ದುಬಾರಿ ಬೈಕ್ ಖರೀದಿಸಿ ಸುತ್ತುವ ಈ ನಟಿ ಯಾರು ಗೊತ್ತಾ? ಇವರ ವಯಸ್ಸು ತಿಳಿದರೆ ಶಾಕ್ ಆಗ್ತೀರ!
ಮಲಯಾಳಂ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರಾಗಿರುವ ಮಂಜು ವಾರಿಯರ್, ಕಳೆದ ವರ್ಷ ಬಿಎಂಡಬ್ಲ್ಯುನ ಅಡ್ವೆಂಚರ್ ಟೂರರ್ ಮೋಟಾರ್ ಸೈಕಲ್ ಆದ ಬಿಎಂಡಬ್ಲ್ಯು ಆರ್ 1250 ಜಿಎಸ್ ಬೈಕ್ ಅನ್ನು ಖರೀದಿಸಿದ್ದರು. ಇದರ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.23 ಲಕ್ಷಗಳಾಗಿದೆ. ಈ ಬೈಕ್‌ನೊಂದಿಗೆ ಪೋಸ್ ನೀಡುವ ವೀಡಿಯೊಗಳು ಮತ್ತು ಚಿತ್ರಗಳನ್ನು ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ಇದನ್ನು ಕಂಡು ಕೇವಲ ಪೋಸ್ ನೀಡಲು ಖರೀದಿಸಿದ್ದಾರೆ ಎಂದವರ ಬಾಯಿನ್ನು ಈಗ ಮುಚ್ಚಿಸಿದ್ದಾರೆ. ಮಂಜು ವಾರಿಯರ್ ತಮ್ಮ ಆರ್ 1250 ಜಿಎಸ್ ಬೈಕ್ ಅನ್ನು ಆಫ್ ರೋಡಿಂಗ್ ಮಾಡಲು ಕೊಂಡೊಯ್ದಿದ್ದಾರೆ.
ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಮಂಜು ವಾರಿಯರ್ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ಬಹುಶಃ ಈ ಬೈಕನ್ನು ಆಫ್-ರೋಡ್‌ನಲ್ಲಿ ಹೇಗೆ ಓಡಿಸಬೇಕೆಂದು ಕಲಿಯಲು ಪ್ರಯತ್ನಿಸುತ್ತಿದ್ದಂತೆ ಕಾಣುತ್ತಿದೆ. ಅವರು ಹಂಚಿಕೊಂಡಿರುವ ಚಿತ್ರಗಳನ್ನು ನೋಡಿದ್ರೆ ಬೈಕ್ ಒಂದೆರಡು ಬಾರಿ ಕೆಳಗೆ ಬಿದ್ದಂತಿದೆ. ಕ್ರ್ಯಾಶ್ ಗಾರ್ಡ್ ಮತ್ತು ಬೈಕಿನ ಎಂಜಿನ್ ಕವರ್ ಮೇಲೆ ಮಣ್ಣಿರುವುದನ್ನು ನೋಡಬಹುದು.

ನಟಿ ಸರಿಯಾದ ರೈಡಿಂಗ್ ಗೇರ್ ಧರಿಸಿದ್ದು, ಇದು ಅಪಘಾತದ ಸಂದರ್ಭದಲ್ಲಿ ಸವಾರರಿಗೆ ಆಗುವ ಸಂಭವನೀಯ ಹಾನಿಯನ್ನು ತಪ್ಪಿಸುತ್ತದೆ. ಆಫ್-ರೋಡ್ ಸವಾರಿ ಕಲಿಯುತ್ತಿರುವಾಗ ಬೈಕಿನಿಂದ ಬೀಳುವುದು ತುಂಬಾ ಸಾಮಾನ್ಯ. ಇದನ್ನು ಲೆಕ್ಕಿಸದೇ ರೈಡ್ ಅನ್ನು ಮುಂದುವರಿಸಬೇಕು, ಅದನ್ನು ನೀಡುವ ಮಾಡಿದ್ದೀರಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹೊಗಳಿದ್ದಾರೆ.
