ವಿಜ್ಞಾನ ಲೋಕವನ್ನೇ ಬೆಚ್ಚಿ ಬೀಳಿಸಿದ ಅಪಘಾತ ಪ್ರಸಂಗ
ನೆರೆಯ ಚೀನಾ ದೇಶದಿಂದ ವಿಚಿತ್ರ ಅಪಘಾತ ಪ್ರಕರಣವೊಂದು ವರದಿಯಾಗಿದ್ದು, ವಿಡಿಯೋ ಮೊದಲ ಬಾರಿಗೆ ವೀಕ್ಷಿಸಿದವರಿಗೆ ಇದೇನು ಭೂತ, ಪಿಶಾಚಿಯ ಕಾಟವೇ ಎಂಬ ಬಗ್ಗೆ ಭಯವುಂಟಾಗಿದೆ. ಅಂದ ಮಾತ್ರಕ್ಕೆ ಪ್ರತ್ಯಕ್ಷದರ್ಶಿಗಳ ಪಾಡು ಹೇಳಬೇಕೇ? [ಚಿತ್ರಪುಟದಲ್ಲಿ ಕೊಟ್ಟಿರುವ ವಿಡಿಯೋ ನೋಡಲು ಮರೆಯದಿರಿ.]
Also Read: ಪ್ರಕ್ಷುಬ್ಧ ವಾಘಾ ಗಡಿಯಲ್ಲಿ ಪಾಕ್ ಗೇಟ್ ಗುದ್ದಿದ ಭಾರತೀಯ
ನಮ್ಮ ದೈನಂದಿನ ಜೀವನದಲ್ಲಿ ಅನೇಕ ಅಪಘಾತ ಪ್ರಕರಣಗಳನ್ನು ನೋಡಿರುತ್ತೇವೆ, ಕೇಳಿರುತ್ತೇವೆ. ಆದರೆ ಈ ಅಪಘಾತ ಪ್ರಕರಣವು ಇಡೀ ವಿಜ್ಞಾನ ಲೋಕವನ್ನೇ ಮತ್ತೊಮ್ಮೆ ಮಗದೊಮ್ಮೆ ಅವಲೋಕಿಸುವಂತೆ ಪ್ರೇರೇಪಿಸಿದೆ. ಈ ಬಗ್ಗೆ ಸಮಗ್ರ ಮಾಹಿತಿಗಾಗಿ ಚಿತ್ರಪುಟದತ್ತ ಮುಂದುವರಿಯಿರಿ.

ಘಟನೆ ಹಿನ್ನೆಲೆ...
ರಸ್ತೆಯಲ್ಲಿ ಚಲಿಸುತ್ತಿದ್ದ ಗಾಡಿಯೊಂದು ನೋಡ ನೋಡುತ್ತಿದ್ದಂತೆಯೇ ಗಾಳಿಯಲ್ಲಿ ಪಲ್ಟಿ ಹೊಡೆಯಲಾರಂಭಿಸುತ್ತದೆ. ಇದು ಪುರಾಣದ ಕಾಳಿಂಗ ಮರ್ದನದಲ್ಲಿ ಕೃಷ್ಣ ದೇವರು ನರ್ತಿಸಿರುವುದಕ್ಕೆ ತದ್ರೂಪವೇ ಎಂಬುದರ ಬಗ್ಗೆಯೂ ಸಂಶಯ ಮೂಡುವುದು ಸಂಶಯ.

ಚೀನಾದ ಅತ್ಯಂತ ವಾಹನ ನಿಬಿಡ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದೆ. ರಸ್ತೆಯಲ್ಲಿ ಸರಾಗವಾಗಿ ಚಲಿಸುತ್ತಿದ್ದ ಮೂರು ಕಾರುಗಳು ಏಕಾಏಕಿ ಪಲ್ಟಿ ಹೊಡೆಯುತ್ತದೆ.

ಆರಂಭದಲ್ಲಿ ಈ ಪ್ರದೇಶದಲ್ಲಿ ಭೂತ, ಪಿಶಾಚಿ ಕಾಟವಿದೆಯೇ ಎಂಬುದರ ಬಗ್ಗೆ ಆತಂಕ ಮೂಡಿದೆ. ಆದರೆ ಬಳಿಕ ನಡೆದ ತನಿಖೆಯಲ್ಲಿ ನಿಖರ ಕಾರಣ ಪತ್ತೆ ಹಚ್ಚಲು ಸಾಧ್ಯವಾಗಿದೆ.

ಭೂತಲದಿಂದ ಉಂಟಾದ ಗರಿಷ್ಠ ಪ್ರಮಾಣದ ಗುರುತ್ವ ಬಲ ಪ್ರಭಾವದಿಂದಲೇ ಅವಘಡ ಸಂಭವಿಸಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಬಗ್ಗೆ ಮತ್ತಷ್ಟು ನಿಖರತೆಗಾಗಿ ವಿಜ್ಞಾನಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

ಗುರುತ್ವ ಬಲ ಇರುವುದು ನಿಜ. ಆದರೆ ಈ ಪ್ರದೇಶದಲ್ಲಿ ಆ ನಿರ್ದಿಷ್ಟ ಸಮಯದಲ್ಲಿ ಮಾತ್ರ ಕೆಲವು ಸೆಕೆಂಡುಗಳ ಮಾತ್ರ ಇದರ ಪ್ರಭಾವ ಹೇಗೆ ಬೀರಿತು ಎಂಬುದು ಚರ್ಚೆಗೆ ಗ್ರಾಸವಾಗಿದೆ.

ಘಟನೆಯಲ್ಲಿ ಯಾರಿಗೂ ಗಾಯಗಳಾದ ಬಗ್ಗೆ ಮಾಹಿತಿಗಳಿಲ್ಲ. ಆದರೂ ಕಾರೊಂದು ಪಲ್ಟಿ ಹೊಡದ ಪರಿಣಾಮ ಹಾನಿಗೀಡಾಗಿದೆ. ಈ ರೋಚಕ ವಿಡಿಯೋವನ್ನು ಮುಂದಿನ ಸ್ಲೈಡರ್ ನಲ್ಲಿ ವೀಕ್ಷಿಸಿ.
ಗುರುತ್ವ ಬಲದ ಎಫೆಕ್ಟ್ - ವಾಹನ ಪಲ್ಟಿ


Click it and Unblock the Notifications








