ಸನ್‌ರೂಫ್ ರಕ್ಷಣೆಗೆ ಸಿಂಪಲ್ ಟಿಪ್ಸ್: ನಿರ್ಲಕ್ಷ್ಯ ಬೇಡ, ಸಣ್ಣ ಸಮಸ್ಯೆ ದೊಡ್ಡ ವೆಚ್ಚಕ್ಕೆ ಕಾರಣವಾಗಬಹುದು!
ಐಷಾರಾಮಿ ಹಾಗೂ ಪ್ರೀಮಿಯಂ ಕಾರುಗಳಿಗೆ ಮಾತ್ರ ಸೀಮಿತವಾಗಿದ್ದ ಸನ್‌ರೂಫ್ ವೈಶಿಷ್ಟ್ಯವು ಈಗ ಪ್ರವೇಶ ಮಟ್ಟದ ಕಾರು ಮಾದರಿಗಳಲ್ಲಿಯೂ ಲಭ್ಯವಾಗುತ್ತಿದೆ. ಈ ವೈಶಿಷ್ಟ್ಯವು ವಿಶಿಷ್ಟ ಅನುಭವವನ್ನು ನೀಡುವುದರಿಂದ ಗ್ರಾಹಕರಲ್ಲಿ ಸನ್‌ರೂಫ್ ಇರುವ ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ವಾಹನ ಖರೀದಿಸಿದರೆ ಸಾಲದು ಇದರ ನಿರ್ವಹಣೆ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.
ಈ ಸನ್‌ರೂಫ್ ಹೇಗೆ ಸುರಕ್ಷಿತಗೊಳಿಸುವುದು ಎಂಬುದರ ಕುರಿತು ನಿರ್ವಹಣೆ ಸಲಹೆಗಳನ್ನು ಈ ಲೇಖನದಲ್ಲಿ ನೋಡೋಣ. ನಿಮ್ಮ ವಾಹನದ ತಯಾರಕರು ನೀಡಿದ ಎಲ್ಲಾ ಪ್ರಮುಖ ಸೂಚನೆಗಳೊಂದಿಗೆ ನೀವೇ ತಿಳಿದುಕೊಳ್ಳುವುದು ಮೊದಲ ಮತ್ತು ಪ್ರಮುಖ ಸಲಹೆಯಾಗಿದೆ. ಬಳಕೆದಾರರ ಕೈಪಿಡಿಯಲ್ಲಿ ಒದಗಿಸಲಾದ ಎಲ್ಲಾ ಸೂಚನೆಗಳನ್ನು ಅನುಸರಿಸಿ. ಇದು ನಿಮಗೆ ಮಾರ್ಗದರ್ಶನ ನೀಡುತ್ತದೆ.

ನಿಯಮಿತ ಸನ್‌ರೂಫ್ ಬಳಕೆ ಅಗತ್ಯ: ಸನ್‌ರೂಫ್ ಅಗತ್ಯವಿಲ್ಲ ಎಂದು ಭಾವಿಸಿ ಅದನ್ನು ಬಳಸದೆ ಬಿಡಬೇಡಿ. ಇದನ್ನು ನಿಯಮಿತವಾಗಿ ಬಳಸುತ್ತಲೇ ಇರಬೇಕು. ಇದರೊಂದಿಗೆ ಸನ್‌ರೂಫ್ ಅನ್ನು ಯಾವಾಗಲೂ ಕಾರ್ಯನಿರ್ವಹಿಸುವಂತೆ ಮಾಡಬಹುದು. ಸನ್‌ರೂಫ್‌ಗಳು ಕೆಲವೊಮ್ಮೆ ಬಳಸದೇ ಇದ್ದರೇ ಹಾನಿಗೊಳಗಾಗಬಹುದು. ಅಗತ್ಯವಿರುವ ಸಮಯದಲ್ಲಿ ಅದನ್ನು ತೆರೆಯಲು ಸಾಧ್ಯವಾಗದಿರಬಹುದು. ಅದಕ್ಕಾಗಿಯೇ ಸನ್‌ರೂಫ್ ಅನ್ನು ಆಗಾಗ್ಗೆ ಬಳಸುವ ಮೂಲಕ ಅದರ ಕೆಲಸದ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಬಹದು ಎಂದು ಕಂಪನಿಯವರು ಕೂಡ ಹೇಳುತ್ತಾರೆ.
ಹೊರೆಗಳನ್ನು ಹೇರುವುದನ್ನು ತಪ್ಪಿಸಿ: ಇತ್ತೀಚೆಗಷ್ಟೇ ಜಲಪಾತದ ಅಡಿಯಲ್ಲಿ ನಿಲ್ಲಿಸಿದ್ದ ಮಹೀಂದ್ರಾ ಸ್ಕಾರ್ಪಿಯೊದ ಸನ್‌ರೂಫ್ ಮೂಲಕ ನೀರು ಬರಲಾರಂಭಿಸಿತ್ತು. ಅಂದರೆ ಸನ್‌ರೂಫ್ ಗುಣಮಟ್ಟ ಕೆಟ್ಟದಾಗಿದೆ ಎಂಧರ್ಥವಲ್ಲ, ಅದರ ಬಳಕೆ ಎಲ್ಲಿ ಯಾವಾಗ ಹೇಗೆ ಮಾಡಬೇಕು ಎಂಬುದು ತಿಳಿದಿರಬೇಕು. ಆದ್ದರಿಂದ, ಅನಗತ್ಯ ಚಟುವಟಿಕೆಗಳನ್ನು ತಪ್ಪಿಸುವುದು ಉತ್ತಮ. ಸನ್‌ರೂಫ್‌ನ ಮೇಲೆ ಹೆಚ್ಚಿನ ತೂಕವನ್ನು ಹಾಕುವುದು ಅಥವಾ ಇತರ ಯಾವುದೇ ಅನಗತ್ಯ ಕೆಲಸಗಳನ್ನು ಮಾಡುವುದರಿಂದ ಅದು ಬೇಗನೆ ವಿಫಲಗೊಳ್ಳುತ್ತದೆ.

