ಚೀನಾ ಮಾಲಿಕನಿಂದ 5 ಕೋಟಿ ಬೆಳೆಬಾಳುವ ಕಾರು ಪುಡಿಪುಡಿ
ಚೀನಾದಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಅತೀವ ಕೋಪೋದ್ರೇಕಗೊಂಡಿದ್ದ ಕಾರು ಮಾಲಿಕನೊಬ್ಬ ತನ್ನ ಕೋಟಿ ಬೆಳೆಬಾಳುವ ಕಾರನ್ನೇ ಸಾರ್ವಜನಿಕರ ಸಮ್ಮುಖದಲ್ಲಿ ಧ್ವಂಸಗೊಳಿಸಿರುವ ಪ್ರಸಂಗ ನಡೆದಿದೆ.
'ಚೈನಾ ಬ್ರಾಂಡ್ ಅಂದರೆ ನೊ ಗ್ಯಾರಂಟಿ ನೊ ವಾರಂಟಿ' ಎಂಬಂತೆ ಡೀಲರ್‌ಗಳ ಸೇವೆಯಿಂದ ಬೆಸತ್ತು ಹೋಗಿದ್ದ ಗ್ರಾಹಕನೊಬ್ಬ ತನ್ನ ಐಷಾರಾಮಿ ಮಸೆರಟಿ ಕ್ರಾಟ್ರೋಪೋರ್ಟೆ (Maserati Quattroporte ) ಕಾರನ್ನು ಹೊಡೆದುರುಳಿಸಿದ್ದಾರೆ.
'Qingdao' ಅಂತರಾಷ್ಟ್ರೀಯ ಆಟೋ ಶೋ ಮುಂಭಾಗದಲ್ಲಿ ಕಾರು ಪಾರ್ಕಿಂಗ್ ಮಾಡಿದ್ದ ಈತ ತನ್ನ ಅನುಯಾಯಿಗಳೊಂದಿಗೆ ಕಬ್ಬಿಣದ ಸಲಕರಣೆ ನೆರವಿನಿಂದ ಕಾರನ್ನು ಹಿಗ್ಗಾಮುಗ್ಗ ಹೊಡೆದುರುಳಿಸಿದ್ದಾರೆ. ಈ ದೃಶ್ಯ ನೋಡಲು ನೂರಾರು ಜನರು ಕಾರಿನ ಸುತ್ತುವರಿದಿದ್ದರು. (ವೀಡಿಯೋಗಾಗಿ ಫೋಟೊ ಗ್ಯಾಲರಿಯ ಅಂತಿಮ ಸ್ಲೈಡರ್ ಕ್ಲಿಕ್ ಮಾಡಿರಿ)
ವಾಂಗ್ ಎಂಬ ಮಸೆರಟಿ ಕಾರು ಮಾಲಕರೇ ಈ ರೀತಿ ಅನ್ಯಾಯಕ್ಕೊಳಗಾದವರು. ಪ್ರಸ್ತುತ ವೀಡಿಯೋ ಸಾಮಾಜಿಕ ಜಾಲತಾಣವಾದ ಯೂ ಟ್ಯೂಬ್‌ನಲ್ಲಿ ವೈರಲ್ ಆಗಿ ಹರಡಿವೆ. ಅಂದ ಹಾಗೆ ಮಸೆರಟಿ ಕಾರಿನ ದರ ಬರೋಬ್ಬರಿ 4. 88 ಕೋಟಿ ರು.ಗಳಾಗಿವೆ. 2011ರಲ್ಲಿ ಮೊದಲ ಬಾರಿಗೆ ಕಾರಿನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಆವಾಗ ಮಾಲಕ ಮಸೆರಟಿ ಚೀನಾ ಡೀಲರನ್ನು ಸಂಪರ್ಕಿಸಿದ್ದರು.
ಆದರೆ ಹಾನಿಗೊಳಗಾದ ಭಾಗವನ್ನು ಸೆಕೆಂಡ್ ಹ್ಯಾಂಡ್ ಪರಿಕರದಿಂದ ಬದಲಾಯಿಸಲಾಯಿತು. ಅಲ್ಲದೆ 'ರಿಪೇರಿ' ಚಾರ್ಜ್ ಮಾಡಲಾಗಿತ್ತು. ಇದೇ ಮಾಲಿಕನ ಕೋಪಕ್ಕೆ ಕಾರಣವಾಗಿದ್ದು, ಇಷ್ಟು ದೊಡ್ಡ ಮೊತ್ತ ಖರ್ಚು ಮಾಡಿ ಕಾರು ಖರೀದಿಸಿದಾಗ ಕನಿಷ್ಠ ಉತ್ತಮ ಸೇವೆಗೆ ಗ್ರಾಹಕ ಅರ್ಹನಾಗಿರುತ್ತಾರೆ ಎಂದಿದ್ದಾರೆ.

5 ಕೋಟಿ ಬೆಲೆಬಾಳುವ ಕಾರನ್ನು ಧ್ವಂಸ ಮಾಡಿದ ಮಸೆರಟಿ ಮಾಲಿಕ

ವೀಡಿಯೋ ವೀಕ್ಷಿಸಿ

Click it and Unblock the Notifications