ಪೋರ್ಷೆಗೆ ಮತ್ತಷ್ಟು ಕಗ್ಗಂಟ್ಟು; ವಾಕರ್ ಸಾವಿನ ಪ್ರಕರಣಕ್ಕೆ ಮರುಜೀವ
ಜನಪ್ರಿಯ ಹಾಲಿವುಡ್ ನಟ ಪಾಲ್ ವಾಕರ್ ಸಾವು ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪುತ್ರಿಯ ದೂರಿನ ಬಳಿಕ ಈಗ ಹೆಸರಾಂತ ನಟನ ತಂದೆಯವರು ಸಹ ಇದಕ್ಕೆ ಸಮಾನವಾದ ಆರೋಪಗಳೊಂದಿಗೆ ಮುಂದೆ ಬಂದಿದ್ದಾರೆ. ಇದರೊಂದಿಗೆ ಪೋರ್ಷೆ ಸಂಸ್ಥೆಯು ಮತ್ತಷ್ಟು ಕಗ್ಗಂಟ್ಟಿಗೆ ಸಿಲುಕಿದೆ.
Also Read: ವಾಕರ್ ಸಾವಿನ ಪ್ರಕರಣ; 'ತನ್ನ ಸಾವಿಗೆ ತಾನೇ ಕಾರಣ' ಮುಂದಕ್ಕೆ ಓದಿ
ಈ ಹಿಂದೆ ದೂರು ದಾಖಲಿಸಿದ್ದ ವಾಕರ್ ಪುತ್ರಿ, ತಮ್ಮ ಅಪ್ಪನ ಸಾವಿಗೆ ಪೋರ್ಷೆ ವಿನ್ಯಾಸ ದೋಷ ಕಾರಣ ಎಂದು ಆಪಾದಿಸಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಆರೋಪಗಳೆನ್ನೆಲ್ಲ ತಳ್ಳಿ ಹಾಕಿದ್ದ ಪೋರ್ಷೆ, ವಾಕರ್ ಅವರು ತಮ್ಮ ತಪ್ಪಿನಿಂದಾಗಿಯೇ ಅವಘಡ ಸಂಭವಿಸಿತ್ತು ಎಂದು ಸ್ಪಷ್ಟನೆ ನೀಡಿತ್ತು.

ಈಗ ಫಾಸ್ಟ್ ಆ್ಯಂಡ್ ಫ್ಯೂರಿಯಸ್ ನಾಯಕನ ಅಪ್ಪ ಕೂಡಾ ಇದಕ್ಕೆ ಸಮಾನವಾದ ಆರೋಪಗಳೊಂದಿಗೆ ಮುಂದೆ ಬಂದಿದ್ದು, ಪೋರ್ಷೆ ಕಡೆಗಣನೆಯಿಂದಾಗಿ ನಡೆಯಬಾರದ ದುರಂತ ನಡೆದು ಹೋಗಿದೆ ಎಂದು ಆಪಾದಿಸಿದ್ದಾರೆ.

ಅಪಘಾತದ ವೇಳೆ ಪಾಲ್ ವಾಕರ್ ಸಂಚರಿಸುತ್ತಿದ್ದ ಪೋರ್ಷೆ ಕರೆರಾ ಜಿಟಿ ಕಾರಿನಲ್ಲಿ ಅಗತ್ಯ ಸುರಕ್ಷಾ ಮಾನದಂಡಗಳನ್ನು ಪಾಲಿಸಲಾಗಿಲ್ಲ. ಇಲ್ಲವಾದ್ದಲ್ಲಿ ವಾಕರ್ ಜೀವವನ್ನು ರಕ್ಷಿಸಬಹುದಾಗಿತ್ತು ಎಂದು ತಂದೆಯವರು ದಾಖಲಿಸಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಹಿನ್ನೆಲೆ
2013ರಲ್ಲಿ ಸ್ನೇಹಿತ ರೋಜರ್ ರೋಡಾಸ್ ಜೊತೆ ಸಹ ಪ್ರಯಾಣಿಕನಾಗಿ ಪ್ರಯಾಣಿಸುತ್ತಿದ್ದ ಪಾಲ್ ವಾಕರ್ ಅವರ 2005 ಪೋರ್ಷೆ ಕರೆರಾ ಜಿಟಿ ಅಮಿತ ವೇಗದಿಂದಾಗಿ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಕಂಬಕ್ಕೆ ಬಲವಾಗಿ ಢಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡಿದ್ದ ಪರಿಣಾಮ ಸ್ಥಳದಲ್ಲೇ ಇರ್ವರು ಸಾವನ್ನಪ್ಪಿದ್ದರು

ವಾಕರ್ ಅಪ್ಪ ದಾಖಲಿಸಿರುವ ದೂರಿನಲ್ಲಿ ಪೋರ್ಷೆ ಕರೆರಾ ಜಿಟಿ ಕಾರಿನಲ್ಲಿ ಸ್ಥಿರತೆ ನಿಯಂತ್ರಣ ವ್ಯವಸ್ಥೆ, ಸೈಡ್ ಡೋರ್ ಬಲವರ್ಧನೆ ಮುಂತಾದ ಭದ್ರತಾ ವೈಶಿಷ್ಟ್ಯಗಳ ವೈಫಲ್ಯ ಅನುಭವಿಸಿದೆ ಎಂದಿದ್ದಾರೆ.

ಈಗ ಪೋರ್ಷೆ ಭದ್ರತಾ ದೋಷದ ಬಗ್ಗೆ ನಿಖರ ತನಿಖೆಯಾಗುವುಗುದು ಬಹುತೇಕ ಖಚಿತವೆನಿಸಿದೆ. ಇಲ್ಲಿ ಪೋರ್ಷೆ ನಿಜಕ್ಕೂ ಲೋಪ ಎಸಗಿದೆಯೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಸ್ಪಷ್ಟ ಉತ್ತರ ದೊರಕಲಿದೆ.


Click it and Unblock the Notifications