ಸ್ವಚ್ಛವಾಗಿಡಿ: ಬಹುಶಃ ನೀವು ನಿಮ್ಮ ಕಾರನ್ನು ಹೊರಾಂಗಣದಲ್ಲಿ (ಮರದ ಕೆಳಗೆ ಅಥವಾ ತೆರೆದ ಸ್ಥಳದಲ್ಲಿ) ನಿಲ್ಲಿಸಿದರೆ, ನಿಮ್ಮ ಕಾರಿನ ಸನ್‌ರೂಫ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು ತುಂಬಾ ಮುಖ್ಯ. ನಿರ್ದಿಷ್ಟವಾಗಿ, ಛಾವಣಿಯ ಮೇಲೆ ಧೂಳು ಮತ್ತು ಒಣ ಮರದ ಕಡ್ಡಿಗಳು, ಎಲೆಗಳನ್ನು ಸಂಗ್ರಹಿಸದಂತೆ ಎಚ್ಚರಿಕೆ ವಹಿಸಬೇಕು. ಸಾಧ್ಯವಾದರೆ ಸನ್‌ರೂಫ್‌ಗೆ ಹೊಂದಿಕೊಳ್ಳುವಂತೆ ಅಡ್ಡಲಾಗಿ ಬಟ್ಟೆಯನ್ನು ಇಡಬಹುದು. ಹೀಗೆ ಮಾಡುವುದರಿಂದ ಸನ್‌ರೂಫ್ ಮೇಲೆ ಬೀಳುವ ಸಣ್ಣ ಗೀರುಗಳನ್ನು ತಪ್ಪಿಸಬಹುದು.
ಒಂದು ವೇಳೆ ನಿಮಗೆ ನಿಯಮಿತವಾಗಿ ಸ್ವಚ್ಛಗೊಳಿಸಲು ಸಮಯವಿಲ್ಲದಿದ್ದರೇ ಕಾರುಗಳನ್ನು ಸುರಕ್ಷಿತ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಬಹುದು. ವಾಹನವನ್ನು ಸಂಪೂರ್ಣವಾಗಿ ಕಾರ್ ಕವರ್‌ನಿಂದ ಮುಚ್ಚಬಹುದು. ಹೀಗೆ ಮಾಡುವುದರಿಂದ ನೀವು ಧೂಳು ಮತ್ತು ಮರದ ಕೊಂಬೆಗಳು, ಎಲೆಗಳು ಇತ್ಯಾದಿಗಳಿಂದ ಉಂಟಾಗುವ ಗೀರುಗಳಿಂದ ಕಾರನ್ನು ಉಳಿಸಬಹುದು. ನಿಮಗೆ ಸಮಯ ಸಿಕ್ಕಾಗಲೆಲ್ಲಾ, ನೀವು ಅದನ್ನು ಸ್ಕ್ರ್ಯಾಚ್ ಬೀಳದ ಫೈಬರ್ ಬಟ್ಟೆಯಿಂದ ಸ್ವಚ್ಛಗೊಳಿಸಬಹುದು.

ಹಾನಿಯಾದರೆ ತಕ್ಷಣ ದುರಸ್ತಿ ಮಾಡಿ: ಸನ್‌ರೂಫ್ ಕೆಲವೊಮ್ಮೆ ಸ್ವಯಂಚಾಲಿತವಾಗಿ ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತದೆ. ಅಂತಹ ದೋಷಗಳು ಗಮನಕ್ಕೆ ಬಂದಾಗ ತಕ್ಷಣ ಸರಿಪಡಿಸುವುದು ಉತ್ತಮ. ಇಲ್ಲದಿದ್ದರೇ ದಿನದಿಂದ ದಿನಕ್ಕೆ ಈ ಸಮಸ್ಯೆ ಹೆಚ್ಚುತ್ತಲೇ ಹೋಗುತ್ತದೆ. ವಿಶೇಷವಾಗಿ, ಮಳೆಗಾಲದಲ್ಲಿ ಅದರ ವೈಫಲ್ಯವು ದೊಡ್ಡ ಸಮಸ್ಯೆಗಳಿಗೆ ಕಾರಣ ಆಗಬಹುದು. ಆದ್ದರಿಂದ ಸನ್ ರೂಫ್‌ನಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ, ಅದನ್ನು ತಕ್ಷಣವೇ ಸರಿಪಡಿಸುವುದು ಉತ್ತಮ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








