ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ಸಾಮಾನ್ಯವಾಗಿ ಚಲನಚಿತ್ರಗಳು ಗೆದ್ದಾಗ ನಟ-ನಟಿಯರಿಗೆ ಕೆಲವು ಬಾರಿ ಐಷಾರಾಮಿ ಕಾರು, ಬಂಗಲೆ ಉಡುಗೊರೆಯಾಗಿ ಸಿಗುವುದು ಕಾಮನ್. ಆದ್ರೆ ಇಲ್ಲೊಬ್ಬ ಸ್ಟಾರ್ ನಟಿಗೆ ಪ್ರೀತಿಯ ಅಮ್ಮನೇ ದೀಪಾವಳಿ ಸಂಭ್ರಮಕ್ಕಾಗಿ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ಹೌದು, ಅದು ಬೇರೆ ಯಾರು ಅಲ್ಲಾ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿಗೆ ಅವರ ತಾಯಿ ಮೋನಾ ಮೋಟ್ವಾನಿಯವರು ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಸೀರಿಸ್ ಕಾರನ್ನು ದೀಪಾವಳಿಯ ಸಂಭ್ರಮಕ್ಕಾಗಿ ಉಡುಗೊರೆಯಾಗಿ ನೀಡಿದ್ದು, ಭಾರತದಲ್ಲಿ ಫ್ಯಾಂಟಮ್ 8 ಸೀರಿಸ್ ಐಷಾರಾಮಿ ಕಾರನ್ನು ಖರೀದಿ ಮಾಡಿದ ಕೆಲವೇ ಕೆಲವು ಕಾರು ಮಾಲೀಕರ ಪೈಕಿ ಇದೀಗ ನಟಿ ಹನ್ಸಿಕಾ ಮೋಟ್ವಾನಿ ಕೂಡಾ ಒಬ್ಬರಾಗಿದ್ದಾರೆ.

ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ನಿಮ್ಮ ಬಳಿ ದುಡ್ಡು ಇದ್ದರೂ ಸಹ ಕಾರು ಖರೀದಿ ಮಾಡಲು ಹತ್ತಾರು ಷರತ್ತುಗಳನ್ನು ವಿಧಿಸುವ ರೋಲ್ಸ್ ರಾಯ್ಸ್ ಸಂಸ್ಥೆಯು ಉತ್ತಮ ಹಿನ್ನಲೆಯುಳ್ಳ ಗ್ರಾಹಕರಿಗೆ ಮಾತ್ರವೇ ತನ್ನ ಐಷಾರಾಮಿ ಕಾರುಗಳನ್ನು ಮಾರಾಟ ಮಾಡುತ್ತದೆ.

ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ಇದೀಗ ಮೋನಾ ಮೋಟ್ವಾನಿಯವರು ಕೂಡಾ ತಮ್ಮ ಮಗಳಿಗಾಗಿ ಹತ್ತಾರು ಬಗೆಯ ಷರತ್ತುಗಳಿಗೆ ಬದ್ಧರಾಗಿ ಫ್ಯಾಂಟಮ್ 8 ಸೀರಿಸ್ ಕಾರು ಖರೀದಿಸಿ ತಮ್ಮ ಮಗಳಿಗೆ ಉಡುಗೊರೆಯಾಗಿ ನೀಡಿದ್ದು, ಹೊಸ ಕಾರು ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ.11.50 ಕೋಟಿ ಬೆಲೆ ಪಡೆದುಕೊಂಡಿದೆ.

ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ಖ್ಯಾತ ಚರ್ಮರೋಗ ವೈದ್ಯೆಯಾಗಿರುವ ಡಾ. ಮೋನಾ ಮೋಟ್ವಾನಿಯವರು ಹನ್ಸಿಕಾ ಕನಸಿನ ಕಾರು ಖರೀದಿಯ ಮಾಹಾದಾಸೆಯನ್ನು ನೆರವೇರಿಸಿದ್ದು, ಅಮ್ಮನ ದುಬಾರಿ ಬೆಲೆಯ ಕಾರ್ ಗಿಫ್ಟ್ ನೋಡಿ ಹನ್ಸಿಕಾ ಮೋಟ್ವಾನಿ ಸಖತ್ ಖುಷಿಯಲ್ಲಿದ್ದಾರೆ. ಇನ್ನು ಐಷಾರಾಮಿಯ ವಾಸ್ತುಶಿಲ್ಪ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಸೀರಿಸ್ ಕಾರು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಬೆಲೆಗೆ ತಕ್ಕಂತೆ ನೂರಾರು ಸುಧಾರಿತ ತಂತ್ರಜ್ಞಾನ ಸೌಲಭ್ಯ ಪ್ರೇರಿತ ಫೀಚರ್ಸ್‌ಗಳನ್ನು ಈ ಕಾರಿನಲ್ಲಿ ಜೋಡಣೆ ಮಾಡಲಾಗಿದೆ.

ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ಸುಮಾರು 90 ವರ್ಷಗಳಿಂದ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುತ್ತಿರುವ ಫ್ಯಾಂಟಮ್ ಸೀರಿಸ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿ 8ನೇ ತಲೆಮಾರಿನ ವೈಶಿಷ್ಟ್ಯತೆಗಳೊಂದಿಗೆ ಮಾರಾಟಗೊಳ್ಳುತ್ತಿದ್ದು, ಹಳೆಯ ಮಾದರಿಗಳಿಂತ ಶೇ.30ರಷ್ಟು ಸುಧಾರಿತ ತಂತ್ರಜ್ಞಾನ ಮತ್ತು ಹೊರ ಮತ್ತು ಒಳ ವಿನ್ಯಾಸಗಳು ಬದಲಾವಣೆಗೊಳಿಸಿರುವುದೇ ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ರೋಲ್ಸ್ ರಾಯ್ಸ್ ಫ್ಯಾಂಟಮ್ 8 ಸೀರಿಸ್ ಕಾರಿನ ಇನ್ನೊಂದು ವಿಶೇಷ ಅಂದ್ರೆ ಕಾರಿನ ಪ್ರತಿಯೊಬ್ಬ ಭಾಗವು ಕೂಡಾ ಹ್ಯಾಂಡ್ ಮೆಡ್ ಕೌಶಲ್ಯತೆಗಳೊಂದಿಗೆ ಸಿದ್ಧಗೊಂಡಿದ್ದು, ಈ ಮೂಲಕ ಸುಪ್ರಸಿದ್ಧ ವಿನ್ಯಾಸ ಪರಂಪರೆಯನ್ನು ಮುಂದುವರಿಸಲಾಗಿದೆ.

ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ಫ್ಯಾಂಟಮ್ 8ರ ಆವೃತ್ತಿಯಲ್ಲಿ ಪ್ಯಾಂಥಿಯಾನಾ ಗ್ರಿಲ್ ಮರು ನಿರ್ಮಾಣ ಮಾಡಲಾಗಿದ್ದು, ಸ್ಪಿರಿಟ್ ಆಫ್ ಎಕ್ಸ್ಟ್ಯಾಸಿಯ ಸ್ಥಾನವನ್ನು ಅರ್ಧ ಇಂಚು ಎತ್ತರಿಸಲಾಗಿದೆ. ಜೊತೆಗೆ ಹೊಸ ಹೆಡ್‌ಲ್ಯಾಂಡ್ ಗ್ರಾಫಿಕ್ ಕೂಡಾ ಅದ್ಭುತವಾಗಿದೆ.

ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ಎಂಜಿನ್ ಸಾಮರ್ಥ್ಯ

ಫ್ಯಾಂಟಮ್ 8ನೇ ತಲೆಮಾರಿನ ಕಾರುಗಳು ಟ್ವಿನ್ ಟರ್ಬೋಚಾರ್ಜ್ಡ್ 6.75-ಲೀಟರ್ ವಿ12 ಎಂಜಿನ್ ಹೊಂದಿದ್ದು, 563-ಬಿಎಚ್‌ಪಿ ಮತ್ತು 900-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಈ ಮೂಲಕ 5.3 ಸೇಕೆಂಡುಗಳಲ್ಲಿ 100 ಕಿಮಿ ವೇಗದಲ್ಲಿ ಚಲಿಸಬಲ್ಲ ಗುಣಹೊಂದಿದ್ದು, ಪ್ರತಿ ಗಂಟೆಗೆ 250 ಕಿಮಿ ಚಾಲನಾ ಮಿತಿ ಹೊಂದಿದೆ. ಹಾಗೆಯೇ ಹೊಸ ಕಾರಿನಲ್ಲಿ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಜೋಡಿಸಲಾಗಿದೆ.

ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ಇದಲ್ಲದೇ ಫ್ರಾಸ್ಟೆಡ್ ಮತ್ತು ಹಗಲಿನ ಚಾಲನೆಯ ದೀಪಗಳು ಲೇಸರ್ ಬೆಳಕಿನ ವ್ಯವಸ್ಥೆಯೊಂದಿಗೆ ಉರಿಯುವ ಸೌಲಭ್ಯ ಹೊಂದಿದ್ದು, ಇವುಗಳು ರಾತ್ರಿ ವೇಳೆಯಲ್ಲಿ ಬರೋಬ್ಬರಿ 600 ಮೀಟರ್‌ಗಳಷ್ಟು ಬೆಳಕನ್ನು ಹೊರಸೂಸಬಲ್ಲವು.

ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ರೋಲ್ಸ್ ರಾಯ್ಸ್ ಹೊಸ ಆವೃತ್ತಿಯು ಫ್ಯಾಂಟಮ್‌ನಲ್ಲಿ 22 ಇಂಚಿನ ಅಲಾಯ್ ಚಕ್ರಗಳೊಂದಿಗೆ ಮಿಶ್ರಲೋಹಗಳನ್ನು ಬಳಸಿಕೊಂಡಿದ್ದು, ಸುರಕ್ಷತೆಗಾಗಿ ಪನೋರಮಿಕ್ ವೀಕ್ಷಣೆಯ 4 ಕ್ಯಾಮೆರಾಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿಯೇ ಹೊಸ ಕಾರಿನ ಐಷಾರಾಮಿ ವೈಶಿಷ್ಟ್ಯತೆಗಳನ್ನು "ದ ಗ್ಯಾಲರಿ" ಎಂದು ಉಲ್ಲೇಖಿಸಲಾಗಿದೆ.

ಸ್ಟಾರ್ ನಟಿಗೆ ಬರೋಬ್ಬರಿ 11 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಾರ್ ಗಿಫ್ಟ್

ಈಗಾಗಲೇ ಮಾರುಕಟ್ಟೆಯಲ್ಲಿ ಹಲವಾರು ದುಬಾರಿ ಕಾರುಗಳು ಲಭ್ಯವಿದ್ದರೂ ಸಹ 1925ರಲ್ಲಿ ಸರ್ ಹೆನ್ರಿ ರಾಯ್ಸ್ ನಿರ್ಮಿಸಿದ ಫ್ಯಾಂಟಮ್ ಆವೃತ್ತಿಯೂ ವಿಶ್ವದ ಅತ್ಯಂತ ಪ್ರಭಾವಿ ಕಾರು ಎಂದರೇ ತಪ್ಪಾಗಲಾರದು.ಈ ನಡುವೆ 8ನೇ ತಲೆಮಾರಿನ ಫ್ಯಾಂಟಮ್ ಆವೃತ್ತಿಯು ಮತ್ತಷ್ಟು ಹೊಸತನದೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ.

More from DriveSpark

Article Published On: Wednesday, October 30, 2019, 13:37 [IST]
English summary
Hansika Motwani gets Rolls Royce as Diwali gift. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+