ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯುವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

By Praveen Sannamani

ಜಗತ್ತಿನ ಆಟೋ ಉದ್ಯಮದಲ್ಲಿ ಭಾರೀ ಕುತೂಹಲ ಹುಟ್ಟುಹಾಕಿರುವ ರೋಲ್ಸ್ ರಾಯ್ಸ್ ಮೊದಲ ಎಸ್‌ಯುವಿ ಮಾದರಿಯಾದ ಕಲಿನಿಯನ್ ಕಾರುಗಳ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಹೊಸ ಕಾರಿನ ಖರೀದಿಗಾಗಿ ಭಾರತೀಯ ಮೂಲದ ಮಹಿಳೆಯೊಬ್ಬರು ಮೊದಲ ಬಾರಿಗೆ ಬುಕ್ಕಿಂಗ್ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.

ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ಐಷಾರಾಮಿ ಸೆಡಾನ್‌ಗಳಿಗೆ ಹೆಗ್ಗುರುತು ಎಂದೆನಿಸಿದ್ದ ರೋಲ್ಸ್ ರಾಯ್ಸ್ ಸಂಸ್ಥೆಯು ಇದೇ ಮೊದಲ ಬಾರಿಗೆ ಎಸ್‌ಯುವಿ ಕಾರುಗಳನ್ನು ನಿರ್ಮಾಣ ಮಾಡುತ್ತಿದ್ದು, ಐಷಾರಾಮಿ ಕಾರು ಉತ್ಪಾದಕರಲ್ಲಿಯೇ ಕುತೂಹಲ ಹುಟ್ಟುಹಾಕಿದೆ. ಹೀಗಿರುವಾಗ ಭಾರತೀಯ ಮೂಲದ ಅಭಿನಿ ಸೋಹಾನ್ ಎನ್ನುವವರು ಅತಿ ದುಬಾರಿ ಬೆಲೆಯ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಮುಂಗಡ ಹಣ ಪಾವತಿಸಿ ಬುಕ್ ಮಾಡಿದ್ದಾರೆ.

ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ದುಬೈನಲ್ಲಿ ನೆಲೆಸಿರುವ ಮುಂಬೈ ಮೂಲದ ಅಭಿನಿ ಸೋಹಾನ್ ಅವರು ಅರೈಸ್ ಗ್ರೂಪ್‌ನ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದು, ತಮ್ಮ ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಅಭಿನಿ ಸೋಹಾನ್ ಅವರ ಪತಿಯಿಂದ ಈ ಗಿಫ್ಟ್ ಸಿಕ್ಕಿದೆ ಎನ್ನಲಾಗಿದೆ.

ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ಇನ್ನು ನೂರಕ್ಕೂ ಹೆಚ್ಚು ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಂಡಿರುವ ರೋಲ್ಸ್ ರಾಯ್ಸ್ ಸಂಸ್ಥೆಯ ಮೊದಲ ಎಸ್‌ಯುವಿ ಕಾರಿಗೆ ಕಲಿನಿಯನ್ ಎಂದು ನಾಮಕರಣ ಮಾಡಲಾಗಿದ್ದು, ಕುಲಿನಿಯನ್ ಕಾರಿನ ವಿನ್ಯಾಸಗಳು ಜಗತ್ತಿನಲ್ಲಿ ಇದುವರೆಗೆ ಉತ್ಪಾದನೆಯಾದ ಇತರೆ ಐಷಾರಾಮಿ ಕಾರುಗಳಿಂತಲೂ ಅತಿವಿನೂತ ತಂತ್ರಜ್ಞಾನಗಳೊಂದಿಗೆ ಸಿದ್ದಗೊಂಡಿರುವುದು ಮತ್ತೊಂದು ವಿಶೇಷ.

ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ಕಲಿನಿಯನ್ ಅಂದ್ರೆ ಏನು?

