GST: ಜಿಎಸ್‌ಟಿ ಸಭೆ.. ದೀಪಾವಳಿಗೆ ಸಿಹಿಸುದ್ದಿ.. ಕಾರು & ಬೈಕ್‌ಗಳ ಬೆಲೆ ಭಾರೀ ಇಳಿಕೆ?

ನವದೆಹಲಿಯಲ್ಲಿಂದು ಸರಕು ಮತ್ತು ಸೇವಾ ತೆರಿಗೆ (GST) ಸಮಿತಿ ಸಭೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅಧ್ಯಕ್ಷತೆಯಲ್ಲಿ ಜರುಗುತ್ತಿದೆ. ನಾಳೆಯೂ ಮುಂದುವರಿಯಲಿದೆ. ಈ ಸಭೆಯತ್ತ ಉದ್ಯಮಿಗಳು, ವ್ಯಾಪಾರಿಗಳು ಹಾಗೂ ಸಾಮಾನ್ಯ ಗ್ರಾಹಕರು ಕೂಡ ಕಣ್ಣಿಟ್ಟಿದ್ದಾರೆ. ಸದ್ಯ, 4 ಹಂತದಲ್ಲಿ (ಶೇಕಡ 5, 12, 18 ಹಾಗೂ 28) ಜಿಎಸ್‌ಟಿ ವಿಧಿಸಲಾಗುತ್ತದೆ. ಅದನ್ನು 2 ಹಂತಗಳಿಗೆ ಇಳಿಕೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಈ ಹಿಂದೆ ಹೇಳಿದ್ದರು.

ಈ ನಿಟ್ಟಿನಲ್ಲಿ ಜಿಎಸ್‌ಟಿ ಸಮಿತಿ ಸಭೆಯು ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಭಾರತದ ಆಟೋಮೊಬೈಲ್ ವಲಯದ ಮೇಲೂ ಗಮನಾರ್ಹ ಪರಿಣಾಮ ಬೀರುವ ನಿರೀಕ್ಷೆಯಿದೆ. ಎಲ್ಲವು ಅಂದುಕೊಂಡಂತೆ ನಡೆದರೆ, ವಾಹನಗಳು ಹಾಗೂ ಅವುಗಳ ಬಿಡಿಭಾಗಗಳ ಮೇಲೆ ವಿಧಿಸುತ್ತಿರುವ ಜಿಎಸ್‌ಟಿ ಪ್ರಮಾಣವು ದೊಡ್ಡ ಮಟ್ಟದಲ್ಲಿ ಇಳಿಕೆಯಾಗಲಿದ್ದು, ಬೆಲೆಯೂ ಕಡಿಮೆಯಾಗುವ ನಿರೀಕ್ಷೆಯಿದೆ.

GST Council Meeting Cars And Two Wheelers Expected To Become Cheaper Details

ಸಣ್ಣ ಕಾರುಗಳು ಮತ್ತಷ್ಟು ಅಗ್ಗವಾಗುವ ಸಾಧ್ಯತೆ:

1200-ಸಿಸಿ ವರೆಗಿನ ಪೆಟ್ರೋಲ್ ಹಾಗೂ 1500 ಸಿಸಿ ವರೆಗಿನ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿರುವ ಕಾರುಗಳ ಮೇಲಿನ ಜಿಎಸ್‌ಟಿ ಶೇಕಡ 28% ರಿಂದ 18%ಗೆ ಕಡಿಮೆಯಾಗಬಹುದು. ಇದರೊಂದಿಗೆ ಹೆಚ್ಚುವರಿಯಾಗಿ ವಿಧಿಸುವ ಸೆಸ್‌ನ್ನು ತೆಗೆದು ಹಾಕುವ ಸಾಧ್ಯತೆಯಿದ್ದು, ಪುಟ್ಟ ಹ್ಯಾಚ್‌ಬ್ಯಾಕ್‌ಗಳು ಹಾಗೂ ಕಾಂಪ್ಯಾಕ್ಟ್ ಸೆಡಾನ್‌ಗಳ ದರ ದೊಡ್ಡ ಪ್ರಮಾಣದಲ್ಲಿ ಇಳಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ.

ಹೈಬ್ರಿಡ್ ಕಾರುಗಳ ಬೆಲೆಯೂ ಇಳಿಕೆ ನೀರಿಕ್ಷೆ:

ಪರಿಸರ ಸ್ನೇಹಿಯಾಗಿರುವ ಸಬ್-4 ಮೀಟರ್ ಹೈಬ್ರಿಡ್ (ಪೆಟ್ರೋಲ್+ಎಲೆಕ್ಟ್ರಿಕ್) ಕಾರುಗಳ ಮೇಲೆ ಜಿಎಸ್‌ಟಿಯು ಶೇಕಡ 10% ಕಡಿಮೆ ಮಾಡಬಹುದು. ಅಂದರೆ, ಶೇಕಡ 28% ರಿಂದ 18%ಗೆ ಇಳಿಕೆಯಾಬಹುದು. ಇದು ಹೊಸ ಕಾರು ಖರೀದಿ ಮಾಡಬೇಕೆಂದು ಆಲೋಚಿಸಿರುವ ಗ್ರಾಹಕರಿಗೆ ಹೆಚ್ಚಿನ ಲಾಭವಾಗಲಿದೆ.

