ಗರ್ಲ್‌ಫ್ರೆಂಡ್‌ ಜೊತೆ ಮಾನ್ಸೂನ್‌ ರೈಡ್‌ ಹೋಗುವ ಪ್ಲಾನ್‌ ಮಾಡಿದ್ದೀರಾ?: ಇಲ್ಲಿದೆ ಪ್ರಮುಖ ಬೈಕ್‌ಗಳು

ಈ ಲೇಖನವನ್ನು ಓದುತ್ತಿರುವ ನಿಮ್ಮಲ್ಲಿ ಹಲವರು ಲವ್‌ನಲ್ಲಿ ಕಮಿಟ್‌ ಆಗಿರುವವರೇ. ಕೆಲವೇ ಕೆಲವರು ಮಾತ್ರ ಇನ್ನೂ ಸಹ ಹುಡುಗಿ ಸಿಗದೇ ಸಿಂಗಲ್‌ ಆಗಿರುವವರು ಎಂಬುದು ನಮ್ಮ ಊಹೆ. ಹಾಗಾಗಿ ಈ ಲೇಖನ ಸಿಂಗಲ್ಸ್‌ಗೆ ಅಲ್ಲ. ನಿಮ್ಮಲ್ಲಿ ಕಮಿಟ್‌ ಆಗಿರುವ ಹಲವರು ಬೈಕ್‌ ಹೊಂದಿರುತ್ತೀರಿ, ಇಲ್ಲವೇ ತೆಗೆದುಕೊಳ್ಳುವ ಯೋಚನೆ ಮಾಡಿರುತ್ತೀರಿ. ಹಾಗಾಗಿ ಇಂದಿನ ಈ ಲೇಖನವನ್ನು ನಾವು ನಿಮಗೆ ಅರ್ಪಿಸುತ್ತಿದ್ದೇವೆ. ಇದರಲ್ಲಿ ನಿಮ್ಮ ಗರ್ಲ್‌ಫ್ರೆಂಡ್‌ ಜೊತೆ ಸುತ್ತಾಡಲು ಖರೀದಿ ಮಾಡಬಹುದಾದ ಪ್ರಮುಖ ಬೈಕ್‌ಗಳು ಯಾವುವು ಎಂದು ನೋಡೋಣ ಬನ್ನಿ.

ಡ್ಯೂಕ್‌ 390: ಹುಡುಗಿಯರು ಸಹ ಈ ಬೈಕ್‌ ಹೆಚ್ಚಾಗಿ ಇಷ್ಟ ಪಡುತ್ತಾರೆ. 2024ರ ಕೆಟಿಎಂ 390 ಡ್ಯೂಕ್ (2024 KTM 390 Duke) ಬೈಕ್ ಮೂರನೇ ತಲೆಮಾರಿನ ನೇಕೆಡ್ ಶೈಲಿಯ ಸೂಪರ್‌ಡ್ಯೂಕ್ ಆಗಿದೆ. 2024ರ 390 ಡ್ಯೂಕ್ ಬೈಕ್ ಮುಂಭಾಗದಲ್ಲಿ, ಹೊಸ DRL ಗಳು ಸ್ಪ್ಲಿಟ್ ಹೆಡ್‌ಲ್ಯಾಂಪ್ ವಿನ್ಯಾಸಕ್ಕೆ ಅಗ್ರೇಸಿವ್ ಲುಕ್ ಅನ್ನು ನೀಡಿದೆ. 15-ಲೀಟರ್ ಇಂಧನ ಟ್ಯಾಂಕ್‌ನಿಂದ ಅಗ್ರೇಸಿವ್ ಲುಕ್ ಅನ್ನು ವಿನ್ಯಾಸವನ್ನು ಇನ್ನಷ್ಟು ಹೆಚ್ಚಿಸಲಾಗಿದೆ. ಈ ಹೊಸ ಪೆಟ್ರೋಲ್ ಸ್ಟೋರೇಜ್ ಸೆಟಪ್‌ನಲ್ಲಿನ ವಿಸ್ತರಣೆಗಳ ಮಾಡಿದೆ.

Experience the Best Monsoon Ride with Your Girlfriend on These Bikes

ಹೊಚ್ಚ ಹೊಸ 2024ರ ಕೆಟಿಎಂ 390 ಡ್ಯೂಕ್ ಬೈಕ್ ಈಗ ದೊಡ್ಡ 399cc, ಸಿಂಗಲ್-ಸಿಲಿಂಡರ್, DOHC, ಲಿಕ್ವಿಡ್-ಕೂಲ್ಡ್ ಎಂಜಿನ್‌ ಹೊಂದಿದೆ. ಈ ಹೊಸ 399cc ಎಂಜಿನ್ 64mm ನಲ್ಲಿ ದೀರ್ಘವಾದ ಸ್ಟ್ರೋಕ್ ಅನ್ನು ಹೊಂದಿದೆ. ಬೋರ್ ಅದರ ಹಿಂದಿನ 89mm ನಲ್ಲಿ ಹೋಲುತ್ತದೆ. ಹೊಸ ಎಂಜಿನ್ ಕಡಿಮೆ ಆರ್‌ಪಿಎಂನಲ್ಲಿ ಹೆಚ್ಚು ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350: ಸದ್ಯಕ್ಕೆ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ ಬೈಕ್‌ಗೆ ಇರುವಷ್ಟು ಮಹಿಳಾ ಅಭಿಮಾನಿಗಳು ಬೇರೆ ಬೈಕ್‌ಗೆ ಇಲ್ಲವೆಂದರೆ ತಪ್ಪಾಗಲಾರದು. ರಾಯಲ್ ಎನ್‌ಫೀಲ್ಡ್ ಕಂಪನಿಯು ಈ ಕ್ಲಾಸಿಕ್ 350 ಬೈಕ್ ಮಾದರಿಯಲ್ಲಿ ಮಿಟಿಯೊರ್ 350 ಮಾದರಿಗಾಗಿ ಪರಿಚಯಿಸಿರುವ 349 ಸಿಸಿ SOHC ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 19.1 ಬಿಎಚ್‌ಪಿ ಪವರ್ ಮತ್ತು 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

Experience the Best Monsoon Ride with Your Girlfriend on These Bikes

ಇನ್ನು ಈ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಕ್ರೋಮ್ ರೆಡ್, ಕ್ರೋಮ್ ಬ್ರೊಂಜ್, ಡಾರ್ಕ್ ಸ್ಟೆಲ್ತ್ ಬ್ಲ್ಯಾಕ್, ಡಾರ್ಕ್ ಗನ್‌ಮೆಟಲ್ ಗ್ರೇ, ಸಿಗ್ನಲ್ಸ್ ಮಾರ್ಷ್ ಗ್ರೇ, ಸಿಗ್ನಲ್ಸ್ ಸ್ಯಾಂಡ್ ಸ್ಟಾರ್ಮ, ಹಾಲ್ಸಿಯಾನ್ ಗ್ರೀನ್, ಹಾಲ್ಸಿಯಾನ್ ಬ್ಲ್ಯಾಕ್, ಹಾಲ್ಸಿಯಾನ್ ಗ್ರೇ, ರೆಡ್‌ಡಿಚ್ ಗ್ರೀನ್ ಮತ್ತು ರೆಡ್‌ಡಿಚ್ ಗ್ರೇ ಎಂಬ ಬಣ್ಣಗಳನ್ನು ಹೊಂದಿದೆ.

ಟ್ರಯಂಫ್ ಸ್ಪೀಡ್‌ 400: ಹೊಸ ಟ್ರಯಂಫ್ ಸ್ಪೀಡ್ 400 (Triumph Speed 400) ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, 398.15cc, ಲಿಕ್ವಿಡ್-ಕೂಲ್ಡ್, 4-ವಾಲ್ವ್, DOHC, ಓವರ್‌ಸ್ಕ್ವೇರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,000rpm ನಲ್ಲಿ 39.5bhp ಮತ್ತು 6,500rpm ನಲ್ಲಿ 37.5Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ನೊಂದಿಗೆ ಸ್ಪೀಡ್ ಗೇರ್‌ಬಾಕ್ಸ್ ಅನ್ನು ಸಹ ಹೊಂದಿದೆ.

Experience the Best Monsoon Ride with Your Girlfriend on These Bikes

ಈ ಬೈಕ್‌ನ ಆರಂಭಿಕೆ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2,34,497 ಆದರೆ ಆನ್ ರೋಡ್ ಬೆಲೆಯು ರೂ.3,02,866 ಆಗಿದೆ. ಹೊಸ ಟ್ರಯಂಫ್ ಸ್ಪೀಡ್ 400 ಬೈಕ್ ಈ ಬೈಕ್ ತನ್ನ 'ಟಿಯರ್-ಡ್ರಾಪ್' ಆಕಾರದ ಫ್ಯೂಯಲ್ ಟ್ಯಾಂಕ್ ಮತ್ತು ಎಲ್ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿದೆ. ಇದರೊಂದಿಗೆ ರಿಯರ್-ವ್ಯೂ ಮಿರರ್‌ಗಳು ಮತ್ತು ಎಲ್‌ಇಡಿ ಟೈಲ್ ಲ್ಯಾಂಪ್‌ಗಳಂತಹ ವೃತ್ತಾಕಾರದ ವಿನ್ಯಾಸದ ಅಂಶಗಳೊಂದಿಗೆ ಆಕರ್ಷಕವಾದ ನಿಯೋ-ರೆಟ್ರೊ ಥೀಮ್ ಅನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, July 31, 2024, 15:48 [IST]
English summary
Experience the best monsoon ride with your girlfriend on these bikes
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+