ನೆಲದ ಮೇಲೂ ನೀರಲ್ಲೂ ಸಂಚರಿಸುವ ಉಭಯಚರ ಗಾಡಿ
ಭೂಮಿಯು ಶೇಕಡಾ 70ರಷ್ಟು ಭಾಗವು ಸಮುದ್ರದಿಂದ ಆವರಿಸ್ಪಟ್ಟಿದೆ. ಅಂದರೆ ನಾಲ್ಕನೇ ಮೂರರಷ್ಟು ಪಾಲು ನೀರು ತುಂಬಿಕೊಂಡಿರುವ ಈ ಭೂಮಿಯಲ್ಲಿ ಕೆಲವೇ ಕೆಲವು ಜೀವಿಗಳು ಮಾತ್ರ ಉಭಯಚರ ವಾಸಿಗಳಾಗಿವೆ.
ನೀರಲ್ಲಿ ಚಲಿಸುವ 2 ಕೋಟಿಯ ದುಬಾರಿ ಬಸ್!
ಅಷ್ಟಕ್ಕೂ ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದೇ? ಇದೀಗ ಕಾಲ ಬದಲಾಗಿದೆ. ನಾವಿಂದು ಪರಿಚಯಿಸಲಿರುವ ವಾಹನ ನೆಲದ ಮೇಲೂ ನೀರಿನ ಮೇಲೂ ಸಂಚರಿಸುವ ಸಾಮರ್ಥ್ಯ ಹೊಂದಿದೆ ಅಂದರೆ ಖಂಡಿತ ನೀವು ಅಚ್ಚರಿಗೊಳಗಾಗುವಿರಿ.
ಸಂಪೂರ್ಣ ಸುದ್ದಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ:

ಹೌದು, ಟೊಯೊಟಾ ಲ್ಯಾಂಡ್ ಕ್ರೂಸರ್ ಫೋರ್ ವೀಲ್ ಡ್ರೈವ್‌ನಿಂದ ಸ್ಪೂರ್ತಿ ಪಡೆದು ನಿರ್ಮಾಣವಾಗಿರುವ ಆ್ಯಂಪಿಕ್ರೂಸರ್ ವಾಹನವಿದು.

ನೀರಿನ ಮೇಲಿನಷ್ಟೇ ಶಕ್ತಿಯುತ ವಾಹನ ನಿರ್ಮಿಸುವುದು ನಮ್ಮ ಬಯಕೆಯಾಗಿತ್ತು ಎಂದು ಡಚ್ ಆ್ಯಂಪಿಬಿಯಸ್ ಟ್ರಾನ್ಸ್‌ಪೋರ್ಟ್ (ಡಿಎಟಿ) ಸಹ ಸ್ಥಾಪಕ ಡಿರ್ಕ್ ಜಾನ್ ಡಿ ಜಾನ್ ತಿಳಿಸಿದ್ದಾರೆ.

ಟೊಯೊಟಾ ಲ್ಯಾಂಡ್ ಕ್ರೂಸರ್ ಎಂಜಿನ್‌ನಿಂದ ನಿರ್ಮಾಣವಾಗಿರುವ ಈ ವಾಹನ, ಸಂಪೂರ್ಣ ಆಫ್ ರೋಡರ್ ಗಾಡಿಯಾಗಿದೆ. ಇದು ನೆಲದ ಮೇಲಿನ ಹಾಗೆಯೇ ನೀರಲ್ಲೂ ಸಂಚರಿಸುತ್ತದೆ.

ನೆಲದ ಮೇಲಿನಷ್ಟೇ ನೀರಿನ ಮೇಲೂ ಉಪಯುಕ್ತಗೊಳಿಸುವುದು ಸಂಸ್ಥೆಯ ಯೋಜನೆಯಾಗಿತ್ತು. ಈ ಮೂಲಕ ಜೇಮ್ಸ್ ಬಾಂಡ್ ಸಿನೆಮಾ ಶೈಲಿಯ ವಾಹನ ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದು ನೀರಿನ ಮೇಲೆ ಗಂಟೆಗೆ 45 ಮೈಲ್ ಅಂದರೆ 72 ಕೀ.ಮೀ. ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

ಅಂದ ಹಾಗೆ ಇದು 4.2 ಲೀಟರ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಂಜಿನ್‌ನಿಂದ ನಿರ್ಮಿಸಲ್ಪಟ್ಟಿದೆ.

ಇದು ನೆಲದಲ್ಲಿ ಸಾಮಾನ್ಯ 4X4 ಆಫರ್ ರೋಡರ್ ತರಹನೇ ಚಲಿಸಬಲ್ಲದ್ದು. ಹಾಗೆಯೇ ನೀರಿನಲ್ಲಿ ಸಂಚರಿಸುವಾಗ ವಾಟನ್ ಜೆಟ್‌ನಿಂದ ನಿಯಂತ್ರಿಸಲ್ಪಡಲಿದೆ.

ಎಷ್ಯಾ ಸಫಾರಿ ಪಾರ್ಕ್‌ಗೆ ತೆರಳುವಂತಹ ಆ್ಯಂಪಿಕ್ರೂಸರ್ ವಾಹನ ನಿರ್ಮಿಸುವುದು ನೈಜ ಉದ್ದೇಶವಾಗಿತ್ತು. ಇದೀಗ ಈ ವಾಹನವನ್ನು ಎಲ್ಲಿ ಬೇಕಾದರೂ ಚಾಲನೆ ಮಾಡಬಹುದು ಎಂದು ಸಂಸ್ಥೆಯ ಮಾಲಿಕ ಹೆಮ್ಮೆಯಿಂದ ಹೇಳುತ್ತಿದ್ದಾರೆ.
ವೀಡಿಯೋ ವೀಕ್ಷಿಸಿ


Click it and Unblock the Notifications