ಮಾಜಿ ಮಿಸ್ ಇಂಡಿಯಾ ಗುಲ್ ಪನಾಗ್‌ರವರ ಜನಸಾಮಾನ್ಯ ಕಾರು

By Nagaraja

ಸಮಕಾಲೀನ ಜಗತ್ತಿನಲ್ಲಿ ಸೆಲೆಬ್ರಿಟಿಗಳು ಚಿತ್ರರಂಗವನ್ನು ತೊರೆದು ರಾಜಕೀಯ ರಂಗ ಪ್ರವೇಶಿಸುತ್ತಿರುವುದು ದೊಡ್ಡ ವಿಷಯವೇನಲ್ಲ. ಇದಕ್ಕೊಂದು ಉತ್ತಮ ಉದಾಹರಣೆಯೆಂಬಂತೆ ನೂತನ ಆಮ್ ಆದ್ಮಿ ಪಕ್ಷಕ್ಕೆ ಮಾಜಿ ಮಿಸ್ ಇಂಡಿಯಾ ಹಾಗೂ ನಟಿ ಗುಲ್ ಪನಾಗ್ ಸೇರ್ಪಡೆಯಾಗಿದ್ದಾರೆ.

ಆಪ್ ಪಕ್ಷದ ಚಂಡೀಗಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲಿರುವ ಈಕೆಯ ಬಳಿ ಜನಸಾಮಾನ್ಯರ ಕಾರೊಂದಿದೆ. ಅದುವೇ ಮೋಡಿಫೈಡ್ ಸ್ಕಾರ್ಪಿಯೊ. ಕುತೂಹಲಕಾರಿ ವಿವರಗಳಿಗಾಗಿ ಮುಂದೆ ಓದಿರಿ...

ಕಸ್ಟಮೈಸ್ಡ್ ಸ್ಕಾರ್ಪಿಯೊದಲ್ಲಿ ಗುಲ್ ಪನಾಗ್ ಪಯಣ

ವಿಶೇಷವಾಗಿ ಸಾಹಸ ಪಯಣ ಇಷ್ಟಪಡುವ ಗುಲ್ ಪನಾಗ್ ಅವರಿಗಾಗಿ ಮಹೀಂದ್ರ ಆಂಡ್ ಮಹೀಂದ್ರ ಸಂಸ್ಥೆಯು ತನ್ನ ಜನಪ್ರಿಯ ಸ್ಕಾರ್ಪಿಯೊ ಕಾರನ್ನು ಪರಿಷ್ಕೃತಗೊಳಿಸಿತ್ತು.

ಕಸ್ಟಮೈಸ್ಡ್ ಸ್ಕಾರ್ಪಿಯೊದಲ್ಲಿ ಗುಲ್ ಪನಾಗ್ ಪಯಣ

ಈ ನೂತನ ಆಫ್ ರೋಡ್ ಕಾರಿಗೆ ಸೂಪರ್ ಮೈಲೊ ಎಂದು ಹೆಸರಿಸಲಾಗಿದೆ. ಹಾಗೆಯೇ ವಿಶೇಷ ಆಫ್ ರೋಡಿಂಗ್ ಸಾಮರ್ಥ್ಯವನ್ನು ಇದು ಹೊಂದಿದೆ.

ಕಸ್ಟಮೈಸ್ಡ್ ಸ್ಕಾರ್ಪಿಯೊದಲ್ಲಿ ಗುಲ್ ಪನಾಗ್ ಪಯಣ

ಹಿಮಾಚಲ ಪ್ರದೇಶದ ಲಹೌಲ್-ಸ್ಪಿಟಿ ಜಿಲ್ಲೆಗಳಿಗೆ ಗುಲ್ ಪನಾಗ್ ಸಾಹಸ ಪಯಣ ಹಮ್ಮಿಕೊಂಡಿದ್ದರು. ಈ ವೇಳೆ ಸೂಪರ್ ಮೈಲೊ ಕಾರನ್ನು ಬಳಕೆ ಮಾಡಿದ್ದರು.

ಕಸ್ಟಮೈಸ್ಡ್ ಸ್ಕಾರ್ಪಿಯೊದಲ್ಲಿ ಗುಲ್ ಪನಾಗ್ ಪಯಣ

ಈ ಬಗ್ಗೆ ತಮ್ಮ ಅನುಭವ ಹಂಚಿಕೊಂಡಿರುವ ಪನಾಗ್, ಇತ್ತೀಚೆಗಷ್ಟೇ ನಾವು ಹಿಮಾಚಲ ಪ್ರದೇಶದ ಲಹೌಲ್ ಕಣಿವೆ ಪ್ರದೇಶಕ್ಕೆ ರಸ್ತೆ ಮಾರ್ಗವಾಗಿ ಪಯಣ ಹಮ್ಮಿಕೊಂಡಿದ್ದೆವು. ಈ ಸಾಹಸ ಯಾತ್ರೆ ಐದು ದಿನಗಳ ಪರ್ಯಂತ ಸಾಗಿತ್ತು ಎಂದಿದ್ದಾರೆ.

