ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿದ ದೆಹಲಿ

ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ವೇಗವಾಗಿ ಹೆಚ್ಚುತ್ತಿದೆ. ಈ ವರ್ಷ ಸೆಪ್ಟೆಂಬರ್ - ನವೆಂಬರ್ ಅವಧಿಯಲ್ಲಿ ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ಒಟ್ಟು ವಾಹನ ಮಾರಾಟದ 9% ನಷ್ಟಿದೆ. ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿದೆ. ಎಲೆಕ್ಟ್ರಿಕ್ ವಾಹನಗಳ ಮಾರಾಟದ ರಾಷ್ಟ್ರೀಯ ಸರಾಸರಿ 1.6% ಆದರೆ, ದೆಹಲಿಯ ಸರಾಸರಿ 6% ಆಗಿದೆ.

ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿದ ದೆಹಲಿ

ಮಾರಾಟದ ಅಂಕಿ ಅಂಶಗಳನ್ನು ಗಮನಿಸುವುದಾದರೆ ಸೆಪ್ಟೆಂಬರ್ - ನವೆಂಬರ್ ಅವಧಿಯಲ್ಲಿ ದೆಹಲಿಯಲ್ಲಿ 9,540 ಎಲೆಕ್ಟ್ರಿಕ್ ವಾಹನಗಳು ಮಾರಾಟವಾಗಿವೆ. ಇಷ್ಟೇ ಅಲ್ಲದೇ ಎಲೆಕ್ಟ್ರಿಕ್ ವಾಹನಗಳು ಮಾರಾಟದಲ್ಲಿ ಡೀಸೆಲ್ ಹಾಗೂ ಸಿಎನ್‌ಜಿ ವಾಹನಗಳನ್ನು ಹಿಂದಿಕ್ಕಿವೆ. ಇದೇ ತ್ರೈಮಾಸಿಕದಲ್ಲಿ ದೆಹಲಿಯಲ್ಲಿ 7,820 ಡೀಸೆಲ್ ವಾಹನಗಳು ಹಾಗೂ 2,688 ಸಿ‌ಎನ್‌ಜಿ ವಾಹನಗಳು ಮಾರಾಟವಾಗಿವೆ.

ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿದ ದೆಹಲಿ

ಈ ಅವಧಿಯಲ್ಲಿ ದೆಹಲಿಯಲ್ಲಿ ಪೆಟ್ರೋಲ್ ವಾಹನಗಳ ಮಾರಾಟವು 82,626 ಯುನಿಟ್‌ಗಳಾಗಿತ್ತು. ದೆಹಲಿಯಲ್ಲಿ ಎಲೆಕ್ಟ್ರಿಕ್ ವಾಹನ ನೀತಿ ಜಾರಿಯಾದ ನಂತರ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗಿದೆ. ದೆಹಲಿ ಸರ್ಕಾರದ ಎಲೆಕ್ಟ್ರಿಕ್ ವಾಹನ ನೀತಿಯಿಂದಾಗಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರು ಭಾರಿ ಉಳಿತಾಯ ಮಾಡುತ್ತಿದ್ದಾರೆ. ದೆಹಲಿ, ಎಲೆಕ್ಟ್ರಿಕ್ ವಾಹನಗಳ ನೋಂದಣಿಗೆ ಹಾಗೂ ರಸ್ತೆ ತೆರಿಗೆಗೆ ಸಂಪೂರ್ಣ ವಿನಾಯಿತಿ ನೀಡುತ್ತಿರುವ ದೇಶದ ಮೊದಲ ರಾಜ್ಯವಾಗಿದೆ.

ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿದ ದೆಹಲಿ

ದೆಹಲಿ ಸರ್ಕಾರವು 2025 ರ ವೇಳೆಗೆ ನಗರದಲ್ಲಿ 25%ನಷ್ಟು ಎಲೆಕ್ಟ್ರಿಕ್ ವಾಹನಗಳನ್ನು ಹಂಚಿಕೊಳ್ಳುವ ಗುರಿಯನ್ನು ಹೊಂದಿದೆ. ದೆಹಲಿ ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ನಗರದಲ್ಲಿ 201 ಚಾರ್ಜಿಂಗ್ ಕೇಂದ್ರಗಳನ್ನು ಹಾಗೂ 380 ಇ-ವಾಹನ ಚಾರ್ಜಿಂಗ್ ಸ್ಟೇಷನ್‌ಗಳನ್ನು ನಿರ್ಮಿಸಿದೆ, ಇದು ರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ನಗರಕ್ಕಿಂತ ಹೆಚ್ಚು ಎಂಬುದು ಗಮನಾರ್ಹ. ಇದಲ್ಲದೇ 2022ರ ಮಧ್ಯದ ವೇಳೆಗೆ ದೆಹಲಿಯಲ್ಲಿ 600 ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.

ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿದ ದೆಹಲಿ

ದೆಹಲಿಯಲ್ಲಿ ಬ್ಯಾಟರಿ ಸಾಮರ್ಥ್ಯಕ್ಕೆ ಅನುಗುಣವಾಗಿ ಎಲೆಕ್ಟ್ರಿಕ್ ವಾಹನಗಳ ಮೇಲೆ ಸಬ್ಸಿಡಿಯನ್ನು ನಿಗದಿಪಡಿಸಲಾಗಿದೆ. ಈ ಯೋಜನೆಯಡಿಯಲ್ಲಿ, 1,000 ಎಲೆಕ್ಟ್ರಿಕ್ ಕಾರುಗಳಿಗೆ ಪ್ರತಿ ಕಿ.ವ್ಯಾಗೆ ರೂ. 10,000 ಸಬ್ಸಿಡಿ ನಿಗದಿಪಡಿಸಲಾಗಿದೆ. ದೆಹಲಿಯಲ್ಲಿ ಎಲೆಕ್ಟ್ರಿಕ್ ಕಾರಿನ ಮೇಲೆ ಗರಿಷ್ಠ ರೂ. 1.50 ಲಕ್ಷ ಸಬ್ಸಿಡಿ ನೀಡಲಾಗುತ್ತದೆ. ಇದೇ ವೇಳೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಎಲೆಕ್ಟ್ರಿಕ್ ತ್ರಿಚಕ್ರ ವಾಹನ ಹಾಗೂ ಕೊರಿಯರ್ ಎಲೆಕ್ಟ್ರಿಕ್ ವಾಹನಗಳ ಮೇಲೆ ಗರಿಷ್ಠ ರೂ. 30,000 ಸಬ್ಸಿಡಿ ನೀಡಲಾಗುತ್ತದೆ.

ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿದ ದೆಹಲಿ

ಈಗ ದೆಹಲಿಯಲ್ಲಿ ವಾಹನವನ್ನು ಖರೀದಿಸುವವರು ನೋಂದಣಿ ಪ್ರಮಾಣಪತ್ರಕ್ಕಾಗಿ (ಆರ್‌ಸಿ) ಹೆಚ್ಚು ಸಮಯ ಕಾಯಬೇಕಾಗಿಲ್ಲ. ಅವರು ಆರ್‌ಟಿಒಗೂ ಹೋಗಬೇಕಾಗಿಲ್ಲ. ಇನ್ನು ಮುಂದೆ ದೆಹಲಿಯ ವಾಹನ ವಿತರಕರೇ ತಮ್ಮ ಗ್ರಾಹಕರಿಗೆ ವಾಹನ ನೋಂದಣಿ ಸಂಖ್ಯೆಗಳನ್ನು ನೀಡಲಿದ್ದಾರೆ. ದೆಹಲಿಯ ವಾಹನ ವಿತರಕರು ಸ್ಥಳದಲ್ಲೇ ನೋಂದಣಿ ಪ್ರಮಾಣಪತ್ರಗಳನ್ನು ಒದಗಿಸುವ ಸೌಲಭ್ಯವನ್ನು ಆರಂಭಿಸಿದ್ದಾರೆ.

ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿದ ದೆಹಲಿ

ಮಂಗಳವಾರ ದೆಹಲಿಯ ಸಾರಿಗೆ ಸಚಿವ ಕೈಲಾಶ್ ಗೆಹ್ಲೋಟ್ ರವರು ವಾಹನ ಶೋರೂಂಗೆ ಭೇಟಿ ನೀಡಿ ಸ್ಥಳದಲ್ಲೇ ವಾಹನ ನೋಂದಣಿ ಪ್ರಮಾಣಪತ್ರ ನೀಡುವಪ್ರಯೋಜನಗಳನ್ನು ವಿವರಿಸಿದರು. ಈಗ ಹೊಸ ಆರ್‌ಸಿಯನ್ನು ಹೈಟೆಕ್ ಮಾಡಲಾಗಿದೆ. ಹೊಸ ಆರ್‌ಸಿಯಲ್ಲಿ ಹಳೆಯ ಚಿಪ್ ಬದಲಿಸಿ ಹೊಲೊಗ್ರಾಮ್ ನೀಡಲಾಗುತ್ತದೆ. ಈ ಹಾಲೋಗ್ರಾಮ್‌ನಿಂದ ನಕಲಿ ಆರ್‌ಸಿಗಳನ್ನು ನಕಲು ಮಾಡುವ ಸಮಸ್ಯೆಯೂ ಕೊನೆಗೊಳ್ಳುತ್ತದೆ.

ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿದ ದೆಹಲಿ

ಈ ಪ್ರಾಯೋಗಿಕ ಯೋಜನೆಯಲ್ಲಿ 1.4 ಲಕ್ಷಕ್ಕೂ ಹೆಚ್ಚು ಚಾಲಕರಿಗೆ ಆರ್‌ಸಿ ನೀಡಲಾಗಿದೆ ಎಂದು ಅವರು ಹೇಳಿದರು. ದೆಹಲಿಯ ಜನತೆಗೆ ಅತ್ಯುತ್ತಮ ಸಾರಿಗೆ ಸೌಲಭ್ಯ ಒದಗಿಸಲು ಬದ್ಧವಾಗಿದ್ದೇವೆ ಎಂದು ಅವರು ತಿಳಿಸಿದರು. ದೆಹಲಿಯಲ್ಲಿ ಪ್ರತಿ ವರ್ಷ 6 ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಖರೀದಿಸಲಾಗುತ್ತದೆ. ಈ ಹಿಂದೆ ವಾಹನದ ಆರ್‌ಸಿ ಪಡೆಯಲು ಜನರು ಆರ್‌ಟಿಒ ಕಚೇರಿಗಳಿಗೆ ತೆರಳಬೇಕಾಗಿತ್ತು.

ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿದ ದೆಹಲಿ

ಇನ್ನು ದೆಹಲಿ ಸಾರಿಗೆ ಇಲಾಖೆಯು ಆಗಸ್ಟ್ 7 ರಿಂದ ತನ್ನ ಬಹುತೇಕ ಎಲ್ಲಾ ಸೇವೆಗಳನ್ನು ಆನ್ ಲೈನ್ ಮೂಲಕ ನೀಡುತ್ತಿದೆ. ಇಲಾಖೆಯು ಒಟ್ಟು 33 ಸೇವೆಗಳನ್ನು ಆನ್‌ಲೈನ್‌ ಮೂಲಕ ನೀಡುತ್ತಿದೆ. ಇವುಗಳಲ್ಲಿ ಕಲಿಯುವವರ ಪರವಾನಗಿ, ನಕಲಿ ಚಾಲನಾ ಪರವಾನಗಿ, ವಿಳಾಸ ಬದಲಾವಣೆ, ನೋಂದಣಿ ಪ್ರಮಾಣಪತ್ರ, ಎನ್‌ಒಸಿ, ಪರವಾನಗಿಗಳು ಸೇರಿದಂತೆ ಇತರ ಸೇವೆಗಳಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ.

ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿದ ದೆಹಲಿ

ಫೇಸ್ ಲೆಸ್ ಸೇವೆ ಆರಂಭವಾದ ನಂತರ ಚಾಲನಾ ಪರವಾನಗಿ ಅರ್ಜಿದಾರರು ಖಾಯಂ ಚಾಲನಾ ಪರವಾನಗಿ ಹಾಗೂ ಫಿಟ್ ನೆಸ್ ಪರೀಕ್ಷೆ ಪ್ರಮಾಣ ಪತ್ರ ಪಡೆಯಲು ಮಾತ್ರ ಸಾರಿಗೆ ಇಲಾಖೆ ಕಚೇರಿಗೆ ಭೇಟಿ ನೀಡಬೇಕಾಗಿದೆ.ಲರ್ನಿಂಗ್ ಡ್ರೈವಿಂಗ್ ಲೈಸೆನ್ಸ್‌ಗೆ ಅರ್ಜಿ ಸಲ್ಲಿಸುವಾಗ, ಆನ್‌ಲೈನ್ ಪರೀಕ್ಷೆಯ ದಿನಾಂಕ ಹಾಗೂ ಸಮಯದ ಸ್ಲಾಟ್ ಬಗ್ಗೆ ಅರ್ಜಿದಾರರಿಗೆ ತಿಳಿಸಲಾಗುತ್ತದೆ.

ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿದ ದೆಹಲಿ

ಇದರ ನಂತರ, ಅರ್ಜಿದಾರರು ಆನ್‌ಲೈನ್ ಮೂಲಕ ಮನೆಯಲ್ಲೇ ಕುಳಿತು ನಿಗದಿತ ಸಮಯದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ಇದು ಆಧಾರ್ ಸಕ್ರಿಯಗೊಳಿಸಿದ ವೇದಿಕೆಯಾಗಿದ್ದು, ಇದರಲ್ಲಿ ಅರ್ಜಿದಾರರ ಬಯೋಮೆಟ್ರಿಕ್ ಮಾಹಿತಿಯನ್ನು ಸಾಫ್ಟ್‌ವೇರ್ ಗುರುತಿಸುತ್ತದೆ.

ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿದ ದೆಹಲಿ

ಇದು ಅರ್ಜಿದಾರರು ಪರೀಕ್ಷೆಯನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನು ತೋರಿಸುತ್ತದೆ. ಈ ಆನ್‌ಲೈನ್ ಪರೀಕ್ಷೆಯ ನಂತರ, ಅರ್ಜಿದಾರರು ಶಾಶ್ವತ ಪರವಾನಗಿಗಾಗಿ ಆರ್‌ಟಿಒಗೆ ಬಂದು ಡ್ರೈವಿಂಗ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ. ದೆಹಲಿ ಸರ್ಕಾರವು 2020ರ ಫೆಬ್ರವರಿ ಹಾಗೂ 2021ರ ನವೆಂಬರ್ ನಡುವೆ ಮುಕ್ತಾಯಗೊಳ್ಳುವ ಕಲಿಕಾ ಪರವಾನಗಿಯ ಮಾನ್ಯತೆಯನ್ನು 2022ರ ಜನವರಿ 31ರವರೆಗೆ ವಿಸ್ತರಿಸಿದೆ.

ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿದ ದೆಹಲಿ

ಕೋವಿಡ್ 19 ಸಾಂಕ್ರಾಮಿಕ ರೋಗ ಹಾಗೂ ಡ್ರೈವಿಂಗ್ ಪರೀಕ್ಷೆಗೆ ಸ್ಲಾಟ್‌ಗಳನ್ನು ಪಡೆಯಲು ಜನರು ಎದುರಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ದೆಹಲಿ ಸಾರಿಗೆ ಇಲಾಖೆಯು ತನ್ನ ಆದೇಶದಲ್ಲಿ ವಿವಿಧ ಆರ್‌ಟಿಒ ಕಚೇರಿಗಳು ಹಾಗೂ ಫಿಟ್‌ನೆಸ್ ಕೇಂದ್ರಗಳಲ್ಲಿ ಭಾರೀ ಜನದಟ್ಟಣೆ ಉಂಟಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಇತರ ರಾಜ್ಯಗಳನ್ನು ಹಿಂದಿಕ್ಕಿದ ದೆಹಲಿ

ಇಲಾಖೆಯು ಇದನ್ನು ಅರ್ಜಿದಾರರು ಹಾಗೂ ಸಾರ್ವಜನಿಕ ಸೇವಾ ನೌಕರರ ಭದ್ರತೆಯ ಕಾಳಜಿ ಎಂದು ಕರೆದಿದೆ. ಈ ವರ್ಷದ ಆರಂಭದಲ್ಲಿ ಮೊದಲ ಹಂತದ ಫೇಸ್ ಲೆಸ್ ಸೇವೆಯನ್ನು ಆರಂಭಿಸಿದಾಗಿನಿಂದ, ವಾಹನ ಸಂಬಂಧಿತ ಸೇವೆಗಳಿಗಾಗಿ 2,16,835 ಅರ್ಜಿಗಳು ಹಾಗೂ ಚಾಲನಾ ಪರವಾನಗಿ ಸಂಬಂಧಿತ ಸೇವೆಗಳಿಗಾಗಿ 2,08,224 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ದೆಹಲಿ ಸರ್ಕಾರ ಹೇಳಿಕೊಂಡಿದೆ.

ಗಮನಿಸಿ: ಈ ಲೇಖನದಲ್ಲಿರುವ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Delhi has more average than national average in ev sales details
Story first published: Wednesday, December 15, 2021, 14:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X