ಲಕ್ಷುರಿ ಕಾರು ಬದಲು ರಣಬೇಟೆಗಾರ ಮಾರುತಿ ಜಿಮ್ನಿ ಖರೀದಿ: ಈ ಎಸ್‍ಯುವಿ ವಿಶೇಷತೆಗಳೇನು?

ಸಾಮಾನ್ಯವಾಗಿ ಭಾರತೀಯ ಚಿತ್ರರಂಗದಲ್ಲಿ ಸಿನಿಮಾ ನಟ-ನಟಿಯರು ದುಬಾರಿ ಕಾರುಗಳನ್ನು ಖರೀದಿಸುತ್ತಾರೆ. ಆಡಿ, ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಝ್‌ನಂತಹ ಕಾರುಗಳು ಅವರ ಶ್ರೀಮಂತಿಕೆಯನ್ನು ತೋರುವುದರಿಂದ ಸಿನಿಮಾ ರಂಗದ ಬಹುತೇಕರು ಐಷಾರಾಮಿ ಕಾರುಗಳನ್ನೇ ಖರೀದಿಸುತ್ತಾರೆ. ಚಿತ್ರೋದ್ಯಮದ ಪ್ರಮುಖರು ಮಾರುತಿ ಸುಜುಕಿ ಕಂಪನಿಯ ಕಾರುಗಳನ್ನು ಖರೀದಿಸುವುದು ತುಂಬಾ ವಿರಳ ಎಂದು ಹೇಳಬಹುದು. ಏಕೆಂದರೆ ಮಾರುತಿ ಕಂಪನಿಯು ಭಾರತದಲ್ಲಿ ಮಧ್ಯಮ ಹಾಗೂ ಬಡ ವರ್ಗಕ್ಕಾಗಿ ಅಗ್ಗದ ಕಾರುಗಳನ್ನು ನೀಡುತ್ತದೆ. ಬೆಲೆ ತುಂಬಾ ಕಡಿಮೆ ಹಾಗೂ ತಮ್ಮ ಸ್ಥಾನಮಾನಕ್ಕೆ ಸರಿದೂಗುವುದಿಲ್ಲ ಎಂಬ ಕಾರಣಕ್ಕೆ ಶ್ರೀಮಂತರು ಮಾರುತಿ ಕಾರುಗಳನ್ನು ಖರೀದಿಸುದು ಬಲು ಅಪರೂಪ.

ಆದರೆ ಇತ್ತೀಚೆಗೆ ಇದಕ್ಕೆ ವಿರುದ್ಧವಾಗಿ ಚಲನಚಿತ್ರೋದ್ಯಮದ ವ್ಯಕ್ತಿಯೊಬ್ಬರು ಮಾರುತಿ ಸುಜುಕಿ ಕಾರನ್ನು ಖರೀದಿಸಿದ್ದಾರೆ. ಹೌದು, ಮಲಯಾಳಂ ಚಿತ್ರರಂಗದ ಪ್ರಮುಖ ನಟಿ ಹಾಗೂ ಗಾಯಕಿ ಅಭಿರಾಮಿ ಸುರೇಶ್ (Abhirami Suresh) ಜನಪ್ರಿಯ ಆಫ್-ರೋಡರ್ ಮಾರುತಿ ಸುಜುಕಿ ಜಿಮ್ನಿಯನ್ನು ಖರೀದಿಸಿದ್ದಾರೆ. ಇದು ಚಿತ್ರರಂಗದ ಹಲವರನ್ನು ಅಚ್ಚರಿಗೊಳಿಸಿದ್ದು, ಅದೇ ಸಮಯದಲ್ಲಿ ಅವರ ಸರಳತೆಯನ್ನು ಎತ್ತಿತೋರಿದೆ.

Maruti Suzuki Jimny

ಮಾರುತಿ ಸುಜುಕಿ ಜಿಮ್ನಿ ಭಾರತದಲ್ಲಿ ಪ್ರಮುಖ ಆಫ್‌ರೋಡ್ ಎಸ್‌ಯುವಿಯಾದ ಮಹೀಂದ್ರಾ ಥಾರ್‌ಗೆ ಪ್ರತಿಸ್ಪರ್ಧಿಯಾಗಿದೆ. ಜಿಮ್ನಿ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.12.74 ಲಕ್ಷಗಳಾಗಿದೆ. ಇದರ ಟಾಪ್ ವೇರಿಯೆಂಟ್ ಬೆಲೆ 14.79 ಲಕ್ಷ ರೂ.ವರೆಗೆ ಇದೆ. ಈ ಕಾರು ಸದ್ಯ ದೇಶದಲ್ಲಿ ಅಷ್ಟೇನು ಉತ್ತಮ ಮಾರಾಟ ಕಾಣುತ್ತಿಲ್ಲ. ಆದ್ರೂ ಖರೀದಿಸಿರುವುದು ಹಲವರನ್ನು ಅಚ್ಚರಿಗೊಳಿಸಿದೆ.

ಲೈಫ್ ಸ್ಟೈಲ್ ಆಫ್-ರೋಡರ್, ಮಾರುತಿ ಸುಜುಕಿ ಜಿಮ್ನಿ (Maruti Suzuki Jimny) ದೇಶದ ಅತ್ಯಂತ ಸಮರ್ಥ ಆಫ್-ರೋಡರ್‌ಗಳಲ್ಲಿ ಒಂದು ಎಂದು ಸಾಬೀತಾಗಿದೆ. ಇದರಿಂದ ಆಫ್-ರೋಡ್ ವಾಹನಗಳ ಪ್ರೇಮಿಗಳು ಈ ಜಿಮ್ನಿ ಎಸ್‍ಯುವಿಯನ್ನು ಖರೀದಿಸುತ್ತಿದ್ದಾರೆ. ಮಾರುತಿ ಸುಜುಕಿ ಜಿಮ್ನಿಯನ್ನು ಪ್ರತಿಸ್ಪರ್ಧಿಗಳಾದ ಥಾರ್ ಮತ್ತು ಗೂರ್ಖಾಗೆ ಹೋಲಿಸಿದರೆ ಡ್ರೈವ್ ಮಾಡಲು ಹೆಚ್ಚು ಸುಲಭವಾಗಿದೆ. ಈ ಮಾರುತಿ ಜಿಮ್ನಿ ಕಾಂಪ್ಯಾಕ್ಟ್ ಆಯಾಮಗಳನ್ನು ಹೊಂದಿದೆ.

ಫೀಚರ್ಸ್: ಜಿಮ್ನಿ ಕ್ಯಾಬಿನ್ ಒಳಭಾಗವು ಅತ್ಯುತ್ತಮವಾಗಿದೆ. ಮಾರುತಿ ಸುಜುಕಿ ಜಿಮ್ನಿ 5 ಡೋರ್ ಆಫ್-ರೋಡ್ ಎಸ್‌ಯುವಿಯಾಗಿರುವುದರಿಂದ ಅದಕ್ಕೆ ತಕ್ಕಂತೆಯೇ ವಿನ್ಯಾಸವನ್ನು ಹೊಂದಿದೆ. ಜಿಮ್ನಿ 5 ಡೋರ್ ಫೀಚರ್ಸ್ ಬಗ್ಗೆ ಹೇಳುವುದಾದರೆ, ಇದರಲ್ಲಿ 9 ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ+ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಮತ್ತು ಆಂಡ್ರಾಯ್ಡ್ ಆಟೋ, ಆಪಲ್ ಕಾರ್‌ಪ್ಲೇ ಹೊಂದಿದೆ.

ಆಫ್-ರೋಡ್ ಸಾಮಾರ್ಥ್ಯ: ಜಿಮ್ನಿಯು ಕುಶಲತೆಯಿಂದ ಕಂಟ್ರೋಲ್ ಮಾಡಲು ತುಂಬಾ ಸುಲಭವಾಗಿದೆ. ಏಕೆಂದರೆ ಇದು ತೂಕದಲ್ಲಿ ಹೆಚ್ಚು ಹಗುರವಾಗಿರುತ್ತದೆ. ಅದಕ್ಕಾಗಿಯೇ ಥಾರ್‌ಗೆ ಹೋಲಿಸಿದರೆ ಜಿಮ್ನಿ ದೈನಂದಿನ ಬಳಕೆ ಮತ್ತು ಪ್ರಯಾಣಕ್ಕೆ ಹೆಚ್ಚು ಪ್ರಾಯೋಗಿಕವಾಗಿದೆ. ಈ ಮಾರುತಿ ಜಿಮ್ನಿ ಎಸ್‍ಯುವಿಯಲ್ಲಿ ಫ್ಲಾಟ್ ಕ್ಲಾಮ್‌ಶೆಲ್ ಬಾನೆಟ್, ವಾಷರ್‌ಗಳೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಅಲಾಯ್ ವೀಲ್ಸ್, 195/80 ಅಳತೆಯ ಟೈಯರ್ಸ್ ಪಡೆದಿದೆ.

ಎಂಜಿನ್: ಜಿಮ್ಮಿ 1.5 ಲೀಟರ್ ಕೆ-ಸೀರಿಯಸ್ ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಎಂಜಿನ್ 104.8ಪಿಎಸ್ ಪವರ್ ಹಾಗೂ 134.2Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 5 ಸ್ವೀಡ್ ಮ್ಯಾನುವಲ್ ಹಾಗೂ 4 ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ನೀಡಿದೆ. ಇನ್ನು ಈ ಎಸ್‍ಯುವಿಯ 6 ಏರ್‌ಬ್ಯಾಗ್ಸ್, ABS, EBD, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ಸೈಡ್ ಇಂಪ್ಯಾಕ್ಟ್ ಡೋರ್ ಬೀಮ್ಸ್ ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Sunday, August 25, 2024, 13:00 [IST]
English summary
Actress and singer abhirami suresh new maruti suzuki jimny top things
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+