ಗರಿಷ್ಠ ಇಂಧನ ಕ್ಷಮತೆಯ ವೆಂಟೊ ಪೆಟ್ರೋಲ್ ಕಾರು ಲಾಂಚ್
ಯರೋಪ್ ಖಂಡದ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್, ಭಾರತ ಮಾರುಕಟ್ಟೆಗೆ ನೂತನ ವೆಂಟೊ ಸೆಡಾನ್ ಕಾರಿನ ಟಿಎಸ್‌ಐ ವರ್ಷನ್ ಬಿಡುಗಡೆಗೊಳಿಸಿದೆ.
ನೂತನ ಟರ್ಬೊಚಾರ್ಜ್ಡ್ ಪೆಟ್ರೋಲ್ ವೆರಿಯಂಟ್ ದೆಹಲಿ ಎಕ್ಸ್ ಶೋ ರೂಂ ದರ 9.99 ಲಕ್ಷ ರು.ಗಳಾಗಿವೆ. ಇದು 9ರಿಂದ 11 ಲಕ್ಷ ರು.ಗಳ ಬಜೆಟ್‌ನಲ್ಲಿ ಕಾರು ಹುಡುಕುತ್ತಿರುವ ಗ್ರಾಹಕರಿಗೆ ಉತ್ತಮ ಆಯ್ಕೆಯಾಗಿರಲಿದೆ.
ನೂತನ ಪೊಲೊ ವೆಂಟೊ ಟಿಎಸ್‌ಐ ಕಾರು 1.2 ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 105 ಪಿಎಸ್ ಪವರ್ (5000 ಆರ್‌ಪಿಎಂ, 175 ಎನ್‌ಎಂ ಟಾರ್ಕ್) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 7 ಸ್ಪೀಡ್ ಡಿಎಸ್‌ಜಿ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿರುವುದು ಸಹ ಸುಲಲಿತವಾದ ಡ್ರೈವಿಂಗ್ ಹಾಗೂ ಗರಿಷ್ಠ ವೇಗವರ್ಧನೆಗೆ ನೆರವಾಗಲಿದೆ.

ಫೋಕ್ಸ್‌ವ್ಯಾಗನ್ ವೆಂಟೊ ಟಿಎಸ್‌ಐ ವರ್ಷನ್‌ನ ಪ್ರಮುಖ ವೈಶಿಷ್ಟ್ಯವೆಂದರೆ ಇಂಧನ ಕ್ಷಮತೆಯಲ್ಲಿ ಇದ್ಯಾವುದೆ ರಾಜಿಗೆ ತಯಾರಾಗಿರುವುದಿಲ್ಲ. ಅಂದರೆ ಸಾಮಾನ್ಯ ಪೆಟ್ರೋಲ್ ಎಂಜಿನ್‌ಗಿಂತಲೂ ಹೆಚ್ಚಿನ ಮೈಲೇಜ್ ನೀಡುವ ಇದು ನೆರವಾಗಲಿದೆ.

ಗರಿಷ್ಠ ತಂತ್ರಗಾರಿಕೆ ಆಳವಡಿಸುವುದರಲ್ಲಿ ಫೋಕ್ಸ್‌ವ್ಯಾಗನ್ ಎಂದೂ ಮುಂಚೂಣಿಯಲ್ಲಿದೆ. ನೂತನ ಟಿಎಸ್‌ಐ ವೆಂಟೊ ಸಹ ಪವರ್‌ಫುಲ್ ನಿರ್ವಹಣೆ ಹಾಗೂ ಇಂಧನ ಕ್ಷಮತೆ ನೀಡಲು ನೆರವಾಗಲಿದೆ.

ಅದೇ ರೀತಿ ಆಂಟಿ ಲಾಕಿಂಗ್ ಬ್ರೇಕ್ಸ್, ವಿದ್ಯುನ್ಮಾನ ಸ್ಥಿರತೆಯ ಕಾರ್ಯಕ್ರಮ, ಹಿಲ್ ರೋಡ್ ಫಂಕ್ಷನ್, ಡ್ಯುಯಲ್ ಫ್ರಂಟ್ ಏರ್ ಬ್ಯಾಗ್, 3 ಪಾಯಿಂಟ್ ಸೀಟ್ ಬೆಲ್ಟ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಪಡೆದುಕೊಂಡಿದೆ.

ನೂತನ ಫೋಕ್ಸ್‌ವ್ಯಾಗನ್ ವೆಂಟೊ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮಾದರಿಯ ಮಾರಾಟವು ಇಂದಿನಿಂದಲೇ (ಅ. 10) ಆರಂಭಗೊಂಡಿದೆ. ಹಾಗಿದ್ದರೂ ಆರಂಭದಲ್ಲಿ ನಿಗದಿತ ರಾಜ್ಯಗಳಲ್ಲಿ ಮಾತ್ರ ಲಭ್ಯವಿರಲಿದೆ.

ದೇಶದಲ್ಲಿ ಫೋಕ್ಸ್‌ವ್ಯಾಗನ್ ವೆಂಟೊ ಸೇರಿದಂತೆ ಪೊಲೊ, ಜೆಟ್ಟಾ, ಪ್ಯಾಸೆಟ್ ಹಾಗೂ ಟೂರೆಗ್ ಆವೃತ್ತಿಗಳು ಮಾರಾಟದಲ್ಲಿವೆ.


Click it and Unblock the Notifications








