯಾಗಲು ಕಾರಣವೊಂದಿದೆ.

ಹೌದು, ಬಹುತೇಕ ವಾಹನ ಪ್ರಿಯರು ಕಾತರದಿಂದ ಕಾದು ಕುಳಿತಿರುವ 2014 ಇಂಡಿಯಾ ಆಟೋ ಎಕ್ಸ್ ಪೋದಲ್ಲಿ ಫೋಕ್ಸ್‌ವ್ಯಾಗನ್ ಟೈಗನ್ ಪ್ರದರ್ಶನಗೊಳ್ಳಲಿದೆ. ಇದರೊಂದಿಗೆ ಕಾಂಪಾಕ್ಟ್ ಎಸ್‌ಯುವಿ ಸೆಗ್ಮೆಂಟ್‌ನಲ್ಲಿ ಇನ್ನೊಂದು ಆಕರ್ಷಕ ಕಾರಿನ ಎಂಟ್ರಿಯಾಗಲಿದೆ. ಈ ಹಿಂದೆ 2012 ಸಾವೋ ಪಾಲೊ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿರುವ ಟೈಗನ್, ಇದೀಗ ದೇಶದತ್ತ ದಿಟ್ಟ ಹೆಜ್ಜೆಯನ್ನಿಡುತ್ತಿದೆ.

ಇಕೊಸ್ಪೋರ್ಟ್‌ಗೆ ಸೆಡ್ಡು ನೀಡಲಿದೆಯೇ ಫೋಕ್ಸ್‌ವ್ಯಾಗನ್ ಟೈಗನ್

ಇದು ದೇಶಕ್ಕೆ ಜರ್ಮನಿಯ ವಾಹನ ತಯಾರಕ ಸಂಸ್ಥೆಯಿಂದ ಆಗಮನವಾಗಲಿರುವ ಮೊದಲ ಎಸ್‌ಯುವಿ ಮಾದರಿ ಎನಿಸಿಕೊಳ್ಳಲಿದೆ.

ಇಕೊಸ್ಪೋರ್ಟ್‌ಗೆ ಸೆಡ್ಡು ನೀಡಲಿದೆಯೇ ಫೋಕ್ಸ್‌ವ್ಯಾಗನ್ ಟೈಗನ್

ಫೋಕ್ಸ್‌ವ್ಯಾಗನ್ ಅಪ್ ಫ್ಯಾಟ್‌ಫಾರ್ಮ್‌ ತಲಹದಿಯಲ್ಲಿ ನಿರ್ಮಾಣವಾಗಿರುವ ಟೈಗನ್ ನಾಲ್ಕು ಮೀಟರ್ ಉದ್ದ ಮಿತಿಯಲ್ಲಿ ಆಗಮನವಾಗಲಿದೆ. ಅಂದರೆ ತೆರಿಗೆ ವಿನಾಯಿತಿ ಪಡೆದುಕೊಳ್ಳುವುದರ ಜತೆಗೆ ಫೋರ್ಡ್ ಇಕೊಸ್ಪೋರ್ಟ್ ಮತ್ತು ರೆನೊ ಡಸ್ಟರ್‌ಗೆ ನೇರ ಪ್ರತಿಸ್ಪರ್ಧಿಯೆನಿಸಲಿದೆ.

ಇಕೊಸ್ಪೋರ್ಟ್‌ಗೆ ಸೆಡ್ಡು ನೀಡಲಿದೆಯೇ ಫೋಕ್ಸ್‌ವ್ಯಾಗನ್ ಟೈಗನ್

ಇನ್ನಿತರ ಆವೃತ್ತಿಗಳಿಗೆ ಹೋಲಿಸಿದರೆ ಫೋಕ್ಸ್‌ವ್ಯಾಗನ್ ಟೈಗನ್ ಉತ್ತಮ ಸ್ಥಳಾವಕಾಶ ಹೊಂದಿರಲಿದೆ. ಇದು 3.86 ಮೀಟರ್ ಉದ್ದ, 1.43 ಮೀಟರ್ ಅಗಲ ಹೊಂದಿರಲಿದೆ. ಇನ್ನು ದೂರ ಪ್ರಯಾಣದವರಿಗೆ ನೆರವಾಗುವಂತಹ ರೀತಿಯಲ್ಲಿ ಲಗ್ಗೇಜ್ ಸ್ಪೇಸ್ ನೀಡಲಾಗಿದೆ. ಇದು 280 ಲೀಟರ್ ಬೂಟ್ ಸ್ಪೇಸ್ ಹಾಗೆಯೇ ಸೀಟು ಮಡಚಿದ ವೇಳೆ 987 ಲೀಟರ್‌ಗೆ ಏರಿಕೆಯಾಗಲಿದೆ.

