ಬೆಂಗಳೂರಿನ ಯುವ ಉದ್ಯಮಿ ಜೊತೆ ಸುಶಾಂತ್ ಸಿಂಗ್ ಮಾಜಿ ಪ್ರೇಯಸಿ ಸುತ್ತಾಟ: ಇವರ ಬೈಕ್ ಬೆಲೆ ಗೊತ್ತಾ?

ಕಲರ್‌ಫುಲ್‌ ದುನಿಯಾ ಸಿನಿರಂಗದಲ್ಲಿ ಲವ್ ಅಫೇರ್ಸ್ ಎಂಬುದು ಸಾಮಾನ್ಯ ಸಂಗತಿ. ಅದರಲ್ಲೂ ಬಾಲಿವುಡ್‌ನಲ್ಲಿ ಈ ರೀತಿಯ ಸುದ್ದಿ ಅಗಾಗ ಕೇಳಿ ಬರುತ್ತಿರುತ್ತವೆ. ಚಿತ್ರರಂಗದಲ್ಲಿ ಅಫೇರ್‌, ಲವ್‌ ಮತ್ತು ಬರೇಕಪ್‌ಗಳು ಸರ್ವೇ ಸಾಮಾನ್ಯ. ಮದುವೆಯಾದ ಕೆಲವೇ ತಿಂಗಳುಗಳ ಬಳಿಕ ಮನಸ್ತಾಪದಿಂದಾಗಿ ಪತಿಯಿಂದ ದೂರವಾಗಿದ್ದ ಸ್ಟಾರ್‌ ಇಂದು ಹಲವರೊಂದಿಗೆ ಡೇಟ್‌ ಮಾಡುತ್ತಾ ಸುದ್ದಿಯಲ್ಲಿದ್ದಾರೆ. ಈ ನಡುವೆ ಬಾಲಿವುಡ್ ನಟಿ ಒಬ್ಬರು ಬೆಂಗಳೂರಿನ ಯುವ ಉದ್ಯಮಿ ಸುತ್ತಾಟದ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಈ ನಟಿ ಬೇರೆ ಯಾರು ಅಲ್ಲ 'ಸುಶಾಂತ್ ಸಿಂಗ್ ರಜಪೂತ್ ಮಾಜಿ ಪ್ರೇಯಸಿ ರಿಯಾ ಚಕ್ರವರ್ತಿ.

ಸುಶಾಂತ್ ನಿಧನಕ್ಕೆ ಕೆಲವು ದಿನಗಳ ಮುಂಚೆ ರಿಯಾ, ಸುಶಾಂತ್ ಜೊತೆ ಬ್ರೇಕ್ ಅಪ್ ಮಾಡಿಕೊಂಡು ತೆರಳಿದ್ದರು. ಇದೇ ಕಾರಣಕ್ಕೆ ರಿಯಾರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಯ್ತು. ರಿಯಾ ವಿರುದ್ಧ ಸುಶಾಂತ್ ಕುಟುಂಬಸ್ಥರು ದೂರು ನೀಡಿ ಬಂಧನವೂ ಆಯ್ತು. ಬಳಿಕ ಜಾಮೀನಿನ ಮೇಲೆ ಹೊರಬಂದರು. ಆದರೆ ರಿಯಾಗೆ ಸಿನಿಮಾಗಳಲ್ಲಿ ಅವಕಾಶ ಸಿಗುವುದು ಕಡಿಮೆ ಆಗಿದೆ. ಸುಶಾಂತ್ ನಿಧನಕ್ಕೂ ಮುನ್ನ ನಟಿಸಿದ್ದ 'ಚೆಹರೆ' ಸಿನಿಮಾ 2021 ರಲ್ಲಿ ಬಿಡುಗಡೆಯಾಗಿ ಸಣ್ಣ ಯಶಸ್ಸನ್ನಷ್ಟೆ ಕಂಡಿತು.

ಇದರ ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಇದಕ್ಕೆ ಕಾರಣ ಅವಕಾಶವೂ ಸಿಗಲಿಲ್ಲ ಎನ್ನಲಾಗುತ್ತಿದೆ. ಇದಕ್ಕೆಲ್ಲ ಕುಗ್ಗದ ನಟಿ ರಿಯಾ ಚಕ್ರವರ್ತಿ (Rhea Chakraborty) ತಮ್ಮದೇ ಹೆಸರಿನಲ್ಲಿ ಯೂಟ್ಯೂಬ್ ಚಾನೆಲ್ ಒಂದನ್ನು ತೆರೆದು ಚಾಪ್ಟರ್ 2' ಹೆಸರಿನಲ್ಲಿ ಪಾಡ್​ಕಾಸ್ಟ್ ಸರಣಿ ಆರಂಭಿಸಿದ್ದಾರೆ. ತಮ್ಮ ಪಾಡ್​ಕಾಸ್ಟ್​ಗೆ ಮೊದಲ ಅತಿಥಿಯಾಗಿ ಸುಷ್ಮಿತಾ ಸೇನ್ ಅವರನ್ನು ಆಹ್ವಾನಿಸಿದ್ದು, ಅವರೊಟ್ಟಿಗೆ ಹಲವು ವಿಷಯ ಚರ್ಚಿಸದ್ದರು.

