ಚಿನ್ನದ ಪದಕ ಗೆದ್ದ ಮಿರಾಬಾಯ್ ಚಾನುಗೆ ಟಿಯುವಿ 300 ಕಾರನ್ನು ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

Written By:

ಇತ್ತೀಚೆಗೆ 2017ರ ವರ್ಲ್ಡ್ ವೆಟ್ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಸೈಕೊಮ್ ಮಿರಾಬಾಯ್ ಚಾನು ಚಿನ್ನದ ಪದಕ ಗೆದ್ದಿದ್ದರು. ಅವರನ್ನು ಬೆಂಬಲಿಸಿ ಆನಂದ್ ಮಹೀಂದ್ರಾ ಅವರು ಮಹೀಂದ್ರಾ ಟಿಯುವಿ 300 ವಾಹನವನ್ನು ಕೊಡುಗೆ ನೀಡಿದ್ದಾರೆ.

ಚಿನ್ನದ ಪದಕ ಗೆದ್ದ ಮಿರಾಬಾಯ್ ಚಾನುಗೆ ಟಿಯುವಿ 300 ಕಾರನ್ನು ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

2017ರ ವರ್ಲ್ಡ್ ವೆಟ್ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಸೈಕೋಮ್ ಮಿರಾಬಾಯ್ ಚಾನು ಅವರನ್ನು ಭಾರತದೆಲ್ಲೆಡೆ ಕೊಡಾಡುತ್ತಿರುವ ಸಂದರ್ಭದಲ್ಲಿ ಮಹೀಂದ್ರಾ ಗ್ರೂಪ್ ಚೇರ್ಮನ್ ಆನಂದ್ ಮಹೀಂದ್ರಾ ಅವರು ಆಕೆಗೆ ಹೊಸ ಕಾರನ್ನು ಗಿಫ್ಟ್ ನೀಡುವ ಮೂಲಕ ಈ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಚಿನ್ನದ ಪದಕ ಗೆದ್ದ ಮಿರಾಬಾಯ್ ಚಾನುಗೆ ಟಿಯುವಿ 300 ಕಾರನ್ನು ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

ಚಾನು ಅವರು ಚಿನ್ನದ ಪದಕ ಮುಡಿಗೇರಿಸಿಕೊಂಡ ವಿಚಾರ ತಿಳಿಯುತ್ತಿದಂತೆ, ಆನಂದ್ ಮಹೀಂದ್ರಾ ಅವರು ತಮ್ಮ ಅಧಿಕೃತ ಟ್ವಿಟರ್ ಪುಟದಲ್ಲಿ ವೈಯಕ್ತಿಕವಾಗಿ ಹೊಸ ಬ್ರಾಂಡ್ ಮಹೀಂದ್ರಾ ಟಿಯುವಿ 300 ಎಸ್‌ಯುವಿ ಕಾರನ್ನು ಉಡುಗೊರೆ ನೀಡುವುದಾಗಿ ಬರೆದುಕೊಂಡಿದ್ದಾರೆ.

ಚಿನ್ನದ ಪದಕ ಗೆದ್ದ ಮಿರಾಬಾಯ್ ಚಾನುಗೆ ಟಿಯುವಿ 300 ಕಾರನ್ನು ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

"ಲಿಂಗ ತಾರತಮ್ಯವನ್ನು ಕಡಿಮೆಗೊಳಿಸುವ ನಿರ್ಧಾರದಿಂದ ಈ ಹೆಣ್ಣುಮಗುವಿಗೆ ಪ್ರೋತ್ಸಾಹ ನೀಡಲು ಈ ಒರಟಾದ ನಾಲ್ಕು ಚಕ್ರಗಳು ವಾಹನವನ್ನು ನೀಡಲು ನಿರ್ಧರಿಸಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಚಿನ್ನದ ಪದಕ ಗೆದ್ದ ಮಿರಾಬಾಯ್ ಚಾನುಗೆ ಟಿಯುವಿ 300 ಕಾರನ್ನು ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