ಮಂಜು ವಾರಿಯರ್ ಮೋಟಾರ್ ಸೈಕಲ್‌ಗಳನ್ನು ಇತ್ತೀಚೆಗಷ್ಟೆ ಹೆಚ್ಚಾಗಿ ಪ್ರೀತಿಸುತ್ತಿದ್ದಾರೆ. ಇತ್ತೀಚೆಗೆ ತಮಿಳು ನಟ ಅಜಿತ್ ಕುಮಾರ್ ಅವರೊಂದಿಗೂ ಬೈಕ್ ರೈಡ್‌ಗೆ ಹೋಗಿ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದ ಅವರು, ಅಜಿತ್ ಅವರ ಜೊತೆಗೆ ಕಳೆದ ವರ್ಷ ಪರ್ವತಗಳಲ್ಲಿ ಬೈಕ್ ಪ್ರವಾಸಕ್ಕೆ ಹೋಗಿದ್ದರು, ಪ್ರವಾಸದಿಂದ ಹಿಂದಿರುಗಿದ ನಂತರ ಮಂಜು ವಾರಿಯರ್ ಮೋಟಾರ್‌ಸೈಕಲ್‌ಗಳ ದೊಡ್ಡ ಅಭಿಮಾನಿಯಾದರು.

ಇದೀಗ ಬೈಕ್ ಖರೀದಿಸಿದ ನಂತರ, ಮಂಜು ವಾರಿಯರ್ ಆಗಾಗ್ಗೆ ಇತರ ನಟರೊಂದಿಗೆ ರಸ್ತೆಯಲ್ಲಿ ಸವಾರಿ ಮಾಡುತ್ತಿದ್ದಾರೆ. ಬೈಕ್ ಖರೀದಿಸಿದ ಕೆಲವು ತಿಂಗಳ ನಂತರ, ಮಂಜು ವಾರಿಯರ್ ಕೇರಳದ ಕೊಚ್ಚಿಯ ಬೀದಿಗಳಲ್ಲಿ ನಟ ಮತ್ತು ನಿರ್ದೇಶಕ ಸೌಬಿನ್ ಶಾಹಿರ್ ಅಡ್ವೆಂಚರ್ ಮೋಟಾರ್ ಸೈಕಲ್‌ಗಳನ್ನು ಓಡಿಸುವ ಚಿತ್ರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ನಟ ಸೌಬಿನ್ ಶಾಹಿರ್ ಕೂಡ ಇದೇ ಸಮಯದಲ್ಲಿ ಬಿಎಂಡಬ್ಲ್ಯು ಆರ್ 1250 ಜಿಎಸ್ ಟ್ರೋಫಿ ಎಡಿಷನ್ ಬೈಕ್ ಅನ್ನು ಖರೀದಿಸಿದ್ದರು. ಮಲಯಾಳಂ ಚಿತ್ರರಂಗದಲ್ಲಿ ಮೋಟಾರ್ ಸೈಕಲ್ ಸವಾರಿ ಮಾಡುವ ಅನೇಕ ನಟರಿದ್ದರೂ, ಮಂಜು ವಾರಿಯರ್ ಬಹುಶಃ ಈ ರೀತಿಯ ದುಬಾರಿ ಮೋಟಾರ್‌ಸೈಕಲ್ ಹೊಂದಿರುವ ಏಕೈಕ ನಟಿ ಎನ್ನಲಾಗಿದೆ. ತಮ್ಮ 44ನೇ ವಯಸ್ಸಿನಲ್ಲಿ ಅವರು ಗೇರ್ಡ್ ಮೋಟಾರ್‌ಸೈಕಲ್‌ಗಳನ್ನು ಓಡಿಸುತ್ತಿರುವುದು ಹಲವರಿಗೆ ಮಾದರಿಯಾಗಿದೆ.
ಮಂಜು ವಾರಿಯರ್ ಅವರ ಬಿಎಂಡಬ್ಲ್ಯು ಆರ್1250 ಜಿಎಸ್ ಬೈಕ್ ವಿಶೇಷತೆಗಳನ್ನು ನೋಡುವುದಾದರೆ, 1245 ಸಿಸಿ ಟ್ವಿನ್ ಸಿಲಿಂಡರ್ ಬಾಕ್ಸರ್ ಎಂಜಿನ್ 134 ಬಿಹೆಚ್‌ಪಿ ಪವರ್ ಮತ್ತು 143 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6 ಸ್ಪೀಡ್ ಗೇರ್ ಬಾಕ್ಸ್ ಅನ್ನು ಅಳವಡಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications