ಫಾಲೋ ಮಿ ಹೋಂ ಹೆಡ್‌ಲೈಟ್ಸ್ ವಿಶೇಷತೆ ಕುರಿತು ನೀವು ತಿಳಿದುಕೊಳ್ಳಲೇಬೇಕಾದ ಇಂಟ್ರಸ್ಟಿಂಗ್ ಮಾಹಿತಿಯಿದು..

ಪ್ರಸ್ತುತ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಾಗುತ್ತಿರುವ ಎಲ್ಲಾ ಆಧುನಿಕ ತಂತ್ರಜ್ಞಾನ ಪ್ರೇರಿತ ಕಾರುಗಳಲ್ಲೂ ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿತ್ತಿದ್ದು, ಈ ಹಿಂದೆ ಐಷಾರಾಮಿ ಕಾರುಗಳಲ್ಲಿ ಮಾತ್ರ ಜೋಡಣೆ ಮಾಡಲಾಗುತ್ತಿದ್ದ ಪ್ರಮುಖ ತಾಂತ್ರಿಕ ಅಂಶಗಳನ್ನು ಇದೀಗ ಬಜೆಟ್ ಕಾರುಗಳಲ್ಲೂ ಕಾಣಬಹುದಾಗಿದೆ.

ಫಾಲೋ ಮಿ ಹೋಂ ಹೆಡ್‌ಲೈಟ್ಸ್ ವಿಶೇಷತೆ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ!

ಹೊಸ ಕಾರುಗಳಲ್ಲಿ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಗಾಗಿ ಹಲವಾರು ಹೊಸ ತಾಂತ್ರಿಕ ವೈಶಿಷ್ಟ್ಯತೆಗಳ ಜೋಡಣೆಯನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಇನ್ನು ಕೆಲವು ಐಷಾರಾಮಿ ವೈಶಿಷ್ಟ್ಯತೆಗಳು ಮಧ್ಯಮ ಕ್ರಮಾಂಕದ ಕಾರುಗಳಲ್ಲೂ ಗ್ರಾಹಕರ ಬೇಡಿಕೆ ಮೇರೆಗೆ ಒಂದೊಂದಾಗಿ ಪರಿಚಯಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಪ್ರೇರಿತ ಹೊಸ ಕಾರುಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿರುವ ಫಾಲೋ ಮಿ ಹೋಂ ಹೆಡ್‌ಲೈಟ್‌ಗಳು ಗ್ರಾಹಕರನ್ನು ಸೆಳೆಯುತ್ತಿದ್ದು, ಈ ಲೇಖನದಲ್ಲಿ ಫಾಲೋ ಮಿ ಹೋಂ ಹೆಡ್‌ಲೈಟ್‌ಗಳ ಜೋಡಣೆ ಕುರಿತಾದ ವಿಶೇಷತೆ ಬಗ್ಗೆ ಚರ್ಚಿಸಿದ್ದೆವೆ.

ಫಾಲೋ ಮಿ ಹೋಂ ಹೆಡ್‌ಲೈಟ್ಸ್ ವಿಶೇಷತೆ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ!

ಹೊಸದಾಗಿ ಬಿಡುಗಡೆಯಾಗುತ್ತಿರುವ ಕಾರುಗಳಲ್ಲಿ ನೀವು ಸಾಮಾನ್ಯವಾಗಿ ಫಾಲೋ ಮಿ ಹೋಂ ಹೆಡ್‌ಲೈಟ್ಸ್ ನೀಡಿರುವ ಬಗೆಗೆ ಸಾಮಾನ್ಯವಾಗಿ ನೀವು ಕೇಳಿರುತ್ತಿರಿ. ಆದರೆ ಫಾಲೋ ಮಿ ಹೋಂ ಹೆಡ್‌ಲೈಟ್‌‌ಗಳು ಯಾವುವು? ಇದು ಹೇಗೆ ಕಾರ್ಯನಿರ್ವಹಿಸುತ್ತವೆ? ಇದರಿಂದ ನಮಗೇನು ಉಪಯೋಗ? ಎನ್ನುವಂತಹ ಹಲವು ಪ್ರಶ್ನೆಗಳಿಗೆ ಉತ್ತರವು ಕೆಲವರಿಗೆ ಹೊರತುಪಡಿಸಿ ಹೆಚ್ಚಿನವರಿಗೆ ತಿಳಿದಿಲ್ಲ.

