ನಿಯಮ ಪಾಲಕರ ಕಣ್ತಪ್ಪಿಸಲು ಮಾಡುವ 16 ಪ್ರವೃತ್ತಿಗಳು!
ನಾವು ತಿಳಿದೋ ತಿಳಿಯದೆಯೋ ದಿನನಿತ್ಯ ಹಲವಾರು ಸಂಚಾರ ನಿಯಮ ಉಲ್ಲಂಘಿಸುತ್ತೇವೆ. ಸಿಗ್ನಲ್ ಜಂಪ್ ಮಾಡುವುದು, ಒನ್ ವೇನಲ್ಲಿ ವಿರುದ್ಧ ದಿಕ್ಕಿನಿಂದ ಗಾಡಿ ಓಡಿಸುವುದು, ಯೂ ಟರ್ನ್ ನಿಷೇಧ ಜಾಗದಲ್ಲಿ ಯೂ ಟರ್ನ್ ತೆಗೆದುಕೊಳ್ಳುವುದು ಹೀಗೆ ಅನೇಕ ತಪ್ಪುಗಳು ಸಹಜವಾಗಿಯೇ ಆಗುತ್ತಿರುತ್ತವೆ.
Also Read : ಪಂಚರ್ ಕಾರಿನ ಚಕ್ರ ಬದಲಾಯಿಸಲು 10 ಸುಲಭ ವಿಧಾನಗಳು
ಆದರೆ ಕೆಲವೊಮ್ಮೆ ಇದಕ್ಕಿಂತಲೂ ಜಿಪುಣವಾಗಿ ವರ್ತಿಸುವ ಬುದ್ಧಿಜೀವಿ ಚಾಲಕರು ಪೊಲೀಸರ ಕಣ್ಣಿಗೆ ಮಣ್ಣೆರೆಚುವಂತಹ ಪ್ರವೃತ್ತಿಗಳನ್ನು ಮಾಡುತ್ತಿರುತ್ತಾರೆ. ಉದಾಹರಣೆಗೆ ಬೈಕ್ ಸವಾರರು ಟ್ರಾಫಿಕ್ ಪೊಲೀಸ್ ಕಂಡಾಗ ಮಾತ್ರ ಹೆಲ್ಮೆಟ್ ಧರಿಸುವುದು ಹೀಗೆ ಹಲವಾರು ಅಂಶಗಳನ್ನು ಪಟ್ಟಿ ಮಾಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ಯಾತ್ರಿಕರು ತಮ್ಮ ಸುಗಮ ಸಂಚಾರ ಹಾಗೂ ಸುರಕ್ಷತೆಗಾಗಿ ನಿಯಮಗಳನ್ನು ರಚಿಸಲಾಗಿದೆ ಎಂಬುದನ್ನು ಮರೆತುಬಿಡುತ್ತಾರೆ. ಭಾರತದಲ್ಲಿ ಮಾತ್ರ ಕಾಣಸಿಗುವುವ ಇಂತಹ ಅಸುರಕ್ಷಿತ ಚಾಲನೆಯನ್ನು ಇಲ್ಲಿ ಪಟ್ಟಿ ಮಾಡಿಕೊಡಲಾಗಿದೆ.

01. ಪೊಲೀಸ್ ಕಂಡರೆ ಸೀಟು ಬೆಲ್ಟ್ ಧರಿಸುವುದು
ನಮ್ಮಲ್ಲಿ ಹಲವರಿಗೂ ಈಗಲೂ ಸೀಟು ಬೆಲ್ಟ್ ಮಹತ್ವದ ಬಗ್ಗೆ ಅರಿವಿಲ್ಲ. ವಾಹನ ಚಾಲಕರು ಪೊಲೀಸರು ಎದುರು ಕಂಡಾಗ ಮಾತ್ರ ತರಾತುರಿಯಲ್ಲಿ ಸೀಟು ಬೆಲ್ಟ್ ಧರಿಸುವುದು ಎಷ್ಟು ಸರಿ? ನೆನಪಿಡಿ ಸೀಟು ಬೆಲ್ಟ್ ಇರುವುದು ನಿಮ್ಮ ಸುರಕ್ಷತೆಗಾಗಿ. ಬದಲಾಗಿ ಸರಕಾರದ ಬೊಕ್ಕಸ ತುಂಬಿಸಲು ಅಲ್ಲ.

