ಇನ್ನು ನಿಮ್ಮ ಬೈಕ್ ಸ್ಟಾರ್ಟ್ ಆಗದಿದ್ದರೆ ಮೆಕ್ಯಾನಿಕ್ ಅಗತ್ಯವಿಲ್ಲ: ಈ ಟಿಪ್ಸ್‌ಗಳನ್ನು ಫಾಲೋ ಮಾಡಿ
ಅಗತ್ಯ ಬಂದಾಗ ಬೈಕ್ ಸ್ಟಾರ್ಟ್ (Bike Start) ಆಗದಿದ್ದರೆ ಅದರಷ್ಟು ಕೋಪ ಮತ್ತು ಬೇಸರದ ಸಂಗತಿ ಬೇರೊಂದಿಲ್ಲ. ಒಂದೊಳ್ಳೆ ರೈಡ್ ಹೊರಟಾಗ ಬೈಕ್ ಕೈ ಕೊಟ್ಟರಂತೂ ಒಂದೊಳ್ಳೆ ರೈಡ್ ಹಾಳಾಗುವ ಸಾಧ್ಯತೆ ಇರುತ್ತದೆ. ನಾವು ಇಲ್ಲಿ ಆ ಕೋಲ್ಡ್ ಸ್ಟಾರ್ಟ್ ಸಮಸ್ಯೆಯ ಬಗ್ಗೆ ಮಾತನಾಡುತ್ತಿಲ್ಲ.
ಕೆಲವೊಮ್ಮೆ ನಮ್ಮದೇ ಕೆಲವು ತಪ್ಪುಗಳಿಂದ ಸುಖಾ ಸುಮ್ಮನೆ ಬೈಕ್ ಮೇಲೆ ಜಿಗುಪ್ಸೆ ಪಡಬೇಕಾಗುತ್ತದೆ. ಹಾಗಾಗಿ ನಾವು ನಿಮಗೆ ಅಂತಹ ಸಂಧರ್ಭಗಳಲ್ಲಿ ಏನು ಮಾಡಬೇಕು ಎಂಬ ವಿಷಯಗಳನ್ನು ಹೇಳಿಕೊಡಲು ಬಂದಿದ್ದೇವೆ. ಈ ಟಿಪ್ಸ್‌ಗಳು ನಿಮ್ಮ ಬೈಕ್ ಸ್ಟಾರ್ಟ್ ಆಗುವಲ್ಲಿ ಸಹಾಯ ಮಾಡಲಿ ಎಂಬುದು ನಮ್ಮ ಆಶಯ.

ಎಂಜಿನ್ ಕಟ್‌ಆಫ್ ಸ್ವಿಚ್: ಹಲವು ಬಾರಿ ನಾವು ಬೈಕ್ ಸ್ಟಾರ್ಟ್ ಮಾಡಲು ಪ್ರಯತ್ನಿಸುವಾಗ ಎಂಜಿನ್ ಕಟ್‌ಆಫ್ ಸ್ವಿಚ್ ಆಫ್ ಆಗಿರುವುದು ನಮ್ಮ ಗಮನಕ್ಕೆ ಬಂದಿರುವುದಿಲ್ಲ. ಇನ್ನು ಹಲವು ಬಾರಿ ಎಂಜಿನ್ ಆಫ್ ಮಾಡಲು ಈ ಸ್ವಿಚ್ ಬದಲು ನಾವು ಕೀಯನ್ನು ಬಳಸಿರುತ್ತೇವೆ. ಆದ್ದರಿಂದ ಸ್ಟಾರ್ಟ್ ಆಗದೇ ಇದ್ದಾಗ ಎಂಜಿನ್ ಕಟ್‌ಆಫ್ ಸ್ವಿಚ್ ಅನ್ನು 3-4 ಬಾರಿ ಆನ್ - ಆಫ್ ಮಾಡಿ ಪರೀಕ್ಷಿಸಿ.
ಸ್ಟಾರ್ಕ್‌ಪ್ಲಗ್ ವೈರ್: ಬೈಕ್ ಸ್ಟಾರ್ಟ್ ಆಗದೇ ಇರಲು ಲೂಸ್ ಆದ ಸ್ಟಾರ್ಕ್‌ಪ್ಲಗ್ ವೈರ್ ಸಹ ಕಾರಣವಾಗಿರಬಹುದು. ಲೂಸ್ ಆದ ಸ್ಪಾರ್ಕ್ ಪ್ಲಗ್ ವೈರ್ ಇರುವುದರಿಂದ ಎನೆರ್ಜಿ ಸರಿಯಾಗಿ ಹರಿಯದೇ ಇದ್ದರೆ ಬೈಕ್ ಸ್ಟಾರ್ಟ್ ಆಗಲು ಸಾಧ್ಯವಿಲ್ಲ. ಇನ್ನು ಇದನ್ನು ಸರಿಪಡಿಸಲು ಮೆಕ್ಯಾನಿಕ್ ಅನ್ನೇ ಕರೆಯಬೇಕು ಎಂದೇನಿಲ್ಲ, ನೀವು ಪ್ರಯತ್ನಿಸಿದರೂ ಸಾಧ್ಯವಿದೆ.