ಫಾಲೋ ಮಿ ಹೋಂ ಹೆಡ್‌ಲೈಟ್ಸ್ ವಿಶೇಷತೆ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ!

ಹೀಗಾಗಿ ಈ ಲೇಖನದಲ್ಲಿ ನಾವು ಫಾಲೋ ಮಿ ಹೋಮ್ ಹೆಡ್‌ಲೈಟ್‌ ಅಥವಾ ಗೈಡ್ ಮಿ ಹೆಡ್‌ಲೈಟ್ಸ್ ಕುರಿತಾದ ಆಸಕ್ತಿದಾಯಕ ವಿಚಾರಗಳನ್ನು ನಿಮ್ಮದೊಂದಿಗೆ ಹಂಚಿಕೊಂಡಿದ್ದು, ಫಾಲೋ ಮಿ ಹೋಮ್ ಹೆಡ್‌ಲೈಟ್‌ಗಳು ಆಧುನಿಕ ತಂತ್ರಜ್ಞಾನ ಪ್ರೇರಿತ ಕಾರುಗಳು ಪ್ರಮುಖ ಸುರಕ್ಷಾ ಫೀಚರ್ಸ್ ಎನ್ನಬಹುದು.

ಫಾಲೋ ಮಿ ಹೋಂ ಹೆಡ್‌ಲೈಟ್ಸ್ ವಿಶೇಷತೆ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ!

ಫಾಲೋ ಮಿ ಹೋಮ್ ಹೆಡ್‌ಲೈಟ್‌ ಹೊಂದಿರುವ ಕಾರಗಳಲ್ಲಿ ಕಾರಿನಿಂದ ಇಳಿದ ನಂತರ ನಿಮಗೆ ಮಾರ್ಗದರ್ಶನ ನೀಡುವ ಕಾರ್ಯವನ್ನು ನಿರ್ವಹಿಸುತ್ತವೆ. ಮನೆ ಅಥವಾ ಕಚೇರಿಯಂತಹ ಸ್ಥಳದಲ್ಲಿ ಕಾರನ್ನು ಪಾರ್ಕ್ ಮಾಡಿದ ನಂತರ ಮುಂಭಾಗದ ಹೆಡ್‌ಲೈಟ್‌ಗಳು 10 ರಿಂದ 15 ಸೆಕೆಂಡುಗಳ ಕಾಲ ನಿರಂತರವಾಗಿ ಬೆಳಗುತ್ತವೆ.

ಫಾಲೋ ಮಿ ಹೋಂ ಹೆಡ್‌ಲೈಟ್ಸ್ ವಿಶೇಷತೆ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ!

ಆದ್ದರಿಂದ ನೀವು ಕಾರಿನಿಂದ ಇಳಿದು ಲಾಕ್ ಮಾಡಿದ ನಂತರವೂ ಕೆಲವು ಸೆಕೆಂಡುಗಳ ಕಾಲ ನೀವು ಬೆಳಕನ್ನು ಪಡೆಯಲಿದ್ದು, ಈ ಬೆಳಕಿನ ಗೋಚರದ ಮೂಲಕ ಮೂಲಕ ಸುರಕ್ಷಿತವಾಗಿ ಹೋಗಬಹುದು.

ಫಾಲೋ ಮಿ ಹೋಂ ಹೆಡ್‌ಲೈಟ್ಸ್ ವಿಶೇಷತೆ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ!

ಸಾಮಾನ್ಯವಾಗಿ ನೀವು ನಿಮ್ಮ ಕಾರನ್ನು ಕತ್ತಲೆಯ ಸ್ಥಳದಲ್ಲಿ ಪಾರ್ಕ್ ಮಾಡುವಾಗ ಮತ್ತು ಇಳಿಯುವಾಗ ಸಾಮಾನ್ಯವಾಗಿ ಹೆಡ್‌ಲೈಟ್‌ಗಳು ಆಫ್ ಆಗುತ್ತವೆ. ಆದ್ದರಿಂದ ಬೆಳಕು ಇಲ್ಲದೆ ನೀವು ತೊಂದರೆ ಅನುಭವಿಸಬಹುದು. ಇದು ಅನಿರೀಕ್ಷಿತ ಅನಾಹುತಗಳಿಗೂ ಕಾರಣವಾಗಬಹುದಾಗಿದ್ದು, ಆದರೆ ಅಂತಹ ಘಟನೆಗಳು ನಡೆಯದಂತೆ ತಡೆಯಲು ಫಾಲೋ ಮಿ ಹೆಡ್‌ಲೈಟ್‌ಗಳನ್ನು ಪರಿಚಯಿಸಲಾಗಿದೆ.

