GST: ದಸರಾಗೆ ಗುಡ್‌ನ್ಯೂಸ್.. ಜಿಎಸ್‌ಟಿ ಕಡಿತ, ಕಾರು, ಟ್ರ್ಯಾಕ್ಟರ್ & ಬೈಕ್‌ ಖರೀದಿದಾರರಿಗೆ ಭಾರೀ ಲಾಭ!

ನವದೆಹಲಿಯಲ್ಲಿ ಬುಧವಾರ ನಡೆದ ಸರಕು ಮತ್ತು ಸೇವಾ ತೆರಿಗೆ (GST) ಸಮಿತಿ ಸಭೆ ಬಳಿಕ, ದೇಶದ ಜನರಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಭರ್ಜರಿ ಸಿಹಿಸುದ್ದಿ ನೀಡಿದ್ದಾರೆ. ಅದರಲ್ಲೂ ಕಾರು, ಟ್ರ್ಯಾಕ್ಟರ್ & ಬೈಕ್‌ಗಳ ಮೇಲೆ ವಿಧಿಸುತ್ತಿದ್ದ ಜಿಎಸ್‌ಟಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗಿದೆ. ಹೊಸ ತೆರೆಗೆ ಪದ್ಧತಿಯು ಸೆಪ್ಟೆಂಬರ್ 22 ರಿಂದ ಅಧಿಕೃತವಾಗಿ ಜಾರಿಗೆ ಬರಲಿದ್ದು, ದಸರಾ ಹಾಗೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹೊಸ ವಾಹನ ಖರೀದಿ ಮಾಡಲು ಬಯಸಿರುವವರಿಗೆ ದೊಡ್ಡ ಮಟ್ಟದಲ್ಲಿ ಅನುಕೂಲವಾಗಲಿದೆ.

ಸದ್ಯ 4 ಹಂತಗಳಲ್ಲಿ (ಶೇಕಡ 5%, 12%, 18% ಹಾಗೂ 28%) ಜಿಎಸ್‌ಟಿ ವಿಧಿಸಲಾಗುತ್ತದೆ. ಪರಿಷ್ಕರಣೆಯ ಭಾಗವಾಗಿ, ಶೇಕಡ 12% ಹಾಗೂ 28% ಗಳನ್ನು ತೆಗೆದುಹಾಕಲಾಗಿದ್ದು, ಶೇಕಡ 5% ಮತ್ತು 8% ಹಂತಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ದುಬಾರಿ ಬೆಲೆಯ ಐಷಾರಾಮಿ ವಸ್ತುಗಳಿಗೆ ವಿಶೇಷವಾಗಿ ಶೇಕಡ 40% ಜಿಎಸ್‌ಟಿ ಹೇರಳಲಾಗುತ್ತದೆ.

GST Tax Cuts On Bikes Small Cars And Tractors What s Cheaper Costlier

ಮಧ್ಯಮ ವರ್ಗದ ಜನರ ಕಾರು ಖರೀದಿ ಕನಸು ನನಸು:

1200-ಸಿಸಿ ವರೆಗಿನ ಪೆಟ್ರೋಲ್, ಎಲ್‌ಪಿಜಿ, ಸಿಎನ್‌ಜಿ ಹಾಗೂ 1500 ಸಿಸಿ ವರೆಗಿನ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿರುವ ಕಾರುಗಳ ಮೇಲಿನ ಜಿಎಸ್‌ಟಿ ಶೇಕಡ 28% ರಿಂದ 18%ಗೆ ಇಳಿಕೆ ಮಾಡಲಾಗಿದೆ. ಜೊತೆಗೆ ಶೇಕಡ 1-3% ವರೆಗೆ ಹೆಚ್ಚುವರಿಯಾಗಿ ವಿಧಿಸುವ ಸೆಸ್‌ನ್ನು ಕೈಬಿಡಲಾಗಿದೆ.

ಇದರಿಂದ ಮಾರುತಿ ಸುಜುಕಿ ಇಂಡಿಯಾ, ಹ್ಯುಂಡೈ ಮೋಟಾರ್ ಇಂಡಿಯಾ ಹಾಗೂ ಟಾಟಾ ಮೋಟಾರ್ಸ್‌ನಂತಹ ಕಂಪನಿಗಳ ಕಾರುಗಳು ಬೆಲೆಯೂ ಗಣನೀಯವಾದ ಇಳಿಕೆಯಾಗಲಿದೆ. ಈ ಮೂಲಕ ಹೊಸ ಕಾರು ಖರೀದಿ ಮಾಡಬೇಕೆಂದು ಆಲೋಚಿಸಿರುವ ಮಧ್ಯಮ ವರ್ಗದ ಜನರ ಕನಸು ಸುಲಭವಾಗಿ ನನಸಾಗಲಿದೆ.