ಎಕ್ಸಾಸ್ಟ್ ಪರಿಶೀಲಿಸಿ: ಎಕ್ಸಾಸ್ಟ್ ಪೈಪ್‌ನಲ್ಲಿ ಏನಾದರೂ ಸಿಕ್ಕಿ ಹಾಕಿಕೊಂಡಿದ್ದರೆ ಬೈಕ್ ಸ್ಟಾರ್ಟ್ ಆಗಲು ಕೊಚ ಪ್ರಯಾಸ ಪಡಬೇಕಾಗುತ್ತದೆ. ಬ್ಲಾಕ್ ಆಗಿರುವ ಏರ್‌ಬಾಕ್ಸ್ ಅಥವಾ ಮಫ್ಲರ್ ಇದ್ದರೆ ಬೈಕ್ ಸ್ಟಾರ್ಟ್ ಆಗುವುದಿಲ್ಲ. ಹಾಗಾಗಿ ಬೈಕ್ ಸ್ಟಾರ್ಟ್ ಆಗದಿದ್ದಲ್ಲಿ ಎಕ್ಸಾಸ್ಟ್ ಅನ್ನು ಚೆಕ್ ಮಾಡಿ.
ಮುಚ್ಚಿದ ಫ್ಯುಯೆಲ್ ಟ್ಯಾಂಕ್ ವೆಂಟ್(ರಂಧ್ರ): ಬೈಕ್ ಸ್ಟಾರ್ಟ್ ಆಗದೇ ಇರಲು ಬೈಕ್‌ನ ಪೆಟ್ರೋಲ್ ಟ್ಯಾಂಕ್‌ನಲ್ಲಿರುವ ಈ ಪುಟ್ಟ ರಂಧ್ರವೂ ಒಮ್ಮೊಮ್ಮೆ ಕಾರಣವಾಗಬಹುದು. ಬೈಕ್ ನಿರಂತರವಾಗಿ ಇಂಧನವನ್ನು ಬಳಸುವುದಕ್ಕಾಗಿ ಬೈಕ್‌ನ ಪೆಟ್ರೋಲ್ ಟ್ಯಾಂಕ್‌ನಲ್ಲಿ ಒಂದು ಪುಟ್ಟ ರಂಧ್ರವಿರುತ್ತದೆ. ಭಾರತದ ಬಹುತೇಕ ಎಲ್ಲಾ ಬೈಕ್‌ಗಳಲ್ಲೂ ಅದು ಪೆಟ್ರೋಲ್ ಟ್ಯಾಂಕ್‌ನ ಕೀ ಹೋಲ್‌ನಲ್ಲಿ ಇರುತ್ತದೆ. ಒಮ್ಮೊಮ್ಮೆ ಅದು ನೀರಿನಿಂದ ಮುಚ್ಚಿದ್ದರೆ ಬೈಕ್ ಸ್ಟಾರ್ಟ್ ಆಗುವುದಿಲ್ಲ. ಅದನ್ನೊಮ್ಮೆ ತೆರೆದು ನೀರಿದ್ದರೆ ಕ್ಲಿಯರ್ ಮಾಡಿ ಪ್ರಯತ್ನಿಸಿ.
ಇಂಧನವಿಲ್ಲದೇ ಇದ್ದಾಗ: ಒಮ್ಮೊಮ್ಮೆ ಬೈಕ್‌ನ ಪೆಟ್ರೋಲ್ ಟ್ಯಾಂಕ್‌ನಲ್ಲಿ ಎಷ್ಟು ಇಂಧನ ಇದೆ ಎಂದು ತಿಳಿಯುವುದು ತುಂಬಾನೆ ಕಷ್ಟಕರವಾದ ಕೆಲಸ. ಬೈಕ್ ನ ಫ್ಯುಯೆಲ್ ಇಂಡಿಕೆಟರ್ ಕೆಲವೊಮ್ಮೆ ಸರಿಯಾದ ರೀತಿಯಲ್ಲಿ ಕೆಲಸ ನಿರ್ವಹಿಸದೇ ಇರಬಹುದು. ಹಾಗಾಗಿ ನಾವೆಷ್ಟೇ ಬಾರಿ ಬೈಕ್ ಸ್ಟಾರ್ಟ್ ಮಾಡಲು ಪ್ರಯತ್ನಿಸಿದರೂ ಸ್ಟಾರ್ಟ್ ಆಗಲಾರದು. ಇಂತಹ ಸಂಧರ್ಭಗಳಲ್ಲಿ ಪೆಟ್ರೋಲ್ ಮಟ್ಟವನ್ನು ಪರೀಕ್ಷಿಸುವುದು ಉತ್ತಮ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