ಫಾಲೋ ಮಿ ಹೋಂ ಹೆಡ್‌ಲೈಟ್ಸ್ ವಿಶೇಷತೆ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ!

ಈ ವೈಶಿಷ್ಟ್ಯದೊಂದಿಗೆ ಹೆಡ್‌ಲೈಟ್‌ಗಳು 10 ರಿಂದ 15 ಸೆಕೆಂಡುಗಳವರೆಗೆ ನಿರಂತರವಾಗಿ ಬೆಳಕು ಹರಿಸಲಿದ್ದು, ಆದ್ದರಿಂದ ನಿಮಗೆ ಕಾರು ಇಳಿದ ತಕ್ಷಣಕ್ಕೆ ಒಂದೇ ಬಾರಿಗೆ ಕತ್ತಲು ಆವಸಿರುವಂತಹ ಯಾವುದೇ ಸಮಸ್ಯೆಗಳಿರುವುದಿಲ್ಲ.

ಫಾಲೋ ಮಿ ಹೋಂ ಹೆಡ್‌ಲೈಟ್ಸ್ ವಿಶೇಷತೆ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ!

ಇಲ್ಲದಿದ್ದರೆ ಸೆಲ್‌ಫೋನ್ ಟಾರ್ಚ್‌ನ ಬೆಳಕಿನಲ್ಲಿಯೇ ಹೋಗಬೇಕಿದ್ದು, ಒಂದು ವೇಳೆ ಫೋನ್ ಚಾರ್ಜ್ ಕಡಿಮೆ ಇದ್ದ ಪಕ್ಷದಲ್ಲಿ ಟಾರ್ಚ್ ಸಿಗುವ ಬೆಳಕು ಸಿಗದೆ ಇರುವ ಸಂದರ್ಭಗಳು ಎದರಾಗಬಬಹುದು.

ಫಾಲೋ ಮಿ ಹೋಂ ಹೆಡ್‌ಲೈಟ್ಸ್ ವಿಶೇಷತೆ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ!

ಆದರೆ ಅಂತಹ ಅನಾನುಕೂಲತೆಗಳನ್ನು ತಪ್ಪಿಸಲು ಫಾಲೋ ಮಿ ಹೆಡ್‌ಲೈಟ್‌ಗಳ ಕಾರ್ಯವು ಸಾಕಷ್ಟು ಉಪಯುಕ್ತವಾಗಿದ್ದು, ಈ ಹಿಂದೆ ದುಬಾರಿ ಕಾರುಗಳಲ್ಲಿ ಮಾತ್ರ ಕಂಡುಬರುತ್ತಿದ್ದ ಫಾಲೋ-ಅಪ್ ಹೆಡ್‌ಲೈಟ್ಸ್ ವೈಶಿಷ್ಟ್ಯತೆಯು ಇದೀಗ ಬಿಡುಗಡೆಯಾಗುತ್ತಿರುವ ಬಹುತೇಕ ಎಲ್ಲಾ ಕಾರುಗಳಲ್ಲೂ ನೀಡಲಾಗುತ್ತಿದೆ.

ಫಾಲೋ ಮಿ ಹೋಂ ಹೆಡ್‌ಲೈಟ್ಸ್ ವಿಶೇಷತೆ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ!

ಬಜೆಟ್ ಕಾರುಗಳಲ್ಲಿಯೂ ಫಾಲೋ ಮಿ ಹೋಮ್ ಹೆಡ್‌ಲೈಟ್‌ಗಳ ವೈಶಿಷ್ಟ್ಯವನ್ನು ನೀವು ಈಗ ನೋಡಬಹುದಾಗಿದ್ದು, ಕಾರಿನ ಇಗ್ನಿಷನ್ ಆಫ್ ಆದ ತಕ್ಷಣ ಮತ್ತು ಬಾಗಿಲು ಮುಚ್ಚಿದ ಮೇಲೆ ಈ ಸೌಲಭ್ಯವು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ.

ಫಾಲೋ ಮಿ ಹೋಂ ಹೆಡ್‌ಲೈಟ್ಸ್ ವಿಶೇಷತೆ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ!

