ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ಮಹೇಂದ್ರ ಸಿಂಗ್ ಧೋನಿ ಎಂದರೆ ಯಾರಿಗೆ ತಾನೆ ಗೊತಿಲ್ಲ ಹೇಳಿ. ತನ್ನ ನಾಯಕತ್ವದಿಂದ ಕೂಲ್ ಕ್ಯಾಪ್ಟೆನ್ ಎಂದು ಹೆಸರು ಪಡೆದ ಈತ, ತನ್ನ ಬ್ಯಾಟಿಂಗ್ ಹಾಗು ವಿಕೆಟ್ ಕೀಪಿಂಗ್ ಸಾಮರ್ಥ್ಯದಿಂದ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯು ಸಹ ಜನಪ್ರಿಯತೆಯ

By Rahul Ts

ಮಹೇಂದ್ರ ಸಿಂಗ್ ಧೋನಿ ಎಂದರೆ ಯಾರಿಗೆ ತಾನೆ ಗೊತಿಲ್ಲ ಹೇಳಿ. ತನ್ನ ನಾಯಕತ್ವದಿಂದ ಕೂಲ್ ಕ್ಯಾಪ್ಟೆನ್ ಎಂದು ಹೆಸರು ಪಡೆದ ಈತ, ತನ್ನ ಬ್ಯಾಟಿಂಗ್ ಹಾಗು ವಿಕೆಟ್ ಕೀಪಿಂಗ್ ಸಾಮರ್ಥ್ಯದಿಂದ ದೇಶದಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿಯು ಸಹ ಜನಪ್ರಿಯತೆಯನ್ನು ಪಡೆದಿದ್ದಾರೆ.

ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ಗೇಮ್ ಫಿನಿಷರ್ ಮಹೇಂದ್ರ ಸಿಂಗ್ ಧೋನಿಗೆ ಕ್ರಿಕೆಟ್ ಬಗ್ಗೆ ಮಾತ್ರ ಒಲವು ಎಂದುಕೊಂಡರೆ ಅದು ತಪ್ಪಾಗುತ್ತದೆ. ಏಕೆಂದರೆ ಅವರ ಗ್ಯಾರೇಜಿನಲ್ಲಿನ ಬೈಕ್‍‍ಗಳನ್ನು ಕಂಡರೆ ಇವರಿಗೆ ಬೈಕ್‍‍ಗಳ ಬಗ್ಗೆ ಕೂಡಾ ಕ್ರೇಜ್ ಇದೆ ಎಂದು ಹೇಳಬಹುದು. ಈ ನಿಟ್ಟಿನಲ್ಲಿ ಮಹಿ ಹುಟ್ಟುಹಬ್ಬದ ಪ್ರಯುಕ್ತ ಆತನ ಬೈಕ್ ಕಲೆಕ್ಷನ್ ಬಗ್ಗೆ ಸಂಪೂರ್ಣ ಮಾಹಿತಿ ಇಂದಿನ ಲೇಖನದಲ್ಲಿ..

ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ಕವಾಸಕಿ ನಿಂಜಾ ಹೆಚ್‍2

ಕವಾಸಕಿ ನಿಂಜಾ ಹೆಚ್2 ಎಮ್.ಎಸ್ ಧೋನಿಯವರ ಬೈಕ್ ಕಲೆಕ್ಷನ್‍‍ನಲ್ಲಿ ಪ್ರಥಮ ಸ್ಥಾನವನ್ನು ಪದೆದಿದ್ದು, 2015ರಲ್ಲಿ ಬಿಡುಗಡೆಗೊಂಡ ಈ ಬೈಕ್ ಅನ್ನು ಮಹೀ ಖರೀದಿ ಮಾಡಿ ದೇಶದಲ್ಲಿ ಪ್ರಥಮ ಕವಾಸಕಿ ನೊಂಜಾ ಹೆಚ್2 ಬೈಕ್ ಪಡೆದ ಮೊದಲ ಮಾಲಿಕರಾಗಿದ್ದಾರೆ.

ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ಮಹೇಂದ್ರ ಸಿಂಗ್ ಧೋನಿ ಹತ್ತಿರ ಇರುವ ಕವಾಸಕಿ ನಿಂಜಾ ಹೆಚ್2 ಬೈಕ್ 1.0 ಲೀಟರ್, 4 ಸಿಲೆಂಡರ್ ಎಂಜಿನ್ ಸಹಾಯದಿಂದ 197ಬಿಹೆಚ್‍‍ಪಿ ಮತ್ತು 134ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಮಾರುಕಟ್ಟೆಯಲ್ಲಿ ರೂ. 33 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ಕನ್ಫೆಡರೇಟ್ ಎಕ್ಸ್132 ಹೆಲ್‍ಕ್ಯಾಟ್

ಧೋನಿಯ ಬೈಕ್ ಕಲೆಕ್ಷನ್‍‍ನಲ್ಲಿ ಮತ್ತೊಂದು ದುಬಾರಿ ಬೈಕ್ ಕನ್ಫೆಡರೇಟ್ ಎಕ್ಸ್132 ಹೆಲ್‍ಕ್ಯಾಟ್. ಈ ಬೈಕ್ 2.2 ಲೀಟರ್ ವಿ-ಟ್ವಿನ್ ಎಂಜಿನ್ ಸಹಾಯದಿಂದ 121ಬಿಹೆಚ್‍‍ಪಿ ಮತ್ತು 190ಎನ್ಎಮ್ ಟಾರ್ಕ್ ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಇದೀಗ ಈ ಬೈಕ್ ಮಾರುಕಟ್ಟೆಯಲ್ಲಿ ರೂ. 60 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ಕವಾಸಕಿ ನಿಂಜಾ ಜೆಡ್‍ಎಕ್ಸ್-14ಆರ್

ಮಹೇಂದ್ರ ಸಿಂಗ್ ಧೋನಿ ಬೈಕ್ ಕಲೆಕ್ಷನ್‍‍ನಲ್ಲಿ ನಿಂಜಾ ಜೆಡ್‍ಎಕ್ಸ್-14ಆರ್ ಒಂದು ಹೈಪರ್‍‍ಬೈಕ್ ಆಗಿದ್ದು, ಇದು ಕವಾಸಾಕಿ H2 ನ ಆಗಮನದವರೆಗೆ ನಿಂಜಾ ಶ್ರೇಣಿಯಲ್ಲಿನ ಅತ್ಯಂತ ದುಬಾರಿ ಉತ್ಪಾದನಾ ಮೋಟಾರ್ಸೈಕಲ್ ಎಂಜಿನಿಯರಿಂಗ್ Z2-14R ಬೈಕ್ ಆಗಿದೆ.

ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ಕವಾಸಕಿ ನಿಂಜಾ ಜೆಡ್‍ಎಕ್ಸ್-14ಆರ್ ಬೈಕ್ 1.4 ಲೀಟರ್ 4 ಸಿಲೆಂಡರ್ ಎಂಜಿನ್ ಸಹಾಯದಿಂದ 197ಬಿಹೆಚ್‍‍ಪಿ ಮತ್ತು 162.5ಎನ್ ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಮಾರುಕಟ್ಟೆಯಲ್ಲಿ ರೂ. 16.4 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ಯಮಹಾ ಆರ್‍‍‍ಡಿ350

ಯಮಹಾ ಆರ್‍‍ಡಿ350 ಎಮ್.ಎಸ್ ಧೋನಿಯವರ ಮೊದಲ ಬೈಕ್ ಎನ್ನಲಾಗಿದ್ದು, ಇದನ್ನು ಕೇವಲ ರೂ. 4,500 ಸಾವಿರಕ್ಕೆ ಖರೀದಿ ಮಾಡಿದ್ದರು ಹಾಗು ಈ ಬೈಕ್ ಇನ್ನು ಮಹಿಯ ಬೈಕ್ ಕಲೆಕ್ಷನ್‍‍ನಲ್ಲಿ ಸ್ಥಾನ ಪಡೆದಿದೆ. ಧೋನಿ ಈ ಬೈಕ್ ನನ್ನು ಸಂಪೂರ್ಣವಾಗಿ ಮಾಡಿಫೈ ಮಾಡಲಾಗಿದ್ದು, ಕೆಂಪು ಬಣ್ಣದ ಪೆಯಿಂಟ್‍ ಸ್ಕೀಮ್ ಅನ್ನು ನೀಡಿದ್ದಾರೆ.

ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ಹಾರ್ಲೆ ಡೇವಿಡ್‍‍ಸನ್ ಫ್ಯಾಟ್ ಬಾಯ್

ಹಾರ್ಲೆ ಡೇವಿಡ್‍‍ಸನ್ ಫ್ಯಾಟ್ ಬಾಯ್ ಮಹೇಂದ್ರ ಸಿಂಗ್ ಧೋನಿಯವರು ಖರೀದಿಸಿದ ಬೈಕ್ ಕಲೆಕ್ಶನ್‍‍ನಲ್ಲಿ ಏಕಮಾತ್ರ ಕ್ರೂಸರ್ ಬೈಕ್‍ ಆಗಿದೆ. ಫ್ಯಾಟ್ ಬಾಯ್ ಬೈಕ್ ಸಾಫ್ಟ್ ನೀಲಿ ಕ್ರೂಸರ್ ಮೋಟರ್‍‍ಸೈಕಲ್ ಆಗಿದ್ದು ಇದು ಸಾಫ್ಟ್ ಟ್ರೈಲ್ ಶ್ರೇಣಿಯ ಭಾಗವಾಗಿದೆ.

ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ಇನ್ನು ಹಾರ್ಲೆ ಡೇವಿಡ್‍‍ಸನ್ ಫ್ಯಾಟ್ ಬಾಯ್ ಬೈಕ್ 1,690ಸಿಸಿ ವಿ ಟ್ವಿನ್ ಎಂಜಿನ್ ಸಹಾಯದಿಂದ 61ಬಿಹೆಚ್‍‍ಪಿ ಮತ್ತು 132ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಮಾರುಕಟ್ಟೆಯಲ್ಲಿ ರೂ. 18.11 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ಬಿಎಸ್‍ಎ ಗೋಲ್ಡ್ ಸ್ಟಾರ್

ಸೂಪರ್ ಬೈಕ್, ಕ್ರೂಸರ್ ಬೈಕ್ ಮರ್ರು ಸಾಧಾರಣ ಬೈಕ್ ಅಲ್ಲದೆ ಮಹೇಂಡ್ರ ಸಿಂಗ್ ಧೋನಿ ಬಿಎಸ್‍ಎ ಗೋಲ್ಡ್ ಸ್ಟಾರ್ ಎಂಬ ವಿಂಟೇಜ್ ಬೈಕ್ ಅನ್ನು ಕೂಡ ತಮ್ಮ ಬೈಕ್ ಕಲೆಕ್ಷನ್‍‍ನಲ್ಲಿ ಇರಿಸಿಕೊಂಡಿದ್ದಾರೆ.

ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ಬಿಎಸ್‍ಎ ಗೋಲ್ಡ್ ಸ್ಟಾರ್ ಪೌರಾಣಿಕ ಬ್ರಿಟಿಶ್ ಮೋಟಾರ್‍‍ಸೈಕಲ್ ಆಗಿದ್ದು ಇದು 500ಸಿಸಿ ಎಂಜಿನ್ ಸಹಾಯದಿಂದ 48ಬಿಹೆಚ್‍‍ಪಿ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ ಮತ್ತು ಈ ಬೈಕಿನ ವಿಶೇಷವೇನೆಂದರೆ ಇದು ಗಂಟೆಗೆ 160 ಕಿಲೋಟರ್‍‍ಗಿಂತ ಹೆಚ್ಚು ಟಾಪ್ ಸ್ಪೀಡ್ ಹೊಂಡಿರುವ ಬ್ರಿಟಿಶ್ ಮೋಟಾರ್‍‍ಸೈಕಲ್ ಆಗಿದೆ.

ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ನಾರ್ಟನ್ ಜುಬಿಲೀ 250

2014ರ ಅಕ್ಟೋಬರ್ ತಿಂಗಳಿನಲ್ಲಿ ಎಮ್.ಎಸ್ ಧೋನಿಯವರು ನಾರ್ಟನ್ ಜುಬಿಲೀ 250 250 ಬೈಕ್ ಅನ್ನು ಖರೀದಿಸಿದ್ದು, ಇದು 250ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 16ಬಿಹೆಚ್‍‍ಪಿ ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದುಕೊಂದಿದೆ.

ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ಹೀರೋ ಮೋಟೊಕಾರ್ಪ್ ಕರಿಜ್ಮಾ ಜೆಡ್‍‍ಎಮ್ಆರ್

ಮೇಲೆ ನೀಡಿರುವ ಚಿತ್ರವನ್ನು ಗಮನಿಸಿದ್ದರೆ ತಿಳಿಯುತ್ತದೆ ಮಹೇಂದ್ರ ಸಿಂಗ್ ಧೋನಿಯವರು ಕರಿಜ್ಮಾ ಜೆಡ್‍‍ಎಮ್ಆರ್ ಬೈಕ್ ಅನ್ನು ಒಂದು ಒಡಿಐ ಪಂದ್ಯದಲ್ಲಿ ಮ್ಯಾನ್ ಆಫ್ ದಿ ಸಿರೀಸ್ ಆಗಿ ಆಯ್ಕೆಯಾದುದ್ದರಿಂದ ಈ ಬೈಕ್ ಅನ್ನು ಅವರಿಗೆ ಪ್ರಶಸ್ತಿಯಾಗಿ ನೀಡಲಾಗಿತ್ತು.

ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ಕರಿಜ್ಮಾ ಜೆಡ್‍‍ಎಮ್ಆರ್ ಹೀರೋ ಮೋಟೊಕಾರ್ಪ್ ಸಂಸ್ಥೆಯಿಂದ ನಿರ್ಮಾಣವಾದ ಒಂದು ಫ್ಲ್ಯಾಗ್‍‍ಶಿಪ್ ಮಾಡಲ್ ಬೈಕ್ ಆಗಿದ್ದು, ಇದು 223ಸಿಸಿ ಸಿಂಗಲ್ ಸಿಲೆಂಡರ್ ಎಂಜಿನ್ ಸಹಾಯದಿಂದ 20ಬಿಹೆಚ್‍‍ಪಿ ಮತ್ತು 19.7 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಇದೂ ಆಗಿನ ಕಾಲದಲ್ಲೆ ರೂ. 1 ಲಕ್ಷಕ್ಕೆ ಮಾರಾಟಗೊಂಡಿತ್ತು.

ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ಯಮಹಾ ಎಫ್‍‍ಜೆಡ್1

ಎಮ್ಎಸ್ ಧೋನಿಯವರು ತಮಿಳು ನಾಡಿನ ಚೆನ್ನೈ‍ಗೆ ಭೇಟಿ ನೀಡಿದಾಗ ಈ ಬೈಕ್ ಅನ್ನೆ ಬಳಸುತ್ತರಂತೆ. ಅಂದರೆ ಈತ ಐಪಿಎಲ್ ತಂಡಗಳಲ್ಲಿನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿದ್ದು, ಅಗಾಗ್ ಚೆನ್ನೈ ನಗರಕ್ಕೆ ಬರುತ್ತಾರಂತೆ. ಎಫ್‍‍ಜೆಡ್1 ಬೈಕ್ ಯಮಹಾ ಆರ್1 ಸೂಪರ್‍‍ಬೈಕಿನ ನೇಕೆಡ್ ವರ್ಷನ್ ಆಗಿದೆ.

ಬರ್ಥಡೇ ಬಾಯ್ ಎಮ್.ಎಸ್ ಧೋನಿಯ ಬೈಕ್ ಕಲೆಕ್ಷನ್ ಹೇಗಿದೆ ಗೊತ್ತಾ..??

ಯಮಹಾ ಎಫ್‍‍ಜೆಡ್1 ಬೈಕ್ 1.0 ಲೀಟರ್ ಎಂಜಿನ್ ಅನ್ನು ಹೊಂದಿದ್ದು, 148ಬಿಹೆಚ್‍ಪಿ ಮತ್ತು 106ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಮಾರುಕಟ್ಟೆಯಲ್ಲಿ ರೂ. 11.36 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

More from DriveSpark

Article Published On: Saturday, July 7, 2018, 16:13 [IST]
English summary
Birthday boy MS Dhoni & his AWESOME bike collection.
Read more on off beat celebrity cricket
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+