ಡಿಸೆಂಬರ್ 1ರಿಂದ ಡ್ರೋನ್ ಹಾರಿಸಲು ಲೈಸನ್ಸ್ ಕಡ್ಡಾಯ..!!

ಡಿಸೆಂಬರ್ 1 2018ರಿಂದ ಭಾರತದಲ್ಲಿ ದೊಡ್ಡ ಗಾತ್ರದ ಹೆವಿ ಡ್ಯುಟಿ ಡ್ರೋನ್‍‍ಗಳನ್ನು ಕಾನೂನು ಬದ್ಧವಾಗಿ ಬಳಸಬಹುದಾಗಿದೆ. ರಿಮೋಟೆಡ್ಲಿ ಪೈಲೊಟೆಡ್ ಏರ್‍‍ಕ್ರಾಫ್ಟ್ ಸಿಸ್ಟಮ್ (ಆರ್‍‍‍ಪಿಎಎಸ್) ಎಂಬ ಹೆಸರನ್ನು ಪಡೆದ ಡ್ರೋನ್‍‍ಗಳನ್ನು ಕೇವಲ ಫೋಟೊಗ

By Rahul Ts

ಡಿಸೆಂಬರ್ 1 2018ರಿಂದ ಭಾರತದಲ್ಲಿ ದೊಡ್ಡ ಗಾತ್ರದ ಹೆವಿ ಡ್ಯುಟಿ ಡ್ರೋನ್‍‍ಗಳನ್ನು ಕಾನೂನು ಬದ್ಧವಾಗಿ ಬಳಸಬಹುದಾಗಿದೆ. ರಿಮೋಟೆಡ್ಲಿ ಪೈಲೊಟೆಡ್ ಏರ್‍‍ಕ್ರಾಫ್ಟ್ ಸಿಸ್ಟಮ್ (ಆರ್‍‍‍ಪಿಎಎಸ್) ಎಂಬ ಹೆಸರನ್ನು ಪಡೆದ ಡ್ರೋನ್‍‍ಗಳನ್ನು ಕೇವಲ ಫೋಟೊಗ್ರಫಿ ಹಾಗು ಚಾಯಗ್ರಹಣಕ್ಕೆ ಮಾತ್ರವಲ್ಲದೇ ಇನ್ನು ಹಣಕಾಸು ವಹಿವಾಟುಗಳಿಗೆ ಬಳಸಬಹುದಾಗಿದೆ.

ಡಿಸೆಂಬರ್ 1ರಿಂದ ಡ್ರೋನ್ ಹಾರಿಸಲು ಲೈಸನ್ಸ್ ಕಡ್ಡಾಯ..!!

ಪ್ರಪಂಚದ ವಿವಿಧ ಭಾಗಗಳಲ್ಲಿ ಡ್ರೋನ್‍‍ಗಳನ್ನು ಕೃಷಿ ಕಾರ್ಯಕ್ಕಾಗಿ, ಭದ್ರತೆಗಾಗಿ, ಸುರಕ್ಷತೆಗಾಗಿ ಮತ್ತು ಕೊರಿಯರ್ ಕೆಲಸಗಳಿಗೆ ಬಳಸುತ್ತಿದ್ದಾರೆ. ಪ್ರಮುಖ ಇ-ಕಾಮರ್ಸ್ ವೆಬ್‍‍ಸೈಟ್‍‍ಗಳು ತಮ್ಮ ವಸ್ತುಗಳನ್ನು ಗ್ರಾಹಕರಿಗೆ ಕೊರಿಯರ್ ಮಾಡಲು ಡ್ರೋನ್‍‍ಗಳನ್ನು ಬಳಸುತ್ತಿದ್ದಾರೆ. ಅಷ್ಟೆ ಅಲ್ಲ ಇನ್ನು ಕೆಲವು ಭಾಗಗಳಲ್ಲಿ ಪಿಡ್ಜಾ ಡೆಲಿವರಿಗೆ ಮಾಡಲು ಕೂಡಾ ಇದನ್ನು ಬಳಸುತ್ತಿದ್ದಾರೆ.

ಡಿಸೆಂಬರ್ 1ರಿಂದ ಡ್ರೋನ್ ಹಾರಿಸಲು ಲೈಸನ್ಸ್ ಕಡ್ಡಾಯ..!!

ಡ್ರೋನ್‍‍ಗಳ ಗಾತ್ರದ ಆಧಾರದ ಮೇಲೆ ನಾನೊ, ಮೈಕ್ರೊ, ಮಿನಿ, ಮೀಡಿಯಮ್ ಮತ್ತು ಲಾರ್ಜ್ ಐದು ಭಾಗಗಳಾಗಿ ವಿಭಜಿಸಲಾಗಿದೆ. ಮೈಕ್ರೊ ಡ್ರೋನ್‍‍ಗಳು ಕೇವಲ 250ಗ್ರಾಮ್‍‍ಗಳ ತೂಕವನ್ನು ಪಡೆದುಕೊಂಡಿರುತ್ತವೆ. ಇನ್ನು ದೊಡ್ಡ ಡ್ರೋನ್‍‍ಗಳು ಸುಮಾರು 150 ಕಿಲೋಗ್ರಾಮ್ ತೂಕವನ್ನು ಪಡೆದುಕೊಂಡಿರಲಿದೆ.

ಡಿಸೆಂಬರ್ 1ರಿಂದ ಡ್ರೋನ್ ಹಾರಿಸಲು ಲೈಸನ್ಸ್ ಕಡ್ಡಾಯ..!!

ತಮ್ಮ ತಮ್ಮ ಡ್ರೋನ್‍‍ಗಳಿಗೆ ಲೈಸೆನ್ಸ್ ಅನ್ನು ಪಡೆಯಲು ಬಯಸುವವರು 18 ವರ್ಷಕ್ಕಿಂತ ಮೇಲ್ಪಟ್ಟವರು ಅಥವಾ ಅಂಗ್ಲವನ್ನು ಅರಿತುಕೊಳ್ಳುಲು ಕನಿಷ್ಠವಾಗಿ 10ನೆಯ ತರಗತಿಯಲ್ಲಿ ತೇರ್ಗಡೆಯನ್ನು ಹೊಂದಿರಬೇಕಿದೆ. ಮುಂಬರುವ ದಿನಗಳಲ್ಲಿ, ವ್ಯಕ್ತಿಗಳು ಒಂದು ನಿರ್ದಿಷ್ಟ ಅಪ್ಲಿಕೇಶನ್ ಮೂಲಕ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸಬಹುದು, ನಂತರ ಅವರ ಅಪ್ಲಿಕೇಶನ್ ಆಟೋಮ್ಯಾಟಿಕ್ ಪ್ರಕ್ರಿಯೆಯ ಮೂಲಕ ಹೋಗಬಹುದಾಗಿದೆ.

ಡಿಸೆಂಬರ್ 1ರಿಂದ ಡ್ರೋನ್ ಹಾರಿಸಲು ಲೈಸನ್ಸ್ ಕಡ್ಡಾಯ..!!

ಅದಾಗ್ಯು, ಡ್ರೋನ್ ಹಾರಿಸಲು ಹಲವಾರು ನಿರ್ಭಂದನಗಳನ್ನು ಪಾಲಿಸಬೇಕಿದೆ. ಅಂದರೆ ನೋ-ಫ್ಲೈ ಜೋನ್ಸ್ ಪ್ರದೇಶಗಳಾದಂತಹ ಏರ್‍‍ಫೋರ್ಟ್‍‍ಗಳು, ಇಂಟರ್‍‍ನ್ಯಾಷನಲ್ ಬಾರ್ಡರ್‍‍ಗಳು, ಮಿಲಿಟರಿ ಸ್ಥಳಗಳು ಮತ್ತು ಸರ್ಕಾರದ ಇನ್ನಿತರೆ ಅಧಿಕೃತ ಪ್ರದೇಶಗಳಲ್ಲಿ ಇವುಗಳನ್ನು ಹಾರಿಸುವ ಹಾಗಿಲ್ಲ. ಪ್ರಸ್ತುತ ನೀತಿಯು ಬಳಕೆದಾರರಿಗೆ ದೃಷ್ಟಿಗೋಚರ ರೇಖೆಯೊಳಗೆ ಡ್ರೋನ್‍‍ಗಳನ್ನು ಹಾರಿಸಲು ಮಾತ್ರ ಅನುಮತಿಸುತ್ತದೆ.

ಡಿಸೆಂಬರ್ 1ರಿಂದ ಡ್ರೋನ್ ಹಾರಿಸಲು ಲೈಸನ್ಸ್ ಕಡ್ಡಾಯ..!!

"ಪ್ರಸ್ತುತ ನಾವು ಈಗ ದೃಷ್ಟಿಗೋಚರ ರೇಖೆಯೊಳಗೆ ಡ್ರೋನ್‍‍ಗಳ ಬಳಕೆಯನ್ನು ಅನುಮತಿಸುವೆವು, ದೃಷ್ಟಿಗೋಚರ ದಾಳಿಗೆ ಮೀರಿ ಡ್ರೋನ್‍‍ಗಳ ಬಳಕೆಯನ್ನು ಅನುಮತಿಸುವ ಕಾರ್ಯದಲ್ಲಿ ನಾವು ಒಂದು ಕಾರ್ಯಪಡೆಯನ್ನು ಹೊಂದಿದ್ದೇವೆ" ಎಂದು ಏವಿಯೇಷನ್ ಮಂತ್ರಿ ಜಯಂತ್ ಸಿನ್ಹಾ ಹೇಳಿಕೊಂಡಿದ್ದಾರೆ.

ಡಿಸೆಂಬರ್ 1ರಿಂದ ಡ್ರೋನ್ ಹಾರಿಸಲು ಲೈಸನ್ಸ್ ಕಡ್ಡಾಯ..!!

ಈ ಡ್ರೋನ್‍‍ಗಳನ್ನು ನಿಯಂತ್ರಿಸಲು ಹೊಸ ಡಿಜಿಟಲ್ ಫ್ಲಾಟ್‍‍ಫಾರ್ಮ್ ಅನ್ನು ಸರ್ಕಾರವು ಪ್ರಾರಂಭಿಸಲಿದ್ದು ಮತ್ತು ಸಾಧ್ಯವಾದಷ್ಟು ಡಿಜಿಟಲ್ ಸ್ಕೈ ಪ್ಲಾಟ್‍‍ಫಾರ್ಮ್‍‍ನಿಂದ ಬರುವ ಭದ್ರತಾ ಬೆದರಿಕೆಗಳನ್ನು ಭರಿಸಬಹುದಾಗಿದೆ. ಇದು ಮುಖ್ಯವಾಗಿ ಮಾನವರಹಿತ ಸಂಚಾರ ನಿರ್ವಹಣೆಯ (ಅನ್ ನೇಮ್ಡ್ ಟ್ರಾಫಿಕ್ ಮ್ಯಾನೇಜ್ಮೆಂಟ್) ಸಾಧನವಾಗಿದ್ದು, ಅದು 'ಅನುಮತಿಯಿಲ್ಲ; ಯಾವುದೇ ಟೇಕ್ಆಫ್ '(ನೋ ಪರ್ಮಿಷನ್ - ನೋ ಟೇಖ್ ಆಫ್) ತತ್ವಶಾಸ್ತ್ರವನ್ನು ಅನುಸರಿಸುತ್ತದೆ.

ಡಿಸೆಂಬರ್ 1ರಿಂದ ಡ್ರೋನ್ ಹಾರಿಸಲು ಲೈಸನ್ಸ್ ಕಡ್ಡಾಯ..!!

ಬಳಕೆದಾರರು ತಮ್ಮ ಡ್ರೋನ್‍‍ಗಳನ್ನು ಒಂದು ಬಾರಿ ಮಾತ್ರ ರಿಜಿಸ್ಟ್ರೇಷನ್ ಮಾಡಿಕೊಳ್ಳಬಹುದಾಗಿದೆ. ಪ್ರತಿಯೊಂದು ಫ್ಲೈಟ್‍ (ಡ್ರೋನ್‍‍ಗಳಿಗೆ) ಪ್ರತ್ಯೇಕವಾದ ಮೀಸಲಾದ ಆಪ್‍‍ನಿಂದ ಸೈಗ್ನ್-ಇನ್ ಮಾಡಿಕೊಳ್ಳಬೇಕಾಗುತ್ತದೆ, ನಂತರ ಆಟೋಮ್ಯಾಟಿಕ್ ಆಗಿ ಅದು ಸ್ವಿಕರಿಸುವ ಅಥವಾ ನಿರಾಕರಿಸುವ ಕಾರ್ಯವನ್ನು ಮಾಡುತ್ತದೆ. ಡ್ರೋನ್ ಪಾಲಿಸಿಯು ಭಾರತದಲ್ಲಿನ ಆಕಾಶಯಾನ, ಇಂಜಿನಿಯರಿಂಗ್ ಮತ್ತು ಚಲನಶೀಲತೆ ಸೇವೆಗಳಿಗೆ ಹೊಸ ದಾರಿಯನ್ನು ಮಾಡಿಕೊಡುತ್ತದೆ.

ಡಿಸೆಂಬರ್ 1ರಿಂದ ಡ್ರೋನ್ ಹಾರಿಸಲು ಲೈಸನ್ಸ್ ಕಡ್ಡಾಯ..!!

"ಇಂದು ನಾವು ವಾಯುಯಾನ ಇತಿಹಾಸದಲ್ಲಿ ಅದ್ಭುತವಾದ ಹೊಸ ಅಧ್ಯಾಯವನ್ನು ಪ್ರಾರಂಭಿಸುತ್ತೇವೆ ಡ್ರೋನ್‍‍ಗಳ ವಾಣಿಜ್ಯ ಬಳಕೆಗೆ ಅವಕಾಶ ಮಾಡಿಕೊಡುತ್ತೇವೆ.ನಮ್ಮ ಆರ್ಥಿಕ ಪ್ರಗತಿಗೆ ಮುಂದಾಗುವ ಅನೇಕ ಹೊಸದಾದ ಮತ್ತು ಉತ್ತೇಜಕ ಅನ್ವಯಿಕೆಗಳು ಹೊರಹೊಮ್ಮುತ್ತವೆ ಎಂದು ನಮಗೆ ಖಚಿತವಾಗಿದೆ. ವ್ಯಾಪಕ ಮೇಡ್ ಇನ್ ಇಂಡಿಯಾ ಡ್ರೋನ್ ಉದ್ಯಮವನ್ನು ಪ್ರೋತ್ಸಾಹಿಸುತ್ತೇವೆ ಎಂದು ಸಿವಿಲ್ ಏವಿಯೇಷನ್ ಸಚಿವ ಸುರೇಶ್ ಪ್ರಭು ಅವರು ಹೇಳಿಕೊಂಡಿದ್ದಾರೆ.

ಡಿಸೆಂಬರ್ 1ರಿಂದ ಡ್ರೋನ್ ಹಾರಿಸಲು ಲೈಸನ್ಸ್ ಕಡ್ಡಾಯ..!!

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಪ್ರಸ್ತುತ ಡೋನ್‍‍‍ಗಳನ್ನು ಕೇವಲ ಛಾಯಗ್ರಾಹಣ ಕಾರ್ಯಗಳಿಗೆ ಉಪಯೋಗಿಸುತ್ತಿದ್ದಾರೆ. ಹೊಸ ಡ್ರೋನ್ ನೀತಿಯು ಖಂಡಿತವಾಗಿ ಸಾಮಾನ್ಯ ಭಾರತೀಯರಿಗೆ ತಿಳಿಯದಿರುವ ವಿವಿಧ ಅಪ್ಲಿಕೇಶನ್‍‍ಗಳನ್ನು ಪರಿಚಯಿಸುತ್ತದೆ. ಇವುಗಳ ಅವಕಾಶವು ವಿಸ್ತಾರವಾಗಿದು ಈಗಾಗಲೆ ಹಲವಾರು ಸಂಸ್ಥೆಗಳು ಮತ್ತು ಸ್ಟಾರ್ಟ್-ಅಪ್ ಕಂಪೆನಿಗಳು ಇವುಗಳ ಮೇಲೆ ಬಂಡವಾಳವನ್ನು ಕೂಡ ಹೂಡಿದ್ದಾರೆ. ಬಹುಷಃ ಭವಿಷ್ಯದಲ್ಲಿ ನೀವು ಆನ್‍‍ಲೈನ್‍‍ನಲ್ಲಿ ಆರ್ಡರ್ ಮಾಡಿರುವುದನ್ನು ಡ್ರೋನ್‍‍ಗಳಿಂದಲೇ ಡೆವರಿ ಪಡೆಯಬಹುದು.

Most Read Articles

Kannada
Read more on off beat
English summary
Heavy-Duty Flying Drones To Be Legal In India From December 2018.
Story first published: Wednesday, August 29, 2018, 16:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X