ಈ ಪುಸ್ತಕದ ಬೆಲೆ ಒಂದು ಐಷಾರಾಮಿ ಬಂಗಲೆಗಿಂತಲೂ ದುಬಾರಿ..!
ಒಂದು ಪುಸ್ತಕದ ಬೆಲೆ ಎಷ್ಟಿರಬಹುದು? ನೀವು ಈ ಲೇಖವನನ್ನು ಓದಿದ ನಂತರ ನಿಮ್ಮ ಅಭಿಪ್ರಾಯವನ್ನು ಬದಲಿಸಿಕೊಳ್ಳುತ್ತೀರಿ. ತನ್ನ ಲಗ್ಷುರಿ ಕಾರುಗಳ ಉತ್ಪಾದನೆಗೆ ಹೆಸರುವಾಸಿಯಾದ ಬೆಂಟ್ಲಿ ಈಗ ದುಬಾರಿ ಬೆಲೆಯ ಪುಸ್ತಕವನ್ನು ಬಿಡುಗಡೆ ಮಾಡಿದೆ.

ಪ್ರಸಿದ್ಧ ಕಾರು ತಯಾರಕ ಕಂಪನಿ ಬೆಂಟ್ಲಿ, ತನ್ನ ಗ್ರಾಹಕರಿಗೆ ದುಬಾರಿ ಬೆಲೆಯ ಲಗ್ಷುರಿ ಕಾರುಗಳನ್ನು ಒದಗಿಸುವುದರ ಜೊತೆಗೆ ದುಬಾರಿ ಲೈಫ್‍ಸ್ಟೈಲ್ ಅನ್ನು ಸಹ ಒದಗಿಸಲು ತೀರ್ಮಾನಿಸಿದೆ. ಕಂಪನಿಯು ಹಲವು ಬ್ರಾಂಡೆಡ್ ಲೈಫ್ ಸ್ಟೈಲ್ ಉತ್ಪನ್ನಗಳನ್ನು ಒದಗಿಸಿ ತನ್ನದೇ ಆದ ಛಾಪನ್ನು ಒತ್ತಲು ತೀರ್ಮಾನಿಸಿದ್ದು, ಸೈಕಲ್‍ನಿಂದ ಗಾಲ್ಫ್ ವಸ್ತುಗಳ ವರೆಗೆ, ಬಟ್ಟೆಗಳಿಂದ ಇದೀಗ ಬುಕ್‍ಗಳವರೆಗೆ ಅನೇಕ ಉತ್ಪನ್ನಗಳನ್ನು ಒದಗಿಸುತ್ತಾ ಬಂದಿದೆ.

ಬೆಂಟ್ಲಿ ತನ್ನ ದುಬಾರಿ ಬೆಲೆಯ ಪುಸ್ತಕವನ್ನು ಬಿಡುಗಡೆ ಮಾಡಿ ಸುದ್ದಿ ಮಾಡುತ್ತಿದೆ. ಬಹುತೇಕ ಎಲ್ಲಾ ಪ್ರೀಮಿಯಂ ಕಾರು ತಯಾರಕ ಕಂಪನಿಗಳು ಕಾಫಿ ಟೇಬಲ್ ಬುಕ್‍ಗಳನ್ನು ತಮ್ಮ ಹೆಸರಿನಲ್ಲಿ ಬಿಡುಗಡೆ ಮಾಡುವುದು ಸಾಮಾನ್ಯ. ಆದರೆ ಬೆಂಟ್ಲಿ ಬಿಡುಗಡೆ ಮಾಡಿರುವಂತಹ ಪುಸ್ತಕವನ್ನು ಇದುವರೆಗೂ ಯಾರೂ ಬಿಡುಗಡೆ ಮಾಡಿಲ್ಲ. ಬೆಂಟ್ಲಿ ಈ ಪುಸ್ತಕವನ್ನು ಮೂರು ಆವೃತ್ತಿಗಳಲ್ಲಿ ಬಿಡುಗಡೆ ಮಾಡಿದೆ.

