ಅಮೀರ್ ಜತೆ 'ಧೂಮ್ 3' ಸಂಭ್ರಮಕ್ಕೆ ನೀವು ರೆಡಿನಾ?

By Nagaraja

ಬಾಲಿವುಡ್‌ನ ಬಹುನಿರೀಕ್ಷಿತ ಚಿತ್ರ ಧೂಮ್ 3 ಈ ಕ್ರಿಸ್ಮಸ್ ವೇಳೆಗೆ ತೆರೆಗೆ ಅಪ್ಪಿಸಲಿದೆ. ಧೂಮ್ ಚಿತ್ರ ಸರಪಣಿಯ ಮೂರನೇ ಭಾಗದಲ್ಲಿ 'ಮಿಸ್ಟರ್ ಫರ್ಫೆಕ್ಷನಿಸ್ಟ್' ಎಂದೇ ಖ್ಯಾತಿ ಪಡೆದಿರುವ ಅಮೀರ್ ಖಾನ್ ಅಭಿನಯವನ್ನು ಎಲ್ಲರೂ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.

ಯಶ್ ರಾಜ್ ಫೀಲಂಸ್ ಎಂದಾಕ್ಷಣ ಪ್ರೇಕ್ಷಕರ ನಿರೀಕ್ಷೆಯೂ ತುತ್ತ ತುದಿಯಲ್ಲಿರುತ್ತದೆ. ಈ ಹಿಂದಿನ ಎರಡು ಆವೃತ್ತಿಗಳನ್ನು ಧೂಮ್ 3 ಮೀರಿಸಲಿದೆಯೇ ಎಂಬುದು ಆಸಕ್ತಿದಾಯಕವೆನಿಸಿದೆ.

ಅಂದ ಹಾಗೆ ಧೂಮ್ 3 ಚಿತ್ರದಲ್ಲಿ ಸಕತ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅಮೀರ್ ಖಾನ್ ಬೈಕ್‌ವೊಂದರಲ್ಲಿ ತಿರುಗಾಡುತ್ತಾರೆ. ಆ ಬೈಕ್ ಯಾವುದು ಇನ್ನಿತರ ಕುತೂಹಲಕಾರಿ ಚಿತ್ರ ಮಾಹಿತಿಗಾಗಿ ಸ್ಲೈಡರ್‌ನತ್ತ ಮುಂದುವರಿಯರಿ...

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

ಪ್ರಸ್ತುತ ಚಿತ್ರದಲ್ಲಿ ಅಮೀರ್ ಖಾನ್ ಚಿಕಾಗೋ ನಗರದಲ್ಲಿ ಬಿಎಂಡಬ್ಲ್ಲು ಕೆ 1300 ಆರ್ ಬೈಕ್‌ನಲ್ಲಿ ಅದ್ಭುತ ರೈಡಿಂಗ್ ಪ್ರದರ್ಶನ ನಡೆಸುತ್ತಾರೆ.

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

ಈ ಕಪ್ಪು ಬಣ್ಣದ ನೇಕ್ಡ್ ಬೈಕ್‌ನಲ್ಲಿ ಅಮೀರ್ ಚಾಲನಾ ಕೌಶಲ್ಯವಂತೂ ಅದ್ಭುತವಾಗಿತ್ತು.

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

2008ನೇ ಇಸವಿಯಲ್ಲಿ ಈ ಬೈಕನ್ನು ಬಿಎಂಡಬ್ಲ್ಯು ಅನಾವರಣಗೊಳಿಸಿತ್ತು. ಇದರ ಹಿಂದಿನ ವರ್ಷನ್ 1200 ಎಂಬುದಾಗಿ ಅರಿಯಲ್ಪಟ್ಟಿತ್ತು.

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

ಬಿಎಂಡಬ್ಲ್ಯು ಕೆ 1300 ಆರ್ ಬೈಕ್‌ನಲ್ಲಿ 1299 ಸಿಸಿ ಎಂಜಿನ್ ಸಾಮರ್ಥ್ಯವುಳ್ಳ ಶಕ್ತಿಶಾಲಿ 4 ಸ್ಟ್ರೋಕ್ ಎಂಜಿನ್ ಆಳವಡಿಸಲಾಗಿದೆ.

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

ಅತ್ಯಾಕರ್ಷಕ ವಿನ್ಯಾಸ ಪಡೆದುಕೊಂಡಿರುವ ಇದು ನೆಕ್ಡ್ ಬೈಕಾಗಿದೆ. ಹಾಗೆಯೇ 6 ಸ್ಪೀಡ್ ಟ್ರಾನ್ಸ್‌ಮಿಷನ್ ಗೇರ್ ಬಾಕ್ಸ್ ಆಳವಡಿಸಲಾಗಿದೆ.

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

ಇದರ ಗೇರ್ ಶಿಫ್ಟಿಂಗ್ ಸಿಸ್ಟಂ ಅದ್ಭುತವಾಗಿದ್ದು, ದೂರ ಪ್ರಯಾಣಕ್ಕೆ ಹೆಚ್ಚು ಹೊಂದಿಕೆಯಾಗಲಿದೆ.

