Ola: ಓಲಾ ಸಿಇಒ ಮನಗೆದ್ದ 4 ವರ್ಷದ ಬಾಲಕನಿಗೆ ಬಂಪರ್ ಆಫರ್: ಕುಟುಂಬಕ್ಕೆ ಆಹ್ವಾನ

ನಾಲ್ಕು ವರ್ಷದ ಪುಟ್ಟ ಬಾಲಕನಿಗೆ ಓಲಾ ಸಿಇಒ ಭವಿಷ್ ಅಗರ್ವಾಲ್ ಫಿದಾ ಆಗಿದ್ದಾರೆ. ನಿಮ್ಮ ಓಲಾ ಫ್ಯೂಚರ್ ಫ್ಯಾಕ್ಟರಿ ನೋಡಲು ಅನುವು ಮಾಡಿಕೊಡಿ ಎಂದು ಡ್ಯಾನ್ಸ್ ಮಾಡಿ ಭವಿಷ್ ಅಗರ್ವಾಲ್ ಅವರ ಬಳಿ ಬಾಲಕ ಕೇಳಿಕೊಂಡಿದ್ದಾನೆ. ಇದಕ್ಕೆ ಅವರು ಕೂಡ ವಿನಮ್ರವಾಗಿ ಸ್ಪಂದಿಸಿದ ಪೋಸ್ಟ್‌ವೊಂದು ವೈರಲ್ ಆಗಿದೆ.

ಆಗ್ರಾದ ನಾಲ್ಕು ವರ್ಷದ ಖುಷ್ನವ್ ಖಿರ್ವಾರ್ ಎಂಬ ಬಾಲಕ X(ಟ್ವಿಟರ್) ನಲ್ಲಿ ಓಲಾ ಕುರಿತ ಹಾಡನ್ನು ಹಾಡುತ್ತಾ ಡ್ಯಾನ್ಸ್‌ ಮಾಡಿ ವಿಡಿಯೋವನ್ನು ಹಂಚಿಕೊಂಡಿದ್ದಾನೆ. ಹಾಗೆಯೇ ಓಲಾ ಸಂಸ್ಥಾಕ ಭವಿಷ್ ಅಗರ್ವಾಲ್ ಅವರನ್ನು ಕೂಡ ಟ್ಯಾಗ್ ಮಾಡಿದ್ದಾನೆ. ಅಲ್ಲದೇ ವಿಡಿಯೋ ಕೆಳಗೆ ಭವಿ‍ಷ್ ಅಂಕಲ್ ನಾನು ಆಗ್ರಾದ ರಾಕ್‌ಸ್ಟಾರ್ ಖುಷ್ನವ್' ನಿಮ್ಮ ಓಲಾ ಫ್ಯೂಚರ್ ಫ್ಯಾಕ್ಟರಿಯನ್ನು ಸಂದರ್ಶಿಸಲು ದಯವಿಟ್ಟು ಅವಕಾಶ ಮಾಡಿಕೊಡಿ ಎಂದು ಬರೆದಿದ್ದಾನೆ.

4-year-old-boy-wins-ola-ceo-bhavish-aggarwals-heart-viral-video

ವಿಡಿಯೋದಲ್ಲಿನ ಬಾಲಕನ ಡ್ಯಾನ್ಸ್ ನೋಡಿ ಭವಿಷ್ ಅಗರ್ವಾಲ್ ಅವರು ಫಿದಾ ಆಗಿದ್ದಾರೆ. ಜೊತೆಗೆ ಬಾಲಕನ ಮನವಿಗೆ ಪ್ರತಿಕ್ರಿಯಿಸಿದ ಅವರು, ನಿನ್ನ ಡ್ಯಾನ್ಸ್ ತುಂಬಾ ಚೆನ್ನಾಗಿದೆ.. ನಮ್ಮ ಫ್ಯೂಚರ್‌ಫ್ಯಾಕ್ಟರಿಗಾಗಿ ನಿನಗಿರುವ ಉತ್ಸಾಹವನ್ನು ನೋಡಲು ತುಂಬಾ ಸಂತೋಷವಾಗಿದೆ. ಸರಿ.. ಹಾಗಿದ್ದರೆ ನಮ್ಮ ಫ್ಯಾಕ್ಟರಿಗೆ ಬರಲು ಸಿದ್ಧತೆಗಳನ್ನು ಮಾಡಿಕೋ.. ನಿಮ್ಮ ಪೋಷಕರನ್ನು ಕೂಡ ಕರೆತಂದು ಸಂಭ್ರಮಿಸು ಎಂದಿದ್ದಾರೆ.

ಏನಿದು ಓಲಾ ಫ್ಯೂಚರ್ ಫ್ಯಾಕ್ಟರಿ: ಓಲಾ ಎಲೆಕ್ಟ್ರಿಕ್ ತಮಿಳುನಾಡಿನ ಕೃಷ್ಣಗಿರಿಯಲ್ಲಿ 500 ಎಕರೆ ಪ್ರದೇಶದಲ್ಲಿ ತನ್ನ ಫ್ಯೂಚರ್ ಫ್ಯಾಕ್ಟರಿಯನ್ನು ಸ್ಥಾಪಿಸಿ ವರ್ಷಕ್ಕೆ 10 ಮಿಲಿಯನ್ (ಒಂದು ಕೋಟಿ) ವಾಹನಗಳನ್ನು ಪೂರ್ಣ ಸಾಮರ್ಥ್ಯದಲ್ಲಿ ಉತ್ಪಾದಿಸುವ ಬೃಹತ್ ಯೋಜನೆ. ಇದು ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಕಾರ್ಖಾನೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