ಮೊದಲನೇಯದು 100 ಕ್ಯಾರೇಟ್ ಆವೃತ್ತಿಯಾಗಿದ್ದು, ಇದರ ಬೆಲೆ $2,56,000 (ರೂ.1.80 ಕೋಟಿ). ಈ ಪುಸ್ತಕದ ಟಾಪ್ ಕವರ್‍ಅನ್ನು 100 ಕ್ಯಾರಟ್ ವಜ್ರಗಳಿಂದ ತಯಾರಿಸಲಾಗಿದೆ. ಖರೀದಿಸುವ ಗ್ರಾಹಕನು ಬೆಂಟ್ಲಿ ಲೋಗೊವನ್ನು ಚಿನ್ನ ಅಥವಾ ಪ್ಲಾಟಿನಂನಲ್ಲಿ ಪಡೆಯಬಹುದಾಗಿದೆ. 100 ಕ್ಯಾರಟ್ ಎಡಿಷನ್‍ನ ಕೇವಲ 7 ಪುಸ್ತಕಗಳನ್ನು ಮುದ್ರಿಸಲಾಗಿದೆ.

ಎರಡನೇಯದು ಮುಲ್ಲಿನರ್ ಆವೃತ್ತಿಯಾಗಿದ್ದು, ಇದರ ಬೆಲೆ $ 16,022 (ರೂ.11.27 ಲಕ್ಷ). ಮೂರನೇಯದು ಸೆಂಟಿನರಿ ಆವೃತ್ತಿಯಾಗಿದ್ದು, $3,845 (ರೂ.2.70 ಲಕ್ಷ) ಬೆಲೆಯನ್ನು ಹೊಂದಿದೆ. ಮುಲ್ಲಿನರ್ ಮತ್ತು ಸೆಂಟಿನರಿ ಆವೃತ್ತಿಯ ತಲಾ 500 ಪುಸ್ತಕಗಳನ್ನು ಮುದ್ರಿಸಲಾಗಿದೆ. ಮೂರೂ ಆವೃತ್ತಿಯ ಪುಸ್ತಕಗಳಲ್ಲಿರುವ ವಿಷಯವು ಒಂದೇ ಆಗಿದ್ದು, ಈ ಪುಸ್ತಕಗಳು ಬೆಂಟ್ಲಿಯ ಇತಿಹಾಸದ ಬಗ್ಗೆ ತಿಳಿಸುತ್ತವೆ. ಬೆಂಟ್ಲಿ ಕಂಪನಿ ಶುರುವಾದ ಬಗ್ಗೆ ಹೇಳಲಾಗಿದೆ. ಈ ಪುಸ್ತಕದಲ್ಲಿ ಕೆಲವು ಅಪರೂಪದ ಚಿತ್ರಗಳಿದ್ದು, ಬೆಂಟ್ಲಿಯ ಮೋಟಾರ್‍ಸ್ಪೋರ್ಟ್ ಇತಿಹಾಸ ಮತ್ತು ಭವ್ಯ ಪರಂಪರೆಯ ಬಗ್ಗೆ ಹೇಳಲಾಗಿದೆ.

ಈ ಪುಸ್ತಕದಲ್ಲಿರುವ ಕೆಲವು ಪುಟಗಳನ್ನು ಬೆಂಟ್ಲಿಯ ಗ್ರಾಹಕರಿಗಾಗಿಯೇ ಮೀಸಲಿಡಲಾಗಿದೆ. ಮೊದಲ ಪುಟವು ಮುನ್ನುಡಿಯನ್ನು ಹೊಂದಿದ್ದು, ಅದನ್ನು ಶತಕೋಟಿ ಬಿಲಿಯನ್ ಡಾಲರ್ ಬೆಲೆಯ ಫ್ಯಾಷನ್ ಕಂಪನಿಯಾದ, ರಾಲ್ಫ್ ಲಾರೆನ್ ಕಾರ್ಪೋರೇಷನ್, ಸ್ಥಾಪಕರಾದ ರಾಲ್ಫ್ ಲಾರೆನ್‍ರವರು ಬರೆದಿದ್ದಾರೆ.
MOST READ: ತಂತ್ರಜ್ಞಾನ ದೋಷದಿಂದಲೇ ಟೆಸ್ಲಾ ಕಾರು ಚಾಲಕನ ದುರ್ಮರಣ

