ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಬೈಕ್- ಘಟನೆಗೆ ಅಸಲಿ ಕಾರಣ ಏನು?

ಪೆಟ್ರೋಲ್ ಬಂಕ್‌ಗಳಲ್ಲಿ ಇತ್ತೀಚೆಗೆ ಒಂದಿಲ್ಲೊಂದು ಒಂದು ಅಗ್ನಿ ದುರಂತಗಳು ನಡೆಯುತ್ತಲೇ ಇವೆ. ಮೊನ್ನೆ ಕೂಡಾ ಪೆಟ್ರೋಲ್ ಬಂಕ್ ಒಂದರಲ್ಲಿ ಪೆಟ್ರೋಲ್ ತುಂಬಿಸಿಕೊಂಡು ಹೋಗುತ್ತಿದ್ದ ಬೈಕ್‌ವೊಂದು ಬೆಂಕಿಗಾಹುತಿಯಾಗಿದ್ದು, ಘಟನೆಯ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಬೈಕ್- ಘಟನೆಗೆ ಅಸಲಿ ಕಾರಣ ಏನು?

ಪೆಟ್ರೋಲ್ ಬಂ‍‍ಕ್‌ಗಳಲ್ಲಿ ಅಪಾಯ ಸೂಚಕಗಳನ್ನು ಎಲ್ಲೆಡೆ ಅಂಟಿಸಿರುತ್ತಾರೆ. ಹೀಗಿದ್ದರೂ ಈ ಬಗ್ಗೆ ಬಹುತೇಕ ವಾಹನ ಮಾಲೀಕರು ತಲೆ ಕೆಡಿಸಿಕೊಳ್ಳುವುದೇ ಇಲ್ಲಾ. ಹೀಗಿರುವ ಪೆಟ್ರೋಲ್ ಬಂಕ್‌ಗಳಲ್ಲಿ ಆಗುವ ಸಣ್ಣತಪ್ಪುಗಳು ದೊಡ್ಡ ದುರಂತಗಳಿಗೆ ಕಾರಣವಾಗುತ್ತವೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎನ್ನಬಹುದು.

ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಬೈಕ್- ಘಟನೆಗೆ ಅಸಲಿ ಕಾರಣ ಏನು?

ತಮಿಳುನಾಡಿನ ತಿರುಣಲ್ವೇಲಿನಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳಲು ಬಂದಿದ್ದ ಯುವಕನೊಬ್ಬನ ಬೈಕ್‌ಗೆ ಹಟಾತನೆ ಬೆಂಕಿ ಹಂಚಿಕೊಂಡಿರುವ ವಿಡಿಯೋ ಒಂದು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಬೈಕ್- ಘಟನೆಗೆ ಅಸಲಿ ಕಾರಣ ಏನು?

ತಿರುಣಲ್ವೇಲಿಯ ಮುರುಗನ್‌ಕುರಿಚಿಯಲ್ಲಿರುವ ಪೆಟ್ರೋಲ್ ಬಂಕ್‍‍ಗೆ ಅಲ್ವಿನ್ ಎಂಬ ಯುವಕನೊಬ್ಬ ತನ್ನ ಬೈಕ್‍‍ಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಹೋದಾಗ ಈ ಘಟನೆಯ ನಡೆದಿದ್ದು, ಅದೃಷ್ಟವಶಾತ್ ಅಲ್ವಿನ್ ಪ್ರಾಣಪಾಯದಿಂದ ಪಾರಾಗಿದ್ದಾನೆ ಎನ್ನುವುದೇ ಸಮಾಧಾನಕರ ಸಂಗತಿ.

ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಬೈಕ್- ಘಟನೆಗೆ ಅಸಲಿ ಕಾರಣ ಏನು?

ಇನ್ನು ಘಟನೆಗೂ ಮುನ್ನ ಪೆಟ್ರೋಲ್ ಬಂಕ್‍‍ನಲ್ಲಿ ಇಂಧನವನ್ನು ತುಂಬಿಸಿದ ನಂತರ ಅಲ್ವಿನ್ ಬೈಕ್ ಸ್ಟಾರ್ಟ್ ಮಾಡಲು ಮುಂದಾಗುತ್ತಾನೆ. ಆಗ ಆತನ ಬೈಕ್‍‍ನಲ್ಲಿ ಬೆಂಕಿ ಆಕಸ್ಮಿಕವಾಗಿ ಉರಿಯಲು ಶುರುವಾಗುತ್ತೆ. ಅದೇ ಸಮಯದಲ್ಲಿ ಬೈಕ್‍‍ನ ಮೇಲೆ ಕುಳಿತಿದ್ದ ಅಲ್ವಿನ್‍ ಕೂಡಾ ಬೆಂಕಿಯಲ್ಲಿ ಸಿಲುಕಿಕೊಳ್ಳುತ್ತಾನೆ.

ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಬೈಕ್- ಘಟನೆಗೆ ಅಸಲಿ ಕಾರಣ ಏನು?