GST Council Meeting Cars And Two Wheelers Expected To Become Cheaper Details

ದ್ವಿಚಕ್ರ ವಾಹನಗಳ ಖರೀದಿದಾರರಿಗೆ ಸಿಹಿ & ಕಹಿ:

ಸಾಮಾನ್ಯ ದ್ವಿಚಕ್ರ ವಾಹನಗಳ ಖರೀದಿ ಮೇಲೆಯೂ ಶೇಕಡ 28% ರಿಂದ 18% ಜಿಎಸ್‌ಟಿ ಕಡಿಮೆಯಾಗುವ ಸಂಭವವಿದೆ. ಪ್ರೀಮಿಯಂ ಸ್ಕೂಟರ್ & ಮೋಟಾರ್‌ಸೈಕಲ್‌ಗಳ ಮೇಲಿನ ಜಿಎಸ್‌ಟಿ ಶೇಕಡ 31% ರಿಂದ 40% ಹೆಚ್ಚಳವಾಗಬಹುದು. ಹೀಗಾಗಿ, ರೂ.3 ಲಕ್ಷಕ್ಕಿಂತ ಅದಕ್ಕಿಂತ ಹೆಚ್ಚಿನ ದರದ ಮಾಡೆಲ್‌ಗಳ ಆನ್-ರೋಡ್ ಬೆಲೆಗಳು ಸರಿ ಸುಮಾರು ಶೇಕಡ 7% ಅಧಿಕಗೊಳ್ಳಬಹುದು ಎನ್ನಲಾಗಿದೆ.

ದೊಡ್ಡ ಎಂಜಿನ್ ಒಳಗೊಂಡಿರುವ ಕಾರುಗಳ ದರದಲ್ಲಿ ಏರಿಕೆ ಸಂಭವ:

ಸಬ್-4 ಮೀಟರ್‌ಗಿಂತ ಉದ್ದ ಹಾಗೂ ಹೆಚ್ಚಿನ ಸಾಮರ್ಥ್ಯದ ದೊಡ್ಡದಾದ ಎಂಜಿನ್ ಹೊಂದಿರುವ ಕಾರುಗಳಿಗೆ ಶೇಕಡ 40% ಜಿಎಸ್‌ಟಿ ವಿಧಿಸುವ ಸಾಧ್ಯತೆಯಿದೆ. ಅವುಗಳು ಮತ್ತಷ್ಟು ದುಬಾರಿಯಾಗಲಿವೆ. ಇದರಿಂದ ಟೊಯೊಟಾ ಇನ್ನೋವಾದಂತಹ ಜನಪ್ರಿಯ ಕಾರುಗಳ ದರದಲ್ಲಿ ಬದಲಾವಣೆಯಾಗಬಹುದು.

ಎಲೆಕ್ಟ್ರಿಕ್ ವಾಹನಗಳನ್ನು ಕೊಳ್ಳುವವರಿಗೆ ಲಾಭ & ನಷ್ಟ:

ರೂ.20 ಲಕ್ಷದಿಂದ 40 ಲಕ್ಷ ಬೆಲೆಯ ಎಲೆಕ್ಟ್ರಿಕ್ ಚಾಲಿತ ವಾಹನ ಮೇಲಿನ ಜಿಎಸ್‌ಟಿ ಶೇಕಡ 5% ರಿಂದ 18% ಅಧಿಕಗೊಳ್ಳಬಹುದು. ಇದರಿಂದ ಟಾಟಾ ಹ್ಯಾರಿಯರ್ ಇವಿ ಹಾಗೂ ಮಹೀಂದ್ರಾ ಎಕ್ಸ್‌ಯುವಿ 9ಇ ಒಳಗೊಂಡಂತೆ ವಿವಿಧ ಎಲೆಕ್ಟ್ರಿಕ್ ಕಾರುಗಳ ಬೆಲೆಯು ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ. ಸಣ್ಣ ಎಲೆಕ್ಟ್ರಿಕ್ ವಾಹನಗಳನ್ನು ಮೇಲೆ ವಿಧಿಸುವ ಜಿಎಸ್‌ಟಿ ಶೇಕಡ 5% ನಲ್ಲಿಯೇ ಇರುವ ಸಾಧ್ಯತೆಯಿದೆ. ಇದು ಹಾಗೆಯೇ ಮುಂದುವರಿದರೆ, ಟಾಟಾ ಟಿಯಾಗೊ ಇವಿ ಹಾಗೂ ಎಂಜಿ ಕಾಮೆಟ್ ಇವಿ ಕಾರುಗಳಿಗೆ ಭಾರೀ ಬೇಡಿಕೆ ಬರಬಹುದು.

ಒಟ್ಟಾರೆಯಾಗಿ ನಾಳಿನ ಸಭೆ ಅಂತ್ಯವಾದ ಬಳಿಕ, ವಾಹನಗಳ ಮೇಲೆ ವಿಧಿಸುವ ಜಿಎಸ್‌ಟಿ ಪ್ರಮಾಣದ ಬಗ್ಗೆ ಅಧಿಕೃತ ವಿವರಗಳು ಲಭ್ಯವಾಗುವ ನಿರೀಕ್ಷೆಯಿದೆ. ಒಂದೊಮ್ಮೆ ಜಿಎಸ್‌ಟಿಯನ್ನು ಕಡಿತಗೊಳಿಸಿದರೆ, ಲಕ್ಷಾಂತರ ಸಂಖ್ಯೆಯ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ಮೂಲಕ ಕೇಂದ್ರ ಸರ್ಕಾರ ದೀಪಾವಳಿಗೆ ಯಾವ ರೀತಿಯ ಉಡುಗೊರೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

More from DriveSpark

Article Published On: Wednesday, September 3, 2025, 19:31 [IST]
English summary
Gst council meeting cars and two wheelers expected to become cheaper details
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+