ಆಡಿ ಕ್ಯೂ3 ತಮ್ಮದಾಗಿಸಿದ ಗಾಲ್ಫ್ ಚೆಲುವೆ ಶರ್ಮಿಳಾ

Written By:

ವಿಶಾಲವಾಗಿ ಹರಡಿರುವ ಭಾರತ ದೇಶದಲ್ಲಿ ಗಾಲ್ಫ್ ಕ್ರೀಡೆಗೆ ಅಷ್ಟೊಂದು ಪ್ರಾಮುಖ್ಯತೆ ಇರಲಿಲ್ಲ. ಆದರೆ ಕೆಲವು ಪ್ರತಿಭಾವಂತ ಕ್ರೀಡಾಗಾರರ ಆಗಮನದೊಂದಿಗೆ ದೇಶದಲ್ಲೂ ಗಾಲ್ಫ್‌ಗೆ ಹೆಚ್ಚು ಪ್ರಾಮುಖ್ಯತೆ ಸಿಗ ತೊಡಗಿದೆ. ಹಿಂದೆಲ್ಲ ಶ್ರೀಮಂತರ ಪ್ರತಿಷ್ಠಿತ ಆಟವೆಂಬ ಅಪಪ್ರಚಾರಕ್ಕೆ ಗಾಲ್ಫ್ ಒಳಗಾಗಿತ್ತು. ಆದರೆ ಇದೀಗ ಪರಿಸ್ಥಿತಿ ಬದಲಾಗಿದೆ.

ಅಷ್ಟೇ ಯಾಕೆ ಕ್ರೀಡೆಯಲ್ಲಿ ಮಹಿಳೆಯರ ಸಾನಿಧ್ಯ ಗ್ಲಾಮರ್ ಮೆರಗು ನೀಡುವಲ್ಲಿ ಸಾಧ್ಯವಾಗಿದೆ. ಬ್ಯಾಡ್ಮಿಂಟನ್‌ನಲ್ಲಿ ಸೈನಾ ನೆಹ್ವಾಲ್, ಟೆನಿಸ್‌ನಲ್ಲಿ ಸಾನಿಯಾ ಮಿರ್ಜಾ ಸ್ಕ್ವಾಷ್‌ನಲ್ಲಿ ದೀಪಿಕಾ ಪಲ್ಲೀಕಲ್ ಪಟ್ಟಿಗೆ ಬೆಂಗಳೂರಿನ ಉದಯೋನ್ಮುಖ ಗಾಲ್ಫ್ ಆಟಗಾರ್ತಿ ಶರ್ಮಿಳಾ ನಿಕೊಲೆಟ್ ಸೇರಿದ್ದಾರೆ. ಈ ಇಂಡೋ ಫ್ರೆಂಚ್ ವೃತ್ತಿಪರ ಗಾಲ್ಫ್ ಆಟಗಾರ್ತಿಯ ಬಗ್ಗೆ ಇಲ್ಲಿ ಉಲ್ಲೇಖಿಸಲು ಕಾರಣವೊಂದಿದೆ. ಯಾಕೆಂದರೆ 22ರ ಹರೆಯದ ಬೆಂಗಳೂರಿನ ಚೆಲುವೆ ಇದೀಗ ಆಡಿ ಕ್ಯೂ3 ಕಾರಿನ ಹೆಮ್ಮೆಯ ಮಾಲಿಕರಾಗಿದ್ದಾರೆ.

To Follow DriveSpark On Facebook, Click The Like Button
ದರ ಮಾಹಿತಿ
  

ದರ ಮಾಹಿತಿ

ಆಡಿ ಕ್ಯೂ3 ಬೆಂಗಳೂರು ಎಕ್ಸ್ ಶೋ ರೂಂ ದರ 25.52 ಲಕ್ಷ ರು.ಗಳಿಂದ 36.57 ಲಕ್ಷ ರು.ಗಳ ವರೆಗಿದೆ. ದೇಶದ ಐಷಾರಾಮಿ ಕಾರುಗಳಲ್ಲಿ ಆಡಿ ಕ್ಯೂ3 ತನ್ನದೇ ಆದ ವಿಶೇಷ ಸ್ಥಾನಮಾನವನ್ನು ಉಳಿಸಿಕೊಂಡಿದೆ.

ಎಂಜಿನ್
  

ಎಂಜಿನ್

ಈ ಐದು ಸೀಟಿನ ಕಾಂಪಾಕ್ಟ್ ಎಸ್‌ಯುವಿ 2.0 ಟಿಎಫ್‌ಎಸ್‌ಐ ಪೆಟ್ರೋಲ್ ಮತ್ತು 2.0 ಟಿಡಿಐ ಎಂಜಿನ್‌ಗಳಲ್ಲಿ ಲಭ್ಯವಿದೆ.

ವಿನ್ಯಾಸ
  

ವಿನ್ಯಾಸ

ನೂತನ ಆಡಿ ಕ್ಯೂ3 ಕ್ರೀಡಾತ್ಮಕ ವಿನ್ಯಾಸ, ದಕ್ಷತೆ ಮತ್ತು ನಗರ ಪ್ರದೇಶಕ್ಕೆ ಸೂಕ್ತವಾಗಿರುವ ವಾಹನವಾಗಿದೆ. ಆಡಿ ಕಂಪನಿಯ ಕ್ಯೂ5 ಮತ್ತು ಕ್ಯೂ7 ಮುಂತಾದ ಬೃಹತ್ ಗಾತ್ರದ ಕಾರುಗಳಿಗೆ ಹೋಲಿಸಿದರೆ ಕ್ಯೂ3 ಸಣ್ಣಗಾತ್ರ ಹೊಂದಿದೆ. ಹಾಗೆಯೇ ಸ್ಮರ್ಧಾತ್ಮಕ ದರಗಳಲ್ಲಿ ಬಿಡುಗಡೆ ಮಾಡಲು ಸಂಸ್ಥೆ ಯಶಸ್ವಿಯಾಗಿದೆ.

ತಂತ್ರಜ್ಞಾನ
  

ತಂತ್ರಜ್ಞಾನ

ಆಡಿ ಕ್ಯೂ3 ಯುವ ಜನಾಂಗಕ್ಕೆ ಇಷ್ಟವಾಗುವಂತಹ ವಿನ್ಯಾಸ ಪಡೆದುಕೊಂಡಿದೆ. ಇದರಲ್ಲಿರು ತಂತ್ರಜ್ಞಾನ ಬೆರಗು ಹುಟ್ಟಿಸುತ್ತದೆ. ಅದರ ಸದೃಢ ಗಂಭೀರ ಆಕರ್ಷಕ ಬಾಡಿ ವಿನ್ಯಾಸ, ಡ್ರೈವ್ ಟ್ರೈನ್, ಚಾಸೀ ಮತ್ತು ಮಲ್ಟಿಮೀಡಿಯಾ ಕಾರು ಪ್ರಿಯರಿಗೆ ಇಷ್ಟವಾಗುವಂತಿದೆ.

ಐಷಾರಾಮಿ ಇಂಟಿರಿಯರ್
  

ಐಷಾರಾಮಿ ಇಂಟಿರಿಯರ್

ವಿಶೇಷವೆಂದರೆ ಆಡಿ ಕಂಪನಿಯ ಬೃಹತ್ ಕಾರುಗಳಿಗಿಂತ ನೂತನ ಕ್ಯೂ3 ಕ್ರಾಸೊವರ್ ಹೆಚ್ಚು ವಿಶೇಷ ಲುಕ್ಕಿನಿಂದ ಕಂಗೊಳಿಸುತ್ತದೆ. ಆಡಿ ಕ್ಯೂ3 ಕಾರು ಅತ್ಯಧಿಕ ಗ್ರೌಂಡ್ ಕ್ಲೀಯರೆನ್ಸ್ ಹೊಂದಿದೆ. ಕ್ಯೂ3 ಇಂಟಿರಿಯರ್ ಐಷಾರಾಮಿ ಫೀಚರುಗಳಿಂದ ಶ್ರೀಮಂತವಾಗಿದೆ.

ಆರಾಮ ಸವಾರಿ
  

ಆರಾಮ ಸವಾರಿ

ಕಾರಿನೊಳಗೆ ಗುಣಮಟ್ಟದ ಸೀಟ್, ಪವರ್ ಸ್ಟಿಯರಿಂಗ್, ಪವರ್ ವಿಂಡೋಸ್, ದಕ್ಷತೆಯ ಏರ್ ಕಂಡಿಷನರ್ ಮತ್ತು ಹೀಟರ್ ಇತ್ಯಾದಿ ಹತ್ತು ಹಲವು ಫೀಚರುಗಳಿವೆ. ಕಾರಿನ ಲಗೇಜ್ ಸ್ಥಳಾವಕಾಶವೂ ವಿಶಾಲವಾಗಿದೆ. ಕ್ಯಾಬಿನ್ ಕೂಡ ವಿಶಾಲವಾಗಿದ್ದು, ಆರಾಮವಾಗಿ ಸವಾರಿ ಮಾಡಬಹುದಾಗಿದೆ.

English summary
It is our great pleasure to inform you that ace golfer Sharmila nicollette is also a proud Audi owner now
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark