ಅಮೆರಿಕದಲ್ಲಿ ಮೊತ್ತ ಮೊದಲ ವಿದ್ಯುತ್ ಚಾಲಿತ ಶಾಲಾ ಬಸ್

By Nagaraja

ಬಸ್ಸಿನಲ್ಲಿ ತೆರಳುವಾಗ ನಿಮ್ಮ ಮಕ್ಕಳ ಪರಿಸ್ಥಿತಿ ಹೇಗಿರುತ್ತದೆ? ಇದೀಗ ಬಹುತೇಕ ಎಲ್ಲ ಶಾಲೆಗಳು ತಮ್ಮ ಮಕ್ಕಳ ಸುರಕ್ಷಿತ ಪಯಣದ ನಿಟ್ಟಿನಲ್ಲಿ ವಿಶೇಷ ಶಾಲಾ ಬಸ್ಸುಗಳನ್ನು ಏರ್ಪಡಿಸುತ್ತವೆ. ಇನ್ನು ಸ್ವಲ್ಪ ಖರ್ಚಾದರೂ ಪರವಾಗಿಲ್ಲ ಎಂಬ ರೀತಿಯಲ್ಲಿ ಪೋಷಕರು ಸಹ ಶಾಲಾ ಬಸ್ಸುಗಳಲ್ಲಿಯೇ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ.

ಕಿಕ್ಕಿರಿದು ತುಂಬಿದ ಬಸ್ಸುಗಳಿಗಿಂತ ಆರಾಮದಾಯಕವಾಗಿ ಪಯಣಿಸಬಹುದಾಗಿದೆ. ಬೆಳಗ್ಗೆ ಶಾಲೆಗಳಿಗೆ ಕೊಂಡೊಯ್ಯುವ ಇಂತಹ ಶಾಲಾ ಬಸ್ಸುಗಳು ಸಂಜೆಯ ಹೊತ್ತಿಗೆ ಮನೆ ಬಳಿಯೇ ಬಿಟ್ಟು ತೆರಳುತ್ತವೆ. ಮಕ್ಕಳ ಭದ್ರತೆಯ ದೃಷ್ಟಿಕೋನದಲ್ಲೂ ಇದು ಯೋಗ್ಯವೆನಿಸುತ್ತಿದೆ. ಭಾರತದಂತೆ ಅಮೆರಿಕದಲ್ಲೂ ಶಾಲಾ ಬಸ್‌ಗಳು ಹೆಚ್ಚೆಚ್ಚು ಓಡಾಡುತ್ತಿರುತ್ತವೆ. ಇದೀಗ ಆಧುನಿಕ ತಂತ್ರಜ್ಞಾನಕ್ಕೆ ಮೊರೆ ಹೋಗಿರುವ ಅಮೆರಿಕವು, ಶಾಲಾ ಮಕ್ಕಳಿಗಾಗಿ ಪರಿಸರ ಸ್ನೇಹಿ ಎಲೆಕ್ಟ್ರಿಕ್ ಶಾಲಾ ಬಸ್ಸುಗಳನ್ನು ಬಳಕೆ ಮಾಡಲಿವೆ.

ಅಮೆರಿಕದಲ್ಲಿ ಮೊತ್ತ ಮೊದಲ ವಿದ್ಯುತ್ ಚಾಲಿತ ಶಾಲಾ ಬಸ್

ಇದು ಅಮೆರಿಕದಲ್ಲಿ ಓಡಾಡಲಿರುವ ಮೊದಲ ಎಲೆಕ್ಟ್ರಿಕ್ ಶಾಲಾ ಬಸ್ ಆಗಿರಲಿದೆ. ಅಲ್ಲಿನ ಮೊದಲ ಎಲೆಕ್ಟ್ರಿಕ್ ಬಸ್ಸು ಕ್ಯಾಲಿಫೋರ್ನಿಯಾದಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯಲಿದೆ.

