ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ನೀವೂ ಸಹ ಕೈಜೋಡಿಸಬಹುದು..!
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಇತ್ತೀಚಿಗೆ ಟ್ವಿಟರ್‍ನಲ್ಲಿ ಟ್ವೀಟ್ ಮಾಡಿ, ಸದ್ಯಕ್ಕೆ 390ರಷ್ಟು ಇರುವ ಟ್ರಾಫಿಕ್ ವಾರ್ಡನ್‍ಗಳ ಸಂಖ್ಯೆಯನ್ನು 2,500ಗಳಿಗೆ ಹೆಚ್ಚಿಸುವುದಾಗಿ ತಿಳಿಸಿದ್ದರು. ಆಸಕ್ತಿ ಹೊಂದಿರುವವರು ಹತ್ತಿರದಲ್ಲಿರುವ ಸಂಚಾರಿ ಟ್ರಾಫಿಕ್ ಠಾಣೆಗಳನ್ನು ಸಂಪರ್ಕಿಸಬೇಕೆಂದು ಆ ಟ್ವೀಟ್‍ನಲ್ಲಿ ಹೇಳಿದ್ದರು.

2019ರ ಜುಲೈ ತಿಂಗಳಿನ ಅಂಕಿ ಅಂಶದ ಪ್ರಕಾರ ಬೆಂಗಳೂರು ನಗರದಲ್ಲಿ 82 ಲಕ್ಷಕ್ಕೂ ಹೆಚ್ಚು ವಾಹನಗಳಿವೆ. ಆದರೆ ಬೆಂಗಳೂರು ನಗರದಲ್ಲಿರುವ ಟ್ರಾಫಿಕ್ ಪೊಲೀಸರ ಸಂಖ್ಯೆ 4718 ಮಾತ್ರ. ಟ್ರಾಫಿಕ್ ವಾರ್ಡನ್ ಎಂಬುದು ಬೆಂಗಳೂರಿಗೆ ಹೊಸದಲ್ಲವಾದರೂ, ಪೊಲೀಸರು ಸದ್ಯಕ್ಕೆ ಇರುವ ಟ್ರಾಫಿಕ್ ವಾರ್ಡನ್‍ಗಳ ಸಂಖ್ಯೆಯನ್ನು ಹೆಚ್ಚಿಸಲು ಬಯಸಿದ್ದಾರೆ.

ಬೆಂಗಳೂರು ನಗರ ಪೊಲೀಸ್ ಟ್ರಾಫಿಕ್ ವಾರ್ಡನ್ ಆರ್ಗನೈಜೆಷನ್ (ಬಿಸಿಪಿ ಟಿಡಬ್ಲ್ಯುಒ) ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಸೇರುವ ಮೂಲಕ ಸಾರ್ವಜನಿಕರು ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯನ್ನು ನಿಯಂತ್ರಿಸಲು ಸಂಚಾರಿ ಪೊಲೀಸರಿಗೆ ನೆರವು ನೀಡಬಹುದಾಗಿದೆ.

ಟ್ರಾಫಿಕ್ ವಾರ್ಡನ್‍ಗಳ ಕೆಲಸವೆಂದರೆ:
ರಸ್ತೆಯಲ್ಲಿ ಚಲಿಸುವ ಸಾರ್ವಜನಿಕರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಸ್ತೆ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವುದು.
ತಮ್ಮ ಅನುಕೂಲಕ್ಕೆ ತಕ್ಕಂತೆ ಪ್ರತಿ ವಾರ 4ರಿಂದ 5 ಗಂಟೆಗಳ ಕಾಲ ಟ್ರಾಫಿಕ್ ನಿಯಂತ್ರಿಸುವುದು.
ಗಣ್ಯ ವ್ಯಕ್ತಿಗಳ ಭೇಟಿಯ ಸಂದರ್ಭದಲ್ಲಿ, ಚುನಾವಣಾ ಸಮಯದಲ್ಲಿ, ಹಬ್ಬ ಹಾಗೂ ಬಂದ್ ವೇಳೆ ವಿಶೇಷ ಕರ್ತವ್ಯ ನಿರ್ವಹಿಸುವುದು.
ಪ್ರತಿ ತಿಂಗಳು ಪೆರೇಡ್‍ನಲ್ಲಿ ಪಾಲ್ಗೊಳ್ಳುವುದು.

ಮುಖ್ಯ ಟ್ರಾಫಿಕ್ ವಾರ್ಡನ್‍ರವರಾದ ಮೋಹನನ್ ನಂಬಿಯಾರ್‍ರವರು ಮಾತನಾಡಿ, ಬೆಂಗಳೂರಿನಲ್ಲಿ ಹೆಚ್ಚು ಸಂಖ್ಯೆಯ ಅಕ್ಷರಸ್ಥರಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ.

ಈ ಅಭಿಯಾನದ ಮೂಲಕ ನಾವು ಸಾರ್ವಜನಿಕರಿಗೆ ಟ್ರಾಫಿಕ್ ಸಮಸ್ಯೆಯು ನಮ್ಮಿಂದಲೇ ಆಗುತ್ತಿದ್ದು, ಬೇರೆಯವರನ್ನು ಇದಕ್ಕೆ ದೂಷಿಸುವಂತಿಲ್ಲವೆಂದು ಅರಿವು ಮೂಡಿಸಲಿದ್ದೇವೆ ಎಂದು ಹೇಳಿದರು.ಇದು ಸ್ವಯಂ ಪ್ರೇರಿತವಾಗಿದ್ದು, ನಾವೇ ನಮಗೆ ಬೇಕಾದ ಯೂನಿಫಾರಂ ಕೊಳ್ಳಲಿದ್ದೇವೆ.

