1 ಕೋಟಿ ರೂ. ಕಾರಿಗೆ ಇದೆಂಥಾ ದುಸ್ಥಿತಿ: ಊಹಿಸಿದ ಶಾಕ್ ಕೊಟ್ಟ ಬೆಂಗಳೂರು ಪೊಲೀಸರು
ಬಡ, ಮಧ್ಯಮ ವರ್ಗದವರು ತಮ್ಮ ವಾಹನಗಳಲ್ಲಿ ಇಂಧನ ಇನ್ನೇನು ಖಾಲಿಯಾಗುವ ಮುನ್ನ ತುಂಬಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಇಂಧನ ಖಾಲಿಯಾಗಿ ವಾಹನಗಳು ರಸ್ತೆ ಮಧ್ಯೆ ನಿಂತ ಅನುಭವಗಳು ಅವರಿಗೆ ಸಾಮಾನ್ಯ ಸಂಗತಿಗಳಾಗಿರುತ್ತವೆ. ಆದ್ರೆ ಶ್ರೀಮಂತರ ವಿಷಯದಲ್ಲಿ ಹಾಗಲ್ಲಾ ತಮ್ಮ ದುಬಾರಿ ಕಾರುಗಳಲ್ಲಿ ನಿತ್ಯ ಇಂಧನ ಟ್ಯಾಂಕ್‌ನಲ್ಲಿ ಫುಲ್ ಆಗಿರುತ್ತದೆ. ಆದರೆ, ಒಮ್ಮೆ ಊಹಿಸಿಕೊಳ್ಳಿ ಒಂದು ವೇಳೆ ಇಂಧನವಿಲ್ಲದೇ ರಸ್ತೆಯಲ್ಲಿ ದುಬಾರಿ ಕಾರುಗಳು ನಿಂತರೇ ಮಾಲೀಕರು ಖಂಡಿತ ಮುಜಗರಕ್ಕೆ ಒಳಗಾಗುತ್ತಾರೆ. ಹೌದು ಅಂಥಹದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, 1 ಕೋಟಿ ರೂ. ಬಿಎಂಡಬ್ಲ್ಯು ಕಾರಿನ ಮಾಲೀಕ ಮುಜುಗರಕ್ಕೆ ಒಳಗಾಗಿದ್ದಾರೆ.
ಹೆಬ್ಬಾಳದ ಫ್ಲೈಓವರ್ ಮೇಲೆ ಬಿಎಂಡಬ್ಲ್ಯು ಕಾರಿನಲ್ಲಿ ಇಂಧನ ಖಾಲಿಯಾಗಿ ನಿಂತಿತ್ತು, ಸದಾ ಟ್ರಾಫಿಕ್‌ನಿಂದ ಕೂಡಿರುವ ಈ ಸೇತುವೆ ಮೇಲೆ ಸಂಚಾರಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ಮಾಲೀಕನಿಗೆ ಈಗ ದಂಡ ವಿಧಿಸಲಾಗಿದೆ. ಈ ಬಿಎಂಡಬ್ಲ್ಯು Z4ನ ಚಿತ್ರವನ್ನು ಇತ್ತೀಚೆಗೆ X (ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್‌ನಲ್ಲಿ, ಬಿಳಿ ಬಿಎಂಡಬ್ಲ್ಯು Z4 ಜನನಿಬಿಡ ರಸ್ತೆಯ ಬದಿಯಲ್ಲಿ ನಿಂತಿರುವುದನ್ನು ಕಾಣಬಹುದು.

"ಇಂಧನ ಖಾಲಿಯಾಗಿದೆ.... ಉದ್ದೇಶಪೂರ್ವಕ ಸಂಚಾರ ಅಡಚಣೆಗಾಗಿ ಬುಕ್ ಮಾಡಲಾಗಿದೆ @ ಹೆಬ್ಬಾಳ" ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ. ನಮ್ಮ ಪ್ರಕಾರ ಈ ನಿರ್ದಿಷ್ಟ ಸ್ಪೋರ್ಟ್ಸ್ ಕಾರು ಭಾರೀ ಟ್ರಾಫಿಕ್ ಇರುವ ರಸ್ತೆಯಲ್ಲಿ ಚಾಲನೆ ಮಾಡುತ್ತಿದ್ದಾಗ ಇಂಧನ ಖಾಲಿಯಾಗಿದ್ದು, ಕಾರು ಸ್ಥಗಿತಗೊಂಡ ಬಳಿಕ ದುಪ್ಪಟ್ಟು ಟ್ರಾಫಿಕ್ ಜಾಮ್‌ಗೆ ಕಾರಣವಾಗಿರಬೇಕು.