ಅಮೆರಿಕದಲ್ಲಿ ಮೊತ್ತ ಮೊದಲ ವಿದ್ಯುತ್ ಚಾಲಿತ ಶಾಲಾ ಬಸ್

ಕಳೆದ ಒಂದೆರೆಡು ವರ್ಷಗಳಲ್ಲಿ ಎಲೆಕ್ಟ್ರಿಕ್ ಬಸ್ಸುಗಳಿಗೂ ಹೆಚ್ಚಿನ ಬೇಡಿಕೆ ಕಂಡುಬರುತ್ತಿದೆ. ಆದರೆ ಯಾವುದೇ ಅಮೆರಿಕದ ಪ್ರಾಂತ್ಯಗಳು ಇದುವರೆಗೆ ಶಾಲಾ ಮಕ್ಕಳನ್ನು ಕರೆದೊಯ್ಯಲು ಎಲೆಕ್ಟ್ರಿಕ್ ಬಸ್ಸುಗಳನ್ನು ಬಳಕೆ ಮಾಡುತ್ತಿರಲಿಲ್ಲ.

ಅಮೆರಿಕದಲ್ಲಿ ಮೊತ್ತ ಮೊದಲ ವಿದ್ಯುತ್ ಚಾಲಿತ ಶಾಲಾ ಬಸ್

ಮೋಟಿವ್ ಪವರ್ ಸಿಸ್ಟಂ ಹಾಗೂ ಟ್ರಾನ್ಸ್ ಟೆಕ್ ಬಸ್ ಜಂಟಿಯಾಗಿ ಈ ಎಸ್‌ಎಸ್‌ಟಿ-ಇ ಟೈಪ್ ಶಾಲಾ ಬಸ್ಸನ್ನು ಅಭಿವೃದ್ಧಿಗೊಳಿಸಿದೆ. ಇದರ ಸೇವೆಯನ್ನು ಕ್ಯಾಲಿಫೋರ್ನಿಯಾದ ಕಿಂಗ್ಸ್ ಕ್ಯಾನ್ಯಾನ್ ಯುನಿಫೈಡ್ ಸ್ಕೂಲ್ ಡಿಸ್ಟ್ರಿಕ್ಟ್ ಪಡೆಯಲಿದೆ.

ಅಮೆರಿಕದಲ್ಲಿ ಮೊತ್ತ ಮೊದಲ ವಿದ್ಯುತ್ ಚಾಲಿತ ಶಾಲಾ ಬಸ್

ನಾವು ಹಲವಾರು ಎಲೆಕ್ಟ್ರಿಕ್ ಬಸ್ಸುಗಳ ಬಗ್ಗೆ ಮಾತನಾಡಿರುತ್ತೇವೆ. ಆದರೆ ಪರಿಸರ ಸ್ನೇಹಿ ಶಾಲಾ ಬಸ್ ತಯಾರಿಗೆ ಇಷ್ಟೊಂದು ವಿಳಂಬವಾಗಿರುವುದು ಅಚ್ಚರಿ ಮೂಡಿಸುತ್ತದೆ. ಫೋರ್ಡ್ ಎಫ್450 ಚಾಸೀಸ್ ತಲಹದಿಯಲ್ಲಿ ಇದನ್ನು ತಯಾರಿಸಲಾಗಿದ್ದು ಮೋಟಿವ್ ಎಲೆಕ್ಟ್ರಿಕ್ ಪವರ್‌ಟ್ರೈನ್ ಕಂಟ್ರೋಲ್ ಸಿಸ್ಟಂ (ePCS) ಹೊದಿದೆ.

ಅಮೆರಿಕದಲ್ಲಿ ಮೊತ್ತ ಮೊದಲ ವಿದ್ಯುತ್ ಚಾಲಿತ ಶಾಲಾ ಬಸ್

ವರದಿಗಳ ಪ್ರಕಾರ ಎಲೆಕ್ಟ್ರಿಕ್ ಸ್ಕೂಲ್ ಬಸ್ ಆಳವಡಿಸುವ ಮೂಲಕ ದೈನಂದಿನ 16 ಗ್ಯಾಲನ್ ಅಥವಾ ವರ್ಷದಲ್ಲಿ 11000 ಅಮೆರಿಕನ್ ಡಾಲರ್ ಇಂಧನ ಉಳಿತಾಯ ಮಾಡಬಹುದಾಗಿದೆ.

