ಚೆನ್ನೈ ಪ್ರವಾಹ ಎಫೆಕ್ಟ್; ಐಷಾರಾಮಿ ಕಾರುಗಳು 5 ಲಕ್ಷಕ್ಕೆ ಹರಾಜು

By Nagaraja

ಹ್ಹಾಂ, ಇದೇನು ಮಗದೊಮ್ಮೆ ಹಬ್ಬದ ಆವೃತ್ತಿ ಬಂದು ಬಿಟ್ಟಿದ್ದೇಯಾ ಎಂದು ಗಾಬರಿಯಾಗದಿರಿ. ಕೆಲವು ದಿನಗಳ ಹಿಂದೆಯಷ್ಟೇ ಚೆನ್ನೈನಲ್ಲಿ ಸುರಿದ ಧಾರಾಕಾರ ಮಳೆಗೆ ನೆರೆಯ ಪರಿಸ್ಥಿತಿಯುಂಟಾಗಿತ್ತು.

Also Read: ಚೆನ್ನೈ ನೆರೆ: ಆಟೋ ಕ್ಷೇತ್ರಕ್ಕೆ ಬಲವಾದ ಹೊಡೆತ

ಪ್ರಕೃತಿಯ ರೌದ್ರವತಾರಕ್ಕೆ ಸಾವಿರಾರು ಕೋಟಿ ರುಪಾಯಿಗಳ ನಷ್ಟ ಸಂಭವಿಸಿತ್ತಲ್ಲದೆ ಮಾನವ ನಿರ್ಮಿತ ವಸ್ತುಗಳು ಹಾನಿಗೀಡಾಗಿದ್ದವು. ಹೀಗೆ ಸಣ್ಣ ಪುಟ್ಟ ಹಾನಿ ಸಂಭವಿಸಿರುವ ಐಷಾರಾಮಿ ಕಾರುಗಳನ್ನು ಹರಾಜಿಡಗಲಾಗುತ್ತಿದೆ.

ಚೆನ್ನೈ ಪ್ರವಾಹ ಎಫೆಕ್ಟ್; ಐಷಾರಾಮಿ ಕಾರುಗಳು 5 ಲಕ್ಷಕ್ಕೆ ಹರಾಜು

ಐಷಾರಾಮಿ ಪೋರ್ಷೆ ಕಾರು ಬರಿ ಐದು ಲಕ್ಷ ರು.ಗಳಿಗೆ ಅಂತೆಯೇ ಬಿಎಂಡಬ್ಲ್ಯು ಎಂಟು ಲಕ್ಷ ರುಪಾಯಿಗಳಿಗೆ ನಿಮ್ಮನ್ನು ಬಂದು ತಲುಪಲಿದೆ ಅಂದರೆ ನಂಬಲು ಸಾಧ್ಯವೇ? ಇಂತಹದೊಂದು ಪರಿಸ್ಥಿತಿ ಚೆನ್ನೈನಲ್ಲಿ ಸಂಭವಿಸಿರುವುದು ತಪ್ಪಲ್ಲ.

ಚೆನ್ನೈ ಪ್ರವಾಹ ಎಫೆಕ್ಟ್; ಐಷಾರಾಮಿ ಕಾರುಗಳು 5 ಲಕ್ಷಕ್ಕೆ ಹರಾಜು

ಸಹಜವಾಗಿಯೇ ಪ್ರಕೃತಿ ವಿಕೋಪದಿಂದ ಹಾನಿಗೀಡಾದ ಕಾರುಗಳಿಗೆ ಮಾಲಿಕರು ವಿಮೆ ಕ್ಲೈಮ್ ಮಾಡುತ್ತಾರೆ. ಈ ಎಲ್ಲ ಔಪಚಾರಿಕತೆ ಪೂರ್ಣಗೊಂಡ ಬಳಿಕ ವಿಮೆ ಸಂಸ್ಥೆಗಳು ಕಾರುಗಳನ್ನು ಹರಾಜಿಡಲು ನಿರ್ಧರಿಸಿದೆ.

ಚೆನ್ನೈ ಪ್ರವಾಹ ಎಫೆಕ್ಟ್; ಐಷಾರಾಮಿ ಕಾರುಗಳು 5 ಲಕ್ಷಕ್ಕೆ ಹರಾಜು

ಕಾರಿನ ನೈಜ ಆನ್ ರೋಡ್ ಬೆಲೆಗಿಂತಲೂ ಹತ್ತು ಪಟ್ಟು ಕಡಿಮೆ ದರಗಳಲ್ಲಿ ಕಾರನ್ನು ಹರಾಜಿಡಲಾಗುತ್ತಿದೆ. ಈ ಸಂಬಂಧ ಆನ್ ಲೈನ್ ಹರಾಜುಗಾರ ವೆಬ್ ಸೈಟ್‌ಗೆ (copart.in) ನೂರಾರು ಕಾರುಗಳನ್ನು ಹರಾಜು ಮಾಡುವಂತೆ ನಿರ್ದೇಶ ಲಭಿಸಿದೆ.

ಚೆನ್ನೈ ಪ್ರವಾಹ ಎಫೆಕ್ಟ್; ಐಷಾರಾಮಿ ಕಾರುಗಳು 5 ಲಕ್ಷಕ್ಕೆ ಹರಾಜು

ಅಮೆರಿಕ ತಳಹದಿಯ ಈ ಹರಾಜುಗಾರ ಸಂಸ್ಥೆಗೆ ವಿಮೆ ಸಂಸ್ಥೆಗಳಿಂದ, ವೈಯಕ್ತಿಕ, ಬ್ಯಾಂಕ್‌ಗಳಿಂದ ಮತ್ತು ಡೀಲರುಗಳಿಂದ ಹರಾಜು ಮಾಡುವಂತೆ ಬೇಡಿಕೆ ಬಂದಿದೆ.

ಚೆನ್ನೈ ಪ್ರವಾಹ ಎಫೆಕ್ಟ್; ಐಷಾರಾಮಿ ಕಾರುಗಳು 5 ಲಕ್ಷಕ್ಕೆ ಹರಾಜು

ಇಲ್ಲಿ ಗಮನಾರ್ಹ ಅಂಶವೆಂದರೆ ಹೊಚ್ಚ ಹೊಸ 2015 ಹಾಗೂ 2014ರ ಸಾಲಿನ ಐಷಾರಾಮಿ ಕಾರುಗಳನ್ನು ಗಳು ಹರಾಜಿಗಿಡಲಾಗುತ್ತಿದೆ. ಹರಾಜಿಗಿಡುವ ಕಾರುಗಳ ದಾಖಲೆ ಪತ್ರ ಎಲ್ಲ ಸರಿಯಾಗಿರುತ್ತದೆ. ಆದರೆ ಕಾರುಗಳ ಕಂಡೀಷನ್ ಹೇಗಿರುತ್ತೆ ಎಂಬುದಕ್ಕೆ ಮಾತ್ರ ನಾವು ಜವಾಬ್ದಾರರಲ್ಲ ಎಂದು ಸಂಸ್ಥೆಯ ವಕ್ತಾರರೋರ್ವರು ತಿಳಿಸಿದ್ದಾರೆ.

ಚೆನ್ನೈ ಪ್ರವಾಹ ಎಫೆಕ್ಟ್; ಐಷಾರಾಮಿ ಕಾರುಗಳು 5 ಲಕ್ಷಕ್ಕೆ ಹರಾಜು

ಮೂಲಗಳ ಪ್ರಕಾರ ಬುಧವಾರದಿಂದಲೇ ಹರಾಜು ಪ್ರಕ್ರಿಯೆ ಆರಂಭಗೊಂಡಿದ್ದು, ಬಿಎಂಡಬ್ಲ್ಯು 3 ಸಿರೀಸ್ ಕಾರಿಗೆ ಆರು ಲಕ್ಷ ರು., 2015ರ ಆಡಿ ಎ4 ಕಾರಿಗೆ 3.4 ಲಕ್ಷ ರು. ಹಾಗೂ 2012ರ ಪೋರ್ಷೆ ಕೆಯೆನ್ ಕಾರಿಗೆ 5 ಲಕ್ಷ ರು.ಗಳ ಮೂಲಧನ ನಿಗದಿಪಡಿಸಲಾಗಿದೆ.