ಕಸ್ಟಮೈಸ್ಡ್ ಸ್ಕಾರ್ಪಿಯೊದಲ್ಲಿ ಗುಲ್ ಪನಾಗ್ ಪಯಣ

ನಮ್ಮ ತಂಡದಲ್ಲಿ ಒಟ್ಟು ಆರು ಮಂದಿ ಇದ್ದಿದ್ದರಿಂದ ಎರಡು ಮೋಡಿಫೈಡ್ ಕಾರನ್ನು ಬಳಕೆ ಮಾಡಲಾಗಿತ್ತು. ನಿಜಕ್ಕೂ ಇಂದೊಂದು ಅದ್ಭುತ ಅನುಭವ ಎಂದಿದ್ದಾರೆ.

ಕಸ್ಟಮೈಸ್ಡ್ ಸ್ಕಾರ್ಪಿಯೊದಲ್ಲಿ ಗುಲ್ ಪನಾಗ್ ಪಯಣ

ಆಫ್ ರೋಡ್ ಪಯಣ ಕೈಗೊಳ್ಳಲು ನಿರ್ಧಾರ ಕೈಗೊಂಡಾಗ ಯಾವ ಕಾರನ್ನು ಆಯ್ಕೆ ಮಾಡಲಿ ಎಂಬ ಗೊಂದಲ ಕಾಡುತ್ತಿತ್ತು. ಹಾಗಾಗಿ ಕಸ್ಟಮೈಸ್ಡ್ ಕಾರನ್ನು ಆಯ್ಕೆ ಮಾಡಲು ಪ್ರೇರಣೆಯಾಗಿತ್ತು ಎಂದಿದ್ದಾರೆ.

ಕಸ್ಟಮೈಸ್ಡ್ ಸ್ಕಾರ್ಪಿಯೊದಲ್ಲಿ ಗುಲ್ ಪನಾಗ್ ಪಯಣ

ಇದಕ್ಕಾಗಿ ಕ್ರೀಡಾ ಬಳಕೆ ವಾಹನ (ಎಸ್‌ಯುವಿ) ಕಾರನ್ನು ಆಯ್ಕೆ ಮಾಡಬೇಕೆಂಬುದು ಪನಾಗ್ ಬಯಕೆಯಾಗಿತ್ತು. ಈ ಎಲ್ಲ ಪರಿಷ್ಕೃತ ಕೆಲಸ ಪೂರ್ಣಗೊಳ್ಳಲು ಆರು ತಿಂಗಳಷ್ಟು ಸಮಯ ತಗಲಿತ್ತು ಎಂದಿದ್ದಾರೆ.

ಕಸ್ಟಮೈಸ್ಡ್ ಸ್ಕಾರ್ಪಿಯೊದಲ್ಲಿ ಗುಲ್ ಪನಾಗ್ ಪಯಣ

ಇಲ್ಲಿ ಬಹುತೇಕ ಬಿಡಿಭಾಗಗಳನ್ನು ಆಮದು ಮಾಡಲಾಗಿತ್ತು. ಇದರಲ್ಲಿ ರೂಫ್, ಹೈ ಲಿಫ್ಟ್ ಜ್ಯಾಕ್, ಹೆಚ್ಚುವರಿ ಲೈಟಿಂಗ್ಸ್, ಡ್ಯುಯಲ್ ಬ್ಯಾಟರಿ ನಿರ್ವಹಣಾ ವ್ಯವಸ್ಥೆಗಳಂತಹ ಸೌಲಭ್ಯಗಳನ್ನು ಆಳವಡಿಸಲಾಗಿತ್ತು.

ಕಸ್ಟಮೈಸ್ಡ್ ಸ್ಕಾರ್ಪಿಯೊದಲ್ಲಿ ಗುಲ್ ಪನಾಗ್ ಪಯಣ

ಒಟ್ಟಿನಲ್ಲಿ ಆಮ್ ಆದ್ಮಿ ಪಕ್ಷದ ನಾಯಕಿ ಗುಲ್ ಪನಾಗ್ ರಾಜಕೀಯ ಜೀವನ ಎತ್ತ ಸಾಗಲಿದೆ ಎಂಬುದಕ್ಕೆ ಮುಂದಿನ ಲೋಕಸಭಾ ಚುನಾವಣೆ ಉತ್ತರ ನೀಡಲಿದೆ. ಆದರೆ ಅವರ ಸಾಹಸ ಯಾತ್ರೆಯಂತೂ ಇಲ್ಲಿ ಕೊನೆಗೊಳ್ಳುವುದಿಲ್ಲ.

More from DriveSpark

Article Published On: Tuesday, March 18, 2014, 16:32 [IST]
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+