ಕಾರಿನ ಬಾಗಿಲು ಮುಚ್ಚಿದ ನಂತರ ಇಸಿಯು ಎಂದು ಕರೆಯಲ್ಪಡುವ ಎಲೆಕ್ಟ್ರಾನಿಕ್ ನಿಯಂತ್ರಣ ಘಟಕವು ಮುಂಭಾಗದ ಹೆಡ್‌ಲೈಟ್‌ಗಳಿಗೆ ಸಂಕೇತ ಕಳುಹಿಸಲಿದ್ದು, ಈ ಸಂಕೇತವನ್ನು ಎಲೆಕ್ಟ್ರಿಕ್ ಪಲ್ಸ್ ಎಂದೂ ಕರೆಯುತ್ತಾರೆ.

ಫಾಲೋ ಮಿ ಹೋಂ ಹೆಡ್‌ಲೈಟ್ಸ್ ವಿಶೇಷತೆ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ!

ಈ ಪ್ರಕ್ರಿಯೆಯಲ್ಲಿ ಫಾಲೋ ಮಿ ಹೋಂ ಹೆಡ್‌ಲೈಟ್‌ಗಳ ವೈಶಿಷ್ಟ್ಯವನ್ನು ಟ್ರಿಗರ್ ಮಾಡುವ ಮೂಲಕ ಮುಂಭಾಗದ ಹೆಡ್‌ಲೈಟ್‌ಗಳನ್ನು 10 ರಿಂದ 15 ಸೆಕೆಂಡುಗಳವರೆಗೆ ಉರಿಯುವಂತೆ ಮಾಡಲಿದ್ದು, ಪ್ರೋಗ್ರಾಂ ಅಥವಾ ಮೈಕ್ರೊಪ್ರೊಸೆಸರ್ ಮೂಲಕ ಹೆಡ್‌ಲೈಟ್‌ಗಳನ್ನು ನಿಗದಿತ ಅವಧಿಯ ನಂತರ ಆಟೋಮ್ಯಾಟಿಕ್ ಆಗಿ ಆಫ್ ಆಗುತ್ತವೆ.

ಫಾಲೋ ಮಿ ಹೋಂ ಹೆಡ್‌ಲೈಟ್ಸ್ ವಿಶೇಷತೆ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ!

ಇದರೊಂದಿಗೆ ಕಾರು ಇಳಿದ ನಂತರ ಕತ್ತಲು ಆಗಿರುವ ಸಮಯದಲ್ಲಿ ಮುಂದೆ ಸಾಗಲು ಈ ವೈಶಿಷ್ಟ್ಯತೆ ಸಾಕಷ್ಟು ಪ್ರಯೋಜನಕಾರಿಯಾಗಿದ್ದು, ಹೀಗಾಗಿ ಎಲ್ಲಾ ಹೊಸ ಕಾರುಗಳಲ್ಲಿಯೂ ಫಾಲೋ ಮಿ ಹೆಡ್‌ಲೈಟ್‌ಗಳ ಅಳುವಡಿಕೆಯು ಮಾಲೀಕರಿಗೆ ಉಪಯುಕ್ತವಾಗಿ ಎನ್ನಬಹುದು.

ಫಾಲೋ ಮಿ ಹೋಂ ಹೆಡ್‌ಲೈಟ್ಸ್ ವಿಶೇಷತೆ ಕುರಿತಾದ ಇಂಟ್ರಸ್ಟಿಂಗ್ ಮಾಹಿತಿ!

ಫಾಲೋ ಮಿ ಹೋಮ್ ಹೆಡ್‌ಲೈಟ್‌ಗಳ ಕುರಿತು ನಿಮ್ಮ ಅನುಮಾನಗಳಿಗೆ ಇದೀಗ ಉತ್ತರ ಸಿಕ್ಕಿದೆ ಎಂದು ನಾವು ಭಾವಿಸುತ್ತೇವೆ. ಒಂದು ನೀವು ಹೊಸ ಕಾರನ್ನು ಖರೀದಿಸುತ್ತಿದ್ದರೆ ಅದರಲ್ಲಿ ಫಾಲೋ ಮಿ ಹೋಂ ಹೆಡ್‌ಲೈಟ್‌ಗಳ ವೈಶಿಷ್ಟ್ಯತೆ ಹೊಂದಿರುವ ಬಗ್ಗೆ ಖಚಿತಪಡಿಸಿಕೊಳ್ಳಿ.

ನಿಮ್ಮ ಪ್ರಯಾಣ ಸುಖಕರವಾಗಿರಲಿ..

More from DriveSpark

Article Published On: Tuesday, February 15, 2022, 8:46 [IST]
English summary
What is the function of follow me home headlamps everything you need to know
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+