ಇಕೊಸ್ಪೋರ್ಟ್‌ಗೆ ಸೆಡ್ಡು ನೀಡಲಿದೆಯೇ ಫೋಕ್ಸ್‌ವ್ಯಾಗನ್ ಟೈಗನ್

ನಿಮ್ಮ ಮಾಹಿತಿಗಾಗಿ, ಬ್ರೆಜಿಲ್‌ನಲ್ಲಿ ಫೋಕ್ಸ್‌ವ್ಯಾಗನ್ ಟೈಗನ್ 1.0 ಲೀಟರ್, 3 ಸಿಲಿಂಡರ್ ಟರ್ಬೊಚಾರ್ಜ್ಡ್ ಡೈರಕ್ಟ್ ಫ್ಯೂಯಲ್ ಇಂಜೆಕ್ಟಡ್ ಪೆಟ್ರೋಲ್ ಎಂಜಿನ್‌ನಲ್ಲಿ ಪರಿಚಯಿಸಲಾಗಿತ್ತು. ಇದು 110 ಪಿಎಸ್ ಪವರ್ (175 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಷನ್ ಪಡೆದಿತ್ತು.

ಇಕೊಸ್ಪೋರ್ಟ್‌ಗೆ ಸೆಡ್ಡು ನೀಡಲಿದೆಯೇ ಫೋಕ್ಸ್‌ವ್ಯಾಗನ್ ಟೈಗನ್

ಫೋಕ್ಸ್‌ವ್ಯಾಗನ್ ಟೈಗನ್ ಗಂಟೆಗೆ ಗರಿಷ್ಠ 175 ಕೀ.ಮೀ. ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಅದೇ ರೀತಿ 8.2 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧಿಸಲಿದೆ. ಜರ್ಮನಿ ಮೂಲದ ವಾಹನ ತಯಾರಕ ಸಂಸ್ಥೆಯ ಪ್ರಕಾರ ಫೋಕ್ಸ್‌ವ್ಯಾಗನ್ ಟೈಗನ್ ಪ್ರತಿ ಲೀಟರ್‌ಗೆ 21 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರಲಿದೆ.

ಇಕೊಸ್ಪೋರ್ಟ್‌ಗೆ ಸೆಡ್ಡು ನೀಡಲಿದೆಯೇ ಫೋಕ್ಸ್‌ವ್ಯಾಗನ್ ಟೈಗನ್

ಇನ್ನು ಇಂಡಿಯಾ ವರ್ಷನ್ ಫೋಕ್ಸ್‌ವ್ಯಾಗನ್ ಟೈಗನ್ 1.2 ಲೀಟರ್ ಟರ್ಬೊಚಾರ್ಜ್ಡ್, ಫ್ಯೂಯಲ್ ಇಂಜೆಕ್ಟಡ್, 4 ಸಿಲಿಂಡರ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದೆ. ಹಾಗೆಯೇ 6 ಸ್ಪೀಡ್ ಮ್ಯಾನುವಲ್ ಜತೆ ಡಿಎಸ್‌ಜಿ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಪಡೆದುಕೊಳ್ಳಲಿದೆ. ಇದು ಪೊಲೊ ಹ್ಯಾಚ್‌ಬ್ಯಾಕ್ ಮತ್ತು ವೆಂಟೊ ಸೆಡಾನ್ ನಡುವೆ ಗುರುತಿಸಿಕೊಳ್ಳಲಿದೆ.

More from DriveSpark

Article Published On: Wednesday, January 15, 2014, 10:05 [IST]
English summary
This news is not new, yet exciting. Yet another compact SUV model will arrive in India in the near future and it will be previewed for the first time in the country during next month's Auto Expo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+