ಇದು ಕಾನೂನುಬದ್ಧವೇ?: ಕಾರಿನಲ್ಲಿ ಇಂಧನ ಖಾಲಿಯಾಗಿದ್ದಕ್ಕೆ ದಂಡ ವಿಧಿಸುವ ಕಾನೂನು ಇದೆಯೇ? ಐಪಿಸಿ ಸೆಕ್ಷನ್ 283ರ ಅಡಿಯಲ್ಲಿ ಇದನ್ನು ಎತ್ತಿ ತೋರಿಸಲಾಗಿದೆ. ಇದರಡಿ ಅಪಾಯ ಅಥವಾ ಸಾರ್ವಜನಿಕ ಮಾರ್ಗ ಅಥವಾ ಸಂಚಾರ ಮಾರ್ಗದಲ್ಲಿ ಅಡಚಣೆ ಅಡಿಯಲ್ಲಿ ಪ್ರಕರಣ ದಾಖಲಿಸಬಹುದು. ಹಾಗೆಯೇ ಪೊಲೀಸರು 500 ರೂ.ಗಳ ದಂಡವನ್ನು ಸಂಗ್ರಹಿಸುವ ಅಧಿಕಾರವನ್ನು ಹೊಂದಿದ್ದಾರೆ.
ಈ ನಿರ್ದಿಷ್ಟ ನಿಯಮವನ್ನು ಸಾಮಾನ್ಯವಾಗಿ ಎಲ್ಲೆಡೆ ಅನ್ವಯಿಸಲಾಗುವುದಿಲ್ಲ. ಇದು ಹೆಚ್ಚಿನ ಟ್ರಾಫಿಕ್ ದಟ್ಟಣೆಯನ್ನು ಹೊಂದಿರುವ ರಸ್ತೆಗಳಲ್ಲಿ ನಡೆಯಬಹುದು. ವಾಹನವನ್ನು ಹೆಚ್ಚಿನ ಟ್ರಾಫಿಕ್ ಜಾಮ್ ಇರುವ ರಸ್ತೆಗಳಿಗೆ ತರುವಾಗ ತಮ್ಮ ನಿರ್ಲಕ್ಷ್ಯತನದಿಂದ ಇತರರಿಗೆ ಅಡ್ಡಿಯಾಗದಂತೆ ಜಾಗರೂಕರಾಗಿರಬೇಕು ಎಂದು ಒತ್ತಿಹೇಳಲು ಪೊಲೀಸರು ಕೂಡ ಈ ಘಟನೆಯಲ್ಲಿ ದಂಡ ವಿಧಿಸಿದ್ದಾರೆ.
ದುಬಾರಿ ಕಾರಿದು: ಚಿತ್ರದಲ್ಲಿ ಕಂಡುಬರುವ ಕಾರಿನ ಬಗ್ಗೆ ಹೇಳುವುದಾದರೆ, ಬಿಎಂಡಬ್ಲ್ಯು ಝಡ್ 4 ಸ್ಪೋರ್ಟ್ಸ್ ಕಾರಾಗಿದ್ದು, ಇದರ ಬೆಲೆ 90 ಲಕ್ಷ ರೂ. ಎಕ್ಸ್ ಶೋರೂಂ. ಇದು ಹಿಂದಿನ ತಲೆಮಾರಿನ ಮಾದರಿಯಾಗಿದ್ದು, ದೇಶದಲ್ಲಿ ಬಹಳ ಜನಪ್ರಿಯತೆ ಪಡೆದಿದೆ. ಸದ್ಯ ಈ ಕಾರುಗಳು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ 20-40 ಲಕ್ಷ ರೂ.ಗೆ ಮಾರಾಟವಾಗುತ್ತಿವೆ.
ಈ ಬಿಎಂಡಬ್ಲ್ಯು ಝಡ್ 4 ಕಾರು, 3.0-ಲೀಟರ್ ಇನ್ ಲೈನ್-ಸಿಕ್ಸ್ ಎಂಜಿನ್ ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 306 ಬಿಹೆಚ್‌ಪಿ ಪವರ್ ಹಾಗೂ 400 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರು 100 ಕಿ.ಮೀ ವೇಗವನ್ನು ಕೇವಲ 5.1 ಸೆಕೆಂಡುಗಳಲ್ಲಿ ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








