ನೀವು ವಿದ್ಯುತ್ ಚಾಲಿತ ಕಾರನ್ನು ಏಕೆ ಕೊಳ್ಳಬೇಕು?

By Nagaraja

ಭಾರತದಲ್ಲೂ ವಿದ್ಯುತ್ ಚಾಲಿತ ವಾಹನಗಳು ನಿಧಾನವಾಗಿ ಜನಪ್ರಿಯತೆ ಗಿಟ್ಟಿಸತೊಡಗಿದೆ. ಆದರೆ ವಿದೇಶಗಳಿಗೆ ಹೋಲಿಸಿದರೆ ವಿದ್ಯುತ್ ಹಾಗೂ ಹೈಬ್ರಿಡ್ ಕಾರಿನ ಬೆಳವಣಿಗೆ ತುಂಬಾನೇ ನಿಧಾನವಾಗಿದೆ. ಪ್ರಸ್ತುತ ಪರಿಸರ ಸ್ನೇಹಿ ವಿದ್ಯುತ್/ಹೈಬ್ರಿಡ್ ಕಾರುಗಳು ಅತ್ಯಂತ ದುಬಾರಿಯಾಗಿರುವುದು ಹಿನ್ನೆಡೆಗೆ ಕಾರಣವಾಗಿದೆ. ಇದೇ ಕಾರಣಕ್ಕಾಗಿ ಸಮರ್ಥ ಮಾಲಿಕರು ಸಹ ಎರಡನೇ ಕಾರಾಗಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ.

ಅಪಾಯದ ಗಂಟೆ ಬಾರಿಸಿದರೂ ಎಚ್ಚೆತ್ತುಕೊಳ್ಳದ ವಾಹನೋದ್ಯಮ

ದೇಶದಲ್ಲಿ ವಿದ್ಯುತ್ ಚಾಲಿತ ಕಾರುಗಳಿಗೆ ಸರಕಾರದಿಂದ ಸಬ್ಸಿಡಿ ದೊರಕುತ್ತಿದೆ. ಆದರೆ ಅವಶ್ಯಕ ವಿದ್ಯುತ್ ಮರು ತುಂಬಲು ಸ್ಟೇಷನ್ ಗಳ ಕೊರತೆ ಕಾಡುತ್ತಿದೆ. ಆರೋಗ್ಯಕರ ಪರಿಸರದ ಹಿನ್ನೆಲೆಯಲ್ಲಿ ವಿದ್ಯುತ್ ಚಾಲಿತ ಕಾರುಗಳನ್ನು ಪ್ರೋತ್ಸಾಹಿಸುವುದು ಅತಿ ಅಗತ್ಯವಾಗಿದೆ. ಅಷ್ಟಕ್ಕೂ ನೀವು ಏಕೆ ಎಲೆಕ್ಟ್ರಿಕ್ ಕಾರು ಕೊಳ್ಳಬೇಕು? ಬನ್ನಿ ನೋಡೋಣ.

ನೀವು ವಿದ್ಯುತ್ ಚಾಲಿತ ಕಾರನ್ನು ಏಕೆ ಕೊಳ್ಳಬೇಕು?

2014ರ ಅಧ್ಯಯನ ವರದಿಯೊಂದರ ಪ್ರಕಾರ ಚೀನಾದಲ್ಲಿ ಎಲೆಕ್ಟ್ರಿಕ್ ಕಾರುಗಳ ಮಾರಾಟವು ಶೇಕಡಾ 120ರಷ್ಟು ವರ್ಧನೆಯುಂಟಾಗಿದೆ. ಇದು ಅಮೆರಿಕದಲ್ಲಿ ಶೇಕಡಾ 69, ಜಪಾನ್ ನಲ್ಲಿ ಶೇಕಡಾ 45 ಹಾಗೂ ನಾರ್ವೇಯಲ್ಲೇ ಶೇಕಡಾ 50ರಷ್ಟಾಗಿದೆ.

ಇಂಧನ ಚಾಲಿತ ವಾಹನಗಳಿಗೆ ಬದಲಿ ವ್ಯವಸ್ಥೆ

ಇಂಧನ ಚಾಲಿತ ವಾಹನಗಳಿಗೆ ಬದಲಿ ವ್ಯವಸ್ಥೆ

ನಾಳಿನ ಸುಸ್ಥಿರ ಪರಿಸರದ ನಿಟ್ಟಿನಲ್ಲಿ ಇಂಧನ ಚಾಲಿತ ವಾಹನಗಳ ಬದಲಿ ವ್ಯವಸ್ಥಯನ್ನು ಹುಡುಕುವುದು ಅತಿ ಅಗತ್ಯವಾಗಿದೆ. ಇನ್ನೊಂದೆಡೆ ನಿಕಟ ಭವಿಷ್ಯದಲ್ಲೇ ಎದುರಾಗಬಹುದಾದ ಪೆಟ್ರೋಲ್ ಹಾಗೂ ಡೀಸೆಲ್ ಇಂಧನಗಳ ಅಭಾವತೆಯಿಂದ ಪಾರಾಗಬಹುದಾಗಿದೆ.