4-year-old-boy-wins-ola-ceo-bhavish-aggarwals-heart-viral-video

ಹಾಗೆಯೇ ಇದು ವಿಶ್ವದ ಅತಿದೊಡ್ಡ ಮಹಿಳಾ ಉದ್ಯೋಗಿಗಳನ್ನು ಒಳಗೊಂಡಿರುವ ಕಾರ್ಖಾನೆ ಮತ್ತು ಪ್ರಪಂಚದಾದ್ಯಂತದ ಏಕೈಕ ಮಹಿಳಾ ವಾಹನ ಉತ್ಪಾದನಾ ಸೌಲಭ್ಯ. 10,000 ಕ್ಕೂ ಹೆಚ್ಚು ಮಹಿಳೆಯರನ್ನು ಪೂರ್ಣ ಸಾಮರ್ಥ್ಯದಲ್ಲಿ ಕೆಲಸಕ್ಕೆ ತೆಗೆದುಕೊಳ್ಳುವ ಮೂಲಕ ಕಾರ್ಖಾನೆಯನ್ನು ಸಂಪೂರ್ಣವಾಗಿ ಮಹಿಳೆಯರೇ ನಡೆಸುವಂತೆ ಮಾಡುವ ಯೋಜನೆಯಿದೆ ಎಂದು ಭವಿಶ್ ಅಗರ್ವಾಲ್ ಈ ಹಿಂದೆ ಹೇಳಿದ್ದರು.

"ಹೆಚ್ಚು ಅಂತರ್ಗತ ಉದ್ಯೋಗಿಗಳನ್ನು ರಚಿಸಲು ಮತ್ತು ಮಹಿಳೆಯರಿಗೆ ಆರ್ಥಿಕ ಅವಕಾಶಗಳನ್ನು ಒದಗಿಸಲು ನಾವು Ola ನಲ್ಲಿ ಕೈಗೊಳ್ಳುತ್ತಿರುವ ಉಪಕ್ರಮಗಳ ಸರಣಿಯಲ್ಲಿ ಇದು ಮೊದಲನೆಯದು. ನಾವು ಪ್ರಮುಖ ಉತ್ಪಾದನಾ ಕೌಶಲ್ಯಗಳಲ್ಲಿ ಅವರಿಗೆ ತರಬೇತಿ ಮತ್ತು ಕೌಶಲ್ಯವನ್ನು ಹೆಚ್ಚಿಸಲು ಗಮನಾರ್ಹವಾಗಿ ಹೂಡಿಕೆ ಮಾಡಿದ್ದೇವೆ. ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ತಯಾರಿಸಲಾದ ಪ್ರತಿಯೊಂದು ವಾಹನದ ಸಂಪೂರ್ಣ ಉತ್ಪಾದನೆ ಹಾಗೂ ಅವುಗಳ ಮೇಲಿನ ಜವಾಬ್ದಾರಿ ಮಹಿಳಯರದ್ದೇ ಆಗಿರುತ್ತದೆ ಎಂದು ಹೇಳಿದ್ದರು.

ಓಲಾ ಸ್ಕೂಟರ್‌ಗಳು: ಓಲಾ ಎಲೆಕ್ಟ್ರಿಕ್ ಐದು ಉತ್ಪನ್ನಗಳನ್ನು ಹೊಂದಿದೆ. ರೂ. 1,47,499 ಬೆಲೆಯ S1 Pro(2 ನೇ ಜನರೇಷನ್) ಕಂಪನಿಯ ಪ್ರಮುಖ ಪ್ರೀಮಿಯಂ EV ಸ್ಕೂಟರ್ ಆಗಿದ್ದು, S1 Air ರೂ. 1,19,999 ನಲ್ಲಿ ಖರೀದಿಗೆ ಲಭ್ಯವಿದೆ. ಇವೆರಡರ ಜೊತೆಗೆ ಹೆಚ್ಚುವರಿಯಾಗಿ S1X ಅನ್ನು ಮೂರು ರೂಪಾಂತರಗಳಲ್ಲಿ ಪರಿಚಯಿಸಿದೆ. S1 X+, S1 X (3kWh), ಮತ್ತು S1 X (2kWh) ಸ್ಕೂಟರ್‌ಗಳಿವೆ.

ವೈವಿಧ್ಯಮಯ ಆದ್ಯತೆಗಳೊಂದಿಗೆ ಸವಾರರ ಅವಶ್ಯಕತೆಗಳನ್ನು ಪೂರೈಸಲು S1 X+ ಪ್ರಸ್ತುತ ರೂ. 1,09,999 ಎಕ್ಸ್ ಶೋರೂಂ ಬೆಲೆಯಲ್ಲಿ ಲಭ್ಯವಿದೆ. S1 X (3kWh) ಮತ್ತು S1 X (2kWh) ಗಾಗಿ ಕಾಯ್ದಿರಿಸುವಿಕೆಯು ರೂ. 999 ವಿದೆ. ಕ್ರಮವಾಗಿ ಇವುಗಳ ಬೆಲೆಯು ರೂ. 99,999 ಮತ್ತು ರೂ. 89,999 ರ ಪರಿಚಯಾತ್ಮಕ ಬೆಲೆಯಲ್ಲಿ ಖರೀದಿಗೆ ಲಭ್ಯವಿವೆ.

More from DriveSpark

Article Published On: Friday, January 19, 2024, 16:04 [IST]
English summary
4 year old boy wins ola ceo bhavish aggarwals heart viral video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+