ಬೆಂಗಳೂರು ಎಂಜಿನಿಯರ್ ಸಾಧನೆ; ಕೆಫೆ ರೇಸರಾಗಿ ಬದಲಾದ ಯಮಹಾ ಆರ್‌ಎಕ್ಸ್ 135

ಹಳೆಯ ಯಮಹಾ ಆರ್ ಎಕ್ಸ್ ಬೈಕ್ ಗಳು ಈಗಲೂ ದೇಶದ ರಸ್ತೆಗಳಲ್ಲಿ ಸದ್ದು ಮಾಡುತ್ತಿರುವುದನ್ನು ನೀವು ಕಣ್ಣಾರೆ ನೋಡಿರಬಹುದು.

By Nagaraja

ಗತಕಾಲದ ವೈಭವ ಮರುಕಳಿಸಿತೇ ? 1990ರ ದಶಕದ ಕೊನೆಯಲ್ಲಿ ಭಾರತೀಯ ರಸ್ತೆಗಳಲ್ಲಿ ಅತಿ ಹೆಚ್ಚು ಸದ್ದು ಮಾಡಿರುವ ಯಮಹಾ ಆರ್ ಎಕ್ಸ್ 135 ಬೈಕನ್ನು ಕೆಫೆ ರೇಸರ್ ಶೈಲಿಗೆ ಮಾರ್ಪಾಡುಗೊಳಿಸುವ ಮೂಲಕ ಬೆಂಗಳೂರು ಮೂಲದ ಎಂಜಿನಿಯರ್ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಬೆಂಗಳೂರು ಎಂಜಿನಿಯರ್ ಸಾಧನೆ; ಕೆಫೆ ರೇಸರಾಗಿ ಬದಲಾದ ಯಮಹಾ ಆರ್‌ಎಕ್ಸ್ 135

1998ರಿಂದ 2005ರ ವರೆಗೆ ಟು ಸ್ಟ್ರೋಕ್ ಎಂಜಿನ್ ನಿಯಂತ್ರಿತ ಯಮಹಾ ಆರ್ ಎಕ್ಸ್-135 ಫೋರ್ ಸ್ಪೀಡ್ ಹಾಗೂ ಐದು ಸ್ಪೀಡ್ ಆವೃತ್ತಿಗಳಲ್ಲಿ ದೇಶದಲ್ಲಿ ಮಾರಾಟವಾಗಿತ್ತು.

ಬೆಂಗಳೂರು ಎಂಜಿನಿಯರ್ ಸಾಧನೆ; ಕೆಫೆ ರೇಸರಾಗಿ ಬದಲಾದ ಯಮಹಾ ಆರ್‌ಎಕ್ಸ್ 135

ಬೆಂಗಳೂರು ತಳಹದಿಯ ಮೆಕ್ಯಾನಿಕಲ್ ಎಂಜಿನಿಯರ್ ಶಶಾಂಕ್ ಭಾರಧ್ವಾಜ್ ಎಂಬವರು ಜನಪ್ರಿಯ ಯಮಹಾ ಆರ್ ಎಕ್ಸ್ ಬೈಕ್ ಗೆ ಕೆಫೆ ರೇಸರ್ ಶೈಲಿಯನ್ನು ರೂಪಿಸಿದ್ದಾರೆ.

ಬೆಂಗಳೂರು ಎಂಜಿನಿಯರ್ ಸಾಧನೆ; ಕೆಫೆ ರೇಸರಾಗಿ ಬದಲಾದ ಯಮಹಾ ಆರ್‌ಎಕ್ಸ್ 135

ಐಕಾನಿಕ್ ರಾಯಲ್ ಎನ್ ಫೀಲ್ಡ್ ಬೈಕ್ ಗಳನ್ನೇ ಮೀರಿಸುವಂತಹ ವಿನ್ಯಾಸವನ್ನು ಮೈಗೂಡಿಸಿಕೊಂಡಿರುವ ಯಮಹಾ ಆರ್ ಎಕ್ಸ್ ಬೈಕ್ ನಲ್ಲಿ ತಾಂತ್ರಿಕತೆಯಲ್ಲೂ ಬದಲಾವಣೆ ತರಲಾಗಿದೆ.

ಬೆಂಗಳೂರು ಎಂಜಿನಿಯರ್ ಸಾಧನೆ; ಕೆಫೆ ರೇಸರಾಗಿ ಬದಲಾದ ಯಮಹಾ ಆರ್‌ಎಕ್ಸ್ 135

ನವೀಕೃತ ಇಂಧನ ಟ್ಯಾಂಕ್, ಸಿಂಗಲ್ ಸೀಟು, ಪರಿಷ್ಕೃತ ಹ್ಯಾಂಡಲ್ ಬಾರ್ ಮತ್ತು ಸ್ವಿಂಗ್ ಆರ್ಮ್ ಕಾಣಬಹುದಾಗಿದೆ.

ಬೆಂಗಳೂರು ಎಂಜಿನಿಯರ್ ಸಾಧನೆ; ಕೆಫೆ ರೇಸರಾಗಿ ಬದಲಾದ ಯಮಹಾ ಆರ್‌ಎಕ್ಸ್ 135

ಹಿಂದುಗಡೆ ಮೊನೊಶಾಕ್ ಸಸ್ಪೆನ್ಷನ್, ಮುಂದೆ ಹಾಗೂ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಅಲಾಯ್ ಚಕ್ರಗಳ ಸೇವೆಯು ಇದರಲ್ಲಿರುತ್ತದೆ.