ಪರಿಸರ ಸ್ನೇಹಿ

ಪರಿಸರ ಸ್ನೇಹಿ

ವಿದ್ಯುತ್ ಚಾಲಿತ ವಾಹನಗಳು ಶೇಕಡಾ 100ರಷ್ಟು ಪರಿಸರ ಸ್ನೇಹಿಯಾಗಿದ್ದು, ವಾತಾವರಣಕ್ಕೆ ಮಾರಕವಾಗಿರುವ ಕಾರ್ಬನ್ ಡೈ ಓಕ್ಸೈಡ್ ಹೊಗೆಯಿಂದ ಮುಕ್ತಿ ಪಡೆಯಬಹುದಾಗಿದೆ. ಇದರಿಂದ ಸ್ವಚ್ವವಾಗಿ ಉಸಿರಾಡಬಹುದಾಗಿದೆ.

ಶಬ್ದ ಮಾಲಿನ್ಯಕ್ಕೆ ತಡೆ

ಶಬ್ದ ಮಾಲಿನ್ಯಕ್ಕೆ ತಡೆ

ನಗರದೆಲ್ಲೆಡೆ ತುಂಬಿರುವ ಕಿಕ್ಕಿರಿದ ವಾಹನಗಳಿಂದಾಗಿ ಭಾರಿ ಶಬ್ದ ಮಾಲಿನ್ಯವುಂಟಾಗಬಹುದಾಗಿದೆ. ಆದರೆ ಎಲೆಕ್ಟ್ರಿಕ್ ವಾಹನಗಳ ಬಳಕೆಯಿಂದ ಇಂತಹದೊಂದು ಸಂಭವನೀಯ ಶಬ್ದ ಮಾಲಿನ್ಯದಿಂದ ಎದುರಾಗುವ ಮಾನಸಿಕ ಖಿನ್ನತೆಯನ್ನು ತಡೆಯಬಹುದಾಗಿದೆ.

ಸುರಕ್ಷಿತ ಚಾಲನೆ

ಸುರಕ್ಷಿತ ಚಾಲನೆ

ಸಂಶೋಧನೆಯ ಪ್ರಕಾರ ಇತರ ಕಾರುಗಳಿಗಿಂತ ಎಲೆಕ್ಟ್ರಿಕ್ ವಾಹನಗಳ ಚಾಲನೆ ಹೆಚ್ಚು ಸುರಕ್ಷಿತವಾಗಿದೆ. ವಾಹನ ಅಪಘಾತದ ಸಂದರ್ಭದಲ್ಲಿ ಬ್ಯಾಟರಿಗೆ ವಿತರಣೆಯಾಗುವ ಪವರ್ ಅನ್ನು ತಡೆಯುವ ಮೂಲಕ ಪ್ರಯಾಣಿಕರಿಗೆ ಯಾವುದೇ ರೀತಿಯ ಅಪಾಯವಾಗದಂತೆ ತಡೆಯುತ್ತದೆ.

 ನಿರ್ವಹಣಾ ವೆಚ್ಚ ಕಡಿಮೆ

ನಿರ್ವಹಣಾ ವೆಚ್ಚ ಕಡಿಮೆ

ನಿಮಗೆಲ್ಲರಿಗೂ ತಿಳಿದಿರುವಂತೆಯೇ ಎಲೆಕ್ಟ್ರಿಕ್ ವಾಹನಗಳಿಗೆ ಸುಲಭವಾಗಿ ಯಂತ್ರ ತಿರುಗುವಂತೆ ಮಾಡುವ (lubricate) ಎಣ್ಣೆಗಳ ಅಗತ್ಯ ಬರುವುದಿಲ್ಲ. ಇದರ ಜೊತೆಗೆ ಹೆಚ್ಚಿನ ಇಂಧನ ಕೆಲಸವಿರುವುದಿಲ್ಲ. ಇದೇ ಕಾರಣಕ್ಕಾಗಿ ಸರ್ವೀಸ್ ಸ್ಟೇಷನ್ ಗಳ ಅಗತ್ಯ ಬಹಳ ಕಡಿಮೆಯಾಗಿರುತ್ತದೆ. ಈಗ ದೇಶದ ಅಗ್ರ ಐದು ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ಕಾರುಗಳ ಬಗ್ಗೆ ಅರಿಯಿರಿ.

