ಸಿಂಪಲ್‌ ನಟನ ದುಬಾರಿ ಕಾರುಗಳು: ಮನೆಯ ಮುಂದೆ ನಿಲ್ಲಿಸಲು ಜಾಗವಿಲ್ಲದಷ್ಟು ಕಾರುಗಳಿವೆ!

ತಮಿಳು ಸಿನಿಮಾ ರಂಗದ ಜನಪ್ರಿಯ ನಟ ತಲಪತಿ ವಿಜಯ್ ಬಾಲ್ಯದಿಂದಲೂ ಕಾರು ಪ್ರೇಮಿ. ಸಣ್ಣ ವಯಸ್ಸಿನಲ್ಲಿ ಆಟಿಕೆ ಕಾರುಗಳನ್ನು ಖರೀದಿಸುತ್ತಿದ್ದರು, ಬೆಳೆದು ಸಂಪಾದಿಸಲು ಪ್ರಾರಂಭಿಸಿದ ನಂತರ ತಮ್ಮ ನೆಚ್ಚಿನ ಕಾರುಗಳನ್ನು ಖರೀದಿಸಲು ಪ್ರಾರಂಭಿಸಿದರು. ಪ್ರಸ್ತುತ, ಅವರು ಬಿಎಂಡಬ್ಲ್ಯು, ಮಿನಿ ಕೂಪರ್, ಟೊಯೊಟಾ ಇನ್ನೋವಾ ಮತ್ತು ಆಡಿ ಎ 8 ಸೇರಿದಂತೆ ದುಬಾರಿ ಕಾರುಗಳನ್ನು ಹೊಂದಿದ್ದಾರೆ. ಅವರು ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಬಳಿಕ ಅಂದರೆ 1990ರ ನಂತರ ಯಾವೆಲ್ಲಾ ಕಾರುಗಳನ್ನು ಖರೀದಿಸಿದರು ಹಾಗೂ ಪ್ರಸ್ತುತ ಅವರ ಬಳಿ ಇರುವ ಟಾಪ್‌ ಕಾರುಗಳನ್ನು ಇಲ್ಲಿ ನೋಡೋಣ.

ನಟ ವಿಜಯ್ ತಮ್ಮ ಮೊದಲ ಕಾರಾಗಿ ಟಾಟಾ ಎಸ್ಟೇಟ್ ಅನ್ನು ಖರೀದಿಸಿದ್ದರು, ಅಂದಿನ ಕಾಲಕ್ಕೆ ಇದರ ಬೆಲೆ 2.52 ಲಕ್ಷ ರೂ. ಈ ಕಾರಿನಲ್ಲಿಯೇ ವಿಜಯ್ ಆರಂಭದಲ್ಲಿ ತನ್ನ ಸ್ನೇಹಿತರೊಂದಿಗೆ ಚೆನ್ನೈನಲ್ಲಿ ತಿರುಗಾಡಿದ್ದರು ಎಂದು ಹೇಳಲಾಗುತ್ತದೆ. ಇದರ ನಂತರ, ಪ್ರೀಮಿಯರ್ 118 ಎನ್ಇ ಅನ್ನು ತಲಪತಿ ವಿಜಯ್ ಖರೀದಿಸಿದರು. ಈ ಮಾದರಿ ಮಾರುಕಟ್ಟೆಗೆ ಬಂದ ಕೆಲವೇ ವಾರಗಳಲ್ಲಿ ಖರೀದಿಸಿದ್ದರು.

actor-vijay-car-collection-bmw-audi-toyota-rolls-royce

ಆ ಸಮಯದಲ್ಲಿ ಅದರ ಮೌಲ್ಯ 6 ಲಕ್ಷ ರೂ., ಆಗಷ್ಟೇ ಸಿನಿಮಾಗಳಲ್ಲಿ ಗುರ್ತಿಸಿಕೊಂಡು ಸಂಪಾದನೆ ಹೆಚ್ಚಾಗಿತ್ತು. ಬಳಿಕ 1990 ರ ದಶಕದಲ್ಲಿ ಜನಪ್ರಿಯವಾಗಿದ್ದ ಟೊಯೊಟಾ ಸೆರಾ ವಿಜಯ್ ಅವರ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ಇದರ ಬೆಲೆ 15 ಲಕ್ಷ ರೂ. ಇದರ ಹೊರತಾಗಿಯೂ, ತಲಪತಿ ವಿಜಯ್ ಒಡೆತನದ ಟೊಯೊಟಾ ಇನ್ನೋವಾ ಕ್ರಿಸ್ಟಾ ಬಹಳ ಜನಪ್ರಿಯವಾಗಿದೆ. ಇದರ ಬೆಲೆಯು ರೂ.20 ಲಕ್ಷದಿಂದ ರೂ.26.05 ಲಕ್ಷಗಳಾಗಿರಬಹುದು.

ತಮಿಳು ಸಿನಿಮಾ ರಂಗದಲ್ಲಿ ಊಹಿಸದ ಮಟ್ಟಕ್ಕೆ ಬೆಳೆದ ನಟ ವಿಜಯ್, ಸಾಲು ಸಾಲು ಸೂಪರ್‌ ಹಿಟ್ ಸಿನಿಮಾಗಳ ಮೂಲಕ ಕೋಲಿವುಡ್‌ನಲ್ಲಿ ಟಾಪ್‌ ಸ್ಟಾರ್‌ ನಟರಾದರು. ಬಳಿಕ ಕಾರುಗಳನ್ನು ಖರೀದಿಸುವುದು ತಲಪತಿಗೆ ಹವ್ಯಾಸವಾಯಿತು. ಅವರು ಸತತವಾಗಿ ಅನೇಕ ಐಷಾರಾಮಿ ಕಾರುಗಳನ್ನು ಖರೀದಿಸಿದರು. ಎಲ್ಲಕ್ಕಿಂತ ಮುಖ್ಯವಾಗಿ ಐಷಾರಾಮಿ ರೋಲ್ಸ್ ರಾಯ್ಸ್ ಘೋಸ್ಟ್ ಖರೀದಿಸಿ ಸುದ್ದಿಯಾಗಿದ್ದರು. ಈ ಕಾರಿನ ಬೆಲೆ ಸುಮಾರು 8 ಕೋಟಿ ರೂ.

actor-vijay-car-collection-bmw-audi-toyota-rolls-royce

ಅನೇಕ ಸೆಲೆಬ್ರಿಟಿಗಳು ಹೊಂದಿರುವ ಆಡಿ ಎ8 ಎಲ್ ಕಾರನ್ನು ವಿಜಯ್ ಇತ್ತೀಚೆಗೆ ಖರೀದಿಸಿದ್ದಾರೆ. ಇದರ ಬೆಲೆ 1.58 ಕೋಟಿ ರೂ. ಇದ್ದು, ತಲಪತಿ ವಿಜಯ್ ಖರೀದಿಸಿದ ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಇದರ ಬಳಿಕ ರೋಲ್ಸ್ ರಾಯ್ಸ್ ಘೋಸ್ಟ್ ಫ್ಯಾಂಟಮ್ ಕೂಡ ವಿಜಯ್ ಬಳಿ ಇದೆ, ಇದರ ಬೆಲೆ 8.99 ಕೋಟಿ ರೂ.

ತಲಪತಿ ವಿಜಯ್ ಪತ್ನಿ ಸಂಗೀತಾ ಕೂಡ ಕಾರು ಪ್ರೇಮಿ. ಇವರು ಸಾಮಾನ್ಯವಾಗಿ ಬಿಎಂಡಬ್ಲ್ಯು ಕಾರುಗಳನ್ನು ಇಷ್ಟಪಡುತ್ತಾರೆ. ಪತ್ನಿ ಖರೀದಿಸಿದ ಬಿಎಂಡಬ್ಲ್ಯು ಎಕ್ಸ್ 6 ಐಷಾರಾಮಿ ಕಾರಿನ ಬೆಲೆ ರೂ.1.04 ಕೋಟಿಯಿಂದ ರೂ.1.11 ಕೋಟಿಗಳ ನಡುವೆ ಇದೆ ಎಂದು ಹೇಳಲಾಗುತ್ತದೆ. ಇದರ ಜೊತೆಗೆ ಮಿನಿ ಕೂಪರ್ ಎಸ್ ಅನ್ನು ಖರೀದಿಸಿದ್ದು, ಬೆಲೆಯು ರೂ.41.20 ಲಕ್ಷದಿಂದ ರೂ.52.50 ಲಕ್ಷಗಳಾಗಿರಬಹುದು ಎಂದು ಅಂದಾಜಿಸಲಾಗಿದೆ.

actor-vijay-car-collection-bmw-audi-toyota-rolls-royce

ಇವು ಮಾತ್ರವಲ್ಲದೇ ಶೂಟಿಂಗ್ ಸ್ಪಾಟ್‌ಗಳಲ್ಲಿ ತಿರುಗಾಡಲು ಮಾರುತಿ ಸುಜುಕಿ ಸೆಲೆರಿಯೊನಂತಹ ಸಿಂಪಲ್ ಕಾರುಗಳನ್ನು ಹೊಂದಿದ್ದಾರೆ. ಈ ಕಾರಿನ ಬೆಲೆಯು ರೂ.5.3 ಲಕ್ಷದಿಂದ ರೂ.6.6 ಲಕ್ಷಗಳಾಗಿದೆ. ಆರಂಭಿಕ ದಿನಗಳಲ್ಲಿ ಅವರು ಹೊಂದಿದ್ದ ಕೆಲವು ಕಾರುಗಳು ಈಗ ಕಾಣೆಯಾಗಿವೆ. ಮನೆಯ ಬಳಿ ನಿಲ್ಲಿಸಲು ಜಾಗವಿಲ್ಲದ ಕಾರಣ ಮಾರಾಟ ಮಾಡಿರಬಹುದು ಎನ್ನಲಾಗಿದೆ, ಅವರ ಬಳಿ ಒಟ್ಟು 19 ಕಾರುಗಳಿದ್ದವು ಎಂದು ಹೇಳಲಾಗುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Saturday, June 22, 2024, 16:05 [IST]
English summary
Actor vijay car collection bmw audi toyota rolls royce
Read more on celebrity cars india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+