ಫಗ್ಲಿ ಪ್ರಚಾರದಲ್ಲಿ ಸೂಪರ್ ಬೈಕ್‌ಗಳ ಮಿಂಚಿಂಗ್
ಬಾಲಿವುಡ್ ಹಾಗೂ ವಾಹನ ಜಗತ್ತಿಗೆ ಎಲ್ಲಿಲ್ಲದ ನಂಟು. ಬಣ್ಣದ ಲೋಕದ ಬಹುತೇಕ ಸೆಲೆಬ್ರಿಟಿಗಳು ಕಾರು, ಬೈಕ್ ಮೇಲೆ ಅತೀವ ಕ್ರೇಜ್ ಹೊಂದಿರುತ್ತಾರೆ ಎಂಬ ವಿಷಯ ನಿಮಗೆಲ್ಲರಿಗೂ ತಿಳಿದ ವಿಚಾರ.
ಸಿನೆಮಾ ಪ್ರಚಾರದಲ್ಲೂ ವಾಹನಗಳನ್ನು ಅತಿ ಹೆಚ್ಚು ಬಳಕೆ ಮಾಡಲಾಗುತ್ತದೆ. ಇದಕ್ಕೆ ಇತ್ತೀಚೆಗಷ್ಟೇ ಬಿಡುಗಡೆಯಾದ ಬಾಲಿವುಡ್ ಚಿತ್ರ 'ಫಗ್ಲಿ' ಸೇರ್ಪಡೆಯಾಗಿದೆ. ಆಕರ್ಷಕ ಚಿತ್ರಗಳಿಗಾಗಿ ಫೋಟೊ ಫೀಚರ್‌ನತ್ತ ಮುಂದುವರಿಯಿರಿ..

ಒಲಿಂಪಿಯನ್ ಕಂಚಿನ ಪದಕ ವಿಜೇತ ಬಾಕ್ಸರ್ ವಿಜಂಧರ್ ಸಿಂಗ್ ಅಭಿನಯಿಸುತ್ತಿರುವ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೂ ಫಗ್ಲಿ ಪಾತ್ರವಾಗಿದೆ. ಇದರಂತೆ ಮುಂಬೈನ ವರ್ಲಿ ಬೀದಿಯಲ್ಲಿ ನಡೆದ ರೋಡ್ ಶೋದಲ್ಲಿ ಪ್ರಖ್ಯಾತ ಬಾಕ್ಸರ್ ಪಟು ಭಾಗವಹಿಸಿದ್ದರು.

ಮೂಲತ: ಹರಿಯಾಣದವರಾಗಿರುವ ವಿಜೆಂಧರ್ ಬಣ್ಣದ ಲೋಕದಲ್ಲೂ ಸೈ ಎನಿಸಿಕೊಂಡಿದ್ದರೆ. ಅಲ್ಲದೆ ಅಭಿಮಾನಿಗಳು ತಮ್ಮ ಚಿತ್ರ ಇಷ್ಟಪಡುವ ನಂಬಿಕೆ ವ್ಯಕ್ತಪಡಿಸಿದ್ದಾರೆ.

ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕಿಯಾರಾ ಅಡ್ವಾಣಿ ಸಹ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಲ್ಲದೆ ನಟರಾದ ಮೋಹಿತ್ ಮಾರ್ವ ಹಾಗೂ ಆರ್ಫಿ ಲಾಂಬಾ ಸಹ ಜತೆಗಿದ್ದರು.

ಈ ವೇಳೆ ಸೂಪರ್ ಬೈಕ್ ರಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಮುಖವಾಗಿಯೂ ಹರ್ಲಿ ಡೇವಿಡ್ಸನ್ ಬೈಕ್‌ಗಳು ಬಾಲಿವುಡ್ ಸ್ಟಾರ್‌ಗಳ ಫೇವರಿಟ್ ಎನಿಸಿಕೊಂಡಿದೆ.

ಹರ್ಲಿ ಬಗ್ಗೆ ಹೇಳುವುದಾದ್ದಲ್ಲಿ, ಈ ಐಕಾನಿಕ್ ಅಮೆರಿಕ ಮೂಲದ ಬೈಕ್ ನಿಧಾನವಾಗಿ ಭಾರತದಲ್ಲಿ ಹೆಚ್ಚಿನ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ.

ಜನರು ತಮ್ಮ ಪ್ರತಿಷ್ಠೆಯ ಸಂಕೇತವಾಗಿ ಗರಿಷ್ಠ ನಿರ್ವಹಣಾ ಬೈಕ್‌ಗಳನ್ನು ಹೊಂದಲು ಬಯಸುತ್ತಾರೆ. ಅಂತವರಿಗೆ ಸೂಪರ್ ಬೈಕ್‌ಗಳು ಹೇಳಿ ಮಾಡಿಸಿದ ಬೈಕಾಗಿದೆ.

ಫಗ್ಲಿ ಪ್ರಚಾರದಲ್ಲಿ ಸೂಪರ್ ಬೈಕ್‌ಗಳ ಮಿಂಚಿಂಗ್

ಫಗ್ಲಿ ಪ್ರಚಾರದಲ್ಲಿ ಸೂಪರ್ ಬೈಕ್‌ಗಳ ಮಿಂಚಿಂಗ್

ಫಗ್ಲಿ ಪ್ರಚಾರದಲ್ಲಿ ಸೂಪರ್ ಬೈಕ್‌ಗಳ ಮಿಂಚಿಂಗ್

ಫಗ್ಲಿ ಪ್ರಚಾರದಲ್ಲಿ ಸೂಪರ್ ಬೈಕ್‌ಗಳ ಮಿಂಚಿಂಗ್

ಫಗ್ಲಿ ಪ್ರಚಾರದಲ್ಲಿ ಸೂಪರ್ ಬೈಕ್‌ಗಳ ಮಿಂಚಿಂಗ್

ಫಗ್ಲಿ ಪ್ರಚಾರದಲ್ಲಿ ಸೂಪರ್ ಬೈಕ್‌ಗಳ ಮಿಂಚಿಂಗ್

ಫಗ್ಲಿ ಪ್ರಚಾರದಲ್ಲಿ ಸೂಪರ್ ಬೈಕ್‌ಗಳ ಮಿಂಚಿಂಗ್

ಫಗ್ಲಿ ಪ್ರಚಾರದಲ್ಲಿ ಸೂಪರ್ ಬೈಕ್‌ಗಳ ಮಿಂಚಿಂಗ್

ಫಗ್ಲಿ ಪ್ರಚಾರದಲ್ಲಿ ಸೂಪರ್ ಬೈಕ್‌ಗಳ ಮಿಂಚಿಂಗ್


Click it and Unblock the Notifications








