ಒಬಾಮಾ ಜೊತೆ ಫುಟ್ಬಾಲ್ ಆಟಕ್ಕಿಳಿದ ರೊಬೊಟ್
ನೀವೆಲ್ಲರೂ ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ರೊಬೊಟ್' (ತಮಿಳಿನಲ್ಲಿ ಎಂದಿರನ್) ಚಿತ್ರವನ್ನು ನೋಡಿರಬಹುದು. ಇದರಲ್ಲಿ ನಾಯಕ ರಜನಿ ಕಷ್ಟಪಟ್ಟು ನಿರ್ಮಿಸಿದ ಯಾಂತ್ರಿಕ ಮಾನವ ಕೊನೆಗೆ ತಮ್ಮ ವಿರುದ್ಧವೇ ತಿರುಗಿ ಬೀಳುತ್ತದೆ. ಹೌದು, ವಿಜ್ಞಾನ ಲೋಕದಲ್ಲಿ ನೂತನ ತಂತ್ರಜ್ಞಾನಗಳ ಅವಿಷ್ಕಾರವಾದಂತೆ ಮುಂದೊಂದು ದಿನ ಮಾನವರನ್ನೇ ಮೀರಿಸುವಂತಹ ಶಕ್ತಿ ಯಾಂತ್ರಿಕ ಮಾನವ ಪಡೆದ್ದಲ್ಲಿ ಅಚ್ಚರಿಪಡಬೇಕಾಗಿಲ್ಲ. ಅದು ಮನುಕುಲದ ಸರ್ವನಾಶಕ್ಕೂ ಹೇತುವಾಗಲಿದೆ.
ಅದೇ ಏನೆ ಆಗಿರಲಿ. ಸದ್ಯ ಮಾನವ ತದ್ರೂಪ ಪಡೆದಿರುವ ರೊಬೊಟ್ ಯಂತ್ರಗಳ ಬಗ್ಗೆ ಉಲ್ಲೇಖಿಸಲು ವಿಷಯವಾದ ಕಾರಣವೊಂದಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆಯೇ ರೊಬೊ ತಂತ್ರಜ್ಞಾನದಲ್ಲಿ ಜಪಾನ್ ಮುಂದಿವರಿದ ದೇಶ. ಅಂದ ಹಾಗೆ ಜಗತ್ತಿನ ಅಗ್ರಗಣ್ಯ ವ್ಯಕ್ತಿಗಳಲ್ಲಿ ಓರ್ವರಾಗಿರುವ ಬರಾಕ್ ಒಮಾಬಾ ಇತ್ತೀಚೆಗಷ್ಟೇ ಜಪಾನ್‌ಗೆ ಭೇಟಿ ಕೊಟ್ಟಿದ್ದರು. ಈ ಸಂದರ್ಭದಲ್ಲಿ ಹೋಂಡಾದ ಅಸಿಮೊ (ASIMO) ರೊಬೊಟ್ ಜತೆ ಫುಟ್ಬಾಲ್ ಆಡುವ ಸದಾವಕಾಶವನ್ನು ಪಡೆದಿದ್ದರು.

ಜಪಾನ್‌ನಲ್ಲಿ ಸ್ಥಿತಗೊಂಡಿರುವ ಹೋಂಡಾ ಪ್ರದಾನ ಕಚೇರಿಗೆ ಒಮಾಬಾ ಬರಮಾಡಿಕೊಂಡ ಅಸಿಮೊ ಇಂಗ್ಲಿಂಷ್‌ನಲ್ಲಿ ಸ್ವಾಗತ ಕೋರಿದ್ದರು. ಅದು ಹೀಗಿತ್ತು - 'ಮಿ. ಅಧ್ಯಕ್ಷರೇ, ನಾನು ಅಸಿಮೊ, ಮಾನವ ತದ್ರೂಪ ರೊಬೊಟ್, ನಿಮ್ಮನ್ನು ಭೇಟಿಯಾಗಿರುವುದರಲ್ಲಿ ಖುಷಿಯಿದೆ' ಎಂದಿತ್ತು.

ಬಳಿಕ ನೇರ ಒಳಾಂಗಣ ಪ್ರದೇಶದಲ್ಲಿ ಸಿದ್ಧಪಡಿಸಲಾಗಿದ್ದ ಫುಟ್ಬಾಲ್ ಅಂಗಣಕ್ಕಿಳಿದ ರೊಬೊಟ್, ಒಬಾಮಾ ಜತೆ ಕಾಲ್ಚೆಂಡಿನ ಆಟಕ್ಕಿಳಿದರು.

ಈ ಸಂದರ್ಭದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಕರಗತ ಮಾಡಿಕೊಂಡಿರುವ ರನ್ನಿಂಗ್, ಜಂಪಿಂಗ್ ಹಾಗೂ ಫುಟ್ಬಾಲ್ ಚೆಂಡನ್ನು ತುಳಿಯುವ ಮೂಲಕ ತನ್ನ ಕೌಶಲ್ಯವನ್ನು ಪ್ರದರ್ಶಿಸಿದರು.

ತನ್ನ ಭವಿಷ್ಯದ ಯೋಜನೆಯ ಬಗ್ಗೆ ವಿವರಿಸಿದ ಅಸಿಮೊ, ದೈನಂದಿನ ನಾನು ತರಬೇತಿ ಪಡೆದುಕೊಳ್ಳುತ್ತಿದ್ದು, ಮುಂದೊಂದು ದಿನ ಜನರಿಗೆ ತಮ್ಮ ಮನೆಗಳಲ್ಲಿ ನೆರವಾಗಲಿದ್ದೇನೆ ಎಂದಿದೆ.

ಅಷ್ಟಕ್ಕೂ ಹೋಂಡಾ ತಯಾರಿಸಿರುವ ರೊಬೊಟ್‌ಗಳಿಗೆ ಅಸಿಮೊ ಹೆಸರನ್ನಿಡಲು ವಿಶೇಷ ಕಾರಣವೊಂದಿದೆ. ಇದು 'ಅಡ್ವಾನ್ಸ್‌ಡ್ ಸ್ಟೆಪ್ ಇನ್ ಇನ್ನೋವೇಟಿವ್ ಮೊಬಿಲಿಟಿ' ಶಬ್ದದ ಸಂಕ್ಷಿಪ್ತ ರೂಪವಾಗಿದೆ. 2000ನೇ ಇಸವಿಯಲ್ಲಿ ಅಸಿಮೊ ಲಾಂಚ್ ಮಾಡಿದ್ದ ಹೋಂಡಾ 14 ವರ್ಷಗಳೆಡೆ ಹಲವಾರು ಬದಲಾವಣೆಗಳನ್ನು ತಂದಿವೆ.

ನಾಲ್ಕು ಅಡಿ, ಮೂರು ಇಂಚು ಎತ್ತರದ ಅಸಿಮೊ ರೊಬೊಟ್‌ಗಳು 48 ಕೆ.ಜಿ ಭಾರವನ್ನು ಹೊಂದಿದೆ. ಈಗಾಗಲೇ ಹಲವಾರು ರಾಷ್ಟ್ರಗಳಿಗೆ ಭೇಟಿ ಕೊಟ್ಟಿರುವ ರೊಬೊಟ್, ಅಲ್ಲಿನ ಜನರೊಂದಿಗೆ ಸ್ಥಳೀಯ ಭಾಷೆಯಲ್ಲೇ ಬೆರೆತುಕೊಳ್ಳುವ ಪ್ರಯತ್ನ ಮಾಡಿದೆ.

ಹೋಂಡಾ ಅಸಿಮೊ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿರುವಂತೆಯೇ, ವಿಶ್ವದ ಅತ್ಯಂತ ಮುಂದುವರಿದ ಮಾನವ ತದ್ರೂಪ ರೊಬೊಟ್‌ಗಳಲ್ಲಿ ಒಂದಾಗಿರುವ ಅಸಿಮೊ, ಸಮತಲ ಪ್ರದೇಶ ಹಾಗೂ ಇಳಿಜಾರಿನಲ್ಲೂ ಓಡಾಡುವ ಸಾಮರ್ಥ್ಯ ಹೊಂದಿದೆ. ಇದು, ಮೆಟ್ಟಿಲುಗಳನ್ನು ಹತ್ತುವುದಲ್ಲದೆ ವಸ್ತುಗಳನ್ನು ಗ್ರಹಿಸುವ ಶಕ್ತಿ ಹೊಂದಿದೆ.


Click it and Unblock the Notifications