ಬೈಕ್ ಅಪಘಾತ ತಪ್ಪಿಸುವ ಹತ್ತು ಟಿಪ್ಸ್ ನಿಮಗೆ ಗೊತ್ತೆ?

Ten Tips To Two wheeler Riders in City
ಪತ್ರಿಕೆಗಳಲ್ಲಿ ಬೈಕ್ ಅಪಘಾತವಿಲ್ಲದ ಸುದ್ದಿ ಅಪರೂಪ. ಸಿಟಿ ರಸ್ತೆಗಳಲ್ಲಿ ಇಂತಹ ಘಟನೆಗಳು ಹೆಚ್ಚು ನಡೆಯುತ್ತವೆ. ದರೆ ಸಿಟಿ ರಸ್ತೆಯಲ್ಲಿ ಸುರಕ್ಷಿತವಾಗಿ ಸವಾರಿ ಮಾಡುವುದು ಕಷ್ಟವಲ್ಲ. ಸ್ಕೂಟರ್ ಮತ್ತು ಬೈಕ್ ಸವಾರರಿಗೆ ಉಪಯುಕ್ತವಾಗುವ ಹತ್ತು ಸಲಹೆಗಳು ಇಲ್ಲಿವೆ.

* ಬೈಕ್ ಸ್ಟಾರ್ಟ್ ಮಾಡುವ ಮುನ್ನ ಮರೆಯದೆ ಸೈಡ್ ಸ್ಟಾಂಡ್ ತೆಗೆದುಬಿಡಿ. ಇದೆಂಥ ಸಲಹೆ ಎಂದು ಮೂಗುಮುರಿಯದಿರಿ. ಸೈಡ್ ಸ್ಟಾಂಡ್ ತೆಗೆಯಲು ಮರೆಯುವುದು ಹೆಚ್ಚಿನ ಬೈಕ್ ಅಪಘಾತಗಳಿಗೆ ಕಾರಣವಾಗುತ್ತಿದೆ.

* ನಿಮ್ಗೆ ಅತಿಯಾಗಿ ಕೋಪಬಂದಾಗ, ಬೇಜಾರಿನಲ್ಲಿದ್ದಾಗ, ಹತಾಶೆ, ನಿರಾಶೆ, ಉದ್ವೇಗದಲ್ಲಿದ್ದಾಗ ದಯವಿಟ್ಟು ಬೈಕ್ ರೈಡ್ ಮಾಡದಿರಿ. ಕೋಪ ಕಡಿಮೆಯಾದ ನಂತರ ಅಥವಾ ಮನಸ್ಸು ಹಗುರವಾದ ನಂತರ ಬೈಕ್/ಸ್ಕೂಟರ್ ಸವಾರಿ ಸುರು ಮಾಡಿರಿ.

* ಬಲಭಾಗದಲ್ಲಿ ಓವರ್ ಟೆಕ್ ಮಾಡಬೇಕೆಂದು ಗೊತ್ತು. ಆದರೆ ಬೈಕನ್ನು ಮುಂದಿನ ವಾಹನದ ಹತ್ತಿರದಿಂದ ಶಾರ್ಪ್ ಬೆಂಡ್ ಮಾಡಿ ಓವರ್ ಟೆಕ್ ಮಾಡ್ಬೇಡಿ. ಓವರ್ ಟೆಕ್ ಮಾಡುವಾಗ ಮುಂಭಾಗದಲ್ಲಿ ಬರಬಹುದಾದ ವಾಹನಗಳ ಕುರಿತು ಗಮನವಿರಲಿ. ದ್ವಿಚಕ್ರ ವಾಹನಗಳ ಅಪಘಾತದಲ್ಲಿ ಓವರ್ ಟೆಕ್ ಕೂಡ ಪ್ರಮುಖ ಕಾರಣವಾಗಿದೆ.

* ರಸ್ತೆಯ ಅಂಚಿನಲ್ಲಿ, ಮರಳು, ಉಸುಕು ಇರುವ ಹಾದಿಯಲ್ಲಿ ಗಟ್ಟಿಯಾಗಿ ಬ್ರೇಕ್ ಹಿಡಿಯದಿರಿ ಅಥವಾ ಡಿಸ್ಕ್ ಬ್ರೇಕ್ ಬಳಕೆ ಮಾಡದಿರಿ. ಯಾಕೆಂದರೆ ಮರಳು ಬೈಕ್ ಸವಾರರ ಕೆಟ್ಟ ಶತ್ರು. ಸಿಟಿ ರಸ್ತೆಯಲ್ಲಿ ಬೈಕ್ ಅಪಘಾತವಾಗಲು ಮರಳು, ಉಸುಕು ಪ್ರಮುಖ ಕಾರಣವಾಗಿದೆ.

