ಕಾರಿನ ಸ್ಟೀಯರಿಂಗ್ ವ್ಹೀಲ್ ಶೇಕ್ ಆಗಲು ಕಾರಣಗಳಿವು

ಕಾರಿನ ಸ್ಟೀಯರಿಂಗ್ ವ್ಹೀಲ್ ಶೇಕ್ ಆಗುವುದನ್ನು ಯಾರೂ ಬಯಸುವುದಿಲ್ಲ. ಸ್ಟೀಯರಿಂಗ್ ವ್ಹೀಲ್ ಅಲುಗಾಡುವುದು ಕಾರಿನಲ್ಲಿ ಏನಾದರೂ ತಪ್ಪಾಗಿದೆ ಎಂಬುದರ ಸೂಚನೆಯಾಗಿದೆ. ಸ್ಟೀಯರಿಂಗ್ ವ್ಹೀಲ್ ಅಲುಗಾಡುತ್ತಿರುವಾಗ ಕಾರನ್ನು ಚಾಲನೆ ಮಾಡಿದರೆ ಅನಗತ್ಯ ಭಯದಲ್ಲಿಯೇ ಪ್ರಯಾಣ ಮಾಡಬೇಕಾಗುತ್ತದೆ.

ಕಾರಿನ ಸ್ಟೀಯರಿಂಗ್ ವ್ಹೀಲ್ ಶೇಕ್ ಆಗಲು ಕಾರಣಗಳಿವು

ಒಂದು ವೇಳೆ ಸ್ಟೀಯರಿಂಗ್ ವ್ಹೀಲ್ ಅಲುಗಾಡುತ್ತಿರುವುದು ಗಮನಕ್ಕೆ ಬಂದರೆ ಪರಿಸ್ಥಿತಿ ಹದಗೆಡುವ ಮೊದಲು ಅದನ್ನು ಸರಿಪಡಿಸುವುದು ಒಳ್ಳೆಯದು. ಕಾರಿನ ಸ್ಟೀಯರಿಂಗ್ ವ್ಹೀಲ್ ಅಲುಗಾಡಲು ಹಲವು ಕಾರಣಗಳಿರುತ್ತವೆ. ಆ ಕಾರಣಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕಾರಿನ ಸ್ಟೀಯರಿಂಗ್ ವ್ಹೀಲ್ ಶೇಕ್ ಆಗಲು ಕಾರಣಗಳಿವು

ಟಯರ್ ಜೋಡಣೆ

ಕಾರಿನ ಟಯರ್‌ಗಳನ್ನು ಸರಿಯಾಗಿ ಜೋಡಿಸದಿದ್ದರೆ ಸ್ಟೀಯರಿಂಗ್ ವ್ಹೀಲ್ ಅಲುಗಾಡಬಹುದು. ಸ್ಟೀರಿಂಗ್ ವೀಲ್ ಅಲುಗಾಡಲು ಇದು ಪ್ರಮುಖ ಕಾರಣವಾಗಿದೆ. ಟಯರ್‌ಗಳ ಜೋಡಣೆ ಸರಿಯಾಗಿಲ್ಲದಿದ್ದರೆ ಕಾರು ಕಡಿಮೆ ವೇಗದಲ್ಲಿ ಚಲಿಸುವಾಗ ಸ್ಟೀಯರಿಂಗ್ ವ್ಹೀಲ್ ಅಲುಗಾಡುವುದಿಲ್ಲ.

ಕಾರಿನ ಸ್ಟೀಯರಿಂಗ್ ವ್ಹೀಲ್ ಶೇಕ್ ಆಗಲು ಕಾರಣಗಳಿವು

ಕಾರು ಹೆಚ್ಚು ವೇಗದಲ್ಲಿ ಚಲಿಸುವಾಗ ಮಾತ್ರ ಸ್ಟೀಯರಿಂಗ್ ವ್ಹೀಲ್ ಅಲುಗಾಡುತ್ತದೆ. ಗಂಟೆಗೆ 85 ಕಿ.ಮೀ ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸುವಾಗ, ಸ್ಟೀಯರಿಂಗ್ ವ್ಹೀಲ್ ಅಲುಗಾಡಬಹುದು.

ಕಾರಿನ ಸ್ಟೀಯರಿಂಗ್ ವ್ಹೀಲ್ ಶೇಕ್ ಆಗಲು ಕಾರಣಗಳಿವು

ನೀವು ಈ ಸಮಸ್ಯೆಯನ್ನು ಎದುರಿಸಿದರೆ ಎಲ್ಲಾ ಟಯರ್‌ಗಳ ಜೋಡಣೆ ಸರಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿ. ಜೊತೆಗೆ ಟಯರ್‌ಗಳಲ್ಲಿನ ಥ್ರೆಡ್ ಅನ್ನು ಪರಿಶೀಲಿಸಿ. ದೊಡ್ಡ ಸಮಸ್ಯೆಗಳಿದ್ದರೆ ಟಯರ್‌ಗಳನ್ನು ಬದಲಾಯಿಸುವುದು ಸೂಕ್ತ.