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

ಇದರಲ್ಲಿ 24 ಲೀಟರ್ ಎಂಜಿನ್ ಟ್ಯಾಂಕ್ ಲಗತ್ತಿಸಲಾಗಿದೆ. ಬೃಹತ್ ಗಾತ್ರ ಹೊಂದಿರುವ ಈ ಇಂಧನ ಟ್ಯಾಂಕ್ ಹೆಚ್ಚು ದಿಟ್ಟತನವಾದ ವಿನ್ಯಾಸ ಪ್ರಧಾನ ಮಾಡುತ್ತಿದೆ.

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

ಹೆಚ್ಚು ಶಕ್ತಿಶಾಲಿ ಎಂಜಿನ್ ಆಳವಡಿಸಿದ್ದರಿಂದ ನಿರ್ವಹಣಾ ವಿಭಾಗದಲ್ಲಿ ಕಾಣಿಸಿಕೊಂಡಿರುವ ಈ ಬೈಕ್ ಮೈಲೇಜ್ ಸ್ವಲ್ಪ ಕಡಿಮೆಯಾಗಿದೆ. ಇದು ಲೀಟರ್‌ಗೆ 18 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿದೆ.

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

ಅಮೀರ್ ಅಭಿನಯದ ಧೂಮ್ 3 ವಿಶೇಷ ಅನುಭವ ನೀಡಿತ್ತು. ಯಾಕೆಂದರೆ ಈ ಚಿತ್ರದಲ್ಲಿ ಸ್ಟಂಟ್‌ಗೆ ಹೆಚ್ಚು ಪ್ರಾಧಾನ್ಯತೆ ನೀಡಲಾಗಿತ್ತು.

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

ಪ್ರಸ್ತುತ ಬೈಕ್ ಪ್ರತಿ ಗಂಟೆಗೆ 200 ಕೀ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

ಹಾಗೆಯೇ ಗರಿಷ್ಠ ಸುರಕ್ಷಾ ಮಾನದಂಡಗಳನ್ನು ಆಳವಡಿಸಲಾಗಿದ್ದು, ಎಬಿಎಸ್‌ಗಳಂತಹ ತಂತ್ರಗಾರಿಕೆಯನ್ನು ಆಳವಡಿಸಲಾಗಿದೆ.

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

ಬಿಎಂಡಬ್ಲ್ಯು ಕೆ 1300 ಬೈಕ್‌ನ ಒಟ್ಟು ಭಾರ 217 ಕೆ.ಜಿ. ಆಗಿದೆ. ಅಂದರೆ ಸಾಮಾನ್ಯ ಬೈಕ್‌ಗಿಂತಲೂ ಸ್ವಲ್ಪ ಹೆಚ್ಚಾಗಿದೆ.

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

ಇನ್ನು ನಿಮಗೆ ಈ ಬೈಕ್ ಬೇಕಾದ್ದಲ್ಲಿ ವಿದೇಶದಿಂದ ಆಮದು ಮಾಡಿಕೊಳ್ಳಬೇಕಾಗಿದ್ದು, ಇದರ ದರ 18ರಿಂದ 20 ಲಕ್ಷ ರು.ಗಳಷ್ಟು ದುಬಾರಿಯಾಗಿದೆ.

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

ವಿದೇಶಿ ಮಾರುಕಟ್ಟೆಯಲ್ಲಿ ಈ ಬೈಕ್ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಇದರಲ್ಲಿ ಹಳದಿ, ಮೆಟ್ಯಾಲಿಕ್ ಗ್ರೇ ಹಾಗೂ ಡಾರ್ಕ್ ಬ್ಲ್ಯಾಕ್ ಸೇರಿವೆ.

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

ಏತನ್ಮಧ್ಯೆ ಅಮೀರ್ ಖಾನ್ ಹೊರತುಪಡಿಸಿ ಅಬಿಷೇಕ್ ಬಚ್ಚನ್ ಹಾಗೂ ಉದಯ್ ಚೋಪ್ರಾ ಕೂಡಾ ಅದ್ಭುತ ನಟನಾ ಕೌಶಲ್ಯವನ್ನು ತೋರಿದ್ದಾರೆ.

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

ಧೂಮ್ 3 ಚಿತ್ರದ ಚೇಸಿಂಗ್ ದೃಶ್ಯವೊಂದರಲ್ಲಿ ಉದಯ್ ಚೋಪ್ರಾ ಬಿಎಂಡಬ್ಲ್ಯು ಎಚ್ ಪಿ 4 ಬೈಕ್‌ನಲ್ಲಿ ಕಮಾಲ್ ರೈಡಿಂಗ್

ಬಿಎಂಡಬ್ಲ್ಯು ಬೈಕ್‌ನಲ್ಲಿ ಅಮೀರ್ 'ಧೂಮ್ 3' ಕಮಾಲ್

ಕ್ರಿಸ್ಮಸ್ ಹಾಗೂ ಹೊಸ ವರ್ಷ ಆಚರಿಸುತ್ತಿರುವ ಪ್ರೇಕ್ಷಕರನ್ನು ಗುರಿಯಾಗಿರಿಸಿಕೊಂಡಿರುವ ಧೂಮ್ 3 ಡಿಸೆಂಬರ್ 20ರಂದು ತೆರೆ ಕಾಣಲಿದೆ.

More from DriveSpark

Article Published On: Sunday, November 3, 2013, 9:04 [IST]
English summary
Aamir Khan rides BMW K1300R in his upcoming movie Dhoom 3. Here is all about BMW K1300R, which are used in Dhoom 3 by Aamir Khan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+