ರಿಯಾ ಈಗ ಬೆಂಗಳೂರಿನ ಯುವ ಉದ್ಯಮಿ ನಿಖಿಲ್ ಕಾಮತ್ (Nikhil Kamath) ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ಸುದ್ದಿ ಹರಡುತ್ತಿದೆ. ನಿಖಿಲ್ ಕಾಮತ್ ಜೊತೆ ರಿಯಾ ಚಕ್ರವರ್ತಿ ಮುಂಬೈನ ಬಾಂದ್ರಾದ ಬೀದಿಗಳಲ್ಲಿ ಜಾಲಿ ರೈಡ್ ಮಾಡಿರುವ ಫೋಟೋಗಳು ವೈರಲ್ ಆಗುತ್ತಿವೆ. ಇನ್ನೂ ನಿಖಿಲ್ ಕಾಮತ್ ಮತ್ತು ರಿಯಾ ತಮ್ಮ ಗುರುತು ಮರೆಮಾಚಲು ಮಾಸ್ಕ್ ಧರಿಸಿದ್ದಾರೆ. ಆದರೂ ಪಾಪರಾಜಿಗಳು ಗುರುತು ಹಿಡಿದು ಹಿಂದೆ ಹೋಗಿ ವೀಡಿಯೊ ಮಾಡಿದ್ದಾರೆ.

18 ಲಕ್ಷ ರೂಪಾಯಿ ಬೆಲೆ ಬಾಳುವ 'ಸುಜುಕಿಯ ಬುಲೆವರ್ಡ್ ಎಂ 109ಆರ್' ಬೈಕ್‌ ಮೇಲೆ ಈ ಜೋಡಿಗಳು ಜಾಲಿ ರೈಡ್ ಹೋಗುವಾಗ ಪಾಪರಾಜಿಗಳುಸ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಈ ಇಬ್ಬರು ಜೋಡಿಗಳು ಕಾಣಿಸಿಕೊಂಡ ಸುಜುಕಿ ಇನ್ಟ್ರುಡರ್ ಅನ್ನು ಝೆರೋಧಾ ಸಹ-ಸಂಸ್ಥಾಪಕ, ನಿಖಿಲ್ ಕಾಮತ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಇದು ಈಗಲೂ ಕರ್ನಾಟಕದಲ್ಲಿ ನೋಂದಣಿಯಾಗಿದ್ದು, ಉದ್ಯಮಿ ನಿಖಿಲ್ ಕಾಮತ್ ಬೆಂಗಳೂರಿನವರಾಗಿದ್ದಾರೆ.

ನಿಖಿಲ್ ಕಾಮತ್ ಆಅವರು ಈ ಕ್ರೂಸರ್ ಬೈಕ್ ಅನ್ನು 2012 ರಲ್ಲಿ ಖರೀದಿಸಿದರು. ಸುಜುಕಿ ಕಂಪನಿಯು ಈ ಇನ್ಟ್ರುಡರ್ M1800R ಬೈಕಿನ ಮಾರಟವನ್ನು 2019 ರಲ್ಲಿ ಸ್ಥಗಿತಗೊಳಿಸಲಾಗಿದೆ. ಈ ಸುಜುಕಿ ಇನ್ಟ್ರುಡರ್ M1800R ಬೈಕಿನಲ್ಲಿ 1,783cc ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ 127 PS ಮತ್ತು 160 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇದು ಸುಜುಕಿಯ ಪ್ರಮುಖ ಕ್ರೂಸರ್ ಬೈಕ್ ಆಗಿ ವಿನ್ಯಾಸಗೊಳಿಸಲಾದ ಬೃಹತ್ ಬೈಕ್ ಆಗಿದೆ. ಸುಜುಕಿ ಇನ್ಟ್ರುಡರ್ M1800R ಮಾದರಿಯು ಹಾರ್ಲೆ-ಡೇವಿಡ್ಸನ್, ಇಂಡಿಯನ್ ಮತ್ತು ಟ್ರಯಂಫ್ ಕ್ರೂಸರ್ ಬೈಕುಗಳಿಗೆ ಪೈಪೋಟಿ ನೀಡುತ್ತಿತ್ತು. ನಿಖಿಲ್ ಕಾಮತ್ ಅವರ ಹೊರತಾಗಿ, ಸುಜುಕಿ ಇಂಟ್ರುಡರ್ M1800R ನ ಅತ್ಯಂತ ಜನಪ್ರಿಯ ಮಾಲೀಕರಲ್ಲಿ ಒಬ್ಬರು ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಹೊರತು ಬೇರೆ ಯಾರೂ ಅಲ್ಲ.

ಸಲ್ಮಾನ್ ಖಾನ್ ಈ ಬೈಕ್ ಅನ್ನು ಹೊಂದಿದ್ದಾನೆ, ನೀಲಿ ಬಣ್ಣದ ಇಂಟ್ರುಡರ್ M1800R ಬೈಕ್ ಅನ್ನು ಹೊಂದಿದ್ದಾರೆ. ಅವರ ಜೊತೆ ಸುಜುಕಿಯ ಮತ್ತೊಂದು ಜನಪ್ರಿಯ ಬೈಕ್ ಹಯಾಬುಸಾ ಅನ್ನು ಸಹ ಹೊಂದಿದ್ದಾರೆ. ಬಿಲಿಯನೇರ್ ನಿಖಿಲ್ ಕಾಮತ್ ಅವರು ಎಥರ್ 450X ಅಪೆಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹೊಂದಿದ್ದಾರೆ. ಇವರು ಹೊಸದಾಗಿ ಖರೀದಿಸಿದ ಈ ಎಲೆಕ್ಟ್ರಿಕ್ ಸ್ಕೂಟರ್‌ನ ಚಿತ್ರಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿದ್ದರು.

More from DriveSpark

Article Published On: Monday, August 19, 2024, 13:44 [IST]
English summary
Billionaire nikhil kamath rides suzuki intruder bike with rhea chakraborty
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+