ಹ್ಹಾಂ..! ಸ್ವಯಂಚಾಲಿತ ಕಾರುಗಳಿಂದ ಮದ್ಯಪಾನಕ್ಕೆ ಉತ್ತೇಜನ
ಅಮೆರಿಕದ ಬಹುರಾಷ್ಟ್ರೀಯ ಹಣಕಾಸು ಸೇವೆಗಳ ನಿಗಮ ಮಾರ್ಗನ್ ಸ್ಟಾನ್ಲಿ ಬಿಡುಗಡೆ ಮಾಡಿರುವ ತಾಜಾ ಅಧ್ಯಯನ ವರದಿಗಳ ಪ್ರಕಾರ, ಸ್ವಯಂಚಾಲಿತ ಕಾರುಗಳ ಆಗಮನದೊಂದಿಗೆ ಅಲ್ಕೋಹಾಲ್ ಕ್ಷೇತ್ರಕ್ಕೆ ಭಾರಿ ಉತ್ತೇಜನ ಸಿಗಲಿದೆ.
ಆ್ಯಡಮ್ ಜೋನಸ್ ಮತ್ತವರ ತಂಡ ಮಾಡಿರುವ ಸಂಶೋಧನಾ ವರದಿಗಳ ಪ್ರಕಾರ ಸ್ವಯಂಚಾಲಿತ ವಾಹನಗಳ ಎಂಟ್ರಿಯೊಂದಿಗೆ ಮದ್ಯಸಾರ ವ್ಯಾಪಾರಕ್ಕೆ 100 ಬಿಲಿಯನ್ ಅಮೆರಿಕನ್ ಡಾಲರ್ ಗಳಷ್ಟು ಉತ್ತೇಜನ ಸಿಗುವ ಸಂಭವವಿದೆ ಎಂದು ಭವಿಷ್ಯ ನುಡಿದಿದೆ.

ವಾಹನ ಕ್ಷೇತ್ರದ ಕ್ರಾಂತಿಕಾರಿ ಬದಲಾವಣೆಯೆಂದೇ ಬಿಂಬಿಸಲಾಗುತ್ತಿರುವ ಬಹುನಿರೀಕ್ಷಿತ ಸೆಲ್ಪ್ ಡ್ರೈವ್ ವೆಹಿಕಲ್ ತಂತ್ರಜ್ಞಾನವು 2025ರ ವೇಳೆಗೆ ನನಸಾಗಲಿದೆ. ಹಾಗಾಗಿ ಎಲ್ಲವನ್ನು ಈಗಿನಿಂದಲೇಅಂದಾಜಿಸುವುದು ಕಷ್ಟಕರವೆನಿಸಿದೆ.

ಜಾಗತಿಕವಾಗಿ ನಡೆಸಿರುವ ಭವಿಷ್ಯ ನುಡಿಯಲ್ಲಿ ಮಾರ್ಗನ್ ಸ್ಟಾನ್ಲಿ ಇಂತಹದೊಂದು ಗಮನಾರ್ಹ ಅಂಶಗಳನ್ನು ಹೊರಹಾಕಿದೆ. ಆದರೆ ಸಂಸ್ಥೆಯೇ ಹೇಳುವ ಪ್ರಕಾರ ಇವೆಲ್ಲವೂ ನಿಜವಾಗಬೇಕಾದ್ದಲ್ಲಿ ಆಯಾ ದೇಶಗಳ ಆಡಳಿತ ವರ್ಗದ ಒಪ್ಪಿಗೆ ಬೇಕಾಗುತ್ತದೆ.

ಸದ್ಯ ಬಹುತೇಕ ರಾಷ್ಟ್ರಗಳಲ್ಲಿ ಡ್ರಿಂಕ್ ಆಂಡ್ ಡ್ರೈವ್ ಶಿಕ್ಷಾರ್ಹವೆನಿಸಿದೆ. ಹಾಗೊಂದು ವೇಳೆ ಸ್ವಯಂಚಾಲಿತ ಕಾರುಗಳ ಆಗಮನವಾದ್ದಲ್ಲಿ ಚಾಲಕರಿಗೆ ಗಾಡಿ ಚಾಲನೆ ಮಾಡುವ ತಲೆಬಿಸಿಯಿರುವುದಿಲ್ಲ. ಇದು ಅಲ್ಕೋಹಾಲ್ ಇಂಡಸ್ಟ್ರಿಯನ್ನು ಮತ್ತಷ್ಟು ಉತ್ತೇಜಿಸಲಿದೆ.

ಸೆಲ್ಪ್ ರೈಡಿಂಗ್ ಕಾರಿನ ಎಂಟ್ರಿಯೊಂದಿಗೆ ನಗರಗಳಲ್ಲಿ ಪ್ರಯಾಣಿಕರ ನಡುವೆ ಚಾಲನೆ ಹಂಚಿಕೊಳ್ಳುವ ಪ್ರವೃತ್ತಿಯು ಹೆಚ್ಚಾಗಿ ಕಂಡುಬರಲಿದೆ. ಇದು ಮದ್ಯಪಾನವನ್ನು ಹೆಚ್ಚುಚ್ಚು ಆಕರ್ಷಿಸಲಿದೆ ಎಂಬುದನ್ನು ಸಂಸ್ಥೆಯು ವಿವರಿಸುತ್ತದೆ.

2025ರ ವೇಳೆಯಾಗುವಾಗ ಜಾಗತಿಕ ವಾಹನ ಕ್ಷೇತ್ರದಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರಲಿದೆ. ಒಟ್ಟಿನಲ್ಲಿ ಡ್ರೈವರ್ ಲೆಸ್ ಕಾರುಗಳ ಎಂಟ್ರಿಯಿಂದಾಗಿ ಮದ್ಯಸಾರ ಮಾರುಕಟ್ಟೆಯಲ್ಲಿ ಭಾರಿ ವ್ಯಾಪಾರವಾಗಲಿದೆ.

ಕೊನೆಯ ಮಾತು...
ಅಧ್ಯಯನ ವರದಿಗಳು ಏನೇ ಸೂಚಿಸಲಿ. ಆದರೆ ನೀವು ಯಾವತ್ತೂ ಡ್ರಿಂಕ್ ಆ್ಯಂಡ್ ಡ್ರೈವ್ ಕಸರತ್ತಿಗೆ ಮಾತ್ರ ಹೋಗಬೇಡಿರಿ ಎಂಬುದೇ ಡ್ರೈವ್ ಸ್ಪಾರ್ಕ್ ಆಶಯವಾಗಿದೆ.


Click it and Unblock the Notifications