ಈ ಸೇವೆಯಲ್ಲಿ ಜನರು ತಮ್ಮ ಸಮಯವನ್ನು ಒಳ್ಳೆಯ ಕಾರ್ಯಕ್ಕಾಗಿ ಮೀಸಲಿಡಲಿದ್ದಾರೆ. ಅವರು ಸಾರ್ವಜನಿಕರಿಗೆ ಸಹಾಯ ಮಾಡುವ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು ನಂಬಿಯಾರ್‍ರವರು ಹೇಳಿದರು. ಈ ಸೇವೆಯ ಬಗ್ಗೆ ಜಾಗೃತಿ ಮೂಡಿಸುತ್ತಿರುವ ನಗರ ಪೊಲೀಸ್ ಆಯುಕ್ತರನ್ನು ಶ್ಲಾಘಿಸಿದರು.

ಟ್ರಾಫಿಕ್ ವಾರ್ಡನ್‍ರವರಾದ ಮಂಜು ಮೆಹ್ರಾರವರು ಮಾತನಾಡಿ, ನಾನು ನಮ್ಮ ಸುತ್ತ ಮುತ್ತಲಿರುವ ಸ್ಥಳದಲ್ಲಿ ಟ್ರಾಫಿಕ್ ನಿಯಂತ್ರಿಸಲು ಪ್ರಮುಖ ಪಾತ್ರ ವಹಿಸುತ್ತಿದ್ದೇನೆ. ಇಲ್ಲಿ ಸಾಕಷ್ಟು ವಿಷಯಗಳನ್ನು ಕಲಿತು ಕೊಳ್ಳಬಹುದು.

ಇದರಿಂದಾಗಿ ಹಲವಾರು ಜನರಿಗೆ ಸಹಾಯ ಮಾಡುವ ಅವಕಾಶವು ನನಗೆ ದೊರೆತಿದೆ. ಬೇರೆಯವರಿಗೆ ಸಹಾಯ ಮಾಡುವ ನಂತರ ಸಿಗುವ ಸಂತೋಷವನ್ನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು. ಮಂಜುರವರು ಕಳೆದ ಐದು ವರ್ಷಗಳಿಂದ ಈ ಕೆಲಸವನ್ನು ಮಾಡುತ್ತಿದ್ದಾರೆ.

ಅವರ ಮಗಳು ಶಾಲೆಗೆ ಹೋದ ನಂತರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೂ ಈ ಕೆಲಸವನ್ನು ಮಾಡುತ್ತಾರೆ. ಮಂಜುರವರಂತಹ ಅನೇಕ ಜನರು ಈ ತಂಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಟ್ರಾಫಿಕ್ ನಿಯಂತ್ರಿಸಲು ಸಂಚಾರಿ ಪೊಲೀಸರೊಂದಿಗೆ ಕೈ ಜೋಡಿಸಿದ್ದಾರೆ.

ಟ್ರಾಫಿಕ್ ವಾರ್ಡನ್‍ಗಳನ್ನು ಕೆಲವು ಏರಿಯಾಗಳಿಗೆ ನಿಯೋಜಿಸಲಾಗುತ್ತದೆ. ಬೆಂಗಳೂರು ಸಂಚಾರಿ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾದ ಸಾರಾ ಫಾರಾರವರು ಮಾತನಾಡಿ, ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸಲು ಬಯಸುವವರು ಬಂದು ಈ ಅಭಿಯಾನದ ಭಾಗವಾಗ ಬಹುದು.

ಟ್ರಾಫಿಕ್ ಸಮಸ್ಯೆಯನ್ನು ಬಯ್ಯುತ್ತಾ ಕೂರುವವರು ಸಹ ಬಂದು ಈ ಅಭಿಯಾನದಲ್ಲಿ ಭಾಗವಹಿಸಿ ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದೆಂಬುದನ್ನು ಕಾಣಬಹುದು ಎಂದು ಹೇಳಿದರು.ಪೊಲೀಸ್ ಆಯುಕ್ತರ ಟ್ವೀಟ್ ನಂತರ ಬಂದಿರುವ ಸಾರ್ವಜನಿಕರ ಪ್ರತಿಕ್ರಿಯೆ ಬಗ್ಗೆ ಮಾತನಾಡಿದ ಸಾರಾರವರು ಜನರು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೋರುತ್ತಿದ್ದು, ನೋಂದಾಯಿಸಿ ಕೊಳ್ಳಲು ಬಯಸುತ್ತಿದ್ದಾರೆ. ಎಲ್ಲಾ ರೀತಿಯ ಒಪ್ಪಿಗೆಯು ಸಿಕ್ಕ ನಂತರ ಜನರನ್ನು ನೇಮಿಸಿಕೊಳ್ಳಲಾಗುವುದು ಎಂದು ತಿಳಿಸಿದರು.


Click it and Unblock the Notifications








