ಚೀನಾ ರೈತನ ಕಮಾಲ್; ಸೂಟ್‌ಕೇಸೇ ಸ್ಕೂಟರ್!
ನವ ನವೀನ ತಂತ್ರಜ್ಞಾನಗಳನ್ನು ಕಂಡುಹಿಡಿಯುವುದರಲ್ಲಿ ಚೀನಾದವರು ಸದಾ ಒಂದು ಹೆಜ್ಜೆ ಮುಂದು ಎಂಬುದು ಮಗದೊಮ್ಮೆ ಸಾಬೀತಾಗಿದೆ. ಹೌದು, ಚೀನಾದ ರೈತರೊಬ್ಬರು ಸೂಟ್‌ಕೇಸನ್ನೇ ಸ್ಕೂಟರ್ ಆಗಿ ವಿನ್ಯಾಸಗೊಳಿಸಿರುವುದು ಜಗತ್ತಿನ ವಾಹನೋದ್ಯಮದಲ್ಲಿ ಅಚ್ಚರಿಯನ್ನುಂಟು ಮಾಡಿದೆ.
ಮೂಲತ: ಮಧ್ಯ ಚೀನಾದ ಹುನಾನ್ ಪ್ರಾಂತ್ಯದ ನಿವಾಸಿಯಾಗಿರುವ ಲಿಯಾಂಗ್‌ಕಾಯ್ (Liangcai) ಎಂಬವರೇ ಬ್ಯಾಟರಿ ನಿಯಂತ್ರಿತ ಸೂಟ್‌ಕೇಸ್ ಸ್ಕೂಟರ್ ಅನ್ನು ತಯಾರಿಸಿದ್ದಾರೆ. ಅಷ್ಟಕ್ಕೂ ಚೀನಾದ ರೈತರಾಗಿರುವ ಲಿಯಾಂಗ್‌ಕಾಯ್ ಸ್ಕೂಟ್‌ಕೇಸ್ ತಯಾರಿಸಿರುವುದರ ಹಿಂದೆ ಆಸಕ್ತಿದಾಯಕ ಕಥೆಯೊಂದಿದೆ. ಹೆಚ್ಚಿನ ಮಾಹಿತಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಅಮೆರಿಕಕ್ಕೆ ಪ್ರಶಸ್ತಿ ಸ್ವೀಕರಿಸಲು ತೆರಳಿದ್ದ ಲಿಯಾಂಗ್‌ಕಾಯ್ ತಮ್ಮ ಲಗ್ಗೇಜ್ ಜೊತೆಗೆ ಒಯ್ಯಲು ಮರೆತೇ ಬಿಟ್ಟಿದ್ದರು. ಇದುವೇ ಮುಂದಿನ ದಿನಗಳಲ್ಲಿ ಆಕರ್ಷಕ ಸೂಟ್‌ಕೇಸ್ ಸ್ಕೂಟರ್ ಅಭಿವೃದ್ಧಿಪಡಿಸಲು ನೆರವಾಗಿದೆ ಎಂದವರು ತಿಳಿಸಿದ್ದಾರೆ. ಅಷ್ಟಕ್ಕೂ ಆ ಪ್ರಶಸ್ತಿ ಯಾವುದು? ಮುಂದುವರಿಯಿರಿ

ಏಳು ಕೆ.ಜಿ ತೂಕದ ಈ ಸೂಟ್‌ಕೇಸ್ ಸ್ಕೂಟರ್‌ನಲ್ಲಿ ಇಬ್ಬರು ಪ್ರಯಾಣಿಕರು ಸಂಚರಿಸುವ ಸಾಮರ್ಥ್ಯ ಹೊಂದಿದೆ. ಅಷ್ಟೇ ಅಲ್ಲದೆ 50-60 ಕೀ.ಮೀ. ದೂರವನ್ನು ಗಂಟೆಗೆ ಗರಿಷ್ಠ 20 ಕೀ.ಮೀ. ವೇಗದಲ್ಲಿ ಕ್ರಮಿಸುವ ಸಾಮರ್ಥ್ಯ ಹೊಂದಿದೆ.

ಇದರಿಂದ ಕೇವಲ ತಮ್ಮ ಸಾರಿಗೆ ಮಾತ್ರವಲ್ಲದೆ ಅಗತ್ಯ ವಸ್ತುಗಳನ್ನು ಹೊತ್ತೊಯ್ಯಲು ನೆರವಾಗಿದೆ. ಇನ್ನು ವಿಶೇಷ ಸಂಗತಿಯೆಂದರೆ ಈ ಸೂಟ್‌ಕೇಸ್ ಸ್ಕೂಟರ್ ಜಿಪಿಎಸ್ ನೇವಿಗೇಷನ್‌ಗಳಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿದೆ.

ಸಹಜವಾಗಿಯೇ ಬ್ಯಾಟರಿ ನಿಯಂತ್ರಿತ ಸ್ಕೂಟರ್ ಆಗಿರುವುದರಿಂದ ನಿರಂತರ ಅಂತರಾಳದಲ್ಲಿ ಚಾರ್ಜ್ ಮಾಡಬೇಕಾದ ಅಗತ್ಯವಿರುತ್ತದೆ.

ಸ್ವತ: ಕೃಷಿಕನೂ ಆಗಿರುವ ಲಿಯಾಂಗ್‌ಕಾಯ್ ಹೇಳುವ ಪ್ರಕಾರ, 10 ವರ್ಷಗಳ ನಿರತಂರ ಪ್ರಯತ್ನದ ಬಳಿಕ ಸೂಟ್‌ಕೇಸ್ ಸ್ಕೂಟರನ್ನು ಅಭಿವೃದ್ಧಿಪಡಿಸಿದ್ದಾರೆ.

ಅಷ್ಟಕ್ಕೂ ಲಿಯಾಂಗ್‌ಕಾಯ್ ಇದು ಮೊದಲ ಬಾರಿಯೇನಲ್ಲ ಹೊಸ ತಂತ್ರಜ್ಞಾನವನ್ನು ಕಂಡುಹಿಡಿಯುತ್ತಿರುವುದು. ಈ ಹಿಂದೆ 1999ನೇ ಇಸವಿಯಲ್ಲೇ ನಾವೀನತ್ಯೆಯ ಕಾರು ಸುರಕ್ಷಾ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದ ಲಿಯಾಂಗ್‌ಕಾಯ್ ಅಮೆರಿಕ ತಲಹದಿಯ ಸಂಶೋಧಕರಿಂದ ಪ್ರಶಸ್ತಿಗೂ ಪಾತ್ರವಾಗಿದ್ದರು.
ವೀಡಿಯೋ ವೀಕ್ಷಿಸಿ


Click it and Unblock the Notifications








