ಕಾರಲ್ಲಿ ಸಿಕ್ಕಾಕೊಂಡ ಜಿನಿಯಸ್ ನಾಯಿ ಮಾಡಿದ್ದೇನು ?
ರಸ್ತೆಯಲ್ಲಿ ಪದೇ ಪದೇ ಹಾರ್ನ್ ಹೊಡೆಯುತ್ತಿದ್ದರೆ ಯಾರೇ ಆದರೂ ತಾಳ್ಮೆ ಕಳೆದುಕೊಳ್ಳುವುದು ಸಹಜ. ಹಾಗಿರುವಾಗ ಸತತವಾಗಿ ಹಾರ್ನ್ ಹೊಡೆಯುತ್ತಿದ್ದಲ್ಲಿ ಏನಾಗಿರಬಹುದು ಪರಿಸ್ಥಿತಿ? ಹೌದು, ಇಂತಹದೊಂದು ಘಟನೆ ರಷ್ಯಾದಲ್ಲಿ ನಡೆದಿದ್ದು, ವಿಷಯ ಏನಪ್ಪಾ ಎಂದು ನೋಡಿದಾಗ ಬಯಲುಗೊಂಡಿರುವ ಅಂಶಗಳು ಎಲ್ಲರನ್ನು ಬೆಚ್ಚಿ ಬೀಳಿಸುವಂತಾಗಿದೆ.
ಕಾರಲ್ಲಿ ತನ್ನನ್ನು ಏಕಾಂಗಿಯಾಗಿ ಬಿಟ್ಟು ಹೋಗಿರುವ ಮಾಲಿಕ ಹಿಂತಿರುಗಿ ಬರಲು ವಿಳಂಬವಾಗಿರುವುದರಿಂದ ಬೆಸತ್ತು ಹೋಗಿರುವ ಶ್ವಾನವೊಂದು ಮಾಲಿಕನಿಗೆ ಸಂದೇಶ ತಲುಪಿಸಲು ದೀರ್ಘ ಸಮಯದ ವರೆಗೆ ಹಾರ್ನ್ ಹೊಡೆಯುತ್ತಿರುವ ದೃಶ್ಯಾವಳಿಗಳು ಹೊರ ಬಿದ್ದಿವೆ.

ಮನುಷ್ಯನ ನಿಷ್ಠಾವಂತ ಪ್ರಾಣಿ ಎಂಬ ಹೆಗ್ಗಳಿಕೆಯ ನಾಯಿ ಯಾವತ್ತೂ ತನ್ನ ಯಜಮಾನನಿಗೆ ಮೋಸ ಮಾಡುವುದಿಲ್ಲ. ಆದರೆ ತನ್ನನ್ನು ಬಿಟ್ಟು ಹೋಗಿರುವ ಮಾಲಕ ಬೇಗನೇ ಹಿಂತಿರುಗಿ ಬರುವ ಸಲುವಾಗಿ ಸತತವಾಗಿ ಹಾರ್ನ್ ಹೊಡೆದಿದ್ದಾನೆ.

ಯಾರಪ್ಪಾ ಹಾರ್ನ್ ಹೊಡೆಯುತ್ತಿದ್ದಾರೆ ಎಂಬುದನ್ನು ಗಮನಿಸಿದಾಗ ಕಾರಿನೊಳಗೆ ನಾಯಿಯಿರುವ ವಿಚಾರ ಸ್ಥಳೀಯರ ಗಮನಕ್ಕೆ ಬಂದಿದೆ.

ನಾಯಿ ಹಾರ್ನ್ ಹೊಡೆಯುತ್ತಿರುವುದನ್ನು ಗಮನಿಸಿದ ಸ್ಥಳೀಯರಲ್ಲಿ ಮೋಜು ಮೂಡಿಸಿದರೆ ಇನ್ನು ಕೆಲವರು ಶ್ವಾನದ ಬುದ್ಧಿವಂತಿಕೆಯನ್ನು ಮೆಚ್ಚಿದ್ದಾರೆ.

ಜಿನಿಯಸ್ ನಾಯಿ ಹಾರ್ನ್ ಹೊಡೆದು ಕಾರಿನೊಳಗೆ ನಿರಂತರವಾಗಿ ಕೂಗಾಡುತ್ತಲೇ ಇತ್ತು. ಅಲ್ಲದೆ ಮಾಲಿಕ ಬೇಗನೇ ಹಿಂತಿರುಗಿ ಬರಲು ಪ್ರೇರೇಪಿಸುತ್ತಿತ್ತು.

ಅಷ್ಟಕ್ಕೂ ಈ ಘಟನೆಯೆಲ್ಲ ನಡೆದಿರುವುದು ಪೂರ್ವ ರಷ್ಯಾದ ಬ್ರೈಯಾಸ್ಕ್ ಪ್ರದೇಶದಲ್ಲಿ. ಪ್ರಸ್ತುತ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಥಾಂಕ್ ಗಾಡ್! ಪುಣ್ಯಾತ್ಮ ಮಾಲಿಕ ಕಾರಿನ ಬದಿಯ ವಿಂಡೋವನ್ನು ಸ್ವಲ್ಪ ಕೆಳಗಡೆ ಸಡಿಲಿಸಿಟ್ಟು ಹೋಗಿರುವುದರಿಂದ ನಾಯಿ ತಾಜಾ ಹವಾವನ್ನು ಉಸಿರಾಡುವಂತಾಗಿದೆ.
ವಿಡಿಯೋ ವೀಕ್ಷಿಸಿ


Click it and Unblock the Notifications