02. ಚಾಲಕ ಮಾತ್ರ ಸೀಟು ಬೆಲ್ಟ್ ಧರಿಸಿದರೆ ಸಾಕೇ?
ಅಪಘಾತವಾದಾಗ ಕೇವಲ ಚಾಲಕ ಮಾತ್ರ ಗಾಯಗೊಳ್ಳುತ್ತಾನೆ ಎಂಬುದು ಶುದ್ಧ ಮೂಢತನ. ಇದೇ ಕಾರಣಕ್ಕಾಗಿ ವಾಹನ ತಯಾರಕರು ಎಲ್ಲ ಸೀಟುಗಳಿಗೂ ಸೀಲ್ಟ್ ಬೆಲ್ಟ್ ಸೌಲಭ್ಯಗಳನ್ನು ಒದಗಿಸಿರುವುದು. ದಯವಿಟ್ಟು ಇದರ ಗರಿಷ್ಠ ಪ್ರಯೋಜನ ಪಡೆಯಲು ಮರೆಯದಿರಿ.

03. ಎಡಭಾಗದಿಂದ ಓವರ್ ಟೇಕಿಂಗ್
ಎಡಭಾಗದಿಂದ ಓವರ್ ಟೇಕ್ ಮಾಡುವುದು ಸಂಚಾರ ನಿಯಮ ಉಲ್ಲಂಘನೆ ಎಂಬುದನ್ನು ತಿಳಿದರೂ ತಾಳ್ಮೆ ಕಳೆದುಕೊಳ್ಳುವ ನಮ್ಮ ಚಾಲಕರು ಇಂತಹ ತಪ್ಪುಗಳನ್ನು ಪದೇ ಪದೇ ಆವರ್ತಿಸುತ್ತಾರೆ.

04. ಅಸುರಕ್ಷಿತವಾಗಿ ಹೆಲ್ಮೆಟ್ ಧರಿಸುವುದು
ಅನೇಕ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸಿದ್ದರೂ ಬೈಕ್ ಸವಾರನಿಗೆ ಗಂಭೀರ ಪೆಟ್ಟಾಗಿರುವ ಘಟನೆಗಳು ವರದಿಯಾಗಿವೆ. ಇದಕ್ಕಿರುವ ಪ್ರಮುಖ ಕಾರಣ ಅಸುರಕ್ಷಿತವಾಗಿ ಹೆಲ್ಮೆಟ್ ಧರಿಸುವುದು. ಇಂತಹ ಬಹುತೇಕ ಪ್ರಕರಣಗಳಲ್ಲಿ ಹೆಲ್ಮೆಟ್ ಬಿಗಿಗೊಳಿಸುವುದನ್ನು ಸವಾರರು ಮರೆತಿರುತ್ತಾರೆ. ಇದರಿಂದಾಗಿ ಅಪಘಾತ ವೇಳೆ ಹೆಲ್ಮೆಟ್ ಜಾರಿ ಹೋಗುವ ಸಂಭವವಿದ್ದು, ತಲೆಗೆ ಗಂಭೀರ ಗಾಯಗಾಳಾಗುತ್ತವೆ.

05. ಸವಾರರಿಗೆ ಮಾತ್ರ ಹೆಲ್ಮೆಟ್ ?
ಇದು ಸದ್ಯದ ಹಾಟ್ ವಿಚಾರ. ರಾಜ್ಯ ಸರಕಾರವು ಹಿಂಬದಿ ಸವಾರನಿಗೂ ಹೆಲ್ಮೆಟ್ ಕಡ್ಡಾಯಗೊಳಿಸುವುದಕ್ಕೆ ಮುಂದಾಗುತ್ತಿದೆ. ಆರಂಭದಲ್ಲಿ ಇದರ ಪಾಲನೆ ಸ್ವಲ್ಪ ಕ್ಲಿಷ್ಟಕರವೆನಿಸಿದರೂ ಸವಾರರ ಸುರಕ್ಷಿತೆಯ ನಿಟ್ಟಿನಲ್ಲಿ ಇದು ಅನಿವಾರ್ಯವಾಗಿದೆ ಎಂಬುದು ನಮ್ಮ ಅಭಿಪ್ರಾಯ. ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿರಿ.

06. ಕಳಪೆ ಮಟ್ಟದ ಹೆಲ್ಮೆಟ್ ಧರಿಸುವುದು
ರಸ್ತೆ ಬದಿಯಲ್ಲಿ ಕಡಿಮೆ ಬೆಲೆಗೆ ಸಿಗುವ ಹೆಲ್ಮೆಟ್ ಗಳಿಗೆ ನಾವು ಮೊರೆ ಹೋಗುತ್ತೇವೆ. ಇನ್ನು ಕೆಲವು ಫುಲ್ ಫೇಸ್ ಬದಲು ಓಪನ್ ಫೇಸ್ ಮುಂತಾದ ಹೆಲ್ಮೆಟ್ ಗಳನ್ನು ಧರಿಸುತ್ತಾರೆ. ಇವೆಲ್ಲವೂ ಅಪಾಯವನ್ನು ಆಹ್ವಾನಿಸಿದಂತೆ.

07. 1.2.3.4.5...... ಸವಾರಿ
ಕಾಲೇಜಿನಿಂದ ಹೊರಟ ವಿದ್ಯಾರ್ಥಿ ಹೆಲ್ಮೆಟ್ ಧರಿಸದೇ ಇಬ್ಬರು ಮೂವರನ್ನು ತನ್ನ ಹಿಂಬದಿಯಲ್ಲಿ ಕೂರಿಸಿಕೊಂಡು ನಡು ರಸ್ತೆಯಲ್ಲಿ ವೀಲಿಂಗ್ ಹೊಡೆಯುತ್ತಾನೆ. ಇನ್ನು ಮಧ್ಯಮ ವರ್ಗದ ಕುಟುಂಬದಲ್ಲಿ ಅಪ್ಪ, ಅಮ್ಮ, ಮಕ್ಕಳು ಎಲ್ಲರೂ ಬೈಕ್ ಅನ್ನು ಆಶ್ರಯಿಸಿಕೊಂಡಿರುತ್ತಾರೆ.

08. ಓವರ್ ಲೋಡಿಂಗ್
ನಮ್ಮ ಗಾಡಿ ಆಲ್ ರೌಂಡರ್ ಆಗಿರಬೇಕು ಎಂಬುದು ನಮ್ಮ ಭಾವನೆ. ಪ್ರಯಾಣಿಕರನ್ನಷ್ಟೇ ಅಲ್ಲದೆ ನಿಗದಿತ ಭಾರಕ್ಕಿಂತಲೂ ಹೆಚ್ಚು ಲೋಡ್ ಗಳನ್ನು ತಂಬಿಕೊಂಡು ಸಾಗುತ್ತಿರುವುದು ನಿತ್ಯ ದರ್ಶನ.

09. ಸಿಗ್ನಲ್ ಜಂಪ್
ಸಿಗ್ನಲ್ ಜಂಪ್ ಸಾಮಾನ್ಯವಾಗಿ ಕಂಡುಬರುವ ಪ್ರವೃತ್ತಿ. ಸಿಗ್ನಲ್ ಗಳಲ್ಲಿ ಎಲ್ಲಿಯಾದರೂ ಹಳದಿ ಬೆಳಕು ಉರಿಯುತ್ತಿರುವುದ ಕಂಡುಬಂದ್ದಲ್ಲಿ ಇನ್ನು ವೇಗವಾಗಿ ಚಲಿಸುತ್ತಾರೆ.

10. ಸವಾರಿ ವೇಳೆ ಮೊಬೈಲ್ ಫೋನ್ ಬಳಕೆ
ನಮ್ಮ ದ್ವಿಚಕ್ರ ವಾಹನ ಸವಾರರು ಎಷ್ಟು ಬುದ್ಧಿವಂತರು ನೋಡಿ. ಸವಾರಿಯ ವೇಳೆಯಲ್ಲಿ ಮೊಬೈಲ್ ಫೋನ್ ಗಳನ್ನು ಹೆಲ್ಮೆಟ್ ನೊಳಗೆ ತುರುಕಿಸಿಕೊಂಡು ಮಾತನಾಡುತ್ತಿರುತ್ತಾರೆ. ಇಲ್ಲಿ ಮಹಿಳೆಯರೇನು ಕಮ್ಮಿಯೇನಲ್ಲ ಎಂಬುದು ಅಷ್ಟೇ ಮುಖ್ಯ ವಹಿಸುತ್ತದೆ. ಇನ್ನು ಹಲವರು ಹಿಯರ್ ಫೋನ್ ಲಗತ್ತಿಸಿಕೊಂಡು ಹಾಡು ಕೇಳುತ್ತಾ ಸಾಗುತ್ತಾರೆ. ಹಾಗಾಗಿ ನಿಮ್ಮ ಜೀವನವನ್ನೇ ಮೊಬೈಲ್ ಫೋನ್ ಡಿಸ್ಕನೆಕ್ಟ್ ಮಾಡುವ ಮೊದಲು ಇಂತಹ ಹವ್ಯಾಸ ಬಿಟ್ಟುಬಿಡುವುದು ಒಳಿತು.

11. ಓವರ್ ಸ್ಪೀಡಿಂಗ್
ಉಳಿದ ವಾಹನಗಳಿಗೆ ಬಗ್ಗೆ ನಾವು ಗೌರವನೇ ಕೊಡಲ್ಲ. ಅಲ್ಲದೆ ಓವರ್ ಸ್ಪೀಡಿಂಗ್ ನಗರ ಸೇರಿದಂತೆ ಹಳ್ಳಿಗಳಲ್ಲೂ ಹೆಚ್ಚಾಗಿ ಕಂಡುಬರುತ್ತಿದೆ.

12. ಪಾನಮತ್ತ ಚಾಲನೆ
ಕುಡಿದು ವಾಹನ ಚಾಲನೆ ಮಾಡುವುದಕ್ಕೆ ಹೆಚ್ಚಿನ ವಿವರಣೆಯ ಅಗತ್ಯವಿಲ್ಲ. ಅಂಥವರನ್ನು ಆ ದೇವರೇ ಕಾಪಾಡಲಿ!

13. ಪಾದಚಾರಿ ಮಾರ್ಗದಲ್ಲಿ ವಾಹನ ಚಾಲನೆ
ಅತಿ ಹೆಚ್ಚು ವಾಹನ ದಟ್ಟಣೆ ಕಂಡುಬರುವ ಪ್ರದೇಶಗಳಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ. ದ್ವಿಚಕ್ರ ಸವಾರರು ತರಾತುರಿಯಲ್ಲಿ ಪಾದಚಾರಿ ಮಾರ್ಗವನ್ನೇ ಬಳಸುತ್ತಾರೆ. ಇಂತಹ ಘಟನೆಗಳಲ್ಲಿ ಸೆರೆ ಸಿಕ್ಕರೆ ನಿಮ್ಮ ಚಾಲನಾ ಪರವಾನವಿ ರದ್ದಾದಿತು ಎಂಬುದನ್ನು ಗಮನದಲ್ಲಿಡಿ.

14. ಫಿಟ್ನೆಸ್ ಇಲ್ಲ
ಹೇಗೆ ನಮಗೆ ಆರೋಗ್ಯ ಮುಖ್ಯವೋ ಅದೇ ರೀತಿ ವಾಹನಗಳು ಕಂಡೀಷನ್ ಆಗಿರಬೇಕು. ಆದರೆ ನಮ್ಮ ರಸ್ತೆಗಳಲ್ಲಿ ಕಂಡುಬರುವ ದೃಶ್ಯಗಳೇ ಬೇರೆ. ಹೊಗೆಯನ್ನು ಉಗುಳುವ ಹಳೆಯ ವಾಹನಗಳು ಈಗಲೂ ಸ್ವಚ್ಛಂಧವಾಗಿ ವಿಹರಿಸುತ್ತಿರುತ್ತವೆ.

15. ವೀಲಿಂಗ್
ಚಾಲನಾ ಪರವಾನಗಿ ಗಿಟ್ಟಿಸಿಕೊಳ್ಳದ ಮಕ್ಕಳು ನಡು ರಸ್ತೆಯಲ್ಲಿ ವೀಲಿಂಗ್ ಅಭ್ಯಾಸಿಸುತ್ತಾರೆ. ಮುಂದೆ ಏನೇ ದುರ್ಘಟನೆ ನಡೆದರೂ ಮಕ್ಕಳ ಪೋಷಕರು ಸಂಪೂರ್ಣ ಹೊಣೆಗಾರರಾಗಲಿ.

16. ಅಕ್ರಮ ಬಿಡಿಭಾಗಗಳು
ತಮ್ಮ ವಾಹನ ಇತರರಿಗಿಂತ ವಿಭಿನ್ನವಾಗಿ ಗುರುತಿಸಬೇಕೆಂಬ ನಿಟ್ಟಿನಲ್ಲಿ ಕರ್ಕಷ ಶಬ್ದದ ಅಥವಾ ಅತಿ ಹೆಚ್ಚು ಶಬ್ದ ಮಾಲಿನ್ಯವನ್ನುಂಟು ಮಾಡುವ ಹಾರ್ನ್ ಗಳನ್ನು, ಎಕ್ಸಾಸ್ಟ್ ಗಳನ್ನು ಹಾಗೂ ಲೌಡ್ ಸ್ಪೀಕರುಗಳನ್ನು ಲಗತ್ತಿಸುತ್ತೇವೆ. ಇವೆಲ್ಲವೂ ಮತ್ತೊಬ್ಬರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂಬುದನ್ನು ಮರೆಯದಿರಿ.

ಮಳೆಗಾಲದಲ್ಲಿ ಕಾರಿನ ಕಾಯಿಲೆ ತಪ್ಪಿಸಲು 15 ಟಿಪ್ಸ್


Click it and Unblock the Notifications