ತದನಂತರ ಬೈಕ್ ಅನ್ನು ಕೆಳಕ್ಕೆ ಉರುಳಿಸಿ ಪಕ್ಕಕ್ಕೆ ಧಾವಿಸುವ ಅಲ್ವಿನ್, ಬೆಂಕಿ ಹೊತ್ತಿದ ನೋವಿನಿಂದ ಕೂಗಾಡುತ್ತಾ ದಿಕ್ಕಾಪಾಲಾಗಿ ಓಡುತ್ತಾನೆ. ಈ ವೇಳೆ ಸಿಬ್ಬಂದಿ ಮಾಡಿದ ಪರಿಶ್ರಮದಿಂದ ಆಗಬಹುದಾದ ದೊಡ್ಡ ದುರಂತವನ್ನು ತಪ್ಪಿಸಿದ್ದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಬೈಕ್- ಘಟನೆಗೆ ಅಸಲಿ ಕಾರಣ ಏನು?

ಪೆಟ್ರೋಲ್ ಬಂಕ್‍‍ನಲ್ಲಿದ್ದ ಸಿಬ್ಬಂದಿಯು ಆ ತಕ್ಷಣವೇ ಬೆಂಕಿಯನ್ನು ಆರಿಸಿದ್ದು, ಮಾಹಿತಿಗಳ ಪ್ರಕಾರ ಬೈಕ್ ಮಾಲೀಕ ಅಲ್ವಿನ್‍‍ನ ದೇಹವು ಶೇಕಡಾ 40ರಷ್ಟು ಸುಟ್ಟುಹೋಗಿದೆ ಎನ್ನಲಾಗಿದ್ದು, ಪಲಯಾನ್‍ ಕೋಟೈ‍‍ನಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಬೈಕ್- ಘಟನೆಗೆ ಅಸಲಿ ಕಾರಣ ಏನು?

ಬೆಂಕಿಗೆ ನಿಖರ ಕಾರಣ.?

ತಿರುಣಲ್ವೇಲಿಯ ಹತ್ತಿರದ ಪೆಟ್ರೋಲ್ ಬಂಕ್‍‍ನಲ್ಲಿನ ಆಕಸ್ಮಿಕ ಅಗ್ನಿ ಅವಘಡಕ್ಕೆ ಇದುವರೆಗೂ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ. ಆದ್ರೆ ಬೈಕಿನ ಪೆಟ್ರೋಲ್ ಟ್ಯಾಂಕ್ ತುಂಬಿ ಹೋಗಿದ್ದು, ಕೊಂಚ ಹೊರಬಂದು ಅಲ್ವಿನ್‍ ಧರಿಸಿದ್ದ ಶರ್ಟ್‍‍ನ ಮೇಲೆ ಬಿದ್ದಿದಂತೆ. ಇದುವೇ ಘಟನೆಗೆ ಕಾರಣವಾಗಿಬಹುದು ಎನ್ನಲಾಗಿದೆ.

ಪೆಟ್ರೋಲ್ ತುಂಬಿಸಿಕೊಂಡ ನಂತರ ಅಲ್ವಿನ್ ಬೈಕ್ ಅನ್ನು ಸ್ಟಾರ್ಟ್ ಮಾಡಿದಾಗ ಹಟಾತನೆ ಬೆಂಕಿ ಹೊತ್ತಿಕೊಳ್ಳತ್ತಿರುವ ದೃಶ್ಯವನ್ನು ಈ ವಿಡಿಯೋನಲ್ಲಿ ನೀವು ಗಮನಿಸಬಹುದು..

ಪೆಟ್ರೋಲ್ ಬಂಕ್‌ನಲ್ಲಿ ಹೊತ್ತಿ ಉರಿದ ಬೈಕ್- ಘಟನೆಗೆ ಅಸಲಿ ಕಾರಣ ಏನು?

ಈಗ ಅಲ್ವಿನ್‍ನ ಪರಿಸ್ಥಿತಿ ಹೇಗಿದೆ.?

ಸ್ಥಳಿಯ ಪೊಲೀಸರು ಈ ಘಟನೆಯ ಬಗ್ಗೆ ಪ್ರಕರಣ ದಾಖಸಿಕೊಂಡು ತನಿಖೆ ನಡೆಸುತ್ತಿದ್ದು, ತನಿಖೆಯ ಅಂತಿಮ ಫಲಿತಾಂಶವನ್ನು ಪರಿಷ್ಕರಿಸಲಾಗುತ್ತದೆ. ಒಟ್ಟಿನಲ್ಲಿ ಪೆಟ್ರೋಲ್ ಬಂಕ್‍‍ಗೆ ಬಂದ ಎಲ್ಲರೂ ಅವಸರದಲ್ಲಿಯೇ ಇರುತ್ತಾರೆ. ಹೀಗಿರುವಾಗ ನಾವು ಮಾಡುವ ಯಾವುದಾದರೂ ಒಂದು ತಪ್ಪು ಕೂಡಾ ಇಂತಹ ದುರಂತಗಳಿಗೆ ಕಾರಣವಾಗಬಹುದು.

More from DriveSpark

ಅಗ್ಗದ ಬೆಲೆಯಲ್ಲಿ ಟಾಟಾ ಮೋಟಾರ್ಸ್ ಬಿಡುಗಡೆಗೊಳಿಸಿದ ಟಿಯಾಗೊ ಎನ್‍ಆರ್‍‍ಜಿ ಕಾರಿನ ಚಿತ್ರಗಳು ಹೇಗಿದೆ ನೋಡಿ..

Article Published On: Saturday, September 15, 2018, 15:35 [IST]
English summary
Fire accident on nellai petrol pump.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+