ರೋಲ್ಸ್ ರಾಯ್ಸ್ ಸಂಸ್ಥೆಯು ಅಭಿವೃದ್ಧಿ ಮಾಡಿರುವ ಮೊದಲ ಎಸ್‌ಯುವಿಗೆ ಕಲಿನಿಯನ್ ಎಂದು ನಾಮಕರಣ ಮಾಡಲು ಹಲವು ಕಾರಣಗಳಿದ್ದು, ಕಲಿನಿಯನ್ ಎನ್ನುವುದು ಜಗತ್ತಿನ ಅತಿ ದುಬಾರಿ ವಜ್ರದ ಮಾದರಿಯಾಗಿದೆ. ಇದು ಮೊದಲ ಬಾರಿಗೆ 1905ರಲ್ಲಿ ದಕ್ಷಿಣ ಆಫ್ರಿಕಾದ ವಜ್ರದ ಗಣಿಗಳಲ್ಲಿ ಪತ್ತೆಯಾಗಿದ್ದಲ್ಲದೆ 3,106 ಕ್ಯಾರೆಟ್ ವೈಶಿಷ್ಟ್ಯತೆಗಳೊಂದಿಗೆ ಜಗತ್ತಿನ ಅತಿ ದುಬಾರಿ ವಸ್ತುಗಳಲ್ಲಿ ಅದು ಒಂದು ಎಂಬ ಹೆಗ್ಗಳಿಕೆ ಪಡೆದುಕೊಂಡಿತ್ತು.

ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ಹೀಗಾಗಿಯೇ ರೋಲ್ಸ್ ರಾಯ್ಸ್ ಸಂಸ್ಥೆಯು ತನ್ನ ಮೊದಲ ಎಸ್‌ಯುವಿಯನ್ನು ಕಲಿನಿಯನ್ ಎಂದು ನಾಮಕರಣ ಮಾಡುವ ಮೂಲಕ ಜಗತ್ತಿನ ಶ್ರೇಷ್ಠ ಎಸ್‌ಯುವಿ ಎಂದು ವರ್ಣನೆ ಮಾಡಿದ್ದು, ಕಾರಿನ ಪ್ರತಿ ಇಂಚಿಂಚೂ ಕೂಡಾ ಒಂದೊಂದು ವಿಶೇಷತೆಯನ್ನು ಪಡೆದುಕೊಂಡಿದೆ.

ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ಕಾರಿನ ಡಿಸೈನ್

ಕಲಿನಿಯನ್ ಕಾರುಗಳು ಮುಂಭಾಗದಿಂದ ಫ್ಯಾಂಟಮ್ ಸೆಡಾನ್ ಕಾರಿನ ಹೋಲಿಕೆಯಿದ್ದರೂ ಸ್ಟೈನ್ ಲೆಸ್ ಸ್ಟೀಲ್ ಗ್ರಿಲ್, ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಸ್ಲಾಟ್ ವಿನ್ಯಾಸಗಳಲ್ಲಿ ಸಾಕಷ್ಟು ಬದಲಾವಣೆ ಪಡೆದಿದ್ದು, ಫ್ರಂಟ್ ಬಂಪರ್ ಮತ್ತು ಲೋಗೋ ಡಿಸೈನ್‌ಗಳು ವಿಶೇಷ ಎನ್ನಿಸಲಿವೆ.

ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ಕಲಿನಿಯನ್ ಕಾರುಗಳು 5-ಸೀಟರ್ ಸೌಲಭ್ಯ ಹೊಂದಿರುವ ಎಸ್‌ಯುವಿ ಮಾದರಿಯಾಗಿದ್ದು, 22 ಇಂಚಿನ ಚಕ್ರಗಳನ್ನು ಹೊಂದಿದೆ. ಜೊತೆಗೆ ಅಲ್ಯೂಮಿನಿಯಂ ಪ್ಯಾಟ್‌ಫಾರ್ಮ್ ಮೇಲೆ ಸಿದ್ದವಾಗಿರುವ ಕಲ್ಲಿನನ್ ಕಾರುಗಳು ಫ್ಯಾಂಟಮ್ ಮಾದರಿಯಲ್ಲೇ ಎಂಜಿನ್ ಡಿಸೈನ್ ಪಡೆದಿದೆ.

ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ಜೊತೆಗೆ ಆಧುನಿಕ ಐಷಾರಾಮಿ ಎಸ್‌ಯುವಿ ಎಂದೇ ಬಿಂಬಿತವಾಗಿರುವ ಕಲಿನಿಯನ್ ಕಾರುಗಳು ಸೈಡ್ ಪ್ರೋಫೈಲ್‌ನಲ್ಲಿ ಬಲವಾದ ಭುಜ ರೇಖೆಗಳನ್ನು ಹೊಂದಿರಲಿದ್ದು, ಈ ಹಿಂದೆ 1930ರಲ್ಲಿ ನಿರ್ಮಾಣದವಾಗಿದ್ದ 'ಡಿ ಬ್ಲ್ಯಾಕ್' ಕಾರಿನ ಕೆಲವು ವಿನ್ಯಾಸಗಳನ್ನು ಸಹ ಇದರಲ್ಲಿ ಎರವಲು ಪಡೆದುಕೊಳ್ಳಲಾಗಿದೆ.

ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ಕಾರಿನ ಒಳವಿನ್ಯಾಸ

ಆಧುನಿಕ ಒಳವಿನ್ಯಾಸದೊಂದಿಗೆ ಸಿದ್ದವಾಗಿರುವ ರೋಲ್ಸ್ ರಾಯ್ಸ್ ಕಲಿನಿಯನ್ ಕಾರುಗಳಲ್ಲಿ ಬಳಕೆ ಮಾಡಿರುವ ಐಷಾರಾಮಿ ವೈಶಿಷ್ಟ್ಯತೆಗಳು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಕಾರಿನ ಒಳಗೆ ಪ್ರವೇಶ ಮಾಡಿದ್ದಲ್ಲಿ ಸ್ಪರ್ಗಕ್ಕೆ ಮೂರೇ ಗೇಣು ಎನ್ನುವ ಭಾವನೆ ಮೂಡದೇ ಇರಲಾರದು.

ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

5-ಸೀಟರ್ ಸಾಮರ್ಥ್ಯವಿರುವ ಈ ಕಾರಿನಲ್ಲಿ ಪ್ರತಿ ಸೀಟುಗಳು ಸಹ ಪ್ರತ್ಯೇಕವಾಗಿ ಎಲೆಕ್ಟ್ರಿಕ್ ಆಪರೇಟ್ ಸೌಲಭ್ಯ ಹೊಂದಿದ್ದು, ನಿಮಗೆ ಬೇಕಾದ ರೀತಿಯಲ್ಲಿ ಹೋಂದಾಣಿಕೆ ಮಾಡಿಕೊಳ್ಳಬಹುದು. ಜೊತೆಗೆ ಬೆರಳುಗಳ ತುದಿಯಲ್ಲೇ ನಿಯಂತ್ರಣ ಮಾಡಬಹುದಾದ ಇನ್ಪೋಟೈನ್‌ಮೆಂಟ್ ಮತ್ತು ಎಂಟರ್‌ಟೈನ್‌ಮೆಂಟ್ ಸೌಲಭ್ಯವನ್ನು ಇದಲ್ಲಿದೆ.

ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ಇದು ತ್ರಿ ಬಾಕ್ಸ್ ಎಸ್‌ಯುವಿ

ಹೌದು, ಕಲಿನಿಯನ್ ಕಾರುಗಳನ್ನು ರೋಲ್ಸ್ ರಾಯ್ಸ್ ಸಂಸ್ಥೆಯು ತ್ರಿ ಬಾಕ್ಸ್ ಎಸ್‌ಯುವಿ ಎಂದು ಕರೆದಿದೆ. ಇದಕ್ಕೆ ಕಾರಣ, ಈ ಕಾರಿನಲ್ಲಿ ಎಂಜಿನ್‌ ರೂಂ, ಕ್ಯಾಬಿನ್ ಮತ್ತು ಬೂಟ್‌ ಎಂದು ಮೂರು ವಿಭಾಗಗಳಾಗಿ ಪ್ರತ್ಯೇಕಿಸಿದೆ. ಇದನ್ನೇ ತ್ರಿ ಬಾಕ್ಸ್‌ ಎಸ್‌ಯುವಿ ಎನ್ನಲಾಗಿದೆ. ಇದು ಇತರೆ ಎಸ್‌ಯುವಿಗಳಲ್ಲಿ ಎಂಜಿನ್‌ ರೂಂ ಮತ್ತು ಕ್ಯಾಬಿನ್‌ಗಳು ಮಾತ್ರ ಇರುತ್ತವೆ. ಕ್ಯಾಬಿನ್‌ಗಳ ಒಳಗೇ ಬೂಟ್‌ ಇರುತ್ತದೆ. ಹೀಗಾಗಿ ಅವು ಟು ಬಾಕ್ಸ್ ಎಸ್‌ಯುವಿಗಳಾಗಿವೆ.

ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ಇನ್ನು ಮುಂದುವರೆದು, ಕಲಿನಿಯನ್ ಕಾರುಗಳಲ್ಲಿ ಸೂಟ್ ಪ್ಯಾಕೇಜ್ ಸೌಲಭ್ಯವನ್ನು ಸಹ ಸೇರಿಸಲಾಗಿದ್ದು, ಕಾರಿನ ಬೂಟ್ ಸ್ಪೆಸ್ ಬಳಿ ಬಟನ್ ಒತ್ತಿದ್ರೆ ಸಾಕು ಎರಡು ಐಷಾರಾಮಿ ಚೇರ್‌ಗಳು ಸಣ್ಣದೊಂದು ಸಭೆ ನಡೆಸಲು ಅನೂಕಲಕರ ಮಾಡಿಕೊಡುತ್ತವೆ.

ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ಎಂಜಿನ್ ಸಾಮರ್ಥ್ಯ

ಕಲಿನಿಯನ್ ಕಾರುಗಳು 6.75-ಲೀಟರ್ ಟ್ವಿನ್ ಟರ್ಬೋ ವಿ12 ಪೆಟ್ರೋಲ್ ಎಂಜಿನ್ ಹೊಂದಿದ್ದು, 571-ಬಿಎಚ್‌ಪಿ ಮತ್ತು 650-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು. ಹೀಗಾಗಿ ಕಾರಿನ ವೇಗವನ್ನು ಪ್ರತಿ ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಇರಿಸಲಾಗಿದೆ.

ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ಇದಲ್ಲದೇ ರೋಲ್ಸ್ ರಾಯ್ಸ್ ಸಂಸ್ಥೆಯು ಮೊದಲ ಬಾರಿಗೆ ಕಲಿನಿಯನ್ ಕಾರುಗಳನ್ನು ಆಲ್ ವೀಲ್ಹ್ ಡ್ರೈವ್ ಸಿಸ್ಟಂನೊಂದಿಗೆ ಬಿಡುಗಡೆ ಮಾಡುತ್ತಿದ್ದು, ಆಪ್ ರೋಡ್‌ಗಳಲ್ಲೂ ಇದು ತನ್ನ ಕೌಶಲ್ಯ ಪ್ರದರ್ಶನ ಮಾಡಬಲ್ಲದು. ಇದಕ್ಕಾಗಿಯೇ ಕಾರಿನಲ್ಲಿ ವಿವಿಧ ರೀತಿಯ ಡ್ರೈವಿಂಗ್ ಮೊಡ್‌ಗಳನ್ನು ಒದಗಿಸಲಾಗಿದೆ.

ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ಕಾರಿನ ಬೆಲೆಗಳು ಮತ್ತು ಬಿಡುಗಡೆ ಮಾಹಿತಿ

ರೋಲ್ಸ್ ರಾಯ್ಸ್ ನಿರ್ಮಾಣದ ಫ್ಯಾಂಟಮ್ ಮತ್ತು ಘೋಸ್ಟ್ ಕಾರುಗಳ ನಡುವಿನ ಕಾರು ಮಾದರಿಯಾಗಲಿರುವ ಕಲಿನಿಯನ್ ಕಾರುಗಳ ಬೆಲೆಯು ಭಾರತೀಯ ಮಾರುಕಟ್ಟೆಯ ಪ್ರಕಾರ ರೂ.6 ಕೋಟಿಯಿಂದ ರೂ. 8 ಕೋಟಿ (ಎಕ್ಸ್‌ಶೋರಂ) ಇರಬಹುದೆಂದು ಅಂದಾಜಿಸಲಾಗಿದೆ.

ರೋಲ್ಸ್‌ ರಾಯ್ಸ್‌ ಕಲಿನಿಯನ್ ಎಸ್‌ಯಿವಿ ಕಾರಿಗಾಗಿ ಭಾರತದಿಂದ ಮೊದಲ ಬುಕ್ಕಿಂಗ್..

ಹೀಗಾಗಿ ಸದ್ಯದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುತ್ತಿರುವ ಬೆಂಟ್ಲಿ ಬೆಂಟಾಗಾ ಎಸ್‌ಯುವಿ ಕಾರುಗಳಿಗೆ ಕುಲಿನಿಯನ್ ಕಾರುಗಳು ತೀವ್ರ ಪೈಪೋಟಿ ನೀಡಲಿದ್ದು, ಇದೇ ವರ್ಷ ಅಗಸ್ಟ್ ಅಥವಾ ಸೆಪ್ಟೆಂಬರ್ ಹೊತ್ತಿಗೆ ರೋಲ್ಸ್ ರಾಯ್ಸ್ ಹೊಸ ಎಸ್‌ಯುವಿ ಮಾದರಿಯು ಭಾರತೀಯ ಮೂಲದ ಅಭಿನಿ ಸೋಹಾನ್ ಅವರು ಕೂಡಾ ಹೊಸ ಕಾರಿನ ಒಡತಿಯಾಗಲಿದ್ದಾರೆ ಎನ್ನಬಹುದು.

More from DriveSpark

Article Published On: Thursday, June 14, 2018, 14:19 [IST]
English summary
First Indian to buy the Rolls Royce Cullinan SUV.
Read more on rolls royce
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+