ಅಮೆರಿಕದಲ್ಲಿ ಮೊತ್ತ ಮೊದಲ ವಿದ್ಯುತ್ ಚಾಲಿತ ಶಾಲಾ ಬಸ್

ಇದರಲ್ಲಿ 24ರಿಂದ 34 ಮಕ್ಕಳಿಗೆ ಆರಾಮದಾಯಕವಾಗಿ ಪಯಣಿಸಬಹುದಾಗಿದೆ. ಜೊತೆಗೆ ಅಂಗವಿಕಲರಿಗೆ ವೀಲ್ ಚೇರ್ ವ್ಯವಸ್ಥೆಯು ಇದೆ.

ಅಮೆರಿಕದಲ್ಲಿ ಮೊತ್ತ ಮೊದಲ ವಿದ್ಯುತ್ ಚಾಲಿತ ಶಾಲಾ ಬಸ್

ಹಾಗೆಯೇ ಇದರಲ್ಲಿ ಆಳವಡಿಸಲಾಗಿರುವ ಬ್ಯಾಟರಿ ಒಮ್ಮೆ ಚಾರ್ಜ್ ಮಾಡಿಸಿದ್ದಲ್ಲಿ 80ರಿಂದ 100 ಕೀ.ಮೀ. ವರೆಗೂ ಚಲಿಸಬಹುದಾಗಿದೆ. ಇದರ ಬ್ಯಾಟರಿ ಒಂದು ತಾಸಿನೊಳಗೆ ಅರ್ಧಕ್ಕಿಂತ ಹೆಚ್ಚು ಚಾರ್ಜ್ ಆಗಲಿದೆ.

ಅಮೆರಿಕದಲ್ಲಿ ಮೊತ್ತ ಮೊದಲ ವಿದ್ಯುತ್ ಚಾಲಿತ ಶಾಲಾ ಬಸ್

ಈ ಎಸ್‌ಎಸ್‌ಟಿ-ಇ ಎಲೆಕ್ಟ್ರಿಕ್ ಬಸ್ಸಿನಲ್ಲಿ ದೂರ ಮಾಪಕ ಕೂಡಾ ಇದ್ದು, ರಿಯಲ್ ಟೈಮ್ ಮಾರ್ಗ ಮಾಹಿತಿ ಜೊತೆಗೆ ನಿರ್ವಹಣೆ ಮಾಹಿತಿಯನ್ನು ನೀಡಲಿದೆ. ಮುಂದಿನ ದಿನಗಳಲ್ಲಿ ಚಿಕಾಗೋ, ನ್ಯೂಯಾರ್ಕ್‌ನತ್ತವೂ ಯೋಜನೆ ವಿಸ್ತರಿಸಲಿದೆ.

ಅಮೆರಿಕದಲ್ಲಿ ಮೊತ್ತ ಮೊದಲ ವಿದ್ಯುತ್ ಚಾಲಿತ ಶಾಲಾ ಬಸ್

ಅಷ್ಟಕ್ಕೂ ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ಶಾಲಾ ಬಸ್‌ಗಳ ಕನಸು ಯಾವಾಗ ನನಸಾಗಲಿದೆ ಎಂಬುದಕ್ಕೆ ಸರಕಾರವೇ ಉತ್ತರ ಕೊಡಬೇಕಾಗಿದೆ. ಸದ್ಯ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿರಿ...

ಫೋಟೊ ಕೃಪೆ: ಮೋಟಿವ್ ಪಿಎಸ್ ಡಾಟ್ ಕಾಮ್

More from DriveSpark

Article Published On: Saturday, May 10, 2014, 10:58 [IST]
English summary
The first all-electric school bus could be picking up California students by 2014.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+