01. ಮಹೀಂದ್ರ ಇ2ಒ

01. ಮಹೀಂದ್ರ ಇ2ಒ

ಮಹೀಂದ್ರ ಇ2ಒ ದೇಶದ ರಸ್ತೆಗೆ ಹೇಳಿ ಮಾಡಿಸಿದಂತಹ ವಿದ್ಯುತ್ ಚಾಲಿತ ಕಾರಾಗಿದೆ. ನಗರಗಳಲ್ಲಿ ಎರಡನೇ ಕಾರು ಬಯಸುವವರು ಇದನ್ನು ಕೊಂಡುಕೊಳ್ಳಬಹುದಾಗಿದೆ.

02. ಟೊಯೊಟಾ ಪ್ರಯಸ್

02. ಟೊಯೊಟಾ ಪ್ರಯಸ್

ಟೊಯೆಟಾ ಪ್ರಯಸ್ ಒಂದು ಅತ್ಯುತ್ತಮ ಹೈಬ್ರಿಡ್ ಕಾರಾಗಿದ್ದು, ಎಂಜಿನ್ ನಿಂದ ಹಿಡಿದು ನಿರ್ವಹಣೆ, ಸೌಂದರ್ಯ ಹಾಗೂ ಸುರಕ್ಷತೆಯ ವಿಚಾರದಲ್ಲಿ ಉತ್ತಮ ಗುಣಮಟ್ಟತೆಯನ್ನು ಕಾಯ್ದುಕೆೋೂಂಡಿದೆ.

03. ಟೊಯೊಟಾ ಕ್ಯಾಮ್ರಿ ಹೈಬ್ರಿಡ್

03. ಟೊಯೊಟಾ ಕ್ಯಾಮ್ರಿ ಹೈಬ್ರಿಡ್

ಪರಿಸರ ಸ್ನೇಹಿ ವಾಹನಗಳನ್ನು ಪರಿಚಯಿಸುವುದರಲ್ಲಿ ಬದ್ದವಾಗಿರುವ ಜಪಾನ್ ಮೂಲದ ಟೊಯೊಟಾ, ಇತ್ತೀಚೆಗಷ್ಟೇ 2015 ಕ್ಯಾಮ್ರಿ ಹೈಬ್ರಿಡ್ ಕಾರನ್ನು ದೇಶದಲ್ಲಿ ಬಿಡುಗಡೆ ಮಾಡಿಕ್ಕು. ಇದರಲ್ಲಿ ಪೆಟ್ರೋಲ್ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಇದ್ದು, ಗರಿಷ್ಠ ಇಂಧನ ಕ್ಷಮತೆಯನ್ನು ಖಾತ್ರಿಪಡಿಸುತ್ತದೆ.

04. ಬಿಎಂಡಬ್ಲ್ಯು ಐ8

04. ಬಿಎಂಡಬ್ಲ್ಯು ಐ8

'ವಿಶ್ವ ಹಸಿರು ಕಾರು' ಪ್ರಶಸ್ತಿ ಬಾಚಿಕೊಂಡಿರುವ ಬಿಎಂಡಬ್ಲ್ಯು ಐ8 ಕೋಟಿ ದುಬಾರಿಯೆನಿಸಿದರೂ ಹಣಕ್ಕೆ ತಕ್ಕ ಮೌಲ್ಯ ನೀಡುತ್ತದೆ. ಆಡಂಬರ ಕಾರು ಖರೀದಿಗಾರರಿಗೆ ಇಂದೊಂದು ಅತ್ಯುತ್ತಮ ಆಯ್ಕೆಯಾಗಿರಲಿದೆ.

05. ಮಹೀಂದ್ರ ಸ್ಕಾರ್ಪಿಯೊ ಮೈಕ್ರೊ ಹೈಬ್ರಿಡ್

05. ಮಹೀಂದ್ರ ಸ್ಕಾರ್ಪಿಯೊ ಮೈಕ್ರೊ ಹೈಬ್ರಿಡ್

ಮಹೀಂದ್ರ ಸ್ಕಾರ್ಪಿಯೊ ಎಸ್4 ವೆರಿಯಂಟ್ ನಲ್ಲಿ ಮೈಕ್ರೊ ಹೈಬ್ರಿಡ್ ಸ್ಟ್ಯಾರ್ಟ್-ಸ್ಟಾಪ್ ಪ್ಯಾಕೇಜ್ ಆಯ್ಕೆಯೂ ಇರುತ್ತದೆ. ಇವೆಲ್ಲವೂ ದೇಶದ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯನ್ನು ನೀಡುತ್ತದೆ.

Most Read Articles

Kannada
English summary
why should you buy a electric car ?
Story first published: Monday, May 18, 2015, 12:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X