ಬೆಂಗಳೂರು ಎಂಜಿನಿಯರ್ ಸಾಧನೆ; ಕೆಫೆ ರೇಸರಾಗಿ ಬದಲಾದ ಯಮಹಾ ಆರ್‌ಎಕ್ಸ್ 135

ಕಪ್ಪು ವರ್ಣದ ಇಂಧನ ಟ್ಯಾಂಕ್ ಮಧ್ಯದಲ್ಲಿ ಗೋಲ್ಡನ್ ಆರೆಂಜ್ ಪಟ್ಟಿಯು ಪ್ರಮುಖ ಆಕರ್ಷಣೆಯಾಗಿದ್ದು, ಒಟ್ಟಾರೆ ವಿನ್ಯಾಸವೂ ವಾಹನ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ಬೆಂಗಳೂರು ಎಂಜಿನಿಯರ್ ಸಾಧನೆ; ಕೆಫೆ ರೇಸರಾಗಿ ಬದಲಾದ ಯಮಹಾ ಆರ್‌ಎಕ್ಸ್ 135

ಒಂಬತ್ತು ತಿಂಗಳ ಅವಧಿಯಲ್ಲಿ ಸಂಪೂರ್ಣ ಬೈಕನ್ನು ಮಾರ್ಪಾಡುಗೊಳಿಸಲಾಗಿದೆ. ಇದಕ್ಕಾಗಿ ಸರಿ ಸುಮಾರು ಒಂದು ಲಕ್ಷ ರುಪಾಯಿಗಳಷ್ಟು ಖರ್ಚು ತಗುಲಿತ್ತು.

ಬೆಂಗಳೂರು ಎಂಜಿನಿಯರ್ ಸಾಧನೆ; ಕೆಫೆ ರೇಸರಾಗಿ ಬದಲಾದ ಯಮಹಾ ಆರ್‌ಎಕ್ಸ್ 135

ಈ ಹಳೆಯ ಯಮಹಾ ಬೈಕ್ ಗಳಿಗೆ ನೂತನ ವೈಝಡ್ ಎಫ್-ಆರ್15 ವರ್ಷನ್ 2.0 ಬೈಕ್ ನಿಂದಲೂ ಬಿಡಿಭಾಗಗಳನ್ನು ಜೋಡಣೆ ಮಾಡಲಾಗಿತ್ತು.

ಬೆಂಗಳೂರು ಎಂಜಿನಿಯರ್ ಸಾಧನೆ; ಕೆಫೆ ರೇಸರಾಗಿ ಬದಲಾದ ಯಮಹಾ ಆರ್‌ಎಕ್ಸ್ 135

ಕೆಫೆ ರೇಸರ್ ಮೋಟಾರ್ ಸೈಕಲ್ ಮೇಲಿನ ಅತೀವ ಪ್ರೀತಿಯೇ ಬೆಂಗಳೂರು ಮೂಲದ ಎಂಜಿನಿಯರ್ ಶಶಾಂಕ್ ಅವರಿಗೆ ಇಂತಹದೊಂದು ವಿನೂತನ ಸೃಷ್ಟಿಗೆ ಪ್ರೇರಣೆಯಾಗಿದೆ.

ಬೆಂಗಳೂರು ಎಂಜಿನಿಯರ್ ಸಾಧನೆ; ಕೆಫೆ ರೇಸರಾಗಿ ಬದಲಾದ ಯಮಹಾ ಆರ್‌ಎಕ್ಸ್ 135

2016 ಜನವರಿ ತಿಂಗಳಲ್ಲಿ 1998ರ ಯಮಹಾ ಆರ್ ಎಕ್ಸ್ 135 ಮಾಡೆಲನ್ನು ಶಶಾಂಕ್ ಖರೀದಿಸಿದ್ದರು. ತಮ್ಮ ಬಳಿ ತಲುಪುವಾಗ ತುಕ್ಕು ಹಿಡಿದಂತಿದ್ದ ಈ ಬೈಕ್ ಗೀಗ ಮರು ಜೀವ ತುಂಬಲಾಗಿದೆ.

ಬೆಂಗಳೂರು ಎಂಜಿನಿಯರ್ ಸಾಧನೆ; ಕೆಫೆ ರೇಸರಾಗಿ ಬದಲಾದ ಯಮಹಾ ಆರ್‌ಎಕ್ಸ್ 135

ಎಲ್ಲ ರೀತಿಯ ಅಡೆತಡೆಗಳನ್ನು ಎದುರಿಸುವ ಮೂಲಕ ಕೊನೆಗೂ ತಮ್ಮ ಮೆಚ್ಚಿನ ಬೈಕ್ ಗೆ ಹೊಸ ರೂಪವನ್ನು ಕಲ್ಪಿಸಿಕೊಡುವಲ್ಲಿ ಬೆಂಗಳೂರು ಮೂಲದ ಎಂಜಿನಿಯರ್ ಸಫಲತೆಯನ್ನು ಕಂಡಿದ್ದಾರೆ.

Article Published On: Friday, November 4, 2016, 12:29 [IST]
English summary
Custom Yamaha RX135 Cafe Racer Built By A Bengaluru Based Engineer
Read more on ಯಮಹಾ yamaha
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+