ಕೊನೆಯ ಪುಟವು 'ದಿ ಫ್ಯುಚರ್' ಎಂಬ ಲೇಖನವನ್ನು ಹೊಂದಿದೆ. ಈ ಲೇಖನವನ್ನು ಬೆಂಟ್ಲಿಯ ಸಿಇಒ ಆಡ್ರಿಯಾನ್ ಹಾಲ್‍ಮಾರ್ಕ್ ರವರು ಬರೆದಿದ್ದಾರೆ. ಈ ಪುಸ್ತಕದಲ್ಲಿ 800 ಕ್ಕೂ ಹೆಚ್ಚು ಪುಟಗಳಿದ್ದು, ಈ ಪುಸ್ತಕವನ್ನು ಖರೀದಿಸುವವರು ಈ ಪುಸ್ತಕದಲ್ಲಿ ತಮ್ಮ ಕಾರಿನ ಚಿತ್ರವನ್ನು ಪ್ರಕಟಿಸಬಹುದಾದ ಆಯ್ಕೆಯನ್ನು ನೀಡಲಾಗಿದೆ. ಈ ಪುಸ್ತಕದ ಲೆದರ್ ಬೈಂಡಿಂಗ್ ಅನ್ನು ಇಂಗ್ಲೆಂಡಿನ ಮಾಸ್ಟರ್ ಬೈಂಡರ್ ಕಂಪನಿ ನಿರ್ವಹಿಸಿದೆ. ಈ ಬೈಂಡಿಂಗ್‍ಗಾಗಿ ಬೆಂಟ್ಲಿಯ ಸೆಂಟಿನರಿ ಎಡಿಷನ್ ಕಾರಿನ ಸೀಟುಗಳ ತಯಾರಿಕೆಗೆ ಬಳಸಲಾಗಿದ್ದ ಲೆದರ್ ಅನ್ನೇ ಬಳಸಲಾಗಿದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಬೆಂಟ್ಲಿ ಕಂಪನಿಯು ದುಬಾರಿ ಬೆಲೆಯ ಐಷಾರಾಮಿ ಕಾರುಗಳ ತಯಾರಿಕೆಗೆ ಹೆಸರುವಾಸಿಯಾಗಿದೆ. ಆದರೆ ಈ ಬಾರಿ ದುಬಾರಿ ಬೆಲೆಯ ಪುಸ್ತಕವನ್ನು ತಯಾರಿಸಿರುವುದು ನಿಜಕ್ಕೂ ಆಶ್ಚರ್ಯಕರವಾಗಿದೆ. ದುಬಾರಿ ಬೆಲೆಯಾದರೂ ಈ ಪುಸ್ತಕವನ್ನು ಖರೀದಿಸುವ ಗ್ರಾಹಕರಿರುವುದು ನಿಜ. ಎಲ್ಲಾ ಮೂರು ಆವೃತ್ತಿಯ ಪುಸ್ತಕಗಳು ಮಾರಾಟವಾಗಿ ಓದುಗರ ಕಲೆಕ್ಷನ್‍ಗಳಲ್ಲಿ ಸೇರುವುದು ಖಚಿತ. ಮುಂದೆ ಆ ಪುಸ್ತಕಗಳ ಬೆಲೆಯು ಹೆಚ್ಚಾಗಲಿದೆ.


Click it and Unblock the Notifications








