ನಟ ಶಾಹಿದ್ ಕಪೂರ್‍ನ ಹೊಸ ಕಾರು ಹೇಗಿದೆ ಗೊತ್ತಾ.?
ಬಾಲಿವುಡ್ ಸಿನಿಮಾ ಜಗತ್ತು ಎಂದರೆಯೆ ನೆನಪಾಗುವುದು ಅವರ ಸಿನಿಮಾಗಳ ದುಬಾರಿ ಸೆಟ್. ಅಷ್ಟೆ ಅಲ್ಲದೆ ಅವರ ನಟನೆಗೆ ಅವರು ತೆಗೆದುಕೊಳ್ಳುವ ಸಂಭಾವನೆಯು ಸಹ ದುಬಾರಿಯೆ ಆಗಿರುತ್ತದೆ. ಅಂತಹ ಜನಪ್ರಿಯ ನಟರಲ್ಲಿ ಒಬ್ಬರಾದ ಶಾಹಿದ್ ಕಪೂರ್ ಹೊಸ ಐಷಾರಾಮಿ
ಬಾಲಿವುಡ್ ಸಿನಿಮಾ ಜಗತ್ತು ಎಂದರೆಯೆ ನೆನಪಾಗುವುದು ಅವರ ಸಿನಿಮಾಗಳ ದುಬಾರಿ ಸೆಟ್. ಅಷ್ಟೆ ಅಲ್ಲದೆ ಅವರ ನಟನೆಗೆ ಅವರು ತೆಗೆದುಕೊಳ್ಳುವ ಸಂಭಾವನೆಯು ಸಹ ದುಬಾರಿಯೆ ಆಗಿರುತ್ತದೆ. ಅಂತಹ ಜನಪ್ರಿಯ ನಟರಲ್ಲಿ ಒಬ್ಬರಾದ ಶಾಹಿದ್ ಕಪೂರ್ ಹೊಸ ಐಷಾರಾಮಿ ಕಾರೊಂದನ್ನು ಖರೀದಿಸಿದ್ದಾರೆ.

ನಟ ಶಾಹಿದ್ ಕಪೂರ್‍ನ ಕಾರ ಕಲೆಕ್ಷನ್‍ನಲ್ಲಿ ಈಗಾಗಲೆ ಪೋರ್ಷೆ ಕಯೆನ್ನೆ ಜಿಟಿಎಸ್, ಜಾಗ್ವಾರ್ XKR-S, ರೇಂಜ್ ರೋವರ್ ವೌಗ್ ಮತ್ತು ಮರ್ಸಿಡೀಸ್ ಎಸ್-ಕ್ಲಾಸ್ ಕಾರುಗಳಿದ್ದು, ಇದೀಗ ಆತನ ಕಾರ್ ಕಲೆಕ್ಷನ್‍ನಲ್ಲಿ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.86.4 ಲಕ್ಷಕ್ಕೆ ಮಾರಾಟವಾಗುತ್ತಿರುವ ಮರ್ಸಿಡೀಸ್ ಜಿಎಲ್ಇ 43 ಎಎಮ್‍ಜಿ ಕೌಪ್ ಕಾರು ಸೇರಿಕೊಂಡಿದೆ.

ನಟ ಶಾಹಿದ್ ಕಪೂರ್ ಕೊಂಡ ಮರ್ಸಿಡೀಸ್ ಜಿಎಲ್ಇ 43 ಎಎಮ್‍ಜಿ ಕೌಪ್ ಕಾರಿನ ಬಗ್ಗೆ ಹೇಳಬೇಕೆಂದರೆ ಈ ಕಾರಿನಲ್ಲಿ 3.0 ಲೀಟರ್ ಬೈ-ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದ್ದು, 367ಬಿಹೆಚ್‍ಪಿ ಮತ್ತು 520ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮತ್ತು ಎಂಜಿನ್ ಅನ್ನು 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ವಿನೂತನ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿ ಹೊಂದಿರುವ ಜಿಎಲ್ಇ 43 4ಮ್ಯಾಟಿಕ್ ಕೂಪೆ ಕಾರುಗಳು ಫ್ರಂಟ್ ಬಂಪರ್ ಮತ್ತು ರಿಯರ್ ಬಂಪರ್‌ಗಳ ಮೇಲಿನ ಆರೇಂಜ್ ಆರ್ಟ್ ವಿನ್ಯಾಸದೊಂದಿಗೆ ಮಿಂಚುತ್ತಿದ್ದು, 21 ಇಂಚಿನ ಅಲಾಯ್ ವೀಲ್ಹ್‌ಗಳು, ಎಲ್ಇಡಿ ಹೆಡ್‌ಲೈಟ್ಸ್ ಮತ್ತು ಬ್ಲ್ಯಾಕ್ ಎಲ್ಇಡಿ ರಿಂಗ್ಸ್ ಪಡೆದುಕೊಂಡಿರುವುದು ಕಾರಿಗೆ ಸ್ಪೋರ್ಟಿ ಲುಕ್ ನೀಡಿದ್ದು, ಗಂಟೆಗೆ 250 ಕಿಲೋಮೀಟರ್ ಟಾಪ್ ಸ್ಪೀಡ್‍ನಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಕಾರಿನ ಇಂಟಿರಿಯರ್ ಸಹ ಸುಧಾರಿತ ತಂತ್ರಜ್ಞಾನ ಪ್ರೇರಣೆ ಹೊಂದಿದ್ದು, ಆರೇಂಜ್ ಆರ್ಟ್ ವಿನ್ಯಾಸಗಳೊಂದಿಗೆ ಬ್ಲ್ಯಾಕ್ ನಪ್ಪಾ ಲೆದರ್ ಸೀಟುಗಳು, ಫ್ಲೋರ್ ಮ್ಯಾಟ್ ಮತ್ತು ಡೋರ್ ಪ್ಯಾನೆಲ್‌ಗಳನ್ನು ಪಡೆದಿರುಕೊಂಡಿರುವುದು ಮತ್ತೊಂದು ವಿಶೇಷ.

ಇನ್ನು ಈ ಕೌಪ್ ಕಾರು 4891ಎಮ್ಎಮ್ ಉದ್ದ, 2129ಎಮ್ಎಮ್ ಅಗಲ, 1719ಎಮ್ಎಮ್ ಎತ್ತರವನ್ನು ಪಡೆದಿದ್ದು, 232ಎಮ್ಎಮ್‍ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಈ ಕಾರಿನಲ್ಲಿ ಎಬಿಎಸ್‍ನೊಂದಿಗೆ ಇಬಿಡಿ, ಪಾರ್ಕಿಂಗ್ ಸೆನ್ಸಾರ್ಸ್, ಸೆಂಟ್ರಲ್ ಲಾಕಿಂಗ್, ಬ್ರೇಕ್ ಅಸ್ಸಿಸ್ಟ್, ಪವರ್ ಡೋರ್ ಲಾಕ್, ಚೈಲ್ಡ್ ಸೇಫ್ಟಿ ಲಾಕ್, ಡ್ರೈವರ್ ಏರ್‍ಬ್ಯಾಗ್, ಪ್ಯಾಸ್ಸೆಂಜರ್ ಏರ್‍ಬ್ಯಾಗ್, ಸೈಡ್ ಏರ್‍ಬ್ಯಾಗ್, ಪ್ಯಾಸ್ಸೆಂಜರ್ ಸೈಡ್ ರಿಯರ್ ವ್ಯೂ ಮಿರರ್, ಸೀಟ್ ಬೆಲ್ಟ್ ವಾರ್ನಿಂಗ್ ಹಾಗು ಇನ್ನಿತರೆ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಸಸ್ಪೆಂಷನ್ ವಿಚಾರದ ಬಗ್ಗೆ ಹೇಳುವುದಾದರೆ ಈ ಕಾರಿನ ಮುಂಭಾಗದಲ್ಲಿ ಏರ್‍ಮ್ಯಾಟಿಕ್ ಮತ್ತು ಹಿಂಭಾಗದಲ್ಲಿಯೂ ಏರ್‍ಮ್ಯಾಟಿಕ್ ಸಸ್ಪೆಂಷನ್ ಅನ್ನು ಅಳವಡಿಸಲಾಗಿದೆ.


Click it and Unblock the Notifications








