ಬಹುನಿರೀಕ್ಷಿತ ಮಾರುತಿ ಸ್ಟಿಂಗ್ರೇ ಆಗಸ್ಟ್ 21ಕ್ಕೆ ಲಾಂಚ್?

Posted By:

ವ್ಯಾಗನಾರ್ ಹೊಸ ಆವೃತ್ತಿಯಾದ ಸ್ಟಿಂಗ್ರೇ ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆ ಪ್ರವೇಶಿಸುವುದಾಗಿ ನಾವು ಈ ಹಿಂದೆಯೇ ಮಾಹಿತಿ ಕೊಟ್ಟಿದ್ದೆವು. ಇದಕ್ಕೆ ಪೂರಕವೆಂಬಂತೆ ಬಹುನಿರೀಕ್ಷಿತ ವ್ಯಾಗನಾರ್ ಸ್ಟಿಂಗ್ರೇ ಆಗಸ್ಟ್ 21, ಬುಧವಾರದಂದು ಲಾಂಚ್ ಆಗಲಿರುವ ಬಗ್ಗೆ ವಾಹನ ಮೂಲಗಳಿಂದ ವರದಿಗಳು ಬಂದಿವೆ.

ಇದರಂತೆ ನೂತನ ಸ್ಟಿಂಗ್ರೇ ಆವೃತ್ತಿಯ ಆಕರ್ಷಕ ಚಿತ್ರಗಳು ಅಂತರ್ಜಾಲದಲ್ಲಿ ಬಿಡುಗಡೆಗೊಂಡಿದ್ದು, ಹಿಂದಿನ ವ್ಯಾಗನಾರ್‌ಗಿಂತಲೂ ಹೆಚ್ಚು ಸ್ಟೈಲಿಷ್ ವಿನ್ಯಾಸವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಸಹಜವಾಗಿಯೇ ಹೆಚ್ಚು ವೈಶಿಷ್ಟ್ಯಗಳನ್ನು ಆಳವಡಿಸಿರುವುದರಿಂದ ಸಾಮಾನ್ಯ ವ್ಯಾಗನಾರ್ ಆವೃತ್ತಿಗಿಂತಲೂ ಸ್ಟಿಂಗ್ರೇ ಸ್ವಲ್ಪ ದುಬಾರಿಯೆನಿಸಲಿದೆ.

To Follow DriveSpark On Facebook, Click The Like Button
ಹೊಸ ಆವೃತ್ತಿ

ಹೊಸ ಆವೃತ್ತಿ

ನೂತನ ಮಾಡೆಲ್ ರೂಪದಲ್ಲಿ ಸ್ಟಿಂಗ್ರೇ ಮಾರಾಟವಾಗಲಿದೆ ಎಂಬುದು ಖಚಿತವಾಗಿದೆ. ಅಂದರೆ ಸದ್ಯ ಮಾರುಕಟ್ಟೆಯಲ್ಲಿರುವ ವ್ಯಾಗನಾರ್‌ ಮಾರಾಟಕ್ಕೆ ಇದರಿಂದ ಯಾವುದೇ ಧಕ್ಕೆಯುಂಟಾಗುವ ಸಾಧ್ಯತೆಗಳಿಲ್ಲ.

ಫೋಟೊ ಕೃಪೆ: ಬಾಷ್ ಬ್ಲಾಗ್ ಸ್ಪಾಟ್

ಪ್ರೊಜೆಕ್ಟರ್ ಹೆಡ್ ಲ್ಯಾಂಪ್

ಪ್ರೊಜೆಕ್ಟರ್ ಹೆಡ್ ಲ್ಯಾಂಪ್

ಫ್ರಂಟ್ ಬಂಪರ್ ಹಾಗೂ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಪ್ರಮುಖ ಆಕರ್ಷಣೆಯಾಗಿದೆ. ಹಾಗಿದ್ದರೂ ಪ್ರೀಮಿಯಂ ಸೆಗ್ಮೆಂಟ್‌ಗಳಲ್ಲಿ ಮಾತ್ರ ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಲಭ್ಯವಾಗುವ ಸಾಧ್ಯತೆಯಿದೆ.

ಫೋಟೊ ಕೃಪೆ: ಆಟೋಸ್ ಅರೆನಾ

ನೆಟ್ಟಗಿರುವ ಹಿಂಭಾಗ

ನೆಟ್ಟಗಿರುವ ಹಿಂಭಾಗ

ಇನ್ನು ಹಿಂದುಗಡೆ ವೀಕ್ಷಿಸಿದರೆ ನೆಟ್ಟಗಿರುವ ವಿನ್ಯಾಸವನ್ನು ಪಡೆದುಕೊಂಡಿದೆ. ಹಾಗೆಯೇ ಟೈಲ್ ಲ್ಯಾಂಪ್ ಕ್ರೋಮ್ ಲೈನಿಂಗ್ ಪಡೆದುಕೊಂಡಿದೆ.

ಫೋಟೊ ಕೃಪೆ: ಬಾಷ್ ಬ್ಲಾಗ್ ಸ್ಪಾಟ್

ಇಂಟಿರಿಯರ್ ಫೀಚರ್ಸ್

ಇಂಟಿರಿಯರ್ ಫೀಚರ್ಸ್

ಕಾರಿನ ಆಂತರಿಕ ಭಾಗಗಳಲ್ಲಿ ಪ್ರೀಮಿಯಂ ಟಚ್ ನೀಡುವ ಪ್ರಯತ್ನ ಮಾಡಲಾಗಿದೆ. ಹಾಗಿದ್ದರೂ ಎಬಿಎಸ್, ಏರ್ ಬ್ಯಾಗ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ ಹಾಗೂ ವಿದ್ಯುನ್ಮಾನ ನಿಯಂತ್ರಿತ ಒಆರ್‌ವಿಎಂಗಳಂತಹ ಫೀಚರ್‌ಗಳು ಐಚ್ಛಿಕವಾಗಿ ಆಳವಡಿಸುವ ಸಾಧ್ಯತೆಗಳಿವೆ.

ಫೋಟೊ ಕೃಪೆ: ಆಟೋಸ್ ಅರೆನಾ

ಎಂಜಿನ್, ದರ ಮಾಹಿತಿ

ಎಂಜಿನ್, ದರ ಮಾಹಿತಿ

ನೂತನ ಸ್ಟಿಂಗ್ರೇದಲ್ಲಿ 1.0 ಲೀಟರ್ ಕೆ ಸಿರೀಸ್ ಎಂಜಿನ್ ಆಳವಡಿಸಲಾಗುವುದು. ಇದು ಈಗ ಲಭ್ಯವಿರುವ ವ್ಯಾಗನಾರ್ ಎಂಜಿನ್‌ಗೆ ಸಮಾನವಾಗಿದೆ. ಇನ್ನು ಸಾಮಾನ್ಯ ವ್ಯಾಗನಾರ್ ಆವೃತ್ತಿಗಿಂತಲೂ 50,000 ರು.ಗಳಷ್ಟು ದುಬಾರಿಯಾಗುವ ಸಾಧ್ಯತೆಯಿದೆ.

ಫೋಟೊ ಕೃಪೆ: ಆಟೋಸ್ ಅರೆನಾ

English summary
Easily the most awaited new car in the segment, the Wagon R Stingray could be revealed officially on August 21, if several reports are to be believed. The Stingray is a redesigned Wagon R that will be sold alongside the existing Wagon R tallboy.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark