ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್ ಇರುವುದಿಲ್ಲ! ಫಾಸ್ಟ್‌ಟ್ಯಾಗ್ ಕೂಡ ಬೇಡ!

ದೇಶಾದ್ಯಂತ ಟೋಲ್ ಬೂತ್‌ಗಳನ್ನು ತೆಗೆದುಹಾಕುವುದರ ಜೊತೆಗೆ ಫಾಸ್ಟ್‌ಟ್ಯಾಗ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯ ಬದಲು ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್ (GNSS) ಅನ್ನು ಪರಿಚಯಿಸಲು NHAI ಸಜ್ಜಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶೀಘ್ರದಲ್ಲೇ ಸ್ಯಾಟಿಲೈಟ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆಯ ಪ್ರಾಯೋಗಿಕ ಅಧ್ಯಯನ ಪ್ರಾರಂಭವಾಗಲಿದೆ. ವಾಹನವು ಹೆದ್ದಾರಿಯನ್ನು ಪ್ರವೇಶಿಸಿದ ನಂತರ, ವಾಹನದಲ್ಲಿ ಅಳವಡಿಸಲಾದ ಜಿಪಿಎಸ್ ಮೂಲಕ ಸಾಫ್ಟ್ವೇರ್ ಅದರ ಪ್ರವೇಶವನ್ನು ಕಂಡುಹಿಡಿದು ಹೆದ್ದಾರಿಯಿಂದ ನಿರ್ಗಮಿಸಿದ ನಂತರ, ಪ್ರವೇಶ ಮತ್ತು ನಿರ್ಗಮನದ ದೂರವನ್ನು ಲೆಕ್ಕಹಾಕಿ ಟೋಲ್ ಕಡಿತಗೊಳ್ಳುತ್ತದೆ ಎಂದು 'ದಿ ನ್ಯೂ ಇಂಡಿಯನ್ ಎಕ್ಸ್‌ಪ್ರಸ್‌'ನಲ್ಲಿ ವರದಿಯಾಗಿದೆ.

ಭಾರತದಲ್ಲಿ 'ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್' ಪ್ರಾಯೋಗಿಕ ಅಧ್ಯಯನಕ್ಕಾಗಿ ಆಯ್ಕೆ ಮಾಡಲಾದ ಎರಡು ಹೆದ್ದಾರಿಗಳಲ್ಲಿ, ಕರ್ನಾಟಕದ ಬೆಂಗಳೂರು-ಮೈಸೂರು ಹೆದ್ದಾರಿಯೂ ಒಂದಾಗಿದೆ. ಆಗಸ್ಟ್‌ ತಿಂಗಳಲ್ಲಿ ಪ್ರಯೋಗಗಳಿಗೆ ಸಿದ್ಧತೆಗಳು ನಡೆಯುತ್ತಿವೆ. NHAI ಉತ್ತೇಜಿಸುವ ಇಂಡಿಯನ್ ಹೈವೇಸ್ ಮ್ಯಾನೇಜ್ಮೆಂಟ್ ಕಂಪನಿ ಲಿಮಿಟೆಡ್ (IHMCL), ಜಿಎನ್ಎಸ್ಎಸ್ ಅನ್ನು ಪರಿಶೀಲಿಸುತ್ತಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

bangalore-mysore-highway-gnss-pilot-study-from-august

ಹೇಗೆ ಕಾರ್ಯನಿರ್ವಹಿಸುತ್ತದೆ?: ಹೆದ್ದಾರಿಯಲ್ಲಿ ಜಿಯೋ-ಫೆನ್ಸಿಂಗ್ ಮಾಡಲಾಗುವುದು. ವಾಹನವು ಹೆದ್ದಾರಿಯನ್ನು ಪ್ರವೇಶಿಸಿದ ನಂತರ, ವಾಹನದಲ್ಲಿ ಅಳವಡಿಸಲಾದ GPS ಸಾಧನದ ಮೂಲಕ ಸಾಫ್ಟ್ವೇರ್ ಅದರ ಪ್ರವೇಶವನ್ನು ಕಂಡುಹಿಡಿಯುತ್ತದೆ. ವಾಹನವು ಹೆದ್ದಾರಿಯಿಂದ ನಿರ್ಗಮಿಸಿದ ನಂತರ, ಪ್ರವೇಶ ಮತ್ತು ನಿರ್ಗಮನದಿಂದ ಪ್ರಯಾಣಿಸಿದ ದೂರವನ್ನು ಲೆಕ್ಕಹಾಕಿ ಟೋಲ್ ಅನ್ನು ಕಡಿತಗೊಳಿಸುತ್ತದೆ.

GNSS ಟೋಲ್ ಸಂಗ್ರಹಣೆಗಾಗಿ, ವಾಹನಗಳಿಗೆ GPS ಅಳವಡಿಕೆ ಕಡ್ಡಾಯವಾಗಲಿದೆ. ಪ್ರಸ್ತುತ ಸವಾಲೆಂದರೆ ಹೊಸ ವಾಹನಗಳನ್ನು GPS-ಟ್ರ್ಯಾಕಿಂಗ್ ಸಾಧನಗಳೊಂದಿಗೆ ನಿರ್ಮಿಸಲಾಗುತ್ತಿದೆ. ಆದ್ರೆ ಹಳೆಯ ವಾಹನಗಳು ಇವನ್ನು ಸ್ಥಾಪಿಸಬೇಕಿದೆ. ಇದು ಅಂದುಕೊಂಡಷ್ಟು ವೇಗವಾಗಿ ಎಲ್ಲಾ ವಾಹನಗಳಲ್ಲಿ ಸ್ಥಾಸಲಾಗುವುದಿಲ್ಲ. ಹಾಗಾಗಿ ಅಸ್ತಿತ್ವದಲ್ಲಿರುವ ಫಾಸ್ಟ್‌ಟ್ಯಾಗ್ ಆಧಾರಿತ ಟೋಲ್ ಸಂಗ್ರಹವು ಮುಂದುವರಿಯುತ್ತದೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

bangalore-mysore-highway-gnss-pilot-study-from-august

ಪೂರ್ಣ ಪ್ರಮಾಣದ ಜಾರಿಯ ನಂತರವೂ, ಜನರು GNSS ಟೋಲ್ ಸಂಗ್ರಹಣೆಗೆ ಸ್ಥಳಾಂತರಗೊಳ್ಳುವವರೆಗೆ ಟೋಲ್ ಬೂತ್‌ಗಳು ಇರುತ್ತವೆ. ಬೆಂಗಳೂರು-ಮೈಸೂರು ಹೆದ್ದಾರಿಯ ನಿರ್ದಿಷ್ಟ ಭಾಗದಲ್ಲಿ ಮಾತ್ರ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗುವುದು, ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್ ಆಧಾರಿತ ಟೋಲ್ ಸಂಗ್ರಹವು ಮುಂದುವರಿಯುತ್ತದೆ ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಇತರ ಆಯ್ಕೆಯಗಳ ಅನ್ವೇಷಣೆ: ಮತ್ತೊಂದೆಡೆ NHAI ನಂಬರ್ ಪ್ಲೇಟ್‌ಗಳ ಮೂಲಕ ಟೋಲ್ ಸಂಗ್ರಹಿಸುವ ಇತರ ಆಯ್ಕೆಗಳನ್ನು ಅನ್ವೇಷಿಸುತ್ತಿದೆ. ಇದರ ಅಡಿಯಲ್ಲಿ, ವಾಹನಗಳು ಜಿಪಿಎಸ್ ಸಾಧನವನ್ನು ಹೊಂದಿರಬೇಕಾಗಿಲ್ಲ. ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಬಳಸಿಕೊಂಡು ಪ್ರವೇಶ ಮತ್ತು ನಿರ್ಗಮನ ದೂರವನ್ನು ಟೋಲ್ ಬೂತ್‌ಗಳಿಲ್ಲದೆ ಹಣ ಕಡಿತಗೊಳ್ಳುವ ತಂತ್ರಜ್ಞಾನದ ಅನ್ವೇಶಣೆಯಲ್ಲಿ ನಿರತವಾಗಿದೆ.

bangalore-mysore-highway-gnss-pilot-study-from-august

ಈ ತಂತ್ರಜ್ಞಾನವು ಅಸ್ತಿತ್ವದಲ್ಲಿರುವ ವ್ಯವಸ್ಥೆಗಿಂತ ಭಿನ್ನವಾಗಿ, ವಾಹನಗಳಿಗೆ ಪ್ರಯಾಣಿಸಿದ ನಿಖರವಾದ ದೂರಕ್ಕೆ ಟೋಲ್ ವಿಧಿಸಲಾಗುತ್ತದೆ. ಅವುಗಳು ರಸ್ತೆಯನ್ನು ಸಂಪೂರ್ಣವಾಗಿ ಬಳಸದಿದ್ದರೂ, GNSS ವ್ಯವಸ್ಥೆಯನ್ನು ಬಳಸಿಕೊಂಡು ನಿಖರವಾಗಿ ಪ್ರಯಾಣಿಸುವ ದೂರವನ್ನು ಲೆಕ್ಕಾಚಾರ ಮಾಡಿ ಅದಕ್ಕೆ ಅನುಗುಣವಾಗಿ ಟೋಲ್ ಅನ್ನು ಕಡಿತಗೊಳಿಸುತ್ತದೆ.

ಒಟ್ಟಾರೆ ಈ ಎರಡೂ ಟೋಲ್ ಆಯ್ಕೆಗಳಲ್ಲಿ ಯಾವುದು ಬಂದರೂ ಟೋಲ್‌ಗಳ ಬಳಿ ಪ್ರಯಾಣಿಕರು ಸರತಿ ಸಾಲಿನಲ್ಲಿ ಕಾಯುವ ಸಮಸ್ಯೆ ತಪ್ಪುತ್ತದೆ. ಅಲ್ಲದೇ ಈ ರೀತಿಯ ಟೋಲ್ ಸಂಗ್ರಹಣೆಯು ಪ್ರಯಾಣಿಕರಿಗೆ ಗೊಂದಗಳಿಲ್ಲದೇ ಪ್ರಯಾಣಿಸಿದ ದೂರಕ್ಕೆ ಮಾತ್ರ ಹಣ ಕಡಿತಗೊಳ್ಳುವುದರಿಂದ ಯಾವುದೇ ತಕರಾರು ಇರುವುದಿಲ್ಲ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ.

More from DriveSpark

Article Published On: Tuesday, July 30, 2024, 12:04 [IST]
English summary
Bangalore mysore highway gnss pilot study from august
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+