ಕಾರಿನ ಸ್ಟೀಯರಿಂಗ್ ವ್ಹೀಲ್ ಶೇಕ್ ಆಗಲು ಕಾರಣಗಳಿವು

ಇದರಿಂದ ಕಾರು ಸುಗಮವಾಗಿ, ಸುರಕ್ಷಿತವಾಗಿ ಚಲಿಸಲು ಸಾಧ್ಯವಾಗುತ್ತದೆ. ಟಯರ್‌ಗಳು ಸರಿಯಾಗಿದ್ದು, ಸಮಸ್ಯೆ ಇನ್ನೂ ಮುಂದುವರೆದರೆ ಆಕ್ಸಲ್'ಗೆ ಹಾನಿಯಾಗಿರುವ ಸಾಧ್ಯತೆಗಳಿರುತ್ತವೆ.

ಕಾರಿನ ಸ್ಟೀಯರಿಂಗ್ ವ್ಹೀಲ್ ಶೇಕ್ ಆಗಲು ಕಾರಣಗಳಿವು

ಇದು ಟಯರ್ ಹಾಗೂ ಸ್ಟೀಯರಿಂಗ್ ವ್ಹೀಲ್ ಸರಿಯಾಗಿ ಕಾರ್ಯನಿರ್ವಹಿಸುವುದನ್ನು ತಡೆಯುತ್ತದೆ. ಸ್ಟೀಯರಿಂಗ್ ವ್ಹೀಲ್'ನಲ್ಲಿ ಹಠಾತ್ ಎಳೆತ ಕಂಡು ಬಂದರೆ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು.

ಕಾರಿನ ಸ್ಟೀಯರಿಂಗ್ ವ್ಹೀಲ್ ಶೇಕ್ ಆಗಲು ಕಾರಣಗಳಿವು

ಬ್ರೇಕ್ ರೋಟರ್

ಬ್ರೇಕ್‌ ಹಾಕಿದಾಗ ಸ್ಟೀಯರಿಂಗ್ ವ್ಹೀಲ್ ಹೆಚ್ಚು ಅಲುಗಾಡಿದರೆ ಬ್ರೇಕ್ ರೋಟರ್‌ಗಳಲ್ಲಿ ಸಮಸ್ಯೆ ಇರಬಹುದು. ಬ್ರೇಕ್ ರೋಟರ್‌ಗಳು ತಮ್ಮ ಆಕಾರವನ್ನು ಕಳೆದು ಕೊಳ್ಳುತ್ತಿದ್ದು, ಹಾನಿಗೊಳಗಾಗುತ್ತಿವೆ ಎಂದು ತಿಳಿಯಬಹುದು.

ಕಾರಿನ ಸ್ಟೀಯರಿಂಗ್ ವ್ಹೀಲ್ ಶೇಕ್ ಆಗಲು ಕಾರಣಗಳಿವು

ಈ ರೀತಿಯಾದರೆ ಬ್ರೇಕ್ ಪೆಡಲ್ ಮೇಲೆ ಕಾಲು ಹಾಕಿದಾಗಲೆಲ್ಲಾ ವೈಬ್ರೇಷನ್ ಅನ್ನು ಗಮನಿಸಬಹುದು. ವಾಹನಗಳಲ್ಲಿ ಬ್ರೇಕ್ ಅಗತ್ಯವಾಗಿರುವ ಕಾರಣ ಈಸಮಸ್ಯೆಯನ್ನು ತಕ್ಷಣವೇ ಸರಿಪಡಿಸಿಕೊಳ್ಳುವುದು ಬಹಳ ಮುಖ್ಯ.

ಕಾರಿನ ಸ್ಟೀಯರಿಂಗ್ ವ್ಹೀಲ್ ಶೇಕ್ ಆಗಲು ಕಾರಣಗಳಿವು

ಹೊಸ ಬ್ರೇಕ್ ಅಳವಡಿಸಿದರೂ ವೈಬ್ರೇಷನ್ ಕಂಡು ಬಂದರೆ ರೋಟಾರ್‌ಗಳನ್ನು ಸರಿಯಾಗಿ ಅಳವಡಿಸಲ್ಲವೆಂದು ಅರ್ಥ. ಈ ಸಮಸ್ಯೆ ಕಂಡು ಬಂದರೆ ತಕ್ಷಣವೇ ವಾಹನವನ್ನು ಮೆಕ್ಯಾನಿಕ್ ಬಳಿ ಕೊಂಡೊಯ್ಯಿರಿ.

Most Read Articles

Kannada
English summary
Reasons for shaking of cars steering wheel. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X