ದುಬಾರಿ ಎಲೆಕ್ಟ್ರಿಕ್ ಕಾರು ಪರಿಸರ ಪ್ರೇಮ ಮೆರೆದ ನಟಿ: ಈ ಕಾರಿನ ವಿಶೇಷತೆಗಳೇನು?

ಕೊರೋನಾ ಬಳಿಕ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಹೆಚ್ಚು ಜನಪ್ರಿಯವಾಗುತ್ತಿರುವುದರಿಂದ, ಯಾವುದೇ ಭಾಷೆಯ ಚಲನಚಿತ್ರಗಳು ನಮ್ಮ ಬೆರಳ ತುದಿಯಲ್ಲಿ ಲಭ್ಯವಿವೆ. ಅವರಲ್ಲಿ ನಾಯಕಿ, ನಾಯಕರ ಪರಿಚಯ ಮಾಡಿಕೊಳ್ಳುವ ಅವಕಾಶಗಳೂ ಸಿಗುತ್ತವೆ. ಸಿನಿಮಾಗಳಲ್ಲದೆ ಅನೇಕ ಹೊಸಬರಿಗೆ ವೆಬ್ ಸೀರಿಸ್ ಗಳಲ್ಲೂ ಅವಕಾಶ ಸಿಕ್ಕಿದೆ. ಗಿಲ್ಟಿ 2020ರ ನೆಟ್‌ಫ್ಲಿಕ್ಸ್ ಚಲನಚಿತ್ರವಾಗಿದ್ದು, ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಮಹಿಳಾ ನಾಯಕಿಯಾಗಿ ನಟಿಸಿದ್ದಾರೆ. ಕಿಯಾರಾ ಅವರಂತೆ, ಆಕಾಂಶಾ ರಂಜನ್ ಕಪೂರ್ (Akansha Ranjan) ಚಿತ್ರದಲ್ಲಿ ಅನೇಕರ ಗಮನ ಸೆಳೆದ ತಾರೆ.

ಜನಪ್ರಿಯ ಬಾಲಿವುಡ್ ನಟಿ ಆಲಿಯಾ ಭಟ್ ಅವರ ಆತ್ಮೀಯ ಸ್ನೇಹಿತರಲ್ಲಿ ಆಕಾಂಶಾ ರಂಜನ್ ಕೂಡ ಒಬ್ಬರು. ಆಲಿಯಾ ಮತ್ತು ರಣಬೀರ್ ಕಪೂರ್ ಮದುವೆ ಪಾರ್ಟಿಯಲ್ಲಿ ಮಿಂಚಿದ್ದ ನಟಿಗೆ ಅಪಾರ ಅಭಿಮಾನಿ ಬಳಗವಿದೆ. ಇದೀಗ ನಟಿ ತಮ್ಮ ಪ್ರಯಾಣಕ್ಕಾಗಿ ಹೊಸ ಕಾರು ಖರೀದಿಸಿದ್ದಾರೆ. ಐಷಾರಾಮಿ ಕಾರುಗಳ ಪ್ರಾಬಲ್ಯವಿರುವ ಬಾಲಿವುಡ್ ಚಲನಚಿತ್ರ ಜಗತ್ತಿನಲ್ಲಿ ಆಕಾಂಶಾ ಹೊಸ ಎಲೆಕ್ಟ್ರಿಕ್ ಕಾರ್ ಅನ್ನು ಖರೀದಿಸಿದ್ದಾರೆ.

Akansha Ranjan New Kia EV6

ನಟಿ ಆಕಾಂಶಾ ರಂಜನ್ ಕಪೂರ್ ದಕ್ಷಿಣ ಕೊರಿಯಾದ ವಾಹನ ತಯಾರಕ ಕಿಯಾದ EV6 ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ್ದಾರೆ. ಬಾಲಿವುಡ್ ತಾರೆಯರ ಕಾರುಗಳ ವಿವರಗಳನ್ನು ಹಂಚಿಕೊಳ್ಳುವ ಕಾರ್ಸ್ ಫಾರ್ ಯೂ ಎಂಬ ಯೂಟ್ಯೂಬ್ ಚಾನೆಲ್ ಕೂಡ ತಾರೆಯ ಹೊಸ ವಾಹನದ ಸುದ್ದಿಯನ್ನು ಹಂಚಿಕೊಂಡಿದೆ. ಈ ವೀಡಿಯೊ ಕ್ಲಿಪ್‌ನಲ್ಲಿ, ಆಕಾಂಶಾ ಸಾರ್ವಜನಿಕ ಸ್ಥಳದಲ್ಲಿ ಎಲೆಕ್ಟ್ರಿಕ್ ಕಾರಿನಿಂದ ಇಳಿಯುವುದನ್ನು ಕಾಣಬಹುದು. ಈ ಪ್ರೀಮಿಯಂ ಎಲೆಕ್ಟ್ರಿಕ್ ಕಾರು ಬಿಳಿ ಬಣ್ಣವನ್ನು ಹೊಂದಿದೆ.