ಚೆನ್ನೈ ಪ್ರವಾಹ ಎಫೆಕ್ಟ್; ಐಷಾರಾಮಿ ಕಾರುಗಳು 5 ಲಕ್ಷಕ್ಕೆ ಹರಾಜು

ಕಳೆದೊಂದು ವಾರದಿಂದ ದಿನವೊಂದರಲ್ಲಿ 10ರಷ್ಟು ಕಾರುಗಳು ನಮ್ಮನ್ನು ಬಂದು ಸೇರುತ್ತಿದೆ. ಈ ಮೂಲಕ ಒಟ್ಟು ಕಾರುಗಳ ಸಂಖ್ಯೆ 108ಕ್ಕೆ ಏರಿಕೆಯಾಗಿದ್ದು, ಮತ್ತಷ್ಟು ವರ್ಧಿಸುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಪ್ರತಿ ವಾರದಲ್ಲೂ ಹರಾಜು ಏರ್ಪಡಿಸುವ ಇರಾದೆಯಿದೆ ಎಂದು ವೆಬ್ ಸೈಟ್ ತಿಳಿಸಿದೆ.

ಚೆನ್ನೈ ಪ್ರವಾಹ ಎಫೆಕ್ಟ್; ಐಷಾರಾಮಿ ಕಾರುಗಳು 5 ಲಕ್ಷಕ್ಕೆ ಹರಾಜು

ಆಸಕ್ತರು ಮೇಲೆ ತಿಳಿಸಿದ ವೆಬ್ ಸೈಟ್ ಗೆ ತೆರಳಿ ರಿಜಿಸ್ಟರ್ ಮಾಡಬೇಕಾಗಿದ್ದು, ಹಿಂಪಾವತಿ ಮಾಡಬಹುದಾದ ಭದ್ರತಾ ಠೇವಣಿಯನ್ನು ಕಟ್ಟಬೇಕಾಗುತ್ತದೆ. ಈ ಹರಾಜು ಪ್ರಕ್ರಿಯೆ ಮುಂದಿನ ಮೂರು ತಿಂಗಳಷ್ಟು ಕಾಲ ಮುಂದುವರಿಯುವ ಸಾಧ್ಯತೆಯಿದೆ.

ಚೆನ್ನೈ ಪ್ರವಾಹ ಎಫೆಕ್ಟ್; ಐಷಾರಾಮಿ ಕಾರುಗಳು 5 ಲಕ್ಷಕ್ಕೆ ಹರಾಜು

ಹರಾಜಿನಲ್ಲಿ ಕಡಿಮೆ ಬೆಲೆಗೆ ಐಷಾರಾಮಿ ಕಾರುಗಳನ್ನು ಖರೀದಿಸಿ ಅದರ ಬಿಡಿಭಾಗಗಳನ್ನು ಮಾರಾಟ ಮಾಡುವ ತಂತ್ರವನ್ನು ನೀವಿಲ್ಲಿ ಮನಗಾಣಬೇಕಾಗುತ್ತದೆ.

ಚೆನ್ನೈ ಪ್ರವಾಹ ಎಫೆಕ್ಟ್; ಐಷಾರಾಮಿ ಕಾರುಗಳು 5 ಲಕ್ಷಕ್ಕೆ ಹರಾಜು

ಮಗದೊಂದು ಹರಾಜು ಸಂಸ್ಥೆಯಾಗಿರುವ ಆಟೋ ಮಾರ್ಟ್ ಬಳಿಯೂ 10,000 ದಷ್ಟು ಪ್ರವಾಹ ಬಾಧಿತ ಕಾರುಗಳು ಬಂದು ತಲುಪಿದ್ದು, ಹರಾಜು ಪ್ರಕ್ರಿಯೆಯನ್ನು ಆರಂಭಿಸಿದೆ. ಯಾವುದಕ್ಕೂ ನಿಮಗೂ ಕೂಡಾ ಹರಾಜಿನಲ್ಲಿ ಭಾಗವಹಿಸುವ ಇರಾದೆಯಿದ್ದಲ್ಲಿ ಕಾರಿನ ಗುಣಮಟ್ಟತೆ ಬಗ್ಗೆ ಸ್ವಲ್ಪ ಹುಷಾರಾಗಿರಿ.

More from DriveSpark

Article Published On: Friday, January 8, 2016, 9:28 [IST]
English summary
Chennai floods luxury cars goes for auction
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+