GST Tax Cuts On Bikes Small Cars And Tractors What s Cheaper Costlier

ಐಷಾರಾಮಿ ಕಾರು ಕೊಳ್ಳುವವರಿಗೆ ಭಾಗಶಃ ಲಾಭ:

ಐಷಾರಾಮಿ ಸೆಡಾನ್‌ಗಳು, ಎಸ್‌ಯುವಿಗಳು ಹಾಗೂ ಎಂಪಿವಿಗಳಿಗೆ ಯಾವುದೇ ಸೆಸ್ ಇಲ್ಲದೆ ಶೇಕಡ 40% ಜಿಎಸ್‌ಟಿ ವಿಧಿಸಲು ತೀರ್ಮಾನಿಸಲಾಗಿದೆ. ಇದು ಒಂದು ರೀತಿಯಲ್ಲಿ ಪ್ರಯೋಜನವಾಗಲಿದೆ. ಪ್ರಸ್ತುತ ಜಿಎಸ್‌ಟಿ ಹಾಗೂ ಸೆಸ್ ಸೇರಿ ಒಟ್ಟು ತೆರೆಗೆ ಶೇಕಡ 45 ರಿಂದ 50% ಇದೆ.

ದ್ವಿಚಕ್ರ ವಾಹನಗಳನ್ನು ತೆಗೆದುಕೊಳ್ಳುವವರಿಗೆ ಸಿಹಿ & ಕಹಿ:

350-ಸಿಸಿ ವರೆಗಿನ ಎಂಜಿನ್ ಸಾಮರ್ಥ್ಯವಿರುವ ಸಾಮಾನ್ಯ ದ್ವಿಚಕ್ರ ವಾಹನಗಳ (ಸ್ಕೂಟರ್ & ಬೈಕ್‌ಗಳು) ಖರೀದಿ ಮೇಲೆಯೂ ಶೇಕಡ 28% ರಿಂದ 18%ಗೆ ಜಿಎಸ್‌ಟಿ ಪ್ರಮಾಣ ಇಳಿಕೆಯಾಗಿದೆ. ಇದರಿಂದ ಅಗ್ಗದ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸುವ ಹೀರೋ ಮೋಟೋಕಾರ್ಪ್, ಹೋಂಡಾ ಮೋಟಾರ್‌ಸೈಕಲ್ & ಸ್ಕೂಟರ್ ಇಂಡಿಯಾ, ಟಿವಿಎಸ್ ಮೋಟಾರ್ ಕಂಪನಿ ಹಾಗೂ ಬಜಾಜ್ ಆಟೋಗಳಿಗೆ ಹೆಚ್ಚಿನ ಲಾಭವಾಗಲಿದೆ.

ಅದೇ ರೀತಿಯಲ್ಲಿ 350-ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯವಿರುವ ಐಷಾರಾಮಿ ದ್ವಿಚಕ್ರ ವಾಹನಗಳ ಮೇಲೆ ಜಿಎಸ್‌ಟಿ ಪ್ರಮಾಣವನ್ನು ಶೇಕಡ 40%ಗೆ ಹೆಚ್ಚಳ ಮಾಡಲಾಗಿದೆ. ಈಗ ಶೇಕಡ 28% ಜಿಎಸ್‌ಟಿ ಮತ್ತು 3% ಸೆಸ್ ಸೇರಿದಂತೆ ಒಟ್ಟು ಶೇಕಡ 31% ತೆರಿಗೆ ವಿಧಿಸಲಾಗುತ್ತಿದೆ.

ಎಲೆಕ್ಟ್ರಿಕ್ ವಾಹನಗಳ (ಇವಿ) ಮೇಲೆ ವಿಧಿಸುತ್ತಿದ್ದ ಜಿಎಸ್‌ಟಿ ಯಥಾಸ್ಥಿತಿ ಮುಂದುವರಿಕೆ:

ಎಲೆಕ್ಟ್ರಿಕ್ ವಾಹನಗಳ (ಇವಿ) ಖರೀದಿ ಮೇಲೆ ಹಾಕುತಿದ್ದ ಜಿಎಸ್‌ಟಿ ಪ್ರಮಾಣದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಅದು ಶೇಕಡ 5% ನಲ್ಲಿಯೇ ಮುಂದುವರಿದಿದೆ. ಆದರೆ, ಹೈಡ್ರೋಜನ್ ಚಾಲಿತ ವಾಹನಗಳಿಗೆ ವಿಧಿಸುತ್ತಿದ್ದ ತೆರಿಗೆಯನ್ನು ಶೇಕಡ 12% ರಿಂದ 5%ಗೆ ಇಳಿಕೆ ಮಾಡಲಾಗಿದೆ.

ರೈತರಿಗೆ ಒಳ್ಳೆ ಸುದ್ದಿ:

ರೈತನ ಮಿತ್ರ ಎಂದೇ ಖ್ಯಾತಿ ಗಳಿಸಿರುವ ಟ್ರ್ಯಾಕ್ಟರ್‌ಗಳ ಮೇಲಿನ ಜಿಎಸ್‌ಟಿ ಪ್ರಮಾಣವನ್ನು 12% ರಿಂದ 5%ಕ್ಕೆ ಕಡಿಮೆ ಮಾಡಲಾಗಿದೆ. ಈ ಹಿನ್ನೆಲೆ ಹೊಚ್ಚ ಹೊಸ ಟ್ರ್ಯಾಕ್ಟರ್‌ ಬೆಲೆ ಶೇಕಡ 7% ಇಳಿಕೆಯಾಗುವ ನಿರೀಕ್ಷೆಯಿದ್ದು, ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.

More from DriveSpark

Article Published On: Thursday, September 4, 2025, 10:33 [IST]
English summary
Gst tax cuts on bikes small cars and tractors whats cheaper costlier
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+