ಸಂಪೂರ್ಣವಾಗಿ ಬಿಲ್ಟ್-ಅಪ್ (CBU) ಮಾರ್ಗದ ಮೂಲಕ ಭಾರತಕ್ಕೆ ತರುವುದರಿಂದ, EV6 ಎಲೆಕ್ಟ್ರಿಕ್ ಕಾರು EV GT ಲೈನ್ ಮತ್ತು GT ಲೈನ್ AWD ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಇದರಲ್ಲಿ ಟಾಪ್ ಮಾಡೆಲ್ ಅನ್ನು ಆಕಾಂಶಾ ರಂಜನ್ ಕಪೂರ್ ಆಯ್ಕೆ ಮಾಡಿಕೊಂಡಿರುವ ಸಾಧ್ಯತೆ ಇದೆ. ಇದರ ಬೆಲೆಯು ರೂ.65.96 ಲಕ್ಷದ ಎಕ್ಸ್ ಶೋರೂಂ ಬೆಲೆಯೊಂದಿಗೆ, ಮುಂಬೈನಲ್ಲಿ ಈ ಎಲೆಕ್ಟ್ರಿಕ್ ಎಸ್‌ಯುವಿಯ ಆನ್-ರೋಡ್ ಬೆಲೆ ಸುಮಾರು ರೂ.70 ಲಕ್ಷ ಆಗಿದೆ.

Akansha Ranjan New Kia EV6

ಫೀಚರ್ಸ್: ಈ ಕಾರಿನಲ್ಲಿಇತ್ತೀಚಿನ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಹೊಂದಿರುವ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 14-ಸ್ಪೀಕರ್ ಮೆರಿಡಿಯನ್ ಸೌಂಡ್ ಸಿಸ್ಟಮ್, ವರ್ಚುವಲ್ ರಿಯಾಲಿಟಿ HUD ಮತ್ತು ಸರೌಂಡ್ ವ್ಯೂ ಕ್ಯಾಮೆರಾವನ್ನು ಹೊಂದಿದೆ. ಇದರೊಂದಿಗೆ 60+ ಕನೆಕ್ಟಿವಿಟಿ ಕಾರ್ ಫೀಚರ್ಸ್, ಏರ್‌ಬ್ಯಾಗ್‌ಗಳು, ADAS ಮತ್ತು ಚಾಲಿತ ಟೈಲ್‌ಗೇಟ್ ಹೊಂದಿದೆ

ಬ್ಯಾಟರಿ ಪ್ಯಾಕ್: ಕಿಯಾ ಎಲೆಕ್ಟ್ರಿಕ್ ಕ್ರಾಸ್ಒವರ್ ಒಂದೇ 77.4kWh ಬ್ಯಾಟರಿ ಪ್ಯಾಕ್ ಮತ್ತು ಸಿಂಗಲ್ ಮೋಟಾರ್, RWD ಮತ್ತು ಡ್ಯುಯಲ್ ಮೋಟಾರ್, AWD ಸೆಟಪ್‌ಗಳೊಂದಿಗೆ ಬರುತ್ತದೆ. ಈ ಕ್ರಾಸ್ಒವರ್ RWD ರೂಪಾಂತರವು 229 bhp ಮತ್ತು 35 0Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನು AWD ರೂಪಾಂತರವು 325 bhp ಮತ್ತು 605 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಇನ್ನು AWD ಆವೃತ್ತಿಯು ಕೇವಲ 5.2 ಸೆಕೆಂಡುಗಳಲ್ಲಿ 0 ದಿಂದ 100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಆವೃತ್ತಿಯು 528 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇದರ ಬ್ಯಾಟರಿಯನ್ನು ಫಾಸ್ಟ್ 350kW DC ಚಾರ್ಜರ್ ಮೂಲಕ ಕೇವಲ 18 ನಿಮಿಷಗಳಲ್ಲಿ 10 ರಿಂದ 80 ಪ್ರತಿಶತದಷ್ಟು ಚಾರ್ಜ ಮಾಡಬಹುದು. ಹೋಮ್ ಚಾರ್ಜಿಂಗ್‌ಗಾಗಿ, ಖರೀದಿದಾರರು 22kW ವಾಲ್ ಬಾಕ್ಸ್ ಚಾರ್ಜರ್ ಅನ್ನು ಸ್ಟ್ಯಾಂಡರ್ಡ್ ಆಗಿ ಪಡೆಯುತ್ತದೆ.

ಈ ಕಿಯಾ EV6 ಎಲೆಕ್ಟ್ರಿಕ್ ಕಾರು ಮೂನ್ಸ್ಕೇಪ್, ಯಾಚ್ಟ್ ಬ್ಲೂ, ಸ್ನೋ ವೈಟ್ ಪರ್ಲ್, ಅರೋರಾ ಬ್ಲ್ಯಾಕ್ ಪರ್ಲ್ ಮತ್ತು ರನ್ವೇ ರೆಡ್.ಎಂಬ ಐದು ಬಣ್ಣಗಳ ಆಯ್ಕೆಗಳಲ್ಲಿ ಲಬ್ಯವಿದೆ. ಈ ಎಲೆಕ್ಟ್ರಿಕ್ ಕಾರು 4690 ಎಂಎಂ ಉದ್ದ, 1890 ಎಂಎಂ ಅಗಲ ಮತ್ತು 1550 ಎಂಎಂ ಎತ್ತರದೊಂದಿಗೆ ಅತ್ಯುತ್ತಮ ಕ್ಯಾಬಿನ್ ಸ್ಥಳವಾಕಾಶ ಹೊಂದಿದೆ. ಹ್ಯುಂಡೈ Ioniq 5 ನಂತೆಯೇ, ಕಿಯಾ EV6 ಬ್ರ್ಯಾಂಡ್‌ನ E-GMP ಪ್ಲಾಟ್‌ಫಾರ್ಮ್‌ಗೆ ಆಧಾರವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Monday, August 5, 2024, 8:30 [IST]
English summary
Bollywood actress akansha ranjan new kia ev6 top things details
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+