ಇಡೀ ರಾಜ್ಯವೇ ಖುಷಿ ಪಡೋ ಸುದ್ದಿ ಕೊಟ್ಟ ದಿವ್ಯ ವಸಂತ ಬಳಿಯಿರುವ ದುಬಾರಿ ಕಾರು ಯಾವುದು? ಬೆಲೆ ಎಷ್ಟು?

'ಇಡೀ ರಾಜ್ಯವೇ ಖುಷಿ ಪಡೋ ಸುದ್ದಿಯಿದು' ಎಂದು ಹೇಳಿ ವೈರಲ್‌ ಆಗಿದ್ದ ನಿರೂಪಕಿ ದಿವ್ಯ ವಸಂತ ಬ್ಲ್ಯಾಕ್‌ಮೇಲ್ ಮಾಡಿ ಹಲವು ಕಡೆ ಹಣ ಸುಲಿಗೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಇನ್ನೊಂದೆಡೆ ಆಕೆ ಹೇಳಿರುವ ಮಾತುಗಳು ಕೂಡ ಮತ್ತೊಮ್ಮೆ ಸೋಶಿಯಲ್‌ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದೆ. ಬೆಂಗಳೂರಿನ ಇಂದಿರಾನಗರದಲ್ಲಿರುವ ಮಸಾಜ್‌ ಪಾರ್ಲರ್‌ & ಸ್ಪಾದ ವ್ಯವಸ್ಥಾಪಕನಿಗೆ ಬೆದರಿಸಿ 15 ಲಕ್ಷ ರೂಪಾಯಿ ಸುಲಿಗೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ನಿರೂಪಕಿ ದಿವ್ಯ ವಸಂತ (Divya Vasantha) ಕೂಡ ಆರೋಪಿಯಾಗಿದ್ದಾರೆ. ಈ ಸುಲಿಗೆ ಯತ್ನ ಪ್ರಕರಣದಲ್ಲಿ ನಿರೂಪಕಿ ತಲೆಮರೆಸಿಕೊಂಡಿದ್ದಾರೆ.

ಖಾಸಗಿ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿದ್ದ ದಿವ್ಯಾ ವಸಂತ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದಳು. ಇನ್‌ಸ್ಟಾಗ್ರಾಂ ಮತ್ತು ಇತರ ಸೋಷಿಯಲ್ ಮೀಡೀಯಾಗಳಲ್ಲಿ ರೀಲ್ಸ್ ಮತ್ತು ವೀಡಿಯೋಗಳ ಮೂಲಕ ಖ್ಯಾತಿ ಪಡೆದಿದ್ದರು. ಈ ಮೊದಲು ಖಾಸಗಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುವಾಗ ಕಡಿಮೆ ಸಂಬಳ ವಿತ್ತು. ಆಕೆಯು ಐಷಾರಾಮಿ ಜೀವನದ ಆಸೆಗೆ ಬಿದ್ದು ಸುಲಭವಾಗಿ ಹಣ ಸಂಪಾದಿಸಲು ಅಡ್ಡ ಮಾರ್ಗ ತುಳಿದು ಸಂಕಷ್ಟಕ್ಕೆ ಸಿಲುಕಿದ್ದಾರೆ.

Divya Vasantha car

ಈ ಸುಲಿಗೆ ಯತ್ನ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ನಿರೂಪಕಿ ದಿವ್ಯಾ ವಸಂತ ಗ್ಯಾಂಗ್‌ ಪತ್ತೆಗೆ ಜೆ.ಬಿ.ನಗರ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಈ ಕೃತ್ಯ ಬೆಳಕಿಗೆ ಬಂದ ನಂತರ ಆಕೆ ತಲೆಮರೆಸಿಕೊಂಡಿದ್ದಾರೆ. ದಿವ್ಯಾ ವಸಂತ 6 ತಿಂಗಳ ಹಿಂದೆ ದುಬಾರಿ ಕಾರನ್ನು ಖರೀದಿಸಿದ್ದಳು. ಆಕೆ ಖರೀದಿಸಿದ ಕಾರಿನ ಬೆಲೆ ಮತ್ತು ಆಕೆ ಕಾರಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ನಿರೂಪಕಿ ದಿವ್ಯಾ ವಸಂತ ಖರೀದಿಸಿದ ಕಾರು, ಹ್ಯುಂಡೈ ಕ್ರೆಟಾ ಆಗಿದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯ ಪ್ರಾರಂಭಿಕ ಬೆಲೆಯು ರೂ.13.79 ಲಕ್ಷವಾದರೆ, ಟಾಪ್ ಎಂಡ್ ಮಾಡೆಲ್ ಬೆಲೆಯು ರೂ.25.32 ಲಕ್ಷವಾಗಿದೆ. ಈ ಎಲ್ಲಾ ಬೆಲೆಗಳು ಆನ್ ರೋಡ್ ಪ್ರಕಾರವಾಗಿದೆ. ಈ ಕ್ರೆಟಾ ಎರಡು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಬರುತ್ತದೆ. ಈ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಭಾರತೀಯ ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತಿದೆ.

Divya Vasantha car

ಹುಂಡೈ ಕ್ರೆಟಾವು E, EX, S, S(O), SX, SX Tech, ಮತ್ತು SX(O) ಎಂಬ ಏಳು ರೂಪಾಂತರಗಳಲ್ಲಿ ಲಭ್ಯವಿದೆ. ಪ್ರತಿಯೊಂದು ರೂಪಾಂತರವು ವಿಭಿನ್ನ ವೈಶಿಷ್ಟ್ಯಗಳನ್ನು ಹೊಂದಿದೆ. ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 10.25-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ಪ್ಲೇಯ ಹೊರತಾಗಿ, ಅನ್ನು ಪರಿಷ್ಕೃತ ಕ್ಲೈಮೆಟ್ ಕಂಟ್ರೋಲ್ ಪ್ಯಾನಲ್, 360-ಡಿಗ್ರಿ ಕ್ಯಾಮೆರಾ ಮತ್ತು ಸುಧಾರಿತ ಡ್ರೈವರ್ ಅಸಿಸ್ಟ್ ಸಿಸ್ಟಂಗಳೊಂದಿಗೆ (ADAS) ಡ್ಯುಯಲ್-ಜೋನ್ AC ಯೊಂದಿಗೆ ಒದಗಿಸಲಾಗಿದೆ.

ಇದರೊಂದಿಗೆ ಪನಾರಮಿಕ್ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್, ವೆಂಟಿಲೇಟೆಡ್ ಫ್ರಂಟ್ ಸೀಟ್‌ಗಳು ಮತ್ತು 8-ಸ್ಪೀಕರ್ ಬಾಸ್ ಸೌಂಡ್ ಸಿಸ್ಟಮ್ ಅನ್ನು ನೀಡಲಾಗಿದೆ. ಸುರಕ್ಷತೆಯ ವಿಷಯದಲ್ಲಿ ಹ್ಯುಂಡೈ ಕ್ರೆಟಾ ಎಸ್‍ಯುವಿಯು ಆರು ಏರ್‌ಬ್ಯಾಗ್‌ಗಳು, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ (TPMS), ISOFIX ಚೈಲ್ಡ್ ಸೀಟ್ ಆಂಕರೇಜ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಟೆಬಿಲಿಟಿಯನ್ನು ಒಳಗೊಂಡಿದೆ.

Divya Vasantha car

ಹಿಂದಿನ ಸೀಟ್ 2 - ಸ್ಟೆಪ್ ರಿಕ್ಲೈನ್ ಫಂಕ್ಷನ್ ಮತ್ತು ದುಬಾರಿ ಪ್ಯಾಕೇಜ್ ಜೊತೆಗೆ, ಹೊಸ ಹುಂಡೈ CRETA ಒಳಭಾಗವು ಸೌಕರ್ಯ ಮತ್ತು ಅನುಕೂಲಕ್ಕಾಗಿ ಕ್ಯಾಬಿನ್‌ನಲ್ಲಿ ಸಾಕಷ್ಟು ಸ್ಥಳಾವಕಾಶವನ್ನು ನೀಡಲಾಗಿದೆ. ಹ್ಯುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‍ಯುವಿಯಲ್ಲಿ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ ಜೊತೆಗೆ 1.5 ಲೀಟರ್ ನ್ಯಾಚುರಲ್ಲಿ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ ಅನ್ನು ಸಹ ಹೊಂದಿದೆ.

ಇದರಲ್ಲಿ 6-speed MT, CVT ಹಾಗೂ 7-speed DCT ಮತ್ತು 6-speed MT, 6-speed AT ಆಯ್ಕೆಯನ್ನು ನೀಡಲಾಗಿದೆ. ಹ್ಯುಂಡೈ ಕ್ರೆಟಾ ಎಸ್‍ಯುವಿಯು ಎಂಜಿನ್ ಆಯ್ಕೆಗಳು ಪವರ್ ಮತ್ತು ಮೈಲೇಜ್ ನಡುವೆ ಸಮತೋಲನವನ್ನು ನೀಡುತ್ತವೆ, ಇದು ದೈನಂದಿನ ಪ್ರಯಾಣ ಮತ್ತು ದೀರ್ಘ ಪ್ರಯಾಣ ಎರಡಕ್ಕೂ ಸೂಕ್ತವಾಗಿದೆ. ಈ ಜನಪ್ರಿಯ ಕ್ರೆಟಾ ಎಸ್‍ಯುವಿಯು 17.4 ಕಿ.ಮೀ ನಿಂದ 21.8 ಕಿ.ಮೀ ಮೈಲೇಜ್ ನೀಡುತ್ತದೆ. ಇದು ಅತ್ಯುತ್ತಮ ಮೈಲೇಜ್ ಸಂಖ್ಯೆ ಆಗಿದೆ.

More from DriveSpark

Article Published On: Monday, July 8, 2024, 17:35 [IST]
English summary
Anchor divya vasantha own hyundai creta details
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+