* ಸ್ಪೀಡಾಗಿ ಸಾಗುತ್ತಿರುವಾಗ ಒಮ್ಮೆಗೆ ಬ್ರೇಕ್ ಹಾಕಿ ನಿಮ್ಮ ಬೈಕ್/ಸ್ಕೂಟರ್ ಚಕ್ರವನ್ನು ಲಾಕ್ ಮಾಡದಿರಿ. ಪೂರ್ತಿ ಕ್ಲಚ್ ಹಿಡಿದು, ಆರಂಭದಲ್ಲಿ ಮುಂಭಾಗದ ಬ್ರೇಕ್ ಮತ್ತು ನಂತರ ಹಿಂಭಾಗದ ಬ್ರೇಕ್ ಹಿಡಿಯಿರಿ.

* ದ್ವಿಚಕ್ರ ವಾಹನ ತಿರುಗಿಸುವಾಗ ಮರೆಯದೆ ಎಲ್/ಆರ್ ಇಂಡಿಕೇಟರ್ ಬಳಸಿರಿ. ಹಿಂಭಾಗದಿಂದ ಬೇರೆ ವಾಹನಗಳು ಡಿಕ್ಕಿ ಹೊಡೆಯುವುದನ್ನು ಇದು ತಪ್ಪಿಸುತ್ತದೆ.

* ಭಾರಿ ವಾಹನಗಳನ್ನು ಅಥವ ಕಾರುಗಳನ್ನು ತುಂಬಾ ಹತ್ತಿರದಿಂದ ಹಿಂಬಾಲಿಸದಿರಿ. ಆ ವಾಹನಗಳು ತುರ್ತಾಗಿ ಬ್ರೇಕ್ ಹಾಕಿದರೆ ಪ್ರತಿಕ್ರಿಯೆ ನೀಡುವಷ್ಟು ಸಮಯ ನಿಮಗಿರುವುದಿಲ್ಲ. ಹೀಗಾಗಿ ಬೈಕ್ ರೈಡಿಂಗ್ ಮಾಡುವಾಗ ಮುಂದಿನ ಮತ್ತು ಹಿಂದಿನ ವಾಹನದ ನಡುವೆ ಆರೋಗ್ಯಕರ ಅಂತರದಲ್ಲಿ ಬೈಕ್ ರೈಡ್ ಮಾಡಿರಿ.

* ಹಿಂಬಂದಿ ಸವಾರರಿದ್ದಾಗ ಬೈಕಿನ ಆಕ್ಸಿಲರೇಟರ್ ಮತ್ತು ಬ್ರೇಕಿಂಗ್ ವಿಷಯವು ಇತರ ವಾಹನಗಳಿಗಿಂತ ಭಿನ್ನವಾಗಿರುತ್ತದೆ. ವಾಹನವೊಂದನ್ನು ಓವರ್ ಟೆಕ್ ಮಾಡುವ ಮುನ್ನ ಈ ಅಂಶಗಳು ಗಮನದಲ್ಲಿರಲಿ.

* ಯಾವುದೇ ಸಮಯದಲ್ಲಾದರೂ ಬೈಕನ್ನು ಸ್ಟಾಪ್ ಮಾಡುವ ಸಾಮರ್ಥ್ಯ ನಿಮಗಿದೆ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಿ. ಎಷ್ಟು ವೇಗದಲ್ಲಿ ಹೋದರೂ ಯಾವುದೇ ಅಪಾಯವಾಗದಂತೆ ನಿಲ್ಲಿಸಬಲ್ಲೆ ಎಂಬ ಛಾತಿ ನಿಮಗಿರಲಿ.

* ಮುಖ್ಯವಾಗಿ ಹೆಲ್ಮೆಟ್ ಸೇರಿದಂತೆ ಬೈಕ್ ಸವಾರಿಗೆ ಅವಶ್ಯವಿರುವ ಸುರಕ್ಷಿತ ಸಾಧನಗಳನ್ನು ಬಳಸಿರಿ. ಸಂಚಾರಿ ನಿಯಮಗಳನ್ನು ತಪ್ಪದೇ ಫಾಲೊ ಮಾಡಿರಿ.

ಮನೆಯಲ್ಲಿ ನಮನ್ಯಾರೋ ಕಾಯುತ್ತಿದ್ದಾರೆ ಎನ್ನುವುದು ನೆನಪಿನಲ್ಲಿಟ್ಟುಕೊಂಡು ಬೈಕ್ ರೈಡ್ ಮಾಡಿ. ( ಸಲಹೆಗಳು ಸಾರ್ ಸಲಹೆಗಳು )

Most Read Articles

Kannada
English summary
10 importent Two wheeler safety riding tips in City Road. Follow this tips and avoid accidents. Bike and Scooter riders must read this tips. Remove Sidestand befere riding, don't overtake.. Read More.
Story first published: Tuesday, January 31, 2012, 10:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X