ಅಪಘಾತಗಳಿಗೆ ಕಾರು ತಯಾರಕ ಕಂಪನಿಯನ್ನೇ ಹೊಣೆ ಮಾಡಿದ ಪೊಲೀಸರು..!

ಭಾರತದಲ್ಲಿ ದಿನದಿಂದ ದಿನಕ್ಕೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಲೇ ಇವೆ. 2018ರಲ್ಲಿ 1.51 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ಕಾರಣಕ್ಕೆ ಅಪಘಾತಗಳನ್ನು ತಡೆಗಟ್ಟಲು ಹಲವಾರು ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ.

ಅಪಘಾತಗಳಿಗೆ ಕಾರು ತಯಾರಕ ಕಂಪನಿಯನ್ನೇ ಹೊಣೆ ಮಾಡಿದ ಪೊಲೀಸರು..!

ಜನರು ಈ ಕಾನೂನುಗಳ ಬಗ್ಗೆ ತಲೆಕೆಡಿಸಿಕೊಳ್ಳದ ಕಾರಣ ದಂಡದ ಪ್ರಮಾಣವನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿ ಹೊಸ ಮೋಟಾರು ವಾಹನ ಕಾಯ್ದೆಯನ್ನು ಕಳೆದ ವರ್ಷದ ಸೆಪ್ಟೆಂಬರ್ 1ರಿಂದ ಜಾರಿಗೆ ತರಲಾಯಿತು. ಮೊದಲು ರೂ.500, 1,000ಗಳಿದ್ದ ದಂಡದ ಪ್ರಮಾಣವನ್ನು ರೂ.5,000 ದಿಂದ 10,000ಗಳವರೆಗೆ ಏರಿಕೆ ಮಾಡಲಾಯಿತು.

ಅಪಘಾತಗಳಿಗೆ ಕಾರು ತಯಾರಕ ಕಂಪನಿಯನ್ನೇ ಹೊಣೆ ಮಾಡಿದ ಪೊಲೀಸರು..!

ಆದರೂ ರಸ್ತೆ ಅಪಘಾತಗಳು ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ. ಈಗ ಚಂಡೀಗಢ ಪೊಲೀಸರು ರಸ್ತೆ ಅಪಘಾತಗಳಿಗೆ ಜನಪ್ರಿಯ ಐಷಾರಾಮಿ ಕಾರು ತಯಾರಕ ಕಂಪನಿಯನ್ನೇ ಹೊಣೆಯಾಗಿಸಿದ್ದಾರೆ. ಈ ಬಗ್ಗೆ ಚಂಡೀಗಢ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ಅಪಘಾತಗಳಿಗೆ ಕಾರು ತಯಾರಕ ಕಂಪನಿಯನ್ನೇ ಹೊಣೆ ಮಾಡಿದ ಪೊಲೀಸರು..!

ಈ ಟ್ವೀಟ್ ಅನ್ನು ಒಪನ್ ಲೆಟರ್ ಎಂದು ಹೇಳಿದ್ದಾರೆ. ಇದರಲ್ಲಿ ಖ್ಯಾತ ಕಾರು ತಯಾರಕ ಕಂಪನಿಯಾದ ಬಿ‍‍ಎಂ‍‍ಡಬ್ಲ್ಯು ಕಂಪನಿಯನ್ನು ಹೊಣೆಯಾಗಿಸಿದ್ದಾರೆ. ಚಂಡೀಗಢ ಪೊಲೀಸರ ಈ ಹೇಳಿಕೆಯು ಇಂಟರ್‍‍ನೆಟ್ ಬಳಕೆದಾರರನ್ನು ಮಾತ್ರವಲ್ಲದೇ ವಾಹನ ತಯಾರಕ ಕಂಪನಿಗಳನ್ನೇ ಬೆಚ್ಚಿ ಬೀಳಿಸಿದೆ.

ಅಪಘಾತಗಳಿಗೆ ಕಾರು ತಯಾರಕ ಕಂಪನಿಯನ್ನೇ ಹೊಣೆ ಮಾಡಿದ ಪೊಲೀಸರು..!

ಇದರ ಜೊತೆಗೆ ಚಂಡೀಗಢ ಪೊಲೀಸರು ಕೆಲವು ನ್ಯೂಸ್ ಪೇಪರ್‍‍ಗಳ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಈ ಫೋಟೊಗಳು ಇತ್ತೀಚಿಗೆ ನಡೆದ ರಸ್ತೆ ಅಪಘಾತಗಳಿಗೆ ಸಂಬಂಧಿಸಿವೆ. ಈ ಎಲ್ಲಾ ಅಪಘಾತಗಳು ಬಿ‍ಎಂ‍‍ಡಬ್ಲ್ಯು ಕಾರುಗಳಿಗೆ ಸಂಬಂಧಪಟ್ಟಿವೆ.

ಅಪಘಾತಗಳಿಗೆ ಕಾರು ತಯಾರಕ ಕಂಪನಿಯನ್ನೇ ಹೊಣೆ ಮಾಡಿದ ಪೊಲೀಸರು..!

ಈ ಕಾರಣಕ್ಕೆ ಬಿ‍ಎಂ‍‍ಡಬ್ಲ್ಯು ಕಂಪನಿಯನ್ನು ಅಲ್ಲಿನ ರಸ್ತೆ ಅಪಘಾತಗಳಿಗೆ ಹೊಣೆಯಾಗಿಸಲಾಗಿದೆ. ಇದಕ್ಕೆ ಉದಾಹರಣೆಯಾಗಿ ಇತ್ತೀಚಿಗೆ ಅಲ್ಲಿ ನಡೆದ ಅಪಘಾತವೊಂದನ್ನು ನೀಡಲಾಗಿದೆ. ಈ ಅಪಘಾತದಲ್ಲಿ ಸೈಕಲ್‍‍ನಲ್ಲಿ ಚಲಿಸುತ್ತಿದ್ದ ಯುವಕರಿಬ್ಬರಿಗೆ ಬಿ‍ಎಂ‍‍ಡಬ್ಲ್ಯು ಕಾರು ಡಿಕ್ಕಿ ಹೊಡೆದಿತ್ತು.

ಅಪಘಾತಗಳಿಗೆ ಕಾರು ತಯಾರಕ ಕಂಪನಿಯನ್ನೇ ಹೊಣೆ ಮಾಡಿದ ಪೊಲೀಸರು..!

ಹಿಂಬದಿಯಲ್ಲಿದ್ದ ಯುವಕನಿಗೆ ತೀವ್ರ ಸ್ವರೂಪದ ಗಾಯಗಳಾದ ಕಾರಣಕ್ಕೆ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಅಪಘಾತ ಮಾತ್ರವಲ್ಲದೇ ಇನ್ನು ಅನೇಕ ಅಪಘಾತಗಳಲ್ಲಿ ಬಿ‍ಎಂ‍‍ಡಬ್ಲ್ಯು ಕಾರುಗಳು ಭಾಗಿಯಾಗಿದ್ದ ಕಾರಣಕ್ಕೆ ಚಂಡೀಗಢ ಪೊಲೀಸರು ಬಿ‍ಎಂ‍ಡಬ್ಲ್ಯು ಕಾರುಗಳನ್ನು ಅಪಘಾತಗಳಿಗೆ ಹೊಣೆಯಾಗಿಸಿದ್ದಾರೆ.

ಅಪಘಾತಗಳಿಗೆ ಕಾರು ತಯಾರಕ ಕಂಪನಿಯನ್ನೇ ಹೊಣೆ ಮಾಡಿದ ಪೊಲೀಸರು..!

ಸ್ಫೀಡ್ ಲಿಮಿಟ್ ಇಲ್ಲದೇ ಹೆಚ್ಚು ವೇಗವಾಗಿ ಬಿ‍ಎಂ‍‍ಡಬ್ಲ್ಯು ಕಾರುಗಳು ಚಲಿಸುವ ಕಾರಣಕ್ಕೆ ಅವುಗಳನ್ನು ಅಪಘಾತಗಳಿಗೆ ಹೊಣೆಯಾಗಿಸಲಾಗಿದೆ. ಕಾರು ಚಾಲಕರ ನಿರ್ಲಕ್ಷಕ್ಕೆ ಕಾರು ತಯಾರಕ ಕಂಪನಿಗಳನ್ನು ಹೊಣೆಯಾಗಿಸುವುದು ಎಷ್ಟು ಸರಿ.

ಅಪಘಾತಗಳಿಗೆ ಕಾರು ತಯಾರಕ ಕಂಪನಿಯನ್ನೇ ಹೊಣೆ ಮಾಡಿದ ಪೊಲೀಸರು..!

ಭಾರತದಲ್ಲಿರುವ ಎಲ್ಲಾ ಬಿಎಂ‍‍ಡಬ್ಲ್ಯು ಕಾರುಗಳು ಅಪಘಾತಕ್ಕೀಡಾಗಿಲ್ಲ. ಭಾರತದ ಯಾವುದೋ ಒಂದು ಪ್ರದೇಶದಲ್ಲಿ ಬೆರಳೆಣಿಕೆಯಷ್ಟು ಕಾರುಗಳು ಅಪಘಾತಕ್ಕೀಡಾದ ತಕ್ಷಣ ಇಡೀ ಕಂಪನಿಯನ್ನು ಹಾಗೂ ಕಾರುಗಳನ್ನು ಹೊಣೆಗಾರರನ್ನಾಗಿ ಮಾಡುವುದು ಸರಿಯಲ್ಲ.

ಅಪಘಾತಗಳಿಗೆ ಕಾರು ತಯಾರಕ ಕಂಪನಿಯನ್ನೇ ಹೊಣೆ ಮಾಡಿದ ಪೊಲೀಸರು..!

ಈ ಅಪಘಾತಗಳು ಸಂಭವಿಸುವುದು ಚಾಲಕರ ತಪ್ಪಿನಿಂದ. ವಾಹನಗಳನ್ನು ಸರಿಯಾಗಿ ಮೆಂಟೆನ್ ಮಾಡದ ಕಾರಣಕ್ಕೆ ಬ್ರೇಕ್ ಫೇಲ್ ಆಗಿ ಅಪಘಾತಗಳು ಸಂಭವಿಸುತ್ತವೆ. ಇದನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಕಾರು ಮಾಲೀಕರ ಹಾಗೂ ಚಾಲಕರ ತಪ್ಪು.

ಅಪಘಾತಗಳಿಗೆ ಕಾರು ತಯಾರಕ ಕಂಪನಿಯನ್ನೇ ಹೊಣೆ ಮಾಡಿದ ಪೊಲೀಸರು..!

ಚಂಡೀಗಢ ಪೊಲೀಸರ ಈ ಆರೋಪದಿಂದಾಗಿ ಬಿಎಂ‍‍ಡಬ್ಲ್ಯು ಕಾರುಗಳ ಬೇಡಿಕೆ ಮೇಲೆ ಪರಿಣಾಮ ಉಂಟಾಗುವ ಸಾಧ್ಯತೆಗಳಿವೆ. ಬಿ‍ಎಂ‍‍ಡಬ್ಲ್ಯು ಕಾರುಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯನ್ನು ಹೊಂದಿವೆ. ಬಿ‍ಎಂ‍‍ಡಬ್ಲ್ಯು ಕಂಪನಿಯು ಸುರಕ್ಷತೆಗೆ ಹೆಚ್ಚು ಆದ್ಯತೆಯನ್ನು ನೀಡುತ್ತದೆ.

More from DriveSpark

Article Published On: Tuesday, February 4, 2020, 11:01 [IST]
English summary
Chandigarh Police blames BMW for increasing accidents. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+