ಹಿಟ್ ಆ್ಯಂಡ್ ರನ್; ಕಾರಿನ ಟಾಪಲ್ಲಿ ಶವದೊಂದಿಗೆ ಪರಾರಿ ಯತ್ನ!
ನೆರೆಯ ಹೈದರಾಬಾದ್‌ನಿಂದ ವಿಚಿತ್ರ ಅಪಘಾತ ಪ್ರಕರಣವೊಂದು ವರದಿಯಾಗಿದ್ದು, ವ್ಯಕ್ತಿಯೋರ್ವರಿಗೆ ಢಿಕ್ಕಿ ಮಾಡಿದ ಬಳಿಕ ಆತನ ಶವವನ್ನು ಕಾರಿನ ಮೇಲಿರಿಸಿ ಸಿನೆಮೇಯ ಶೈಲಿಯಲ್ಲಿ ಹೊತ್ತೊಯ್ದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಏನಿದು ಘಟನೆ.. ?
ವೃದ್ಧನೋರ್ವನಿಗೆ ಢಿಕ್ಕಿ ಹೊಡೆದ ಚಾಲಕ ಕಾರನ್ನು ನಿಲ್ಲಿಸದೇ ಅಲ್ಲಿಂದ ಕಾಲ್ಕಿತ್ತುವ ಪ್ರಯತ್ನ ಮಾಡಿದ್ದಾನೆ. ಆದರೆ ದುರದೃಷ್ಟವಶಾತ್ ಸಾವೀಗೀಡಾಗಿರುವ ವೃದ್ಧನ ಶವ ಕಾರಿನ ಮೇಲ್ಚಾವಣಿಯಲ್ಲಿ ನೇತಾಡಿಕೊಂಡಿತ್ತು.

ಹೈದರಾಬಾದ್ ಸಮೀಪದ ನಲಗೊಂಡಾ ಜಿಲ್ಲೆಯಿಂದ ಈ ದಾರುಣ ಅಪಘಾತ ಪ್ರಕರಣ ಬೆಳಕಿಗೆ ಬಂದಿದೆ.

ಮಾರುತಿ ರಿಟ್ಜ್ ಕಾರಿನಲ್ಲಿ ಹೈದರಾಬಾದ್ ನಿಂದ ವಿಜಯವಾಡಗೆ ಚಾಲನೆ ಮಾಡುತ್ತಿದ್ದ ವ್ಯಕ್ತಿಯೋರ್ವ ಅಮಿತ ವೇಗದಲ್ಲಿ ವಾಹನ ಚಾಲನೆ ಮಾಡುತ್ತಿದ್ದರಷ್ಟೇ ಅಲ್ಲದೆ ಅಮಾಯಕ ವೃದ್ಧ ರೈತರೋರ್ವರಿಗೆ ಬಲವಾಗಿ ಢಿಕ್ಕಿ ಹೊಡೆದಿದ್ದರು.

ಕಾರು ಢಿಕ್ಕಿ ಹೊಡೆದ ರಭಸಕ್ಕೆ ವೃದ್ಧ ಕಾರಿನ ಮೇಲ್ಚಾವಣಿಗೆ ಅಪ್ಪಳಿಸಿದ್ದಾರೆ. ಆದರೆ ತುರಂತ್ ಆಗಿ ಕಾರು ನಿಲ್ಲಿಸಿ ವೃದ್ಧನಿಗೆ ಪ್ರಥಮ ಚಿಕಿತ್ಸೆ ನೀಡುವ ಅಥವಾ ಆಸ್ಪೆತ್ರೆಗೆ ಸಾಗಿಸುವ ಬದಲು ವ್ಯಕ್ತಿ ನೇರವಾಗಿ ಪಲಾಯನ ಮಾಡುವ ಪ್ರಯತ್ನ ಮಾಡಿದ್ದಾರೆ.

ಸರಿ ಸುಮಾರು 50 ಕೀ.ಮೀ. ದೂರ ವೃದ್ಧನನ್ನು ಕಾರಿನ ಮೇಲೆರಿಸಿಕೊಂಡೇ ಆತ ಕಾರು ಚಾಲನೆ ಮಾಡಿದ್ದಾರೆ ಎಂದು ಪೊಲೀಸರು ವಿವರಣೆ ನೀಡಿದ್ದರು, ಈಗ ಕೊಲೆ ಪ್ರಕರಣಕ್ಕಾಗಿ ಕ್ರಿಮಿನಲ್ ದೂರು ದಾಖಲಿಸಿಕೊಂಡಿದ್ದಾರೆ.

ಬಳಿಕ ನಡೆಸಿರುವ ತನಿಖೆಯಲ್ಲಿ ಚಾಲಕ ಪಾನಮತ್ತರಾಗಿ ಗಾಡಿ ಚಾಲನೆ ಮಾಡಿರುವುದು ಕಂಡುಬಂದಿದೆ. ಅಲ್ಲದೆ ಆತನಿಗೆ ಶವ ಕಾರಿನ ಮೇಲಿರುವ ವಿಚಾರವೇ ಗೊತ್ತಿರಲಿಲ್ಲವಂತೆ!

ಕಾರನ್ನು ನಿಲ್ಲಿಸಲು ಪೊಲೀಸರು ಹಾಗೂ ಸ್ಥಳೀಯರು ಹರ ಸಾಹಸವನ್ನೇ ಮಾಡಬೇಕಾಯಿತು. ಏನೇ ಮಾಡಿದರೂ ಭಯಭೀತನಾಗಿದ್ದ ಚಾಲಕ ಕಾರು ನಿಲ್ಲಿಸುವ ಗೋಜಿಗೆ ಹೋಗಿರಲಿಲ್ಲ.

ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಸ್ಥಳೀಯರ ನೆರವಿನೊಂದಿಗೆ ಪೊಲೀಸರು ಕಾರು ಜೊತೆಗೆ ಅಪರಾಧಿಯನ್ನು ಸೆರೆ ಹಿಡಿಯಲು ಯಶಸ್ವಿಯಾಗಿದ್ದಾರೆ.


Click it and Unblock the Notifications