ಮಣಿಪುರದ ಬಲಿಷ್ಠ ಮತ್ತು ಕಠಿಣ ವ್ಯಕ್ತಿತ್ವದ 23 ವರ್ಷದ ತರುಣಿ ಸೈಕೋಮ್ ಮಿರಾಬಾಯ್ ಚಾನು ಅವರು ಇತ್ತೀಚೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನದ ಅನಾಹೈಮ್‌ನಲ್ಲಿ ನಡೆದ 2017ರ ವರ್ಲ್ಡ್ ವೆಟ್ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ, 48 ಕೆ.ಜಿ ವಿಭಾಗದಲ್ಲಿ ತಮ್ಮ ಮೊದಲ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ.

ಚಿನ್ನದ ಪದಕ ಗೆದ್ದ ಮಿರಾಬಾಯ್ ಚಾನುಗೆ ಟಿಯುವಿ 300 ಕಾರನ್ನು ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

1994 ಮತ್ತು 1995ರಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಕರಣಮ್ ಮಲ್ಲೇಶ್ವರಿಯ ನಂತರ, ಎರಡನೇ ಭಾರತೀಯ ಮಹಿಳಾ ವೇಟ್‌ಲಿಫ್ಟರ್ ಎಂಬ ಖ್ಯಾತಿಯನ್ನು ವಿಶ್ವ ಚಾಂಪಿಯನ್ ಆಗಿರುವ ಸೈಕೋಮ್ ಮಿರಾಬಾಯ್ ಅವರು ತಮ್ಮದಾಗಿಸಿಕೊಂಡಿದ್ದಾರೆ.

ಚಿನ್ನದ ಪದಕ ಗೆದ್ದ ಮಿರಾಬಾಯ್ ಚಾನುಗೆ ಟಿಯುವಿ 300 ಕಾರನ್ನು ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

ಈ ಕಾರು, 1.5 ಲೀಟರ್ ಎಂಹಾಕ್ಕೆ80 ಡೀಸೆಲ್ ಎಂಜಿನ್ ನಿಯಂತ್ರಿಸಲ್ಪಡುತ್ತಿದ್ದು, 230 ಎನ್ ಎಂ ತಿರುಗುಬಲದಲ್ಲಿ 84 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಪ್ರತಿ ಲೀಟರ್ ಗೆ 18.49 ಕೀ.ಮೀ. ಮೈಲೇಜ್ ನೀಡುವ ಸಾಮರ್ಥ್ಯ ಹೊಂದಿರುತ್ತದೆ.

ಚಿನ್ನದ ಪದಕ ಗೆದ್ದ ಮಿರಾಬಾಯ್ ಚಾನುಗೆ ಟಿಯುವಿ 300 ಕಾರನ್ನು ಗಿಫ್ಟ್ ಕೊಟ್ಟ ಆನಂದ್ ಮಹೀಂದ್ರಾ

ಒಟ್ಟಿನಲ್ಲಿ ಮಹೀಂದ್ರ ಮಿನಿ ಎಸ್‌ಯುವಿ ಕಾರನ್ನು ಉಡುಗೊರೆಯಾಗಿ ನೀಡುವ ಮೂಲಕ ಆನಂದ್ ಮಹೀಂದ್ರಾ ಅವರು ಕಾರಿಗೂ ಪ್ರಚಾರ ಕೊಟ್ಟರು ಎನ್ನಬಹುದು. ಏನೇ ಆಗಲಿ, ಪ್ರತಿಭಾವಂತ ಹೆಣ್ಣುಮಗಳಿಗೆ ಪ್ರೋತ್ಸಾಹ ನೀಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

English summary
Anand Mahindra To Gift A TUV300 To World Weightlifting Champion Mirabai Chanu
Story first published: Saturday, December 